ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ತನ್ನ 14 ತಿಂಗಳ ಗೃಹ ಬಂಧನದಿಂದ ಬಿಡುಗಡೆಯಾದ ನಂತರ ಇಂದು ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಬಿಜೆಪಿಯ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, “ದೇಶ ನಡೆಯುತ್ತಿರುವುದು ಸಂವಿಧಾನದ ಮೇಲೆಯೇ ಹೊರತು ಬಿಜೆಪಿಯ ಪ್ರಣಾಳಿಕೆಯ ಮೇಲೆ ಅಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ನಮ್ಮಿಂದ ಕಿತ್ತುಕೊಂಡದ್ದನ್ನು ಮರಳಿ ಪಡೆಯಬೇಕಾಗಿದೆ: ಮೆಹಬೂಬಾ ಮುಫ್ತಿ
“ಜಮ್ಮು-ಕಾಶ್ಮೀರದ ಜನರಿಗೆ ಬೇಕಾಗಿರುವುದು ಅವರ ಪ್ರದೇಶ. ಈ ದೇಶವು ಸಂವಿಧಾನದ ಮೇಲೆ ನಡೆಯುತ್ತದೆ, ಬಿಜೆಪಿಯ ಪ್ರಣಾಳಿಕೆಯ ಮೆಲೆ ಅಲ್ಲ” ಎಂದು ತಮ್ಮ ಗುಪ್ಕರ್ ನಿವಾಸದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಇದನ್ನೂ ಓದಿ: ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?
“ಬಿಜೆಪಿ ಸಂವಿಧಾನವನ್ನು ಅಪವಿತ್ರಗೊಳಿಸಿದೆ. 370 ನೇ ವಿಧಿಯನ್ನು ಪುನಃಸ್ಥಾಪಿಸಿ, ಕಾಶ್ಮೀರ ಸಮಸ್ಯೆಗೆ ಅಂತಿಮ ಪರಿಹಾರವನ್ನು ತರುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು.
ಮೆಹಬೂಬಾ ಮುಫ್ತಿ ಅವರನ್ನು ಮಂಗಳವಾರ (ಅ.13) ತಡರಾತ್ರಿ ಬಿಡುಗಡೆ ಮಾಡಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮುಫ್ತಿ ಅವರನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ (ಪಿಎಸ್‌ಎ) ಬಂಧಿಸಲಾಗಿತ್ತು.
ಕಳೆದ 14 ತಿಂಗಳುಗಳಿಂದ ಗೃಹ ಬಂಧನದಲ್ಲಿ ಇದ್ದ ಮುಫ್ತಿ ಅವರ ಬಂಧನದ ಅವಧಿಯನ್ನು ಪದೇ ಪದೇ ವಿಸ್ತರಣೆ ಮಾಡುವುದನ್ನು ಪ್ರಶ್ನಿಸಿ ಅವರ ಮಗಳು ಇಲ್ತಿಜಾ ಸುಪ್ರೀಂಕೋರ್ಟ್‌ನಲ್ಲಿ ಕಾಶ್ಮೀರ ಆಡಳಿತ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದರು.
ಬಿಡುಗಡೆಯ ನಂತರ, “ಒಂದು ವರ್ಷದ ನಂತರ ನಾನು ಇಂದು ಬಿಡುಗಡೆಯಾಗಿದ್ದೇನೆ” ಎಂದು ಮುಫ್ತಿ ಬಿಡುಗಡೆಯಾದ ನಂತರ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. “ಬಂಧನದ ಸಮಯದಲ್ಲಿ, ಆಗಸ್ಟ್ 5 ರ ’ಕಪ್ಪು ದಿನ’ ನನ್ನನ್ನು ಗಾಯಗೊಳಿಸುತ್ತಲೇ ಇತ್ತು. ಜಮ್ಮು ಮತ್ತು ಕಾಶ್ಮೀರದ ಜನರು ಸಹ ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಆ ದಿನದ ಅವಮಾನವನ್ನು ನಮ್ಮಲ್ಲಿ ಯಾರೂ ಮರೆಯಲು ಸಾಧ್ಯವಿಲ್ಲ” ಎಂದಿದ್ದರು.
ಇದನ್ನೂ ಓದಿ: ನಮ್ಮನ್ನು ಪ್ರಾಣಿಗಳಂತೆ ಪಂಜರದಲ್ಲಿ ಕೂಡಿ ಹಾಕಾಲಾಗಿದೆ- ಮೆಹಬೂಬಾ ಮುಫ್ತಿ ಅವರ ಮಗಳಾದ ಇಲ್ತೀಜಾ ಜಾವೇದ್ ಆರೋಪ: ಅಮಿತ್ ಶಾಗೆ…



ಅಂದು ಸಂಮಿಷ್ಟ್ರ್ ಸರಕಾರ ಮಾಡುವಾಗ ಇದೆಲ್ಲಾ ಗೊತ್ತಾಗಿಲ್ವಾ ಒಂದು ಭಾರಿ ಒಳಗೆ ಹೋದರೆ ಇನ್ನಾದರೂ ಬುದ್ದಿ ