Homeಮುಖಪುಟಸ್ಫೇನ್ ದಂಪತಿಯ ದತ್ತುಪುತ್ರಿ 20 ವರ್ಷದ ನಂತರ ಹೆತ್ತವರ ಹುಡುಕುತ್ತಾ ಒಡಿಶಾಗೆ.... 

ಸ್ಫೇನ್ ದಂಪತಿಯ ದತ್ತುಪುತ್ರಿ 20 ವರ್ಷದ ನಂತರ ಹೆತ್ತವರ ಹುಡುಕುತ್ತಾ ಒಡಿಶಾಗೆ…. 

- Advertisement -
- Advertisement -

ಭುವನೇಶ್ವರ: 20 ವರ್ಷಗಳ ಹಿಂದೆ ತನ್ನ ತಾಯಿಯಿಂದ ತೊರೆಯಲ್ಪಟ್ಟಿದ್ದ ಮತ್ತು ಸ್ಪ್ಯಾನಿಷ್ ದಂಪತಿಗಳಿಂದ ದತ್ತು ಪಡೆದಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ತನ್ನ ಹೆತ್ತ ತಾಯಿಯನ್ನು ಹುಡುಕಲು ಒಡಿಶಾಗೆ ಬಂದಿದ್ದಾರೆ.

ಸ್ಪೇನ್‌ನಲ್ಲಿ ಮಕ್ಕಳ ಶಿಕ್ಷಣದ ಸಂಶೋಧಕಿ ಸ್ನೇಹಾ, ತನ್ನ ಮೂಲದ ಬಗ್ಗೆ ಸ್ವಲ್ಪ ಮಾಹಿತಿಯೊಂದಿಗೆ ತನ್ನ ಬೇರುಗಳನ್ನು ಪತ್ತೆಹಚ್ಚಲು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಆಕೆಯ ಸ್ಪ್ಯಾನಿಷ್ ಪೋಷಕರಾದ ಗೆಮಾ ವಿಡಾಲ್ ಮತ್ತು ಜುವಾನ್ ಜೋಶ್ ಅವರು ಸ್ನೇಹಾ ಅವರ ಹುಡುಕಾಟವನ್ನು ಬೆಂಬಲಿಸಿ, ಪ್ರವಾಸದಲ್ಲಿ ಅವಳೊಂದಿಗೆ ಸಹ ಬಂದಿದ್ದಾರೆ.

ಅವರು ಭುವನೇಶ್ವರಕ್ಕೆ ಇದೀಗ ಬಂದಿದ್ದಾರೆ. ಅಲ್ಲಿ ಅವರು ಸ್ನೇಹಾ ಮತ್ತು ಅವರ ಸಹೋದರ ಸೋಮು ಅವರನ್ನು 2010ರಲ್ಲಿ ಅನಾಥಾಶ್ರಮದಿಂದ ದತ್ತು ಪಡೆದಿದ್ದರು. 2005ರಲ್ಲಿ ಸ್ನೇಹಾ ಕೇವಲ ಒಂದು ವರ್ಷದವಳಿದ್ದಾಗ ಅವರ ತಾಯಿ ಅವರನ್ನು ತೊರೆದ ನಂತರ ಈ ಒಡಹುಟ್ಟಿದವರು ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದರು.

ಸ್ಪೇನ್‌ನಿಂದ ಭುವನೇಶ್ವರಕ್ಕೆ ನನ್ನ ಪ್ರಯಾಣದ ಉದ್ದೇಶ ನನ್ನ ಜೈವಿಕ ಪೋಷಕರನ್ನು, ವಿಶೇಷವಾಗಿ ನನ್ನ ತಾಯಿಯನ್ನು ಹುಡುಕುವುದಾಗಿದೆ. ನಾನು ಅವಳನ್ನು ಹುಡುಕಲು ಮತ್ತು ಭೇಟಿಯಾಗಲು ಬಯಸುತ್ತೇನೆ. ಕಷ್ಟವಾದರೂ ಪ್ರಯಾಣಕ್ಕೆ ನಾನು ಸಂಪೂರ್ಣವಾಗಿ ಸಿದ್ಧಳಾಗಿ ಬಂದಿದ್ದೇನೆ ಎಂದು ಸ್ನೇಹಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ತಾಯಿ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ಸ್ನೇಹಾ ತನ್ನ ಭಾವನೆಯನ್ನು ಬಹಿರಂಗಪಡಿಸದಿರಲು ನಿರ್ಧರಿಸಿದಳು. ಆದರೆ 21 ವರ್ಷದ ಯುವತಿ ತನ್ನ ಶೈಕ್ಷಣಿಕ ಬದ್ಧತೆಗಳಿಗಾಗಿ ಸೋಮವಾರ ಸ್ಪೇನ್‌ಗೆ ಹಿಂತಿರುಗಬೇಕಾಗಿರುವುದರಿಂದ ಈಗ ಸಮಯ ಮೀರುತ್ತಿದೆ.

“ಸ್ನೇಹಾ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದರಿಂದ ನಾವು ಸ್ಪೇನ್‌ಗೆ ಹಿಂತಿರುಗಬೇಕಾಗಿದೆ, ಅದನ್ನು ನಿಲ್ಲಿಸಬಾರದು. ಮುಂದಿನ 24 ಗಂಟೆಗಳಲ್ಲಿ ನಮಗೆ ಅವಳ ತಾಯಿ ಸಿಗದಿದ್ದರೆ, ನಾವು ಮಾರ್ಚ್‌ನಲ್ಲಿ ಭುವನೇಶ್ವರಕ್ಕೆ ಮತ್ತೆ ಹಿಂತಿರುಗುತ್ತೇವೆ ಎಂದು ಅವರ ದತ್ತು ತಾಯಿ ಹೇಳಿದರು.

ಸ್ನೇಹಾಳ ತಾಯಿ ಬನಲತಾ ಅವರು 2005ರಲ್ಲಿ ಸ್ನೇಹ ಮತ್ತು ಸೋಮು ಅವರನ್ನು ಭುವನೇಶ್ವರದ ನಾಯಪಲ್ಲಿ ಪ್ರದೇಶದ ಬಾಡಿಗೆ ಮನೆಯಲ್ಲಿ ತೊರೆದಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆಕೆಯ ಪತಿ ಸಂತೋಷ್ ಈ ಹಿಂದೆ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ತೊರೆದಿದ್ದರು.

ಪತಿ ಮನೆ ತೊರೆದ ನಂತರ ಬಾನಲತಾ ಕೂಡ ಬಾಡಿಗೆ ಮನೆ ಬಿಟ್ಟು ತನ್ನ ಇಬ್ಬರು ಮಕ್ಕಳಾದ ಸ್ನೇಹಾ ಮತ್ತು ಸೋಮು ಅವರನ್ನು ಬಿಟ್ಟು ಹೋಗಿದ್ದರು. ನಂತರ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು.

2010ರಲ್ಲಿ ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸ್ನೇಹಾ ಮತ್ತು ಸುಮಾರು ನಾಲ್ಕು ವರ್ಷದ ಸೋಮು ಅವರನ್ನು ಸ್ಪ್ಯಾನಿಷ್ ದಂಪತಿಗಳು ಕಾನೂನುಬದ್ಧವಾಗಿ ದತ್ತು ಪಡೆದರು. “ಸ್ನೇಹಾ ತುಂಬಾ ಜವಾಬ್ದಾರಿಯುತ ಮತ್ತು ವಿದ್ಯಾವಂತಳು, ಅವಳು ನಮ್ಮ ಮನೆಯ ಸಂತೋಷ, ಅವಳು ನಮ್ಮ ಜೀವನ” ಎಂದು ಜೆಮಾ ಹೇಳಿದ್ದಾರೆ.

