ಹಣಕಾಸು ವಿಚಾರಕ್ಕೆ ಸಬಂಧಿಸಿದಂತೆ ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ 26 ವರ್ಷದ ಬುಡಕಟ್ಟು ಮಹಿಳೆಗೆ ಸಾರ್ವಜನಿಕವಾಗಿ ಅಮಾನವೀಯವಾಗಿ ಥಳಿಸಿದ್ದು, ಆಕೆಯ ಕಣ್ಣುಗಳು ಮತ್ತು ಜನನಾಂಗಗಳಿಗೆ ಕಾರದ ಪುಡಿ ಹಾಕಿ ಚಿತ್ರಹಿಂಸೆ ನೀಡಿರುವ ಪ್ರಕರಣ ಒಂದು ವಾರದ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆಯು ಮೂರು ಮಕ್ಕಳ ತಾಯಿ ಎಂದು ಗೊತ್ತಾಗಿದ್ದು, ಹಲ್ಲೆಯ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೀಡಿಯೊದಲ್ಲಿ ಗುಲಾಬಿ ಬಣ್ಣದ ಸೀರೆ ಧರಿಸಿರುವ ಮಹಿಳೆಯನ್ನು ಗ್ರಾಮಸ್ಥರು ಸುತ್ತುವರಿದಿದ್ದು, ಆಕೆ ನೆಲದ ಮೇಲೆ ನರಳಾಡುತ್ತಿರುವುದನ್ನು ಕಾಣಬಹುದಾಗಿದೆ.
ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಹಿಂಸೆಗೆ ಮುಂದಾಗಿದ್ದು, ಪರಿಸ್ಥಿತಿ ಭಯಾನಕ ತಿರುವು ಪಡೆಯುತ್ತದೆ; ಅವನು ಮಹಿಳೆಯನ್ನು ಕುತ್ತಿಗೆ ಹಿಡಿದು ಆಕೆಯನ್ನು ನೆಲಕ್ಕೆ ಬಲವಂತವಾಗಿ ತಳ್ಳಿ ಕಾಲಿನಿಂದ ತುಳಿದಿದ್ದಾನೆ. ಅವನನ್ನು ಇತರರು ದೂರ ತಳ್ಳುತ್ತಾರೆ ಮತ್ತು ಯುವತಿ ಎದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ, ಎರಡನೆಯ ವ್ಯಕ್ತಿ ಮತ್ತೆ ನೆಲಕ್ಕೆ ತಳ್ಳಿದ್ದು, ಅವನು ಅವಳ ಸೀರೆಯನ್ನು ಹರಿದು ಹಾಕಲು ಪ್ರಯತ್ನಿಸಿದ್ದಾನೆ. ಕೆಲವು ಜನರು ಮರದ ಕೋಲಿನಿಂದ ಆಕೆಗೆ ಕೋಪೋದ್ರಿಕ್ತರಾಗಿ ಹೊಡೆದಿದ್ದಾರೆ.
ಮತ್ತೊಂದು ಆಘಾತಕಾರಿ ವಿಡಿಯೋದಲ್ಲಿ ಎರಡನೇ ಮಹಿಳೆಯು ಗುಲಾಬಿ ಸೀರೆಯುಟ್ಟ ಮಹಿಳೆಯ ಕೂದಲು ಹಿಡಿದು ನೆಲಕ್ಕೆ ಕುಸ್ತಿಯಾಡುತ್ತಾಳೆ ಮತ್ತು ಅವಳನ್ನು ಜೋರಾಗಿ ಒದ್ದು, ಪದೇಪದೆ ಹೊಡೆಯುತ್ತಾಳೆ.
ಇನ್ನೂ ಆಘಾತಕಾರಿ ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಾಯಕ್ವಾಡ್ ವೈಭವ್ ರಘುನಾಥ್ ಅವರು ಪ್ರತಿಕ್ರಿಯಿಸಿದ್ದು, ಈ ವೀಡಿಯೊಗಳು ಕನಿಷ್ಠ ಎರಡು ದಿನಗಳ ಮೊದಲು ಮಹಿಳೆಯ ಮೇಲೆ ಹಲ್ಲೆ ಮತ್ತು ಎರಡನೇ ಬಾರಿಗೆ ಚಿತ್ರಹಿಂಸೆಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
Horrific videos of #Chenchu woman beaten up publicly, tortured, with chilly powder put on her face & private parts, reportedly burnt also in private parts, as community turned mob & did some moral policing, questioning 26-year-old mother of 3 on where she disappeared with money pic.twitter.com/gP0aPL27L5
— Uma Sudhir (@umasudhir) June 22, 2024
ಆರಂಭದಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯನ್ನು ನಂತರ ಉತ್ತಮ ಚಿಕಿತ್ಸೆಗಾಗಿ ರಾಜ್ಯ ರಾಜಧಾನಿ ಹೈದರಾಬಾದ್‌ನಲ್ಲಿರುವ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಯಿತು.
ಹಲ್ಲೆಗೆ ಸಂಬಂಧಿಸಿದಂತೆ ಬಂಡಿ ವೆಂಕಟೇಶ್ ಮತ್ತು ಅವರ ಪತ್ನಿ, ಹಾಗೂ ಸಂತ್ರಸ್ತೆಯ ಸಹೋದರಿ ಮತ್ತು ಪತಿ ಎಂದು ಗುರುತಿಸಲಾಗಿರುವ ನಾಲ್ವರನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಮಹಿಳೆ ಬಂಡಿ ವೆಂಕಟೇಶ್ ಅವರಿಂದ ಸಾಲ ಪಡೆದ ಹಣಕ್ಕೆ ವಿವಾದ ಉಂಟಾಗಿದೆ.
ಪ್ರತಿಯಾಗಿ, ಆಕೆ ಹಣ ನೀಡಿದ ವೆಂಕಟೇಶ್ ಜಮೀನಿನಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ, ಮಹಿಳೆ ತನ್ನ ಸಹೋದರಿಯೊಂದಿಗೆ ಜಗಳವಾಡಿದ ನಂತರ ಕೆಲವು ದಿನಗಳ ನಂತರ ಹೊರನಡೆದಳು. ಇದರಿಂದ ಕುಪಿತಗೊಂಡ ವೆಂಕಟೇಶ್ ಆಕೆಯನ್ನು ಹುಡುಕಿ ಕರೆತಂದು ತನ್ನ ಹೊಲಕ್ಕೆ ಎಳೆದೊಯ್ದಿದ್ದಾನೆ.
ಸೋಮವಾರ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಯುವತಿಯನ್ನು ಭೇಟಿಯಾಗಿ ಕಾಂಗ್ರೆಸ್ ಸರ್ಕಾರ ಎಲ್ಲ ವಿಕಿತ್ಸಾ ವೆಚ್ಚ ಪಾವತಿಸಲಿದೆ ಎಂದು ಹೇಳಿದರು.
ಮಹಿಳೆಯು ಸ್ವಂತ ಮನೆಯನ್ನು ಹೊಂದಿಲ್ಲದಿದ್ದರೆ ರಾಜ್ಯ ಸರ್ಕಾರವು ನೀಡಲಿದೆ. ಅವರ ಮಕ್ಕಳಿಗೆ ಶಿಕ್ಷಣ ಮತ್ತು ಕೃಷಿ ಮಾಡಲು ಭೂಮಿಯನ್ನು ಒದಗಿಸುತ್ತದೆ ಎಂದು ವಿಕ್ರಮಾರ್ಕ ಹೇಳಿದರು. ಶನಿವಾರ ಅಬಕಾರಿ ಸಚಿವ ಜೂಪಲ್ಲಿ ಕೃಷ್ಣರಾವ್ ಮಹಿಳೆಯೊಂದಿಗೆ ಮಾತನಾಡಿ ₹2 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಸೋಮವಾರ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಆಕೆಯ ಸಹೋದರಿ ಸೇರಿದಂತೆ ಕೆಲವು ವ್ಯಕ್ತಿಗಳಿಂದ ಚಿತ್ರಹಿಂಸೆಗೊಳಗಾದ ಬುಡಕಟ್ಟು ಮಹಿಳೆಯನ್ನು ಭೇಟಿ ಮಾಡಿ, ಆಕೆಯ ವೈದ್ಯಕೀಯ ಚಿಕಿತ್ಸೆಯನ್ನು ಸರ್ಕಾರ ನೋಡಿಕೊಳ್ಳುತ್ತದೆ ಮತ್ತು ಇತರ ಸಹಾಯವನ್ನು ನೀಡಲಿದೆ ಎಂದು ಭರವಸೆ ನೀಡಿದರು.
27ರ ಹರೆಯದ ಮಹಿಳೆಯ ಮೇಲಿನ ದಾಳಿಯ ಬಗ್ಗೆ ದುಃಖ ವ್ಯಕ್ತಪಡಿಸಿದ ವಿಕ್ರಮಾರ್ಕ, ಅವರು ಚೇತರಿಸಿಕೊಳ್ಳುವವರೆಗೆ ಸರ್ಕಾರವು ಅವಳ ಚಿಕಿತ್ಸೆಯನ್ನು ನೋಡಿಕೊಳ್ಳುತ್ತದೆ. ಇಂದಿರಮ್ಮ ಬಡವರ ವಸತಿಯಡಿಯಲ್ಲಿ ಅವರಿಗೆ ಸ್ವಂತ ಮನೆ, ಮಕ್ಕಳಿಗೆ ಸರ್ಕಾರಿ ಸಮಾಜ ಕಲ್ಯಾಣ ಶಾಲೆಯಲ್ಲಿ ಶಿಕ್ಷಣ ಮತ್ತು ಸಾಗುವಳಿ ಮಾಡಲು ಭೂಮಿ ಇಲ್ಲದಿದ್ದರೆ ಸರ್ಕಾರವು ಅವರಿಗೆ ಮನೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಆರೋಪಿಗಳನ್ನು ಈಗಾಗಲೇ ಜೈಲಿಗೆ ಕಳುಹಿಸಿರುವುದನ್ನು ಗಮನಿಸಿದ ಉಪಮುಖ್ಯಮಂತ್ರಿ ಅವರು, ಘಟನೆಯ ಸಂಪೂರ್ಣ ಮಾಹಿತಿ ಪಡೆದ ನಂತರ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ; 4 ಹಂತದ ತನಿಖೆ, 1,000 ಫೋನ್ ಸಂಖ್ಯೆಗಳ ಪರಿಶೀಲನೆ; ಪೇಪರ್ ಸೋರಿಕೆ ಪ್ರಕರಣಗಳನ್ನು ಭೇದಿಸಲು ಸಿಬಿಐ ಯೋಜನೆ


