ಭುವನೇಶ್ವರ: 20 ವರ್ಷಗಳ ಹಿಂದೆ ತನ್ನ ತಾಯಿಯಿಂದ ತೊರೆಯಲ್ಪಟ್ಟಿದ್ದ ಮತ್ತು ಸ್ಪ್ಯಾನಿಷ್ ದಂಪತಿಗಳಿಂದ ದತ್ತು ಪಡೆದಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ತನ್ನ ಹೆತ್ತ ತಾಯಿಯನ್ನು ಹುಡುಕಲು ಒಡಿಶಾಗೆ ಬಂದಿದ್ದಾರೆ.
ಸ್ಪೇನ್‌ನಲ್ಲಿ ಮಕ್ಕಳ ಶಿಕ್ಷಣದ ಸಂಶೋಧಕಿ ಸ್ನೇಹಾ, ತನ್ನ ಮೂಲದ ಬಗ್ಗೆ ಸ್ವಲ್ಪ ಮಾಹಿತಿಯೊಂದಿಗೆ ತನ್ನ ಬೇರುಗಳನ್ನು ಪತ್ತೆಹಚ್ಚಲು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಆಕೆಯ ಸ್ಪ್ಯಾನಿಷ್ ಪೋಷಕರಾದ ಗೆಮಾ ವಿಡಾಲ್ ಮತ್ತು ಜುವಾನ್ ಜೋಶ್ ಅವರು ಸ್ನೇಹಾ ಅವರ ಹುಡುಕಾಟವನ್ನು ಬೆಂಬಲಿಸಿ, ಪ್ರವಾಸದಲ್ಲಿ ಅವಳೊಂದಿಗೆ ಸಹ ಬಂದಿದ್ದಾರೆ.
ಅವರು ಭುವನೇಶ್ವರಕ್ಕೆ ಇದೀಗ ಬಂದಿದ್ದಾರೆ. ಅಲ್ಲಿ ಅವರು ಸ್ನೇಹಾ ಮತ್ತು ಅವರ ಸಹೋದರ ಸೋಮು ಅವರನ್ನು 2010ರಲ್ಲಿ ಅನಾಥಾಶ್ರಮದಿಂದ ದತ್ತು ಪಡೆದಿದ್ದರು. 2005ರಲ್ಲಿ ಸ್ನೇಹಾ ಕೇವಲ ಒಂದು ವರ್ಷದವಳಿದ್ದಾಗ ಅವರ ತಾಯಿ ಅವರನ್ನು ತೊರೆದ ನಂತರ ಈ ಒಡಹುಟ್ಟಿದವರು ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದರು.
ಸ್ಪೇನ್‌ನಿಂದ ಭುವನೇಶ್ವರಕ್ಕೆ ನನ್ನ ಪ್ರಯಾಣದ ಉದ್ದೇಶ ನನ್ನ ಜೈವಿಕ ಪೋಷಕರನ್ನು, ವಿಶೇಷವಾಗಿ ನನ್ನ ತಾಯಿಯನ್ನು ಹುಡುಕುವುದಾಗಿದೆ. ನಾನು ಅವಳನ್ನು ಹುಡುಕಲು ಮತ್ತು ಭೇಟಿಯಾಗಲು ಬಯಸುತ್ತೇನೆ. ಕಷ್ಟವಾದರೂ ಪ್ರಯಾಣಕ್ಕೆ ನಾನು ಸಂಪೂರ್ಣವಾಗಿ ಸಿದ್ಧಳಾಗಿ ಬಂದಿದ್ದೇನೆ ಎಂದು ಸ್ನೇಹಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ತಾಯಿ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ಸ್ನೇಹಾ ತನ್ನ ಭಾವನೆಯನ್ನು ಬಹಿರಂಗಪಡಿಸದಿರಲು ನಿರ್ಧರಿಸಿದಳು. ಆದರೆ 21 ವರ್ಷದ ಯುವತಿ ತನ್ನ ಶೈಕ್ಷಣಿಕ ಬದ್ಧತೆಗಳಿಗಾಗಿ ಸೋಮವಾರ ಸ್ಪೇನ್‌ಗೆ ಹಿಂತಿರುಗಬೇಕಾಗಿರುವುದರಿಂದ ಈಗ ಸಮಯ ಮೀರುತ್ತಿದೆ.
“ಸ್ನೇಹಾ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದರಿಂದ ನಾವು ಸ್ಪೇನ್‌ಗೆ ಹಿಂತಿರುಗಬೇಕಾಗಿದೆ, ಅದನ್ನು ನಿಲ್ಲಿಸಬಾರದು. ಮುಂದಿನ 24 ಗಂಟೆಗಳಲ್ಲಿ ನಮಗೆ ಅವಳ ತಾಯಿ ಸಿಗದಿದ್ದರೆ, ನಾವು ಮಾರ್ಚ್‌ನಲ್ಲಿ ಭುವನೇಶ್ವರಕ್ಕೆ ಮತ್ತೆ ಹಿಂತಿರುಗುತ್ತೇವೆ ಎಂದು ಅವರ ದತ್ತು ತಾಯಿ ಹೇಳಿದರು.
ಸ್ನೇಹಾಳ ತಾಯಿ ಬನಲತಾ ಅವರು 2005ರಲ್ಲಿ ಸ್ನೇಹ ಮತ್ತು ಸೋಮು ಅವರನ್ನು ಭುವನೇಶ್ವರದ ನಾಯಪಲ್ಲಿ ಪ್ರದೇಶದ ಬಾಡಿಗೆ ಮನೆಯಲ್ಲಿ ತೊರೆದಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆಕೆಯ ಪತಿ ಸಂತೋಷ್ ಈ ಹಿಂದೆ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ತೊರೆದಿದ್ದರು.
ಪತಿ ಮನೆ ತೊರೆದ ನಂತರ ಬಾನಲತಾ ಕೂಡ ಬಾಡಿಗೆ ಮನೆ ಬಿಟ್ಟು ತನ್ನ ಇಬ್ಬರು ಮಕ್ಕಳಾದ ಸ್ನೇಹಾ ಮತ್ತು ಸೋಮು ಅವರನ್ನು ಬಿಟ್ಟು ಹೋಗಿದ್ದರು. ನಂತರ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು.
2010ರಲ್ಲಿ ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸ್ನೇಹಾ ಮತ್ತು ಸುಮಾರು ನಾಲ್ಕು ವರ್ಷದ ಸೋಮು ಅವರನ್ನು ಸ್ಪ್ಯಾನಿಷ್ ದಂಪತಿಗಳು ಕಾನೂನುಬದ್ಧವಾಗಿ ದತ್ತು ಪಡೆದರು. “ಸ್ನೇಹಾ ತುಂಬಾ ಜವಾಬ್ದಾರಿಯುತ ಮತ್ತು ವಿದ್ಯಾವಂತಳು, ಅವಳು ನಮ್ಮ ಮನೆಯ ಸಂತೋಷ, ಅವಳು ನಮ್ಮ ಜೀವನ” ಎಂದು ಜೆಮಾ ಹೇಳಿದ್ದಾರೆ.
ಒಡಿಶಾದಲ್ಲಿರುವ ಸ್ನೇಹ ಮತ್ತು ಸೋಮು ಅವರ ಮೂಲಬೇರುಗಳ ಬಗ್ಗೆ ತಿಳಿಸಿದ್ದೇನೆ ಮತ್ತು ಅವರನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂಬುದನ್ನು ಹೇಳಿದ್ದೇನೆ. ಅವರು ಸುಶಿಕ್ಷಿತರು ಮತ್ತು ಸಂಶೋಧನೆ ನಡೆಸುತ್ತಿದ್ದಾರೆ, ಆದ್ದರಿಂದ ಅವರು ತಮ್ಮ ಹೆತ್ತ ತಾಯಿಯನ್ನು ಪತ್ತೆಹಚ್ಚಲು ನಿರ್ಧರಿಸಿದರು ಮತ್ತು ನಾನು ಅವಳೊಂದಿಗೆ ಈ ಸ್ಥಳಕ್ಕೆ ಬಂದೆ ಎಂದು ಗೆಮಾ ತಿಳಿಸಿದ್ದಾರೆ.
ಭುವನೇಶ್ವರದಲ್ಲಿ ತಮ್ಮ ಕ್ಲಿಷ್ಟಮಯ ಹುಡುಕಾಟದ ಸಮಯದಲ್ಲಿ, ಗೆಮಾ ಮತ್ತು ಸ್ನೇಹಾಯವರು ರಮಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಕಿ ಸುಧಾ ಮಿಶ್ರಾ ಅವರನ್ನು ಕಂಡರು, ಅವರು ಸ್ನೇಹರ ಪೋಷಕರ ಹೆಸರನ್ನು ಕಂಡುಹಿಡಿಯಲು ಸಹಾಯ ಮಾಡಿದರು. “ನಾಯಪಲ್ಲಿಯಲ್ಲಿರುವ ಮನೆ ಮಾಲೀಕರಿಂದ ಆಕೆಯ ಪೋಷಕರ ಹೆಸರುಗಳನ್ನು ನಾವು ಕಂಡುಕೊಂಡಿದ್ದೇವೆ ಮತ್ತು ನಂತರ ಪೊಲೀಸರು ಮತ್ತು ಅನಾಥಾಶ್ರಮದಲ್ಲಿ ಹೆಸರುಗಳನ್ನು ಪರಿಶೀಲಿಸಲಾಗಿದೆ” ಎಂದು ಮಿಶ್ರಾ ಹೇಳಿದ್ದಾರೆ.
ಒಡಿಶಾ ಪೊಲೀಸರು ಕೂಡ ಸ್ನೇಹಾಳ ತಾಯಿಯನ್ನು ಪತ್ತೆ ಹಚ್ಚಲು ಸಹಾಯ ಮಾಡಲು ಮುಂದಾಗಿದ್ದಾರೆ. “ಬನಲತಾ ದಾಸ್ ಮತ್ತು ಸಂತೋಷ್ ಕಟಕ್ ಜಿಲ್ಲೆಯ ಬದಂಬಾ-ನರಸಿಂಗ್‌ಪುರ ಪ್ರದೇಶದವರು ಎಂದು ನಾವು ಕಂಡುಕೊಂಡಿದ್ದೇವೆ. ನಾವು ಅವರನ್ನು ಪತ್ತೆ ಮಾಡಲು ಪೊಲೀಸರು ಮತ್ತು ಪಂಚಾಯತ್ ಕಾರ್ಯನಿರ್ವಾಹಕರನ್ನು ತೊಡಗಿಸಿಕೊಂಡಿದ್ದೇವೆ” ಎಂದು ಇನ್ಸ್‌ಪೆಕ್ಟರ್ ಅಂಜಲಿ ಛೋತ್ರೇ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಬಿಜೆಪಿ ಗೆದ್ದರೆ ಪ್ರಿಯಾಂಕಾ ಗಾಂಧಿ ಕೆನ್ನೆಯಂತ ರಸ್ತೆ ನಿರ್ಮಾಣ ಎಂದ ಮಾಜಿ ಸಂಸದ!


