Homeಮುಖಪುಟಸಂವಿಧಾನ, ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇಲ್ಲ: ಮತ್ತೆ ನಾಲಿಗೆ ಹರಿಬಿಟ್ಟ ಯತಿ ನರಸಿಂಗಾನಂದ

ಸಂವಿಧಾನ, ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇಲ್ಲ: ಮತ್ತೆ ನಾಲಿಗೆ ಹರಿಬಿಟ್ಟ ಯತಿ ನರಸಿಂಗಾನಂದ

- Advertisement -

ಹೊಸದಿಲ್ಲಿ: ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ ವಿರುದ್ಧ ಹೇಳಿಕೆ ನೀಡಿರುವ ಹಿಂದುತ್ವವಾದಿ ನಾಯಕ ಯತಿ ನರಸಿಂಗಾನಂದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಿ ಕಾರ್ಯಕರ್ತರೊಬ್ಬರು ಭಾರತದ ಅಟಾರ್ನಿ ಜನರಲ್‌ಗೆ ಪತ್ರ ಬರೆದಿದ್ದಾರೆ.

ನರಸಿಂಹಾನಂದ ಇತ್ತೀಚೆಗೆ ಹರಿದ್ವಾರ ‘ಧರ್ಮ ಸಂಸದ್’ನಲ್ಲಿ ಮುಸ್ಲಿಂ ನರಮೇಧಕ್ಕೆ ಕರೆಗಳನ್ನು ನೀಡಿ ಸುದ್ದಿಯಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ನಾರಾಯಣ್ ತ್ಯಾಗಿಯನ್ನು ಬಂಧಿಸಿದಾಗ ನರಸಿಂಗಾನಂದ, “ನೀವೆಲ್ಲರೂ ಸಾಯುತ್ತೀರಿ” ಎಂದು ಪೊಲೀಸರಿಗೆ ಬೆದರಿಸಿದ್ದರು.

ಅಟಾರ್ನಿ ಜನರಲ್‌ಗೆ ಬರೆದಿರುವ ಪತ್ರದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶಚಿ ನೆಲ್ಲಿ ಅವರು ನರಸಿಂಗಾನಂದ ನೀಡಿರುವ ‘ಅವಹೇಳನಕಾರಿ’ ಹೇಳಿಕೆಗಳನ್ನು ಪ್ರಸ್ತಾಪಿಸಿದ್ದಾರೆ. ವಿಶಾಲ್ ಸಿಂಗ್‌ಗೆ ನೀಡಿದ ಸಂದರ್ಶನದಲ್ಲಿ ನರಸಿಂಹಾನಂದರು ಸಂವಿಧಾನ ವಿರೋಧಿಯಾಗಿ ಮಾತನಾಡಿದ್ದಾರೆ.

ದ್ವೇಷ ಭಾಷಣ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುತ್ತಾ ನರಸಿಂಗಾನಂದ, “ನಮಗೆ ಭಾರತದ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈ ದೇಶದ 100 ಕೋಟಿ ಹಿಂದೂಗಳನ್ನು ಸಂವಿಧಾನ ಕೊಲ್ಲುತ್ತಿದೆ. ಈ ಸಂವಿಧಾನವನ್ನು ನಂಬಿದವರನ್ನು ಕೊಲ್ಲಲಾಗುತ್ತದೆ. ಈ ವ್ಯವಸ್ಥೆಯನ್ನು ನಂಬುವವರು, ಈ ರಾಜಕಾರಣಿಗಳು, ಸುಪ್ರೀಂ ಕೋರ್ಟ್ ಮತ್ತು ಸೈನ್ಯದಲ್ಲಿರುವವರು ಎಲ್ಲರೂ ನಾಯಿಯಂತೆ ಸಾಯುತ್ತಾರೆ” ಎನ್ನುವುದನ್ನು ಕಾಣಬಹುದು.

ಸಂದರ್ಶನದ ಕ್ಲಿಪ್ ಅನ್ನು ಪತ್ರಕರ್ತ ಮೊಹಮ್ಮದ್ ಜುಬೈರ್ ಅವರು “#ArrestYatiNarasinghanand ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿದ್ದಾರೆ. “ನಮಗೆ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈ ಸಂವಿಧಾನವು 100 ಕೋಟಿ ಹಿಂದೂಗಳ ಹತ್ಯೆಗೆ ಸಂಬಂಧಿಸಿದ ಪುಸ್ತಕವಾಗಿದೆ. ಇದನ್ನು ನಂಬುವವರನ್ನು ಕೊಲ್ಲಲಾಗುತ್ತದೆ. ಈ ವ್ಯವಸ್ಥೆಯನ್ನು ನಂಬುವವರು, ಪೊಲೀಸರು, ರಾಜಕಾರಣಿಗಳು ಮತ್ತು ಸೈನ್ಯವನ್ನು ನಂಬುವವರು ನಾಯಿಯಂತೆ ಸಾಯುತ್ತಾರೆ” ಎಂದು ನರಸಿಂಗಾನಂದ ಹೇಳಿರುವುದನ್ನು ಜುಬೈರ್‌ ತಿಳಿಸಿದ್ದಾರೆ.

“ಸಂಸ್ಥೆಯ ಗಾಂಭೀರ್ಯವನ್ನು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ನಿರತವಾಗಿರುವ ಅಧಿಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿರಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial