Homeಮುಖಪುಟಸ್ಪರ್ಧೆ ನಡೆಯುತ್ತಿರುವುದು ಸಮಾನತೆಯ ಹಾಲಿ ಸಂವಿಧಾನ V/S ಅಸಮಾನತೆಯ ಮಾಜಿ ಮನುಧರ್ಮಶಾಸ್ತ್ರಗಳ ನಡುವೆ - ದೇವನೂರು

ಸ್ಪರ್ಧೆ ನಡೆಯುತ್ತಿರುವುದು ಸಮಾನತೆಯ ಹಾಲಿ ಸಂವಿಧಾನ V/S ಅಸಮಾನತೆಯ ಮಾಜಿ ಮನುಧರ್ಮಶಾಸ್ತ್ರಗಳ ನಡುವೆ – ದೇವನೂರು

- Advertisement -
- Advertisement -

ಸ್ಪರ್ಧೆ ನಡೆಯುತ್ತಿರುವುದು ಸಮಾನತೆಯ ಹಾಲಿ ಸಂವಿಧಾನ V/S ಅಸಮಾನತೆಯ ಮಾಜಿ ಮನುಧರ್ಮಶಾಸ್ತ್ರ ಸಂವಿಧಾನಗಳ ನಡುವೆ. ಹಾಗಾಗಿ ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ, ನಾವು ಉಳಿಯಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕರೆ ನೀಡಿದರು.

ಭಾನುವಾರ ತಲಕಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು, ಸಾಮಾನ್ಯವಾಗಿ ಯಾವ ಪಕ್ಷದ ಚುನಾವಣಾ ಪ್ರಣಾಳಿಕೆಗಳನ್ನು ಓದುವುದಿಲ್ಲ. ನಾನು ನುಡಿ ನೋಡಲ್ಲ, ಬದಲಿಗೆ- ಆ ಪಕ್ಷದ ನಡೆಯ ಚರಿತ್ರೆಯನ್ನು ನೋಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಈ ಸಲ 2023ರ ವಿಧಾನಸಭೆಯ ಚುನಾವಣೆ ಸಂದರ್ಭಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಓದಬೇಕಾಗಿ ಬಂತು. ಈ ದೇಶದ ಪ್ರಧಾನಮಂತ್ರಿಯವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಕಾಲಂ ಒಂದನ್ನು ಉಲ್ಲೇಖಿಸಿ ಅದರ ವಿರುದ್ಧವಾಗಿ ಅನೇಕ ಕಡೆ ಉಗ್ರ ಭಾಷಣ ಮಾಡಿದರು. ನಾನು ಕುತೂಹಲಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಂತಹದು ಏನಿರಬಹುದು ಎಂದು ಗಮನವಿಟ್ಟು ಓದಿದೆ. “ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು, ಯಾವುದೇ ವ್ಯಕ್ತಿಗಳಾಗಲಿ ಭಜರಂಗ ದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬರೆಯಲಾಗಿದೆ” ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದಿದ್ದೇನೆ. ನನಗೆ ಪ್ರಮುಖವಾಗಿ ಕಂಡಿದ್ದು ಇಷ್ಟು: 1) ಸಮಾಜದ ವಿಭಜನೆಗೆ ಅಂದರೆ ಒಡಕಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧ (2) ಕಾಂಗ್ರೆಸ್‌ಗೆ ಸಂವಿಧಾನ ಪವಿತ್ರ (3) ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಬಾರದು (4) ಇದನ್ನು ಉಲ್ಲಂಘಿಸುವವರು ಯಾರೇ ಆಗಲಿ ಭಜರಂಗದಳ, ಪಿಎಫ್‌ಐ ಇತ್ಯಾದಿಗಳ ಮೇಲೆ ಕಾಂಗ್ರೆಸ್ ಪಕ್ಷ ಬಲವಾದ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಇದು ಆ ಪ್ರಣಾಳಿಕೆಯ ಸಾರಾಂಶ. ಅಂದರೆ ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೊ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಆಶಯ ಇಲ್ಲಿದೆ. ರಾಜ್ಯದ law and order ಕಾಪಾಡುವುದು ತನ್ನ ಧರ್ಮ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಿದೆ.
ನನಗೆ ಅನಿಸುವಂತೆ, ಯಾವುದೇ ಒಂದು ಸರ್ಕಾರಕ್ಕೆ ತನ್ನ ರಾಜ್ಯದ, ದೇಶದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಂದರೆ ಅದು ಆ ಸರ್ಕಾರದ ಕನಿಷ್ಠ ಅರ್ಹತೆ. ಈ ಕನಿಷ್ಠ ಅರ್ಹತೆ ಇಲ್ಲದಿರುವುದರಿಂದಾಗಿ ಇದುವರೆಗೂ ರಾಜ್ಯವನ್ನು ಆಳ್ವಿಕೆ ನಡೆಸುತ್ತಿದ್ದ ಬಿಜೆಪಿ ಸರ್ಕಾರದ ಜಮಾನದಲ್ಲಿ ಒಂದೆರಡಲ್ಲ-ನೂರಾರು ಸಲ, ಕೆಲವು ಗುಂಪುಗಳು ದಾಂಧಲೆ ಎಬ್ಬಿಸಿ ಗಲಭೆ ಆಯ್ತು. ವ್ಯಾಪಾರ ನಿಷೇಧ, ಹಿಜಾಬ್, ಹಲಾಲ್, ಗೋವು ಸಾಗಾಣಿಕೆ ಇತ್ಯಾದಿ, ಇತ್ಯಾದಿ ಸರಮಾಲೆಯಲ್ಲಿ ಕೊಲೆ ಸುಲಿಗೆ ಹೊಡೆ ಬಡಿ ಎಲ್ಲಾ ನಡೆಯಿತು. ಸರ್ಕಾರ ಎನ್ನುವುದು ಇದೆಯೋ ಇಲ್ಲವೋ ಎಂದು ಅನುಮಾನ ಬರುವ ಪರಿಸ್ಥಿತಿ ಉಂಟಾಯ್ತು. ಇದೇ ಪರಿಸ್ಥಿತಿ ಮತ್ತೆ ಬರಬೇಕೆ? ಎಂದು ದೇವನೂರು ಪ್ರಶ್ನಿಸಿದರು.

