ಜ್ಯೋತಿಷಿಗಳಿಗೆ ನಿಖರ ಚುನಾವಣಾ ಫಲಿತಾಂಶ ಹೇಳುವಂತೆ ಸವಾಲು ಹಾಕಿದ ವಿಚಾರವಾದಿಗಳು
"ವಿವಿಧ ಪಕ್ಷಗಳು ಗೆಲ್ಲುವ ಸ್ಥಾನ ಗಳಸಂಖ್ಯೆ ಹಾಗು ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳು ಅವುಗಳ ಸಂಖ್ಯೆಗಳ ನಿಖರ ಲೆಕ್ಕ ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ" ಎಂದು ತಿಳಿಸಬೇಕು.
ಚುನಾವಣೆಯ ಸಂದರ್ಭದಲ್ಲಿ ಯಾರ್ಯಾರೋ ಹಣ ಮಾಡಿಕೊಳ್ಳಲ್ಲಿಕ್ಕೆ ಮುಗಿಬೀಳುತ್ತಾರೆ. ಅದರಲ್ಲಿ ಜ್ಯೋತಿಷ್ಯ ಹೇಳುವವರ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದು ಮನಸ್ಸಿಗೆ ಬಂದ ಲೆಕ್ಕ ಹೇಳಿ ಕೆಲವು ಜನರಿಂದ ಹಣ ಕೀಳುತ್ತಿದ್ದಾರೆ. ರಾಜಕಾರಣಿಗಳು ಸೇರಿದಂತೆ ಹಲವು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಜ್ಯೋತಿಷಿಗಳು ಚುನಾವಣೆಗೂ ಮುನ್ನವೇ ಕೆಲವು ಅಂಕಿ ಸಂಖ್ಯೆಗಳನ್ನು ಹೇಳುವ ಮೂಲಕ ಪ್ರಭಾವ ಬೀರಲು, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು ಹಲವು ಪ್ರಜ್ಞಾವಂತರು ದಶಕಗಳ ಕಾಲದಿಂದಲೇ ಪ್ರಯತ್ನಿಸುತ್ತಿದ್ದಾರೆ. ಸರಿಯಾದ ಜ್ಯೋತಿಷ್ಯ ಹೇಳುವಂತೆ ಸವಾಲು ಹಾಕಿ ಬಹುಮಾನ ಘೋಷಿಸುವುದು ಸಹ ಒಂದು ವಿಧಾನ.
ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ) ಬೆಂಗಳೂರು. ಇವರಿಂದ ಚುನಾವಣಾ ಭವಿಷ್ಯ ಹೇಳುವ ಜ್ಯೋತಿಷಿಗಳ ಭವಿಷ್ಯ ವಾಣಿಗಳ ಸತ್ಯಾ ಸತ್ಯತೆಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಕಲಿತು ಭವಿಷ್ಯ ಹೇಳುವವರಿಗೆ ಒಂದು ಕೋಟಿ ರೂ ಬಹುಮಾನದ ಸವಾಲು ಹಾಕಲಾಗಿದೆ. ಪ್ರತಿ ವರ್ಷ ಪ್ರೊ ನರೇಂದ್ರ ನಾಯಕ್ ರವರು ಜ್ಯೋತಿಷ್ಯ ಹೇಳುವವರ ಬಣ್ಣ ಬಯಲು ಮಾಡುವ ಉದ್ದೇಶದಿಂದ ಈ ರೀತಿಯ ಸವಾಲುಗಳನ್ನು ಹಾಕುತ್ತಿದ್ದರು. ಈ ಬಾರಿ ಹಲವು ಜನರು ಸವಾಲು ಹಾಕಿದ್ದಾರೆ. ಈಗಾಗಲೇ ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಈ ವಿವರಗಳು ಹರಿದಾಡುತ್ತಿದ್ದು ಸಾರ್ವಜನಿಕರ ಕುತೂಹಲ ಕೆರಳಿಸಿವೆ.
ಸವಾಲುಗಳ ವಿವರ
ವಿಚಾರವಾದಿ ಸಂಘ ಬೆಂಗಳೂರು
ಒಂದು ಕೋಟಿ ರೂ ಬಹುಮಾನದ ಸವಾಲು ಇದು – “ವಿವಿಧ ಪಕ್ಷಗಳು ಗೆಲ್ಲುವ ಸ್ಥಾನ ಗಳಸಂಖ್ಯೆ ಹಾಗು ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳು ಅವುಗಳ ಸಂಖ್ಯೆಗಳ ನಿಖರ ಲೆಕ್ಕ ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ” ಎಂದು ತಿಳಿಸಬೇಕು.
ವಿವರ- 2019 ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಅಂಗೀಕೃತವಾದ ರಾಜಕೀಯ ಪಕ್ಷಗಳು ಇಡೀ ಭಾರತದಲ್ಲಿ ಈಗ ಲೋಕಸಭೆಗೆ ನಡೆದ, ನಡೆಯುತ್ತಿರುವ ಚುನಾವಣೆಯ ಎಲ್ಲಾ ಒಟ್ಟು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪಕ್ಷಾವಾರು ಎಷ್ಟೆಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ಸಂಖ್ಯೆಗಳು ಮತ್ತು ಅಂಗೀಕೃತ ಅಲ್ಲದ ಪಕ್ಷ ಇಲ್ಲವೇ ಪಕ್ಷೇತರ ಸ್ವತಂತ್ರ ಅಭ್ಯರ್ಥಿ ಗಳಾಗಿ ಸ್ಪರ್ಧಿಸಿದವರು ಯಾವ ಯಾವ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ ಎಂದು ಮುಂಚಿತ ಭವಿಷ್ಯ ಹೇಳಬೇಕು. ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ ಎಂದು ತಿಳಿಸ ಬೇಕು.
ಈ ಸವಾಲಿಗೆ ಇರುವ ಕೆಲ ನಿಯಮಗಳು
ದೇಶದ ಯಾವ ಜ್ಯೋತಿಷಿಯಾದರೂ ಭಾಗವಹಿಸಬಹುದು. ಆದರೆ ಭಾಗವಹಿಸುವವರು ಗಣಿತ ನೈಪುಣ್ಯದ ಮೇಲೆ ಹಾಗು ಊಹೆಯ ಮೇಲೆ ಹಲವು ವಿವಿಧ ಸಂಯೋಜನೆಗಳ ಮೇಲೆ ಲೆಕ್ಕಹಾಕಿ (multiple combinations) ಮಾಡಿ ಬಹುಮುಖ ಉತ್ತರಗಳನ್ನು, ಒಬ್ಬರೇ ಬೇರೆ ಬೇರೆ ಹೆಸರಿನಿಂದ ಹಲವಾರು ಉತ್ತರಗಳನ್ನು ಕಳುಹಿಸ ಬಾರದೆಂಬ ಕಾರಣಕ್ಕಾಗಿ ಹಾಗೂ ಈ ಸ್ಪರ್ಧೆಗೆ ಒಂದು ಗಂಭೀರತೆ ಹಾಗು ಸತ್ಯದ ದೃಢತೆಯ ಮನಸಾಕ್ಷಿಗಾಗಿ, ಕಳುಹಿಸುವ ಪ್ರತೀ ಉತ್ತರದ ಅರ್ಜಿಗೆ ತಲಾ ಹತ್ತು ಸಾವಿರ ರೂ. ನ್ನು ಭದ್ರತಾ ಠೇವಣಿಯಾಗಿ ನೀಡ ಬೇಕಾಗುತ್ತದೆ. ಠೇವಣಿಯನ್ನು “ವಿಚಾರವಾದಿ ಸಂಘ ಬೆಂಗಳೂರು” – ಈ ಹೆಸರಿಗೆ ಡಿ.ಡಿ. ಕಳುಹಿಸ ಬೇಕು. ಗೆದ್ದವರಿಗೆ ಮಾತ್ರ ಠೇವಣಿ ಹಣ ಹಿಂತಿರುಗಿಸ ಲಾಗುವುದು ಮತ್ತು ಜೊತೆಗೆ ಒಂದು ಕೋಟಿ ರೂ. ಬಹುಮಾನವನ್ನು ನೀಡಲಾಗುವುದು. ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನ ಹಣವನ್ನು ಗೆದ್ದವರಿಗೆ ಸಮನಾಗಿ ಹಂಚಲಾಗುತ್ತದೆ.
ಮೇ 20ನೇ ತಾರೀಖಿನ ಒಳಗೆ ಈ ಕೆಳಗಿನ ಬೆಂಗಳೂರಿನ ವಿಚಾರವಾದಿಗಳ ಸಂಘದ ಕಛೇರಿಗೆ ಉತ್ತರವನ್ನು ದಾಖಲಾತಿ ಮೂಲಕ ತಲುಪಿಸತಕ್ಕದ್ದು.
ವಿಳಾಸ- ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ ) 43. ರೋಹಿಣಿ 5ನೇ ಮೇನ್ ಪದ್ಮನಾಭನಗರ, ಬೆಂಗಳೂರು- 560070. ಕಾರ್ಯದರ್ಶಿ-
ಮೊ: 9342176030
ನಾಗೇಶ್ ಅರಳಕುಪ್ಪೆ
ಸ್ಪರ್ಧೆ ಹಾಗು ಉತ್ತರ ಮತ್ತು ಭದ್ರತಾ ಠೇವಣಿಯ ಹಾಗು ಸ್ಪರ್ಧೆ ನಡೆಸುವ ಜವಾಬ್ದಾರಿಗಾಗಿ ಸಂಘವು ನೇಮಿಸಿದ ಒಂದು ತಜ್ಞರ ಸಮಿತಿಯು ನಿರ್ವಹಿಸುತ್ತದೆ. ಸಂಘದ ಕಡೆಯಿಂದ ಒಂದು ಕೋಟಿ ರೂ.ಗಳಿಗೆ ಭದ್ರತೆಗಾಗಿ ಠೇವಣಿ ಪತ್ರ, ಶೇರು ಪತ್ರ, ಸ್ಥಿರಾಸ್ತಿ ಪತ್ರ ಇವುಗಳಲ್ಲಿ ಯಾವುದನ್ನು ಸಂಘದಿಂದ ನೇಮಕಗೊಂಡ ಅದೇ ಸಮಿತಿಯ ವಶ ಕೊಡಲಾಗುತ್ತದೆ. ಆದರೆ ಯಾವುದೇ ಸ್ಪರ್ಧಿಗಳ ಕೈಗೆ ಕೊಡಲಾಗುವುದಿಲ್ಲ. ಸ್ಪರ್ಧೆಯ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಗೆದ್ದ ಸ್ಪರ್ಧಿಯನ್ನು ಮಾತ್ರ ಸಂಪರ್ಕಿಸಲಾಗುವುದು. ಚುನಾವಣಾ ಫಲಿತಾಂಶ ಪತ್ರಿಕೆಗಳಲ್ಲಿ ಬರುವುದರಿಂದ ಸ್ಪರ್ಧಿಗಳು ಏನು ಉತ್ತರ ಕೊಟ್ಟಿದ್ದಾರೆ ಅದು ಹೇಗೆ ತಪ್ಪಾಗಿದೆ ಎನ್ನುವುದು ಸೋತವರಿಗೆ ಸ್ವತಃ ತಿಳಿಯುವುದರಿಂದ ಅವರಿಗೆ ನಾವು ಮತ್ತೆ ತಿಳಿಸಬೇಕಾಗಿಲ್ಲ ಎಂದು ವಿಚಾರವಾದಿ ಸಂಘದ ಕಾರ್ಯದರ್ಶಿಗಳಾದ ನಾಗೇಶ್ ಅರಳಕುಪ್ಪೆ ತಿಳಿಸಿದ್ದಾರೆ.
ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ವಿಚಾರವಾದಿ ಡಾ. ನರೇಂದ್ರ ನಾಯಕರ ರವರು ಸಹ 10ಲಕ್ಷ ರೂ. ಬಹುಮಾನದ ಸವಾಲು ಒಡ್ಡಿದ್ದಾರೆ. ಈ ಬಾರಿಯ ಚುನಾವಣೆ ಸಂಬಂಧಿತ 20 ಪ್ರಶ್ನೆಗಳನ್ನು ನೀಡಿರುವ ಅವರು ಅದರಲ್ಲಿ 18 ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ವಿವರಗಳಿಗೆ ಅವರ ಮೊ. 9448216343 ಸಂಪರ್ಕಿಸಿರಿ.
ಪ್ರೊ.ನರೇಂದ್ರ ನಾಯಕ್
ಅದೇ ರೀತಿ ಡಾ ಲಲಿತಾ ನಾಯಕ್ ರವರ ರೂ10,000/ ಬಹುಮಾನ ಸವಾಲು ಹಾಕಿದ್ದು ವಿವರಗಳಿಗೆ ಅವರ ಮೊ. 9448067193. ಸಂಪರ್ಕಿಸಿ. ಮತ್ತು ಒಂದು ಲಕ್ಷ ರೂ ಹಾಗು ಚಿನ್ನದ ಉಂಗುರ ಬಹುಮಾನ ಸವಾಲು ಹಾಕಿರುವ ಶ್ರೀ ನರಸಿಂಹಮೂರ್ತಿಯವರ ವಿವರಗಳಿಗೆ ಅವರ ಮೊ: 9980627609 ಸಂಪರ್ಕಿಸಿಬಹುದಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು.
ಗುರುವಾರ (ಜ.29) ಸಂಜೆ...
ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು.
ಗುರುವಾರ (ಜ.29) ಬೆಂಗಳೂರಿನ...
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ.
ಜತೋನ್ ಕಾ...
ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...
ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...
ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ.
ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....
ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...
ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....