ಆಡಳಿತಾರೂಡ ಬಿಜೆಪಿ ಸದಸ್ಯರ ಬಗ್ಗೆ ಭಾರತದ ಫೇಸ್‌ಬುಕ್ ಕಾರ್ಯನಿರ್ವಾಹಕರು ಪಕ್ಷಪಾತ ತೋರಿದ್ದಾರೆ ಎಂಬ ವರದಿಗಳ ಬಗೆಗಿನ ಭಾರಿ ವಿವಾದದ ಮಧ್ಯೆ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದು, ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಭಾರತದಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವಾಗ ಪ್ರಧಾನಿ ಮತ್ತು ಭಾರತದ ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು ನಿಂದಿಸುತ್ತಿದೆ ಎಂದು ಆರೋಪಿಸಿದ್ದಾರೆ.
2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಲಪಂಥೀಯ ಪುಟಗಳನ್ನು ಅಳಿಸಲು ಅಥವಾ ಅವುಗಳ ವ್ಯಾಪ್ತಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಫೇಸ್‌ಬುಕ್ ಇಂಡಿಯಾದ ಒಂದು ಏಕೀಕೃತ ಪ್ರಯತ್ನ ನಡೆಸಿತ್ತು ಎಂದು ಕೇಳಲ್ಪಟ್ಟಿದ್ದೇನೆ ಎಂದು ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ವಿರುದ್ದದ 44 ಪೇಜ್‌ಗಳನ್ನು ಡಿಲೀಟ್ ಮಾಡುವಂತೆ ಫೇಸ್‌ಬುಕ್‌ಗೆ ಬಿಜೆಪಿ ತಾಕೀತು!
ಈ ಬಗ್ಗೆ ಬರೆದ ಅನೇಕ ಮೇಲ್‌ಗಳಿಗೂ ಸಹ ಉತ್ತರಿಸಲ್ಪಟ್ಟಿಲ್ಲ, ಇದು ಫೇಸ್‌ಬುಕ್ ಇಂಡಿಯಾ ತಂಡದಲ್ಲಿನ “ವ್ಯಕ್ತಿಗಳ ಪ್ರಬಲ ರಾಜಕೀಯ ನಂಬಿಕೆಗಳ” ನೇರ ಫಲಿತಾಂಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಗಾಸಿಪ್, ಪಿಸುಮಾತುಗಳು ಮತ್ತು ಕೊಂಕುನುಡಿಗಳ ಮೂಲಕ ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಖಂಡನೀಯ. ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗಿನ ಫೇಸ್‌ಬುಕ್‌ನ ಈ ಒಡನಾಟವು ನಮ್ಮ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆ ತಮ್ಮ ಆಕಾಂಕ್ಷೆಗಳನ್ನು ಬಿತ್ತಲು ದುಷ್ಕೃತ್ಯದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮುಕ್ತತೆಯನ್ನು ನೀಡುತ್ತಿದೆ” ಎಂದು ಅವರು ಬರೆದಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ಫೇಸ್‌ಬುಕ್ ಇಂಡಿಯಾ ಬಿಜೆಪಿ ಪರವಾಗಿ ಕೆಲಸ ಮಾಡಿದೆ ಎಂದು ಪ್ರತಿಪಾದಿಸುತ್ತಿದ್ದರೆ, ಫೇಸ್‌ಬುಕ್‌ನೊಳಗೆ ಬಲಪಂಥೀಯರ ವಿರುದ್ಧ ಪಕ್ಷಪಾತವಿದೆ ಎಂದು ಪ್ರಸಾದ್ ಆರೋಪಿಸುತ್ತಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರಿಂದ ಹಿಡಿದು ಇತರ ಹಿರಿಯ ಅಧಿಕಾರಿಗಳವರೆಗಿನ ಫೇಸ್‌ಬುಕ್ ಇಂಡಿಯಾ ತಂಡವು “ಒಂದು ನಿರ್ದಿಷ್ಟ ರಾಜಕೀಯ ನಂಬಿಕೆಗೆ ಸೇರಿದ ಜನರ ಪ್ರಾಬಲ್ಯ ಹೊಂದಿದೆ” ಮತ್ತು “ಈ ರಾಜಕೀಯ ಪ್ರವೃತ್ತಿಯ ಜನರು ಸತತ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಲ್ಲಿ ಅಗಾಧವಾಗಿ ಸೋಲಿಸಲ್ಪಟ್ಟಿದ್ದಾರೆ” ಎಂದು “ವಿಶ್ವಾಸಾರ್ಹ ಮಾಧ್ಯಮ ವರದಿಗಳನ್ನು” ಉಲ್ಲೇಖಿಸಿ ರವಿಕಶಂಕರ್ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ ಕುಖ್ಯಾತ ರೌಡಿಶೀಟರ್ ಬಿಜೆಪಿಗೆ ಸೇರ್ಪಡೆ: ಪೋಲಿಸರನ್ನು ಕಂಡು ಪರಾರಿ!
ವಾಲ್‌ಪೋಸ್ಟ್ ಜರ್ನಲ್ ವರದಿಗಳನ್ನು ಫೇಸ್‌ಬುಕ್‌ನೊಳಗಿನ “ಆಂತರಿಕ ಶಕ್ತಿ ಹೋರಾಟ” ಎಂದು ಸಚಿವ ಕರೆದಿದ್ದಾರೆ.
ಫೇಸ್‌ಬುಕ್‌ನ ಫ್ಯಾಕ್ಟ್‌ಚೆಕ್‌ಗಳನ್ನು ತೃತೀಯ ಫ್ಯಾಕ್ಟ್-ಚೆಕರ್‌ಗಳಿಗೆ ಹೊರಗುತ್ತಿಗೆ ನೀಡುತ್ತಿರುವುದು ಒಂದು ಸಮಸ್ಯೆಯೆಂದು ಹೇಳುತ್ತಾ, ಸಂಸ್ಥೆಯು “ಬಳಕೆದಾರರನ್ನು ತಪ್ಪು ಮಾಹಿತಿಯಿಂದ ರಕ್ಷಿಸುವ ಜವಾಬ್ದಾರಿಯನ್ನು ಸ್ವತಃ ಬಿಟ್ಟುಕೊಡುತ್ತಿದೆ ಮತ್ತು ಬದಲಿಗೆ ಇದು ವಿಶ್ವಾಸಾರ್ಹತೆಯಿಲ್ಲದ ಮೋಸದ ಸಂಸ್ಥೆಗಳಿಗೆ ಮೂಲವಾಗಿದೆ” ಎಂದು ಹೇಳಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಆಗಸ್ಟ್‌ನಲ್ಲಿ ಎರಡು ಬಾರಿ ಜುಕರ್‌ಬರ್ಗ್‌ಗೆ ಪತ್ರ ಬರೆದಿದ್ದು, ಭಾರತದಲ್ಲಿ ತನ್ನ ಕಾರ್ಯಾಚರಣೆಗಳ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಫೇಸ್‌ಬುಕ್ ಯಾವ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ


