“ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (ಎಐಎಡಿಎಂಕೆ) ಇನ್ನುಮುಂದೆ ಜಯಲಲಿತ ಅವರ ಪಕ್ಷವಲ್ಲ; ಅದು ನರೇಂದ್ರ ಮೋದಿಯ ಗುಲಾಮಿ ಪಕ್ಷವಾಗಿದೆ” ಎಂದು ಅಖಿಲ ಭಾರತ ಮಜ್ಲಿಸ್-ಎ-ಇತಿಹಾದುಲ್ ಮುಸ್ಲಿಮೀನ್ (ಎಐಐಎಂ) ಮುಖ್ಯಸ್ಥ ಅಸದುದ್ದೀನ್ ಓವೈಸಿ ಶುಕ್ರವಾರ ಹೇಳಿದ್ದಾರೆ.
“ಎಐಎಡಿಎಂಕೆ ಇನ್ನು ಮುಂದೆ ಜಯಲಲಿತಾ ಅವರ ಪಕ್ಷವಲ್ಲ. ಏಕೆಂದರೆ ಅವರು ಯಾವಾಗಲೂ ತಮ್ಮ ಪಕ್ಷವನ್ನು ಬಿಜೆಪಿಯಿಂದ ದೂರವಿರಿಸಿದ್ದರು. ದುರದೃಷ್ಟವಶಾತ್, ಎಐಎಡಿಎಂಕೆ ಈಗ ನರೇಂದ್ರ ಮೋದಿಯ ಗುಲಾಮಿ ಪಕ್ಷವಾಗಿ ಮಾರ್ಪಟ್ಟಿದೆ” ಎಂದು ಓವೈಸಿ ಚೆನ್ನೈನಲ್ಲಿ ನಡೆದ ಸಾರ್ವಜನಿಕ ಚುನಾವಣಾ ಸಮಾವೇಶದಲ್ಲಿ ಹೇಳಿದರು.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಟಿವಿ ದಿನಕರನ್ ಅವರ ‘ಅಮ್ಮ ಮಕ್ಕಲ್ ಮುನ್ನೇಟ್ರ ಕಳಗಮ್’ (ಎಎಂಎಂಕೆ) ಪಕ್ಷದೊಂದಿಗಿನ ಮೈತ್ರಿಯನ್ನು ಸಮರ್ಥಿಸಿಕೊಂಡ ಅಸದುದ್ದೀನ್ ಓವೈಸಿ, ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇಟ್ರ ಕಳಗಮ್ (ಡಿಎಂಕೆ) ಮೇಲೆ ದಾಳಿ ನಡೆಸಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಕುರಿತು ಪ್ರಶ್ನೆಗಳನ್ನು ಎತ್ತಿದರು.
ಇದನ್ನೂ ಓದಿ: ಟೇಪ್ ರೆಕಾರ್ಡರ್‌ನ ಕ್ಯಾಸೆಟ್ ಅನ್ವೇಷಕ ಲಾವೊ ಒಟೆನ್ಸ್ ನಿಧನ
“ಶಿವಸೇನೆ ಮುಖ್ಯಮಂತ್ರಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಾಬರಿ ಮಸೀದಿಯ ಧ್ವಂಸವನ್ನು ಸಮರ್ಥಿಸಿಕೊಂಡಿದ್ದಾರೆ. ಶಿವಸೇನೆ ಅಧಿಕಾರಕ್ಕೆ ಬರಲು ಸಹಾಯ ಮಾಡಿದ ಕಾಂಗ್ರೆಸ್ ಜೊತೆ ಡಿಎಂಕೆ ಮೈತ್ರಿ ಮಾಡಿಕೊಂಡಿದೆ. ಶಿವಸೇನೆಯ ನಿಲುವನ್ನು ಡಿಎಂಕೆ ಒಪ್ಪುತ್ತದೆಯೇ? ನಾವು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಬಿಜೆಪಿಗೆ ಲಾಭವಾಗುತ್ತಿದೆ ಎಂದು ಹೇಳಲಾಗಿದೆ. ಡಿಎಂಕೆ ಅವರ ಜಾತ್ಯತೀತತೆಯ ವ್ಯಾಖ್ಯಾನವನ್ನು ನನಗೆ ತಿಳಿಸಬಹುದೇ? ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ನಿಮ್ಮ ಪ್ರಕಾರ (ಡಿಎಂಕೆ) ಶಿವಸೇನೆ ಜಾತ್ಯತೀತ ಪಕ್ಷವೇ ಅಥವಾ ಕೋಮು ಪಕ್ಷವೇ?” ಅವರು ವಾಗ್ದಾಳಿ ನಡೆಸಿದರು.
ಎಐಎಂಐಎಂ ಎಎನ್‌ಎಂಕೆ ಜೊತೆ ಮೈತ್ರಿ ಮಾಡಿಕೊಂಡು ವನಿಯಂಬಾಡಿ, ಕೃಷ್ಣಗಿರಿ, ಮತ್ತು ಶಂಕರಪುರಂ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ.
234 ಸದಸ್ಯರ ತಮಿಳುನಾಡು ವಿಧಾನಸಭೆಗೆ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ಸಿಎಎ ವಿರೋಧಿ ಮಹಿಳಾ ನಾಯಕಿಯರಿಗೆ ನೋಟಿಸ್!



ವರದಿ ಪೂರ್ವಾಗ್ರಹ ಪೀಡಿತ ವಾಗಿದೆ. ಈ ಮೈತ್ರಿಯಲ್ಲಿ 6 ಸ್ಥಾನ ಪಡೆದಿರುವ ಪ್ರಮುಖ ಪಕ್ಷ SDPI ಬಗ್ಗೆ ಮರೆತಂತೆ ನಟಿಸಲಾಗಿದೆ.