ತಮ್ಮ ಉದ್ಯೋಗಗಳನ್ನು ಕೇಳಿಕೊಂಡು ಬಿಹಾರದ ‘ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ(ಎಸ್‌ಟಿಇಟಿ)’ಯ ಅಭ್ಯರ್ಥಿಗಳು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಈ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪಾಟ್ನಾದ ಇಕೋ ಪಾರ್ಕ್‌ನಲ್ಲಿ ಭಾರಿ ಪ್ರತಿಭಟನೆ ನಡೆದಿದ್ದು, ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಅವರ ವಿರುದ್ಧ ಪ್ರತಿಭಟಿಸಲು ಎಸ್‌ಟಿಇಟಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು ಎಂದು ವರದಿಗಳು ಹೇಳಿವೆ.
ಎಸ್‌ಟಿಇಟಿ ಅಭ್ಯರ್ಥಿಗಳು ತಮ್ಮ ಉದ್ಯೋಗವನ್ನು ಕೋರಿ ಜಮಾಯಿಸಿದ್ದು, ರಾಜ್ ಭವನ ಮತ್ತು ಶಿಕ್ಷಣ ಸಚಿವರ ನಿವಾಸದ ಕಡೆಗೆ ಜಾಥಾ ಮಾಡಿದ್ದರು. ಪ್ರತಿಭಟನಾಕಾರರು ವಿಜಯ್ ಕುಮಾರ್ ಚೌಧರಿಯವರ ನಿವಾಸವನ್ನು ಘೆರಾವ್ ಮಾಡಲು ಯೋಜಿಸುತ್ತಿದ್ದಾರೆಂದು ತಿಳಿಯುತ್ತಿದ್ದಂತೆ, ಇಡೀ ಪ್ರದೇಶದಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ಇದರ ಪರಿಣಾಮವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಯೋಜನೆ ತಡೆಗೆ ಸುಪ್ರೀಂ ನಕಾರ: ಮೇಲ್ಮನವಿ ವಜಾ
“ನಿತೀಶ್ ಸರ್ಕಾರವು STET 2019 ರ ಅಭ್ಯರ್ಥಿಗಳ ಶಾಂತಿಯುತ ಪ್ರತಿಭಟನೆಗಳ ಮೇಲೆ ಲಾಠಿ ಚಾರ್ಜ್ ನಡೆಸಿ ಆ ಮೂಲಕ ಅಸಮಾಧಾನವನ್ನು ನಿಗ್ರಹಿಸಲು ಬಯಸಿದೆ. ಆದರೆ ಬಿಹಾರದ ಯುವಕರು ಇದಕ್ಕೆ ಅವಕಾಶ ನೀಡುವುದಿಲ್ಲ. ಸಾಮಾಜಿಕ ನ್ಯಾಯದ ನಿಬಂಧನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿ ಮತ್ತು ಪಾರದರ್ಶಕಗೊಳಿಸಿ. ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ನೀಡಿ” ಎಂದು ರೆವಲ್ಯೂಷನರಿ ಯೂತ್ ಅಸೋಷಿಯೇಷನ್ ಹೇಳಿದೆ.
#STET2019 के अभ्यथियों के शांतिपूर्ण प्रदर्शन पर लाठीचार्ज कर नीतीश सरकार बहाली में हुए धांधली को दबाना चाहती है।
बिहार के नौजवान ऐसा नहीं होने देंगे।
सामाजिक न्याय के प्रबंधनों को पूरी तरह से लागू करो और पारदर्शी बनाओ। नियोजन नहीं सभी क़वालीफाइड अभियर्थियों को नियुक्ति दो। pic.twitter.com/bzHPvVOwfP
— RYA (Revolutionary Youth Association) (@ryaindia) June 29, 2021
ಘಟನೆಯಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಿಷೇಧಿತ ಪ್ರದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಕೆಲವನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಎಸ್‌ಟಿಇಟಿ ಅಭ್ಯರ್ಥಿಗಳು ಏಕೆ ಪ್ರತಿಭಟಿಸುತ್ತಿದ್ದಾರೆ?
ಎಸ್‌ಟಿಇಟಿ ಎಂದರೆ ಸೆಕೆಂಡರಿ ಶಿಕ್ಷಕರ ಅರ್ಹತಾ ಪರೀಕ್ಷೆಯಾಗಿದೆ. ಕೆಲವು ಎಸ್‌ಟಿಇಟಿ ಅಭ್ಯರ್ಥಿಗಳ ಪ್ರಕಾರ, ಪರೀಕ್ಷೆಯ ನಂತರ ಉದ್ಯೋಗದ ನೀಡುವ ಭರವಸೆ ನೀಡಿದ್ದರೂ, ಅವರಿಗೆ ಶಿಕ್ಷಣ ಸಚಿವರಿಂದ ನೇಮಕಾತಿ ಪತ್ರ ಇನ್ನೂ ಬಂದಿಲ್ಲ. ಇದಲ್ಲದೆ, ಪರಿಕ್ಷೆಗಳಲ್ಲಿ ಹಗರಣ ನಡೆದಿದೆ ಎಂದು ಕೆಲವರು ಆರೋಪಿಸಿದ್ದಾರೆ. ಇನ್ನೂ ಕೆಲವರು, ಯಾವುದೇ ವಿವರಣೆಯಿಲ್ಲದೆ ತಮ್ಮ ಹೆಸರುಗಳನ್ನು ಆಯ್ಕೆಯ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೋರಾಟ ನಿರತ ರೈತರಿಂದ ದೆಹಲಿಯಲ್ಲಿ ‘ಕಿಸಾನ್ ಮೆಟ್ರೋ’ ಆರಂಭ!


