Homeಮುಖಪುಟದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ ಓದಿದ...

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ ಓದಿದ ಪತ್ನಿ

- Advertisement -
- Advertisement -

ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು ಹೇಳಿರುವ ಅವರ ಸಂದೇಶವನ್ನು ಜನರಿಗೆ ನೆನಪಿಸಿದ್ದಾರೆ.

ಅಡ್ಮಿರಲ್ ರಾಮದಾಸ್ ಯಾರು?

ಅಡ್ಮಿರಲ್ ರಾಮದಾಸ್ ಅವರು ಸೆಪ್ಟೆಂಬರ್ 5, 1933ರಂದು ಬಾಂಬೆಯ ಮಾಟುಂಗಾದಲ್ಲಿ ಜನಿಸಿದರು. ಅವರ ಆರಂಭಿಕ ಶಿಕ್ಷಣ ದೆಹಲಿಯಲ್ಲಿ ಪ್ರೆಸೆಂಟೇಶನ್ ಕಾನ್ವೆಂಟ್ ಮತ್ತು ರಾಮ್ಜಾಸ್ ಕಾಲೇಜಿನಲ್ಲಿ ನಡೆದಿತ್ತು. ಅವರು 1949ರಲ್ಲಿ ಕ್ಲೆಮೆಂಟ್ ಟೌನ್ ಡೆಹ್ರಾಡೂನ್‌ನಲ್ಲಿರುವ ಆರ್ಮ್ಡ್ ಫೋರ್ಸಸ್ ಅಕಾಡೆಮಿಯ ಜಂಟಿ ಸೇವೆಗಳ ವಿಭಾಗಕ್ಕೆ ಸೇರಿದ್ದಾರೆ, ಸೆಪ್ಟೆಂಬರ್ 1953ರಲ್ಲಿ ಭಾರತೀಯ ನೌಕಾಪಡೆಗೆ ನೇಮಕಗೊಂಡಿದ್ದರು. ಇವರು ಕೊಚ್ಚಿಯಲ್ಲಿ ನೌಕಾ ಅಕಾಡೆಮಿಯನ್ನು ಸ್ಥಾಪಿಸಿದ್ದರು. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ INS ಬಿಯಾಸ್‌ಗೆ ಕಮಾಂಡಿಂಗ್ ಆಗಿದ್ದರು. ಪಶ್ಚಿಮ ಜರ್ಮನಿಯ ಬಾನ್‌ನಲ್ಲಿ ಭಾರತೀಯ ನೌಕಾಪಡೆಯ ಪ್ರಮುಖ ಅಧಿಕಾರಿಯಾಗಿ ಆಗಿ ಸೇವೆ ಸಲ್ಲಿಸಿದ್ದರು. ಪೂರ್ವ ನೌಕಾ ಕಮಾಂಡ್‌ನ ಫ್ಲೀಟ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ ಮತ್ತು ದಕ್ಷಿಣ ಮತ್ತು ಪೂರ್ವ ನೌಕಾ ಕಮಾಂಡ್‌ಗಳೆರಡಕ್ಕೂ ಕಮಾಂಡರ್ ಆಗಿದ್ದರು. ಅವರು 13ನೇ ಚೀಫ್ ಆಫ್ ನೇವಲ್ ಸ್ಟಾಫ್ (CNS) ಆಗಿ 30ನೇ ನವೆಂಬರ್ 1990 ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರು 1993ರಲ್ಲಿ ಭಾರತೀಯ ನೌಕಾಪಡೆಯಿಂದ ನಿವೃತ್ತರಾಗಿದ್ದರು.

ನಿವೃತ್ತಿಯ ನಂತರ, ಅಡ್ಮಿರಲ್ ರಾಮದಾಸ್ ಅವರು ಮಹಾರಾಷ್ಟ್ರದ ಅಲಿಬಾಗ್‌ನ ಭೈಮಾಲಾ ಗ್ರಾಮದಲ್ಲಿ ವಾಸಿಸುತ್ತಿದ್ದರು. 1971ರ ಯುದ್ಧ ಕಾರ್ಯಾಚರಣೆಗಳಲ್ಲಿ ಅವರ ಶೌರ್ಯ ಕೃತ್ಯಗಳನ್ನು ಗುರುತಿಸಿ ಮಹಾರಾಷ್ಟ್ರ ಸರ್ಕಾರವು ಅವರಿಗೆ ನೀಡಿದ ಭೂಮಿಯಲ್ಲಿ ನೆಲೆಸಿದ್ದರು. ಅಲ್ಲಿ ಅವರು ಮತ್ತು ಅವರ ಪತ್ನಿ ಲಲಿತಾ ರಾಮದಾಸ್ ಅವರು ವೈವಿಧ್ಯಮಯ ಕೃಷಿ ಕಾರ್ಯವನ್ನು ಮಾಡಿದ್ದರು. ಸಾವಯವ ಕೃಷಿಯ ಜೊತೆ  ಸಾರ್ವಜನಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವುಗಳಲ್ಲಿ ಪಾಕಿಸ್ತಾನ ಇಂಡಿಯಾ ಪೀಪಲ್ಸ್ ಫೋರಮ್ ಫಾರ್ ಪೀಸ್ ಅಂಡ್ ಡೆಮಾಕ್ರಸಿ (ಪಿಐಪಿಪಿಎಫ್‌ಡಿ), ಇಂಡೋ-ಪಾಕಿಸ್ತಾನ್ ಸೋಲ್ಜರ್ಸ್ ಇನಿಶಿಯೇಟಿವ್ ಫಾರ್ ಪೀಸ್ (ಐಪಿಎಸ್‌ಐ),  ಪರಮಾಣು ನಿಶ್ಯಸ್ತ್ರೀಕರಣ ಮತ್ತು ಶಾಂತಿಗಾಗಿ ಒಕ್ಕೂಟದ ಜೊತೆಗೆ ತೊಡಗಿಸಿಕೊಂಡರು, ಅವರ ಹೋರಾಟವನ್ನು ಬೆಂಬಲಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ 22 ಗಾಂವ್ ಬಚಾವೋ ಆಂದೋಲನ ಅಡಿಯಲ್ಲಿ SEZ ವಿರುದ್ಧ ಹೋರಾಟ, ಲಿಂಗ ಸಮಾನತೆ, ಮೀನುಗಾರರ ಹಕ್ಕುಗಳು, ರೈತರ ಹಕ್ಕುಗಳು, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳು ಸೇರಿದಂತೆ ವಿವಿಧ ಹೋರಾಟಗಳಲ್ಲಿ ಇವರು ಮುಂಚೂಣಿಯಲ್ಲಿದ್ದರು.

ಸಂದೇಶದಲ್ಲೇನಿದೆ?

ನಮಸ್ಕಾರ, ನನ್ನ ಹೆಸರು ಲಲಿತಾ ರಾಮದಾಸ್‌, ನನ್ನ ಪತಿ ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್, ಅವರು 90ನೇ ವರ್ಷದಲ್ಲಿ ಸಿಕಂದರಾಬಾದ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾನು ಅವರ ಧ್ವನಿಯನ್ನು ಕೇಳುತ್ತಿದ್ದೇನೆ. ದೇಶ, ಪ್ರೀತಿಯ ಜನರು, 45 ವರ್ಷಗಳ ಕಾಲ ಅವರು ಕೆಲಸ ಮಾಡಿದ ಭಾರತೀಯ ನೌಕಾಪಡೆ ಮತ್ತು ಸಂವಿಧಾನದ ಬಗ್ಗೆ ಅವರ ಕಾಳಜಿಯನ್ನು ನೆನಪಿಸಿಕೊಳ್ಳುತ್ತೇನೆ. ಅವರ ನಿವೃತ್ತಿ ಬಳಿಕ ನಾವು ರಾಯಗಢ ಜಿಲ್ಲೆಯ ಅಲಿಬಾಗ್‌ನ ಭೈಮಾಲಾ ಹಳ್ಳಿಯಲ್ಲಿ ವಾಸಿಸುತ್ತಿದ್ದೆವು. ಅವರು ಜಮಮೀನಿನಲ್ಲಿ ಕೆಲಸ ಮಾಡಿದರು, ಜಮೀನು, ಕೃಷಿ, ಕಾಡುಗಳ ಬಗ್ಗೆ ಜನರಿಂದ ತಿಳಿದರು. ಗಾಂವ್ ಬಚಾವೋ ಆಂದೋಲನದ ಅಡಿಯಲ್ಲಿ ವಿಶೇಷ ಆರ್ಥಿಕ ವಲಯದ (SEZ) ಬಗ್ಗೆ  ಹೋರಾಟವನ್ನು ಮಾಡಿದರು. ಅವರು ಆಂದೋಲನದ ನೇತೃತ್ವ ವಹಿಸಿದ್ದರು. 4 ವರ್ಷಗಳ ಕಾಲ ಅವರು  ಹೋರಾಟವನ್ನು ನಡೆಸಿದ್ದರು.

ಅಡ್ಮಿರಲ್ ರಾಮ್‌ದಾಸ್ ಅವರು ಸಂವಿಧಾನದ ಪ್ರಬಲ ಪ್ರತಿಪಾದಕರಾಗಿದ್ದು, 16ನೇ ವರ್ಷಕ್ಕೆ ನೌಕಾಪಡೆಗೆ ಸೇರ್ಪಡೆಯಾಗಿದ್ದರು. 16ರಿಂದ 90ರವರೆಗೆ ನಾಗರಿಕನಾಗಿ ಅವರು ಅವರು ಕೊನೆಯ ದಿನಗಳಲ್ಲಿ ಸಮಾನತೆ ಭ್ರಾತೃತ್ವ, ಸ್ವಾತಂತ್ರ್ಯ, ನ್ಯಾಯವನ್ನು ಗೌರವಿಸದ ಶಕ್ತಿಗಳಿಂದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಅವರು ಕಳವಳವನ್ನು ವ್ಯಕ್ತಪಡಿಸಿದ್ದರು. ಅನಾರೋಗ್ಯದ ದಿನಗಳಲ್ಲೂ ಅವರು 2024ರ ಗಣರಾಜ್ಯೋತ್ಸವದ ದಿನದಂದು ಸಾರ್ವಜನಿಕ ಸ್ಥಳದಲ್ಲಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದು ಏ.14ರಂದು ಅಂಬೇಡ್ಕರ್‌ ಜಯಂತಿಯನ್ನು ಆಚರಿಸುತ್ತೇವೆ. ಮುಂದಿನ ವಾರ ದೇಶದಲ್ಲಿ ಮತದಾನ ನಡೆಯಲಿದೆ. ಜನರು ದೇಶದಾದ್ಯಂತ ಮತದಾನ ಮಾಡಲಿದ್ದಾರೆ. ನಾನು ಅಲಿಬಾಗ್‌ಗೆ ಮತದಾನಕ್ಕೆ ಹೋಗುತ್ತಾನೆ. ನಾನು ಪತಿಯ ಜೊತೆ ಮತದಾನಕ್ಕೆ ಆಟೋ ರಿಕ್ಷಾದಲ್ಲಿ ಹೋದ ದಿನಗಳನ್ನು ನೆನಪಿಸುತ್ತೇನೆ, ಅವರು ತನ್ನ ಕೊನೆಯ ದಿನಗಳಲ್ಲಿ ನಾವು ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು, ನಿರ್ಭೀತಿಯಿಂದ ಮತ ಚಲಾಯಿಸುವ ಮೂಲಕ, ಪ್ರಜಾಪ್ರಭುತ್ವಕ್ಕಾಗಿ, ಜಾತ್ಯತೀತತೆಗಾಗಿ, ಪ್ರೀತಿ ಮತ್ತು ಶಾಂತಿಗಾಗಿ ವಿಭಜನೀಯ, ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಬೇಕು ಎಂದು ಹೇಳಿದ್ದಾರೆ ಎಂಬ ಉಲ್ಲೇಖವಿರುವ ಸಂದೇಶವನ್ನು ಓದಿದ್ದಾರೆ.

ಇದನ್ನು ಓದಿ: ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ ಸೂರ್ಯ ತುಚ್ಛ ಮಾತು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...