ಹೀಗಿದ್ದೂ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾನೂನನ್ನು ತನ್ನ ಕೈಗೆತ್ತಿಕೊಳ್ಳುವ ಭಜರಂಗದಳದ ನಿಷೇಧ ಪ್ರಸ್ತಾಪವನ್ನು ವಿರೋಧಿಸುತ್ತಾರೆ. ಆಕ್ರೋಶಭರಿತರಾಗುತ್ತಾರೆ. ಬ್ಯಾಲೆಟ್ ಬಾಕ್ಸ್‌ನಲ್ಲಿ ಬಟನ್ ಒತ್ತುವಾಗ ‘ಜೈ ಭಜರಂಗ ಬಲಿ’ ಎಂದು ಮತ ನೀಡಿ ಎಂದು ಮತದಾರರಿಗೆ ಬಹಿರಂಗ ಕರೆಯನ್ನೂ ಕೊಡುತ್ತಾರೆ. ಆದರೆ ಹನುಮಂತ, ಹನುಮಾನ್ ಪರಮಭಕ್ತಿಯ ಸಂಕೇತವಾಗಿ ನಮ್ಮ ಜನಸಮುದಾಯದ ಸುಪ್ತಪ್ರಜ್ಞೆಯಲ್ಲಿ ವಾಸ ಮಾಡುತ್ತಿದ್ದಾನೆ. ಇಂತಹ ಪರಮಭಕ್ತಿಯ ಹನುಮಾನ್ ಯಾವ ಕಾರಣಕ್ಕೂ ‘ಭಕ್ತಿಯೇ ಇಲ್ಲದ ವೇಷಧಾರಿ ಭಕ್ತ’ರ ಗದ್ದಲದ ಮಾತುಗಳನ್ನು ಕೇಳಿಸಿಕೊಳ್ಳಲಾರ. ವಚನ ಪಾಲನೆಯ ಸಂಕೇತವಾದ ರಾಮನ ಭಕ್ತನಾದ ಹನುಮಾನ್ ವಚನಭ್ರಷ್ಠ ಭಕ್ತರನ್ನಂತೂ ಕ್ಷಮಿಸಲಾರ. ಇದೇ ಭಾರತದ ಪರಂಪರೆಯ ಅಂತಃಸಾಕ್ಷಿ ಎಂದು ದೇವನೂರು ತಿಳಿಸಿದರು.

ನಮ್ಮ ಪ್ರಧಾನಿಯವರಿಗೆ ಒಂದು ಪ್ರಶ್ನೆ. ಕಾನೂನು ಕೈಗೆತ್ತಿಕೊಳ್ಳುವ ಹಿನ್ನೆಲೆಯ ಭಜರಂಗದಳ ಮತ್ತು ಪಿಎಫ್‌ಐ ಇತ್ಯಾದಿಗಳ ಅವಾಂತರ ನೋಡಿಕೊಂಡು ಸರ್ಕಾರವೊಂದು ಸುಮ್ಮನಿರಬೇಕೆ? ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಇಂತಹ ಮತಾಂಧರ ಬಗ್ಗೆ- ಕನ್ನಡ ಮಹೋನ್ನತ ಲೇಖಕ ಪಿ.ಲಂಕೇಶ್ ಅವರು ಒಂದು ಮಾತು ಹೇಳುತ್ತಾರೆ- “ನಗು ಮರೆತ, ಅಳು ಮರೆತ, ದಯೆ ಮರೆತ ಧರ್ಮಾಂಧರು ಯಾವುದೇ ಅಣುಬಾಂಬಿಗಿಂತ ‘ಅಪಾಯದ ಮನುಷ್ಯರು’ ” ಅಂತ. ಲಂಕೇಶರ ಈ ಒಳಗಣ್ಣಿನ ನುಡಿಗಳನ್ನು ನಾವು ಆಲಿಸಬೇಕಾಗಿದೆ ಎಂದರು.

ಇತ್ತೀಚೆಗೆ ನಾನು ನಂಜನಗೂಡಿನ ಹತ್ತಿರದ ತಗಡೂರಿಗೆ ಒಂದು ಸಭೆಗೆ ಹೋಗಿದ್ದೆ. ಅಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಸೇರಿದ್ದರು. ಅಲ್ಲಿ ಶಾಲಾಮಕ್ಕಳು, ತರುಣರು, ಮಹಿಳೆಯರು, ಸಂಘಟನೆಗಳ ನಾಯಕರು, ಆ ಊರಿನ ಯಜಮಾನರು ಎಲ್ಲರೂ ಸೇರಿದ್ದರು. ನಾನು ಸುಮಾರು ಅರ್ಧ ಗಂಟೆಗಳ ಕಾಲ ಮಾತಾಡಿದೆ. ಮಾತಾಡಿದೆ ಅನ್ನುವುದಕ್ಕಿಂತ ನಾನು ಬರೆದುಕೊಂಡಿದ್ದನ್ನು ಓದಿದೆ ಅನ್ನಬಹುದು. ನಾನೇ ಚಕಿತನಾಗುವಂತೆ ಎಲ್ಲರೂ ಆಲಿಸಿದರು. ಸಭೆ ಮುಗಿದ ಮೇಲೆ ನಾಕಾರು ಹುಡುಗರು –“ನಮಗೆ ಅರ್ಥವಾಯ್ತು. ನಾವು ಬಿಜೆಪಿಗೆ ಮತ ನೀಡುವುದಿಲ್ಲ” ಅಂದರು. ಆಮೇಲೆ ಹತ್ತಾರು ಜನ ತರುಣರು ರಾತ್ರಿ 12.30ರವರೆಗೆ ಅಂದು ನಾನು ಹೇಳಿದ್ದ ಮುಖ್ಯ ಮಾತೊಂದನ್ನು ಚರ್ಚಿಸುತ್ತಿದ್ದರು ಎಂದು ತಿಳಿದು ಬಂತು. ತಗಡೂರು ಸಭೆಯಲ್ಲಿ ಹೇಳಿದ್ದ ಮಾತುಗಳ ಸಾರಾಂಶ ಏನೆಂದರೆ- “ಈ 2023ರ ವಿಧಾಸಭಾ ಚುನಾವಣೆ ಮತ್ತು ಮುಂಬರುವ 2024ರ ಲೋಕಸಭಾ ಚುನಾವಣೆ ನಿರ್ಣಾಯಕ. ಇಂದಿನ ರಾಜಕಾರಣದ ಒಳಹೊಕ್ಕು ನೋಡಿದರೆ, ಇಂದಿನ ಚುನಾವಣೆ ವ್ಯಕ್ತಿ ವ್ಯಕ್ತಿಗಳ ನಡುವೆ ಅಲ್ಲ. ಪಕ್ಷ ಪಕ್ಷಗಳ ನಡುವೆಯೂ ಅಲ್ಲ. ಇಂದಿನ ಸ್ಪರ್ಧೆ ನಡೆಯುತ್ತಿರುವುದು ಸಮಾನತೆಯ ಹಾಲಿ ಸಂವಿಧಾನ V/S ಅಸಮಾನತೆಯ ಮಾಜಿ ಮನುಧರ್ಮಶಾಸ್ತ್ರ ಸಂವಿಧಾನಗಳ ನಡುವೆ. ಮನುಧರ್ಮ ಶಾಸ್ತ್ರದ ಭಕ್ತರಾದ ಸಂಘಪರಿವಾರ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದರೆ, ಆ ಮನುಧರ್ಮ ಶಾಸ್ತ್ರದಂತೆ ಒಕ್ಕಲಿಗರು, ಲಿಂಗಾಯಿತರು, ತಳಸಮುದಾಯದವರು ಮತ್ತೆ ಸೇವಕರಾಗಬೇಕಾಗುತ್ತದೆ. ಆಗ ದಲಿತರು, ಅಲೆಮಾರಿ, ಆದಿವಾಸಿಗಳು ಊರಾಚೆ ತಳ್ಳಲ್ಪಡುತ್ತಾರೆ, ನೆನಪಿಡಿ” –ಎಂದು ಹೇಳಿದ್ದೆ. ಈಗ ಬಿಜೆಪಿ ಸರ್ಕಾರಗಳು ತರುತ್ತಿರುವ ಕಾಯ್ದೆಗಳನ್ನು ಮೂಸಿ ನೋಡಿದರೂ, ಅಲ್ಲಿ ಮನುಧರ್ಮ ಶಾಸ್ತ್ರದ ವಾಸನೆ ಇರುವುದನ್ನು ಗುರುತಿಸಬಹುದು. ಹೀಗಿರುವಾಗ, ಸ್ನೇಹಿತರೇ ಸಂಘಪರಿವಾರ ಬಿಜೆಪಿಯನ್ನು ಸೋಲಿಸಲೇಬೇಕು. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತದ ಸಂವಿಧಾನವನ್ನು ಪವಿತ್ರ ಎಂದು ಭಾವಿಸಿರುವ ಕಾಂಗ್ರೆಸ್‌ಗೆ, ಇಂದಿನ ಪರಿಸ್ಥಿತಿಯಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಬೆಂಬಲ ನೀಡಬೇಕಾಗಿದೆ. ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ ನಾವು ಉಳಿಯಬೇಕಾಗಿದೆ ಎಂದರು.

ಇದನ್ನೂ ಓದಿ: ‘ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳು ಬಂದ್’; ನಡ್ಡಾ ಬೆದರಿಕೆಗೆ ಜನಾಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...