ಮಹಾರಾಷ್ಟ್ರದ ವಿರೋಧ ಪಕ್ಷವಾದ ಬಿಜೆಪಿಯು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯೊಂದಿಗೆ ಹೊಂದಾಣಿಕೆ ಮಾಡಲು ಉತ್ಸುಕರಾಗಿದ್ದು, ಅದಕ್ಕೆ ಪ್ರಯತ್ನಿಸುತ್ತಿದೆ ಎಂದು ಶಿವಸೇನೆಯ ಹಿರಿಯ ನಾಯಕ ಕಿಶೋರ್ ತಿವಾರಿ ಶುಕ್ರವಾರ ಹೇಳಿದ್ದಾರೆ. ಇದಲ್ಲದೇ, ಶಿವಸೇನೆಯ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.
ಶಿವಸೇನೆ ಎರಡು ದಶಕಗಳಿಂದ ಬಿಜೆಪಿಯ ಮಿತ್ರಪಕ್ಷವಾಗಿತ್ತು. ಆದರೆ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಸರ್ಕಾರ ರಚನೆಯ ಸಂದರ್ಭದ “ಮಹಾ ವಿಕಾಸ ಅಘಾಡಿ” ಸರ್ಕಾರ ರಚಿಸಿ ರಾಷ್ಟ್ರೀಯವಾದಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತು.
ಇದನ್ನೂ ಓದಿ: ಮಹಾರಾಷ್ಟ್ರ BJP ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು: ಬಿಜೆಪಿ -ಶಿವಸೇನೆ ನಡುವೆ ವಾಕ್ಸಮರ
“ಪ್ರತಿ ಎರಡು ವಾರಗಳಿಗೊಮ್ಮೆ, ಬಿಜೆಪಿ ನಾಯಕರು ಮುಖ್ಯಮಂತ್ರಿಗೆ ಕರೆ ಮಾಡಿ, ಭೂತಕಾಲವನ್ನು ಸಮಾಧಿ ಮಾಡಲು ಮತ್ತು ಹೊಸದಾಗಿ ಆರಂಭಿಸಲು ವಿನಂತಿಸುತ್ತಾರೆ. ವಾಸ್ತವವಾಗಿ, ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರಂತಹ ಜನರು ಮತ್ತು ನಾನು ಶಿವಸೇನೆ-ಬಿಜೆಪಿ ನಡುವೆ ಮಧ್ಯಸ್ಥಿಕೆ ವಹಿಸಲು ಬಯಸುತ್ತೇನೆ” ಎಂದು ಕಿಶೋರ್ ತಿವಾರಿ ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದಲೂ ಫಡ್ನವೀಸ್ ಮತ್ತು ಇತರ ಬಿಜೆಪಿಯ ಉನ್ನತ ನಾಯಕರು ಠಾಕ್ರೆ ಅವರ ಜೊತೆಗೆ ಮತ್ತೆ ಸಂಬಂಧ ಸಾಧಿಸಲು ಭೇಟಿಗಾಗಿ ಕಾಯುತ್ತಿದ್ದಾರೆ. ಬಿಜೆಪಿಯ ಪೂರ್ಣ ಬೆಂಬಲದೊಂದಿಗೆ, ಐದು ವರ್ಷವು ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ನೀಡುವ ಮತ್ತು ಅವರ ಆಯ್ಕೆಯ ಇಲಾಖೆಯನ್ನೂ ನೀಡುವುದಕ್ಕೂ ಬಿಜೆಪಿ ತಯಾರಿದೆ ಎಂದು ತಿವಾರಿ ಹೇಳಿದ್ದಾರೆ.
ಆದರೆ, ಮುಖ್ಯಮಂತ್ರಿ ಠಾಕ್ರೆ ಬಿಜೆಪಿಯ ಎಲ್ಲಾ ಆಫರ್‌ಗಳನ್ನು ಜೂನ್‌ನಲ್ಲಿ ಸಾರ್ವಜನಿಕವಾಗಿ ತಿರಸ್ಕರಿಸಿದ್ದಾರೆ. “ನಾನು ನನ್ನ ಮಾತನ್ನು ಎನ್‌ಸಿಪಿ-ಕಾಂಗ್ರೆಸ್‌ಗೆ ನೀಡಿದ್ದೇನೆ, ಅವರಿಗೆ ದ್ರೋಹ ಮಾಡುವುದಿಲ್ಲ” ಎಂದು ಠಾಕ್ರೆ ಹೇಳಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಠಾಕ್ರೆ ಸೇರಿದಂತೆ ಪ್ರಮುಖ ಶಿವಸೇನೆಯ ನಾಯಕರು, “ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರವರಿ 2019 ರಲ್ಲಿ ಬಿಜೆಪಿ ನೀಡಿದ್ದ ಮಾತನ್ನು ಮುರಿದು ‘ವಿಶ್ವಾಸಘಾತುಕತನ’ ಮಾಡಿದೆ” ಎಂದು ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯಿಂದ 4.80 ಲಕ್ಷ ರೂ. ಬಿಜೆಪಿಗೆ ವರ್ಗಾವಣೆ!


