ತಮ್ಮ ಸಂಘಟನೆಗೆ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಮತ್ತು ಅವರ ಕಾರ್ಯಾಚರಣೆಗಳಿಗೆ ಆರ್ಥಿಕ ನೆರವು ನೀಡಲು ನಿರಾಕರಿಸಿದ ಕಾರಣಕ್ಕೆ ತೆಲಂಗಾಣದ ಚಿಲ್ಕೂರ್ ಬಾಲಾಜಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥನ್ ಅವರ ಮೇಲೆ ತೀವ್ರ ಬಲಪಂಥೀಯ ಹಿಂದುತ್ವ ಗುಂಪು ಹಲ್ಲೆ ನಡೆಸಿದೆ ಎಂದು ಸೌತ್ ಫಸ್ಟ್ ವರದಿ ಮಾಡಿದೆ. ಸಂಘಟನೆಗೆ ಚಂದಾ ನೀಡದ
‘ರಾಮ ರಾಜ್ಯಂ’ ಎಂದು ಕರೆದುಕೊಳ್ಳುವ ಮತ್ತು ಪೌರಾಣಿಕ ಇಕ್ಷ್ವಾಕು ಕುಲದ ವಂಶಸ್ಥರು ಎಂದು ಹೇಳಿಕೊಳ್ಳುವ ದುಷ್ಕರ್ಮಿಗಳ ಗುಂಪು, ಹಿಂದೂ ಹೊಸ ವರ್ಷದ ವೇಳೆಗೆ ‘ರಾಮ ರಾಜ್ಯ’ದ ತಮ್ಮ ಕಾರ್ಯಕ್ರಮಕ್ಕೆ ಸಹಾಯ ಮಾಡಲು ಒತ್ತಾಯಿಸಿತ್ತು, ಅದಕ್ಕೆ ನಿರಾಕರಿಸಿದ್ದ ಅವರನ್ನು ಅವರ ನಿವಾಸದಲ್ಲೆ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಫೆಬ್ರವರಿ 7 ರಂದು ತೆಲಂಗಾಣದ ಮೊಯಿನಾಬಾದ್‌ನಲ್ಲಿ ಈ ದಾಳಿ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ. ಸಂಘಟನೆಗೆ ಚಂದಾ ನೀಡದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಘಟನೆಯ ವೀಡಿಯೊ ರೆಕಾರ್ಡಿಂಗ್‌ನಲ್ಲಿ ದಾಳಿಕೋರರು ಅರ್ಚಕ ತಮ್ಮ “ಸೇನೆ”ಗೆ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಮತ್ತು ಹಣಕಾಸಿನ ನೆರವು ನೀಡಲು ನಿರಾಕರಿಸಿದ ನಂತರ ಅವರನ್ನು ನಿಂದಿಸಿ ಹಲ್ಲೆ ನಡೆಸುತ್ತಿರುವುದನ್ನು ದಾಖಲಾಗಿದೆ. ಹಿಂದೂ ಸಂಪ್ರದಾಯ ಮತ್ತು ತಮ್ಮ ಗುಂಪಿನ ಗುರುತಿನ ಬಗ್ಗೆ ಅರ್ಚಕರಿಗೆ ಜ್ಞಾನವಿಲ್ಲ ಎಂದು ಆರೋಪಿಸಿ ಅವರು ಅವರನ್ನು ಕೆಣಕಿದ್ದಾರೆ.
“ಶ್ರೀ ಚಿಲ್ಕೂರು ಬಾಲಾಜಿ ದೇವತೆಯ ಅರ್ಚಕನೂ ಆಗಿರುವ ನನ್ನ ಮಗ ಶ್ರೀ ರಂಗರಾಜನ್ ಅವರನ್ನು ಅವರು ಗಂಭೀರವಾಗಿ ನಿಂದಿಸಿದರು. ನಮ್ಮ ಮನೆಯಲ್ಲೆ ಅವರಿಗೆ ಥಳಿಸಲಾಯಿತು ಎಂದು ರಂಗನಾಥನ್ ಅವರ ತಂದೆ ಸೌಂದರರಾಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#Telangana: The head priest of the Chilkur Balaji Temple was attacked on 7 February by a group called #RamaRajya claiming to be the descendants of the Ikshwaku clan.
The group aiming to establish their own version of a 'Rama Rajya,' attacked the priest for refusing to associate… pic.twitter.com/oVVSNklxgw
— South First (@TheSouthfirst) February 9, 2025
ಮೊಯಿನಾಬಾದ್ ಪೊಲೀಸರು ಸಂಘಟನೆಯ ನಾಯಕ ವೀರ ರಾಘವ ರೆಡ್ಡಿಯನ್ನು ಬಂಧಿಸಿದ್ದಾರೆ. “ಆರೋಪಿಯ ವಿರುದ್ಧ ಈ ಹಿಂದೆಯು ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅದಕ್ಕೂ ಮೊದಲು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಾಗಿತ್ತು” ಎಂದು ಪೊಲೀಸರು ಸೌತ್ ಫಸ್ಟ್‌ಗೆ ತಿಳಿಸಿದ್ದಾರೆ.
ಹಿಂದೂ ಮಹಾಕಾವ್ಯ ರಾಮಾಯಣದ ನಾಯಕನ ರಾಜ್ಯವಾದ ರಾಮರಾಜ್ಯವನ್ನು “ಪುನಃ ಸ್ಥಾಪಿಸುವ” ಉಗ್ರಗಾಮಿ ದೃಷ್ಟಿಕೋನವನ್ನು ಈ ಸಂಘಟನೆ ಪ್ರತಿಪಾದಿಸುತ್ತದೆ. “ದೇಶದ ಪ್ರಸ್ತುತ ಕ್ರಿಮಿನಲ್ ನ್ಯಾಯ ವ್ಯವಸ್ಥೆಗಳು ದುಷ್ಟವಾಗಿದ್ದು, ಅಶಿಸ್ತುಬದ್ಧವಾಗಿವೆ. ಅಲ್ಲದೆ, ಶ್ರೀಮಂತ ಅಪರಾಧಿಗಳನ್ನು ಮಾತ್ರ ರಕ್ಷಿಸುತ್ತಿವೆ ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ಧರ್ಮವು ಕಂಡುಬರುವುದಿಲ್ಲ” ಎಂದು ಸಂಘಟನೆಯ ಕಿರುಪುಸ್ತಕ ಹೇಳುತ್ತದೆ ಎಂದು ವರದಿಯಾಗಿದೆ.
ಈ ಗುಂಪು ಪ್ರತ್ಯೇಕ ನಾಗರಿಕ ವ್ಯವಸ್ಥೆ, ಸೈನ್ಯ ಮತ್ತು ಕಾನೂನು ತಂಡವನ್ನು ರೂಪಿಸುತ್ತದೆ. ಅವರ ವೆಬ್‌ಸೈಟ್ ಜಾತಿ ಪ್ರಾಬಲ್ಯವನ್ನು ಉತ್ತೇಜಿಸುವ ವೀಡಿಯೊಗಳನ್ನು ಒಳಗೊಂಡಿದ್ದು, ರಾಮಾಯಣ ಮತ್ತು ಭಗವದ್ಗೀತೆಯ ವ್ಯಾಖ್ಯಾನಗಳ ಮೂಲಕ ಇಕ್ಷ್ವಾಕುಗಳನ್ನು ವಿಶ್ವ ಮಾಲೀಕರೆಂದು ಘೋಷಿಸುತ್ತದೆ. ತಮ್ಮ ಮಾರ್ಗಗಳನ್ನು ಬದಲಾಯಿಸದ ನ್ಯಾಯಾಧೀಶರ, ನಾಗರಿಕರ ಬಂಧನ ಮಾಡುವುದಾಗಿ ಅವರು ಬೆದರಿಕೆ ಹಾಕುತ್ತಾರೆ.
ದುಷ್ಟರನ್ನು ಶಿಕ್ಷಿಸುವುದು, ಗೋವುಗಳನ್ನು ರಕ್ಷಿಸುವುದು, ಇಕ್ಷ್ವಾಕು ಮತ್ತು ಭರತ ಕುಲಗಳಿಗೆ ಸೇರಿದ ಭೂಮಿಯನ್ನು ಮರಳಿ ಪಡೆಯುವುದು, ದೇವಾಲಯದ ಆಸ್ತಿಗಳನ್ನು ಮರಳಿ ಪಡೆಯುವುದು ಮತ್ತು ಆರು ಹಿಂದೂ ಪಂಗಡಗಳಿಗೆ ಸೇರಿದ ಭೂಮಿಯನ್ನು ಮರಳಿ ಪಡೆಯುವುದು ಅವರ ಉದ್ದೇಶಗಳಲ್ಲಿ ಸೇರಿವೆ. ಗುಂಪಿನ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸೌತ್ ಫಸ್ಟ್ ವರದಿ ಮಾಡಿದೆ.
ಇದನ್ನೂಓದಿ: ಪಂಜಾಬ್ ಎಎಪಿ ವಿಭಜನೆಯಾಗಲಿದೆ, 30 ಶಾಸಕರು ಸಂಪರ್ಕದಲ್ಲಿದ್ದಾರೆ : ಕಾಂಗ್ರೆಸ್
ಪಂಜಾಬ್ ಎಎಪಿ ವಿಭಜನೆಯಾಗಲಿದೆ, 30 ಶಾಸಕರು ಸಂಪರ್ಕದಲ್ಲಿದ್ದಾರೆ : ಕಾಂಗ್ರೆಸ್


