Homeಮುಖಪುಟ4 ದಿನಗಳ ಟೆಸ್ಟ್ ನಿಯಮಗಳೇನು? ವಿರೋಧವೇಕೆ?

4 ದಿನಗಳ ಟೆಸ್ಟ್ ನಿಯಮಗಳೇನು? ವಿರೋಧವೇಕೆ?

- Advertisement -
- Advertisement -

ಟೆಸ್ಟ್ ಪಂದ್ಯ ಕ್ರಿಕೆಟ್‍ನ ಪರಿಶುದ್ಧ ರೂಪ. ಇದು ಕ್ರಿಕೆಟ್‍ನ ಆತ್ಮವೂ ಹೌದು. ಕ್ರಿಕೆಟ್ ಆಟಗಾರರ ಅಸಲಿ ತಾಕತ್ತನ್ನು ಹೊರತರುವ ಮಾದರಿ. ಆದ್ರೆ ಇದೀಗ ಈ ಟೆಸ್ಟ್‍ನ ಸ್ವರೂಪವನ್ನೇ ಬದಲಿಸಲು ಐಸಿಸಿ ಮುಂದಾಗಿದೆ. ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ. ಆದ್ರೆ ಐಸಿಸಿಯ ಈ ಕಲ್ಪನೆಗೆ ಕ್ರಿಕೆಟ್ ಪ್ರಪಂಚದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಏನಿದು 4 ದಿನಗಳ ಟೆಸ್ಟ್? ನಿಯಮಗಳೇನು?

ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸುವ ಐಸಿಸಿ ಕಲ್ಪನೆಯ ಈ ಪಂದ್ಯದಲ್ಲಿ ನೂತನ ನಿಯಮಗಳು ಅನ್ವಯವಾಗಲಿವೆ. 5 ದಿನಗಳ ಪಂದ್ಯಗಳಲ್ಲಿ ಪ್ರತಿ ದಿನ 90 ಓವರ್‍ಗಳ ಆಟ ನಡೆಯಲಿದ್ದು, ‘4 ದಿನಗಳ ಟೆಸ್ಟ್’ನಲ್ಲಿ ದಿನಕ್ಕೆ 98 ಓವರ್‍ಗಳ ಆಟವನ್ನು ನಿಗದಿಪಡಿಸಲಾಗಿದೆ.

ಪಂದ್ಯದಲ್ಲಿ ಒಟ್ಟಾರೆ 392 ಓವರ್ ಆಟಕ್ಕೆ ಅವಕಾಶವಿದ್ದು, 5 ದಿನಗಳ ಟೆಸ್ಟ್’ಗಳಿಗಿಂತ 58 ಓವರ್ ಕಡಿಮೆ ಆಟ ನಡೆಯಲಿದೆ. ದಿನವೊಂದರಲ್ಲಿ 90ರ ಬದಲು 98 ಓವರ್ ಪೂರ್ಣಗೊಳಿಸಬೇಕಿರುವ ಕಾರಣ, ಹೆಚ್ಚುವರಿ 8 ಓವರ್‍ಗಾಗಿ ದಿನದಾಟವನ್ನು ಅರ್ಧಗಂಟೆ ಹೆಚ್ಚಿಸಲಾಗುತ್ತದೆ. ಮೊದಲೆರಡು ಅವಧಿಗಳನ್ನು 2 ಗಂಟೆ ಬದಲು 2 ಗಂಟೆ 15 ನಿಮಿಷ ನಡೆಸುವುದಾಗಿ ಐಸಿಸಿ ತಿಳಿಸಿದೆ.

ವಿರೋಧ ಯಾಕೆ ಸ್ವಾಮಿ?

ಐಸಿಸಿಯ ಪ್ರಸ್ತಾವನೆ ಮೇಲ್ನೋಟಕ್ಕೆ ಸರಿ ಅನಿಸಿದರೂ, ಇದು ಕ್ರಿಕೆಟ್ ಆತ್ಮವನ್ನು ವಿರೂಪಗೊಳಿಸುವ ಪ್ರಯತ್ನ ಎನ್ನಲಾಗುತ್ತಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯ ಕ್ರಿಕೆಟ್ ಸ್ವರೂಪಕ್ಕೆ ವಿರುದ್ಧವಾದದ್ದು, ಇದು ಕ್ರಿಕೆಟ್‍ನ ಶುದ್ಧ ರೂಪವನ್ನು ಹಾಳು ಮಾಡುತ್ತದೆ ಎಂದು ಕ್ರಿಕೆಟ್ ದಿಗ್ಗಜರು ವಾದಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ನಾಲ್ಕು ದಿನಗಳಿಗೆ ಇಳಿಸಿದರೇ ಟೆಸ್ಟ್, ಅದರ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಹಾಗೂ ಯುವ ಕ್ರಿಕೆಟಿಗರ ಮೇಲೆ ಇದು ವ್ಯತಿರಿಕ್ತ ಪ್ರಭಾವ ಬೀರುತ್ತದೆ ಎಂದು ಮಾಜಿ ಕ್ರಿಕೆಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ದೇವರಿಂದಲೂ ವಿರೋಧ!

“ಕ್ರಿಕೆಟ್‍ನ ಅತೀ ಶುದ್ಧ ರೂಪವೆಂದರೆ ಟೆಸ್ಟ್ ಪಂದ್ಯ. ಇದನ್ನು ಹದಗೆಡಿಸಬಾರದು. ನೀವು ಟಿ20ಯನ್ನು ಜಾರಿ ಮಾಡಿದಿರಿ, ಏಕದಿನ ತಂದಿರಿ, ಟಿ10 ಬಂತು. 100 ಎಸೆತಗಳ ಕ್ರಿಕೆಟ್ ಕೂಡ ಬಂತು. ಆದರೆ ಟೆಸ್ಟ್ ಕ್ರಿಕೆಟನ್ನು ಮಾತ್ರ ಬದಲಾಯಿಸಲು ಹೋಗಬೇಡಿ’ ಎಂದು ಸಚಿನ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟನ್ನು 4 ದಿನಗಳಿಗೆ ಇಳಿಸುವುದರಿಂದ ಆಟ ತನ್ನ ಸೊಬಗು ಕಳೆದುಕೊಳ್ಳಲಿದೆ. ‘ಟೆಸ್ಟ್ ಕ್ರಿಕೆಟ್‍ನ ಪ್ರೀತಿಸುವ ಅಭಿಮಾನಿಯಾಗಿ ಹೇಳುತ್ತಿದ್ದೇನೆ. ಆಟದ ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಪಂದ್ಯವನ್ನು 4 ದಿನಗಳಿಗೆ ಇಳಿಸಿದರೆ, ಆಟಗಾರರು ಟೆಸ್ಟ್ ಕ್ರಿಕೆಟನ್ನು ನೋಡುವ ದೃಷ್ಟಿಯೇ ಬದಲಾಗಲಿದೆ’ ಎಂದು 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ 4 ದಿನಗಳ ಟೆಸ್ಟ್ ಬೇಡ ಎಂಬ ಧಾಟಿಯಲ್ಲಿ ಮಾತಾಡಿದ್ದಾರೆ. ಐಸಿಸಿ ನಿರ್ಧಾರ ಕ್ರಿಕೆಟ್ ಆತ್ಮವಾಗಿರುವ ಟೆಸ್ಟ್ ಕ್ರಿಕೆಟ್ ಸ್ವರೂಪಕ್ಕೆ ವಿರುದ್ಧವಾದದ್ದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಐಸಿಸಿ ವಾದವೇನು?

ಫಲಿತಾಂಶಕ್ಕೆ ಹೆಚ್ಚಿನ ಆದ್ಯತೆ: ಟೆಸ್ಟ್ ಕ್ರಿಕೆಟ್‍ಗೆ ಹೊಸ ರೂಪ ನೀಡಲು ಪ್ರಯೋಗಗಳನ್ನು ನಡೆಸುತ್ತಿರುವ ಐಸಿಸಿ, ಫಾಲೋ ಆನ್ ನಿಯಮವನ್ನು 200 ರನ್‍ಗಳಿಂದ 150ಕ್ಕಿಳಿಸಿದೆ. ಫಲಿತಾಂಶಕ್ಕೆ ಒತ್ತು ನೀಡುವ ತಂಡಗಳಿಗೆ ಈ ನಿಯಮ ಅನುಕೂಲವಾಗಲಿದೆ ಎಂದು ಐಸಿಸಿ ತಿಳಿಸಿದೆ. ಇನ್ನುಳಿದಂತೆ 5 ದಿನಗಳ ಟೆಸ್ಟ್ ನಿಯಮಗಳೆಲ್ಲವೂ ಅನ್ವಯವಾಗುತ್ತದೆ.

2023ರಿಂದ 2031ರ ನಡುವಿನ ಕ್ರಿಕೆಟ್ ಋತುಗಳಲ್ಲಿ ಟೆಸ್ಟ್ ಪಂದ್ಯಗಳನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವುದರಿಂದ ಹೆಚ್ಚು ಜಾಗತಿಕ ಮಟ್ಟದ ಟೂರ್ನಿಗಳು, ಬಿಸಿಸಿಐ ಬೇಡಿಕೆಯಂತೆ ಮತ್ತಷ್ಟು ದ್ವಿಪಕ್ಷೀಯ ಸರಣಿಗಳ ಆಯೋಜನೆ, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‍ಗಳ ಪ್ರಸರಣ ಹಾಗೂ 5 ದಿನಗಳ ಪಂದ್ಯಗಳ ಆಯೋಜನೆಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸದ್ಯ ಚಾಲ್ತಿಯಲ್ಲಿರುವ 2015-2023ರ ಅವಧಿಯಲ್ಲಿ 5 ದಿನಗಳ ಬದಲಿಗೆ 4 ದಿನಗಳ ಟೆಸ್ಟ್ ಪಂದ್ಯಗಳನ್ನು ನಡೆಸಿದರೆ 335 ದಿನಗಳು ಉಳಿಯುತ್ತಿದ್ದವು ಎಂದು ಐಸಿಸಿ ಅಂದಾಜಿಸಿದೆ.

ಐಸಿಸಿಯ ಬೆಂಬಲಕ್ಕೆ ಮಂಡಳಿಗಳು!

ನಾಲ್ಕು ದಿನಗಳ ಟೆಸ್ಟ್ ಪ್ರಸ್ತಾವದ ಬಗ್ಗೆ ಈಗಾಗಲೇ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಮಧ್ಯೆ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಐಸಿಸಿಯ ಬೆಂಬಲಕ್ಕೆ ನಿಂತಿವೆ. ಆದ್ರೆ ಆಸ್ಟೇಲಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು, ಐಸಿಸಿ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸ ಯೋಜನೆಯಲ್ಲ

4 ದಿನಗಳ ಟೆಸ್ಟ್ ಹೊಸ ಯೋಜನೆ ಏನಲ್ಲ. ಈ ವರ್ಷ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು 4 ದಿನಗಳ ಪಂದ್ಯವನ್ನು ಆಡಿದ್ದವು. ಈ ಹಿಂದೆ 2017ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಸಹ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಬಿಸಿಸಿಐ ರೆಡ್ ಸಿಗ್ನಲ್

ನಾಲ್ಕು ದಿನಗಳ ಟೆಸ್ಟ್ ಮ್ಯಾಚ್ ನಡೆಸುವ ಬಗ್ಗೆ ಬಿಸಿಸಿಐ ರೆಡ್ ಪರ-ವಿರೋಧ ವಾದಗಳ ಮಧ್ಯೆ ಐಸಿಸಿಯ ಕ್ರಿಕೆಟ್ ಸಮಿತಿಯು ಮಾರ್ಚ್‍ನಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಪ್ರಸ್ತಾವದ ಕುರಿತು ಚರ್ಚೆ ನಡೆಸಲು ಸಿದ್ಧತೆ ನಡೆಸಿದೆ. ದುಬೈನಲ್ಲಿ ಮಾರ್ಚ್ 27 ರಿಂದ 31 ರ ತನಕ ನಡೆಯುವ ಮುಂದಿನ ಸುತ್ತಿನ ಐಸಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮಾಜಿ ಕ್ರಿಕೆಟಿಗ, ಕ್ರಿಕೆಟ್ ಸಮಿತಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ. ಈ ಕ್ರಿಕೆಟ್ ಸಮಿತಿಯಲ್ಲಿ ಆಂಡ್ರೂ ಸ್ಟ್ರಾಸ್, ರಾಹುಲ್ ದ್ರಾವಿಡ್, ಮಹೇಲ ಜಯವರ್ಧನೆ ಹಾಗೂ ಶಾನ್ ಪೋಲಾಕ್ ಇದ್ದಾರೆ.

ಇತ್ತ ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿ ಪ್ರಸ್ತಾವಕ್ಕೆ ರೆಡ್ ಸಿಗ್ನಲ್ ನೀಡಲು ಸಜ್ಜಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...