ಒಡಿಶಾದಲ್ಲಿರುವ ಸ್ನೇಹ ಮತ್ತು ಸೋಮು ಅವರ ಮೂಲಬೇರುಗಳ ಬಗ್ಗೆ ತಿಳಿಸಿದ್ದೇನೆ ಮತ್ತು ಅವರನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂಬುದನ್ನು ಹೇಳಿದ್ದೇನೆ. ಅವರು ಸುಶಿಕ್ಷಿತರು ಮತ್ತು ಸಂಶೋಧನೆ ನಡೆಸುತ್ತಿದ್ದಾರೆ, ಆದ್ದರಿಂದ ಅವರು ತಮ್ಮ ಹೆತ್ತ ತಾಯಿಯನ್ನು ಪತ್ತೆಹಚ್ಚಲು ನಿರ್ಧರಿಸಿದರು ಮತ್ತು ನಾನು ಅವಳೊಂದಿಗೆ ಈ ಸ್ಥಳಕ್ಕೆ ಬಂದೆ ಎಂದು ಗೆಮಾ ತಿಳಿಸಿದ್ದಾರೆ.

ಭುವನೇಶ್ವರದಲ್ಲಿ ತಮ್ಮ ಕ್ಲಿಷ್ಟಮಯ ಹುಡುಕಾಟದ ಸಮಯದಲ್ಲಿ, ಗೆಮಾ ಮತ್ತು ಸ್ನೇಹಾಯವರು  ರಮಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಕಿ ಸುಧಾ ಮಿಶ್ರಾ ಅವರನ್ನು ಕಂಡರು, ಅವರು ಸ್ನೇಹರ ಪೋಷಕರ ಹೆಸರನ್ನು ಕಂಡುಹಿಡಿಯಲು ಸಹಾಯ ಮಾಡಿದರು. “ನಾಯಪಲ್ಲಿಯಲ್ಲಿರುವ ಮನೆ ಮಾಲೀಕರಿಂದ ಆಕೆಯ ಪೋಷಕರ ಹೆಸರುಗಳನ್ನು ನಾವು ಕಂಡುಕೊಂಡಿದ್ದೇವೆ ಮತ್ತು ನಂತರ ಪೊಲೀಸರು ಮತ್ತು ಅನಾಥಾಶ್ರಮದಲ್ಲಿ ಹೆಸರುಗಳನ್ನು ಪರಿಶೀಲಿಸಲಾಗಿದೆ” ಎಂದು ಮಿಶ್ರಾ ಹೇಳಿದ್ದಾರೆ.

ಒಡಿಶಾ ಪೊಲೀಸರು ಕೂಡ ಸ್ನೇಹಾಳ ತಾಯಿಯನ್ನು ಪತ್ತೆ ಹಚ್ಚಲು ಸಹಾಯ ಮಾಡಲು ಮುಂದಾಗಿದ್ದಾರೆ. “ಬನಲತಾ ದಾಸ್ ಮತ್ತು ಸಂತೋಷ್ ಕಟಕ್ ಜಿಲ್ಲೆಯ ಬದಂಬಾ-ನರಸಿಂಗ್‌ಪುರ ಪ್ರದೇಶದವರು ಎಂದು ನಾವು ಕಂಡುಕೊಂಡಿದ್ದೇವೆ. ನಾವು ಅವರನ್ನು ಪತ್ತೆ ಮಾಡಲು ಪೊಲೀಸರು ಮತ್ತು ಪಂಚಾಯತ್ ಕಾರ್ಯನಿರ್ವಾಹಕರನ್ನು ತೊಡಗಿಸಿಕೊಂಡಿದ್ದೇವೆ” ಎಂದು ಇನ್ಸ್‌ಪೆಕ್ಟರ್ ಅಂಜಲಿ ಛೋತ್ರೇ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಬಿಜೆಪಿ ಗೆದ್ದರೆ ಪ್ರಿಯಾಂಕಾ ಗಾಂಧಿ ಕೆನ್ನೆಯಂತ ರಸ್ತೆ ನಿರ್ಮಾಣ ಎಂದ ಮಾಜಿ ಸಂಸದ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....