ಜ್ಯೋತಿಷಿಗಳಿಗೆ ನಿಖರ ಚುನಾವಣಾ ಫಲಿತಾಂಶ ಹೇಳುವಂತೆ ಸವಾಲು ಹಾಕಿದ ವಿಚಾರವಾದಿಗಳು
"ವಿವಿಧ ಪಕ್ಷಗಳು ಗೆಲ್ಲುವ ಸ್ಥಾನ ಗಳಸಂಖ್ಯೆ ಹಾಗು ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳು ಅವುಗಳ ಸಂಖ್ಯೆಗಳ ನಿಖರ ಲೆಕ್ಕ ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ" ಎಂದು ತಿಳಿಸಬೇಕು.
ಚುನಾವಣೆಯ ಸಂದರ್ಭದಲ್ಲಿ ಯಾರ್ಯಾರೋ ಹಣ ಮಾಡಿಕೊಳ್ಳಲ್ಲಿಕ್ಕೆ ಮುಗಿಬೀಳುತ್ತಾರೆ. ಅದರಲ್ಲಿ ಜ್ಯೋತಿಷ್ಯ ಹೇಳುವವರ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದು ಮನಸ್ಸಿಗೆ ಬಂದ ಲೆಕ್ಕ ಹೇಳಿ ಕೆಲವು ಜನರಿಂದ ಹಣ ಕೀಳುತ್ತಿದ್ದಾರೆ. ರಾಜಕಾರಣಿಗಳು ಸೇರಿದಂತೆ ಹಲವು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಜ್ಯೋತಿಷಿಗಳು ಚುನಾವಣೆಗೂ ಮುನ್ನವೇ ಕೆಲವು ಅಂಕಿ ಸಂಖ್ಯೆಗಳನ್ನು ಹೇಳುವ ಮೂಲಕ ಪ್ರಭಾವ ಬೀರಲು, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು ಹಲವು ಪ್ರಜ್ಞಾವಂತರು ದಶಕಗಳ ಕಾಲದಿಂದಲೇ ಪ್ರಯತ್ನಿಸುತ್ತಿದ್ದಾರೆ. ಸರಿಯಾದ ಜ್ಯೋತಿಷ್ಯ ಹೇಳುವಂತೆ ಸವಾಲು ಹಾಕಿ ಬಹುಮಾನ ಘೋಷಿಸುವುದು ಸಹ ಒಂದು ವಿಧಾನ.
ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ) ಬೆಂಗಳೂರು. ಇವರಿಂದ ಚುನಾವಣಾ ಭವಿಷ್ಯ ಹೇಳುವ ಜ್ಯೋತಿಷಿಗಳ ಭವಿಷ್ಯ ವಾಣಿಗಳ ಸತ್ಯಾ ಸತ್ಯತೆಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಕಲಿತು ಭವಿಷ್ಯ ಹೇಳುವವರಿಗೆ ಒಂದು ಕೋಟಿ ರೂ ಬಹುಮಾನದ ಸವಾಲು ಹಾಕಲಾಗಿದೆ. ಪ್ರತಿ ವರ್ಷ ಪ್ರೊ ನರೇಂದ್ರ ನಾಯಕ್ ರವರು ಜ್ಯೋತಿಷ್ಯ ಹೇಳುವವರ ಬಣ್ಣ ಬಯಲು ಮಾಡುವ ಉದ್ದೇಶದಿಂದ ಈ ರೀತಿಯ ಸವಾಲುಗಳನ್ನು ಹಾಕುತ್ತಿದ್ದರು. ಈ ಬಾರಿ ಹಲವು ಜನರು ಸವಾಲು ಹಾಕಿದ್ದಾರೆ. ಈಗಾಗಲೇ ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಈ ವಿವರಗಳು ಹರಿದಾಡುತ್ತಿದ್ದು ಸಾರ್ವಜನಿಕರ ಕುತೂಹಲ ಕೆರಳಿಸಿವೆ.
ಸವಾಲುಗಳ ವಿವರ
ವಿಚಾರವಾದಿ ಸಂಘ ಬೆಂಗಳೂರು
ಒಂದು ಕೋಟಿ ರೂ ಬಹುಮಾನದ ಸವಾಲು ಇದು – “ವಿವಿಧ ಪಕ್ಷಗಳು ಗೆಲ್ಲುವ ಸ್ಥಾನ ಗಳಸಂಖ್ಯೆ ಹಾಗು ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳು ಅವುಗಳ ಸಂಖ್ಯೆಗಳ ನಿಖರ ಲೆಕ್ಕ ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ” ಎಂದು ತಿಳಿಸಬೇಕು.
ವಿವರ- 2019 ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಅಂಗೀಕೃತವಾದ ರಾಜಕೀಯ ಪಕ್ಷಗಳು ಇಡೀ ಭಾರತದಲ್ಲಿ ಈಗ ಲೋಕಸಭೆಗೆ ನಡೆದ, ನಡೆಯುತ್ತಿರುವ ಚುನಾವಣೆಯ ಎಲ್ಲಾ ಒಟ್ಟು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪಕ್ಷಾವಾರು ಎಷ್ಟೆಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ಸಂಖ್ಯೆಗಳು ಮತ್ತು ಅಂಗೀಕೃತ ಅಲ್ಲದ ಪಕ್ಷ ಇಲ್ಲವೇ ಪಕ್ಷೇತರ ಸ್ವತಂತ್ರ ಅಭ್ಯರ್ಥಿ ಗಳಾಗಿ ಸ್ಪರ್ಧಿಸಿದವರು ಯಾವ ಯಾವ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ ಎಂದು ಮುಂಚಿತ ಭವಿಷ್ಯ ಹೇಳಬೇಕು. ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ ಎಂದು ತಿಳಿಸ ಬೇಕು.
ಈ ಸವಾಲಿಗೆ ಇರುವ ಕೆಲ ನಿಯಮಗಳು
ದೇಶದ ಯಾವ ಜ್ಯೋತಿಷಿಯಾದರೂ ಭಾಗವಹಿಸಬಹುದು. ಆದರೆ ಭಾಗವಹಿಸುವವರು ಗಣಿತ ನೈಪುಣ್ಯದ ಮೇಲೆ ಹಾಗು ಊಹೆಯ ಮೇಲೆ ಹಲವು ವಿವಿಧ ಸಂಯೋಜನೆಗಳ ಮೇಲೆ ಲೆಕ್ಕಹಾಕಿ (multiple combinations) ಮಾಡಿ ಬಹುಮುಖ ಉತ್ತರಗಳನ್ನು, ಒಬ್ಬರೇ ಬೇರೆ ಬೇರೆ ಹೆಸರಿನಿಂದ ಹಲವಾರು ಉತ್ತರಗಳನ್ನು ಕಳುಹಿಸ ಬಾರದೆಂಬ ಕಾರಣಕ್ಕಾಗಿ ಹಾಗೂ ಈ ಸ್ಪರ್ಧೆಗೆ ಒಂದು ಗಂಭೀರತೆ ಹಾಗು ಸತ್ಯದ ದೃಢತೆಯ ಮನಸಾಕ್ಷಿಗಾಗಿ, ಕಳುಹಿಸುವ ಪ್ರತೀ ಉತ್ತರದ ಅರ್ಜಿಗೆ ತಲಾ ಹತ್ತು ಸಾವಿರ ರೂ. ನ್ನು ಭದ್ರತಾ ಠೇವಣಿಯಾಗಿ ನೀಡ ಬೇಕಾಗುತ್ತದೆ. ಠೇವಣಿಯನ್ನು “ವಿಚಾರವಾದಿ ಸಂಘ ಬೆಂಗಳೂರು” – ಈ ಹೆಸರಿಗೆ ಡಿ.ಡಿ. ಕಳುಹಿಸ ಬೇಕು. ಗೆದ್ದವರಿಗೆ ಮಾತ್ರ ಠೇವಣಿ ಹಣ ಹಿಂತಿರುಗಿಸ ಲಾಗುವುದು ಮತ್ತು ಜೊತೆಗೆ ಒಂದು ಕೋಟಿ ರೂ. ಬಹುಮಾನವನ್ನು ನೀಡಲಾಗುವುದು. ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನ ಹಣವನ್ನು ಗೆದ್ದವರಿಗೆ ಸಮನಾಗಿ ಹಂಚಲಾಗುತ್ತದೆ.
ಮೇ 20ನೇ ತಾರೀಖಿನ ಒಳಗೆ ಈ ಕೆಳಗಿನ ಬೆಂಗಳೂರಿನ ವಿಚಾರವಾದಿಗಳ ಸಂಘದ ಕಛೇರಿಗೆ ಉತ್ತರವನ್ನು ದಾಖಲಾತಿ ಮೂಲಕ ತಲುಪಿಸತಕ್ಕದ್ದು.
ವಿಳಾಸ- ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ ) 43. ರೋಹಿಣಿ 5ನೇ ಮೇನ್ ಪದ್ಮನಾಭನಗರ, ಬೆಂಗಳೂರು- 560070. ಕಾರ್ಯದರ್ಶಿ-
ಮೊ: 9342176030
ನಾಗೇಶ್ ಅರಳಕುಪ್ಪೆ
ಸ್ಪರ್ಧೆ ಹಾಗು ಉತ್ತರ ಮತ್ತು ಭದ್ರತಾ ಠೇವಣಿಯ ಹಾಗು ಸ್ಪರ್ಧೆ ನಡೆಸುವ ಜವಾಬ್ದಾರಿಗಾಗಿ ಸಂಘವು ನೇಮಿಸಿದ ಒಂದು ತಜ್ಞರ ಸಮಿತಿಯು ನಿರ್ವಹಿಸುತ್ತದೆ. ಸಂಘದ ಕಡೆಯಿಂದ ಒಂದು ಕೋಟಿ ರೂ.ಗಳಿಗೆ ಭದ್ರತೆಗಾಗಿ ಠೇವಣಿ ಪತ್ರ, ಶೇರು ಪತ್ರ, ಸ್ಥಿರಾಸ್ತಿ ಪತ್ರ ಇವುಗಳಲ್ಲಿ ಯಾವುದನ್ನು ಸಂಘದಿಂದ ನೇಮಕಗೊಂಡ ಅದೇ ಸಮಿತಿಯ ವಶ ಕೊಡಲಾಗುತ್ತದೆ. ಆದರೆ ಯಾವುದೇ ಸ್ಪರ್ಧಿಗಳ ಕೈಗೆ ಕೊಡಲಾಗುವುದಿಲ್ಲ. ಸ್ಪರ್ಧೆಯ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಗೆದ್ದ ಸ್ಪರ್ಧಿಯನ್ನು ಮಾತ್ರ ಸಂಪರ್ಕಿಸಲಾಗುವುದು. ಚುನಾವಣಾ ಫಲಿತಾಂಶ ಪತ್ರಿಕೆಗಳಲ್ಲಿ ಬರುವುದರಿಂದ ಸ್ಪರ್ಧಿಗಳು ಏನು ಉತ್ತರ ಕೊಟ್ಟಿದ್ದಾರೆ ಅದು ಹೇಗೆ ತಪ್ಪಾಗಿದೆ ಎನ್ನುವುದು ಸೋತವರಿಗೆ ಸ್ವತಃ ತಿಳಿಯುವುದರಿಂದ ಅವರಿಗೆ ನಾವು ಮತ್ತೆ ತಿಳಿಸಬೇಕಾಗಿಲ್ಲ ಎಂದು ವಿಚಾರವಾದಿ ಸಂಘದ ಕಾರ್ಯದರ್ಶಿಗಳಾದ ನಾಗೇಶ್ ಅರಳಕುಪ್ಪೆ ತಿಳಿಸಿದ್ದಾರೆ.
ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ವಿಚಾರವಾದಿ ಡಾ. ನರೇಂದ್ರ ನಾಯಕರ ರವರು ಸಹ 10ಲಕ್ಷ ರೂ. ಬಹುಮಾನದ ಸವಾಲು ಒಡ್ಡಿದ್ದಾರೆ. ಈ ಬಾರಿಯ ಚುನಾವಣೆ ಸಂಬಂಧಿತ 20 ಪ್ರಶ್ನೆಗಳನ್ನು ನೀಡಿರುವ ಅವರು ಅದರಲ್ಲಿ 18 ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ವಿವರಗಳಿಗೆ ಅವರ ಮೊ. 9448216343 ಸಂಪರ್ಕಿಸಿರಿ.
ಪ್ರೊ.ನರೇಂದ್ರ ನಾಯಕ್
ಅದೇ ರೀತಿ ಡಾ ಲಲಿತಾ ನಾಯಕ್ ರವರ ರೂ10,000/ ಬಹುಮಾನ ಸವಾಲು ಹಾಕಿದ್ದು ವಿವರಗಳಿಗೆ ಅವರ ಮೊ. 9448067193. ಸಂಪರ್ಕಿಸಿ. ಮತ್ತು ಒಂದು ಲಕ್ಷ ರೂ ಹಾಗು ಚಿನ್ನದ ಉಂಗುರ ಬಹುಮಾನ ಸವಾಲು ಹಾಕಿರುವ ಶ್ರೀ ನರಸಿಂಹಮೂರ್ತಿಯವರ ವಿವರಗಳಿಗೆ ಅವರ ಮೊ: 9980627609 ಸಂಪರ್ಕಿಸಿಬಹುದಾಗಿದೆ.
ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ.
ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...
ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...
ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...
ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು.
ಈ ಮಸೂದೆ 2005ರಲ್ಲಿ...
ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...
"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...
2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...