Homeಮುಖಪುಟಜಮ್ಮು-ಕಾಶ್ಮೀರವನ್ನು ಬಿಜೆಪಿ ದಶಕಗಳಷ್ಟು ಹಿಂದಕ್ಕೆ ಒಯ್ದಿದೆ: ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರವನ್ನು ಬಿಜೆಪಿ ದಶಕಗಳಷ್ಟು ಹಿಂದಕ್ಕೆ ಒಯ್ದಿದೆ: ಮೆಹಬೂಬಾ ಮುಫ್ತಿ

- Advertisement -
- Advertisement -

ಜಮ್ಮು ಕಾಶ್ಮೀರದ ಬಗ್ಗೆಗಿನ ಬಿಜೆಪಿ ಸರ್ಕಾರದ ನೀತಿಗಳು ರಾಜ್ಯವನ್ನು ದಶಕಗಳಷ್ಟು ಹಿಂದಕ್ಕೆ ಕರೆದೊಯ್ದಿದೆ ಎಂದು ಅವಿಭಜಿತ ರಾಜ್ಯದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮ್ಮು ಕಾಶ್ಮೀರದ ಲಾಲ್‌ ಚೌಕ್‌ ಮತ್ತು ನಗರದ ಇತರ ವಾಣಿಜ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅನಿರೀಕ್ಷಿತ ಪರಿಶೀಲನೆಯ ಸಮಯದಲ್ಲಿ, ಮಹಿಳೆಯರು ಮತ್ತು ಅಪ್ರಾಪ್ತರನ್ನು ತಪಾಸಣೆ ನಡೆಸುತ್ತಿರುವ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡೇಟಿಗೆ ಬಿಹಾರಿ ಕಾರ್ಮಿಕರು ಬಲಿ

ಈ ಚಿತ್ರ ಮತ್ತು ವಿಡಿಯೊಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಅವರು, “ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಮಹಿಳೆಯರು ಮತ್ತು ಮಕ್ಕಳು ಕೂಡ ಈಗ ಶಂಕಿತರಾಗಿದ್ದಾರೆ. ಬಿಜೆಪಿ ಜಮ್ಮು ಕಾಶ್ಮೀರಕ್ಕೆ ತಂದಿರುವುದು ಇದನ್ನೇ ಆಗಿದೆ. ಅವರ ನೀತಿಗಳು ನಮ್ಮನ್ನು ದಶಕಗಳ ಹಿಂದಕ್ಕೆ ಕರೆದೊಯ್ದಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರು ಒಳಗೊಂಡಂತೆ ನಾಗರಿಕರ ಹತ್ಯೆಗಳು ನಡೆದ ನಂತರ ನಗರ ಮತ್ತು ಕಣಿವೆಯ ಇತರೆಡೆಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: 2019 ರಿಂದ 2,300 ಕ್ಕೂ ಹೆಚ್ಚು ಜನರ ಮೇಲೆ UAPA ಅಡಿ ಪ್ರಕರಣ

ಇದನ್ನೂ ಓದಿ: ಅಕ್ರಮ ಬಂದೂಕು ಲೈಸೆನ್ಸ್: ಜಮ್ಮು ಕಾಶ್ಮೀರ, ದೆಹಲಿಯ 40 ಕಡೆ ಸಿಬಿಐ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಜಮ್ಮು ಮತ್ತು ಕಾಶ್ಮೀರ ದಶಕಗಳಷ್ಟು ಮುಂದೆ ಬಂದಿದೆ ಬಿಜೆಪಿ ಪಕ್ಷದ ವತಿಯಿಂದ ಆದರೆ ಮೆಹಬೂಬ ಮುಕ್ತಿ ಕುಟುಂಬ ಅಧಿಕಾರ ಇಲ್ಲದೇ ಹುಚ್ಚರಾಗಿದ್ದು ರಾಜಕೀಯ ನಿರುದ್ಯೋಗ ದಿಂದ ದಶಕ ಗಳಿಗಿಂತ ಶತಮಾನಗಳಷ್ಟು ಹಿಂದೆ ಹೋಗಿದೆ . ಅವಳನ್ನು ಮೊದಲು ಪಾಕ್ ,ಬಾಂಗ್ಲಾದೇಶಗಳಿಗೆ ಪಾರ್ಸೆಲ್ ಮಾಡಿದರೆ ದೇಶದ ಪೀಡೆ ಕೊನೆಯಾಗುತ್ತೆ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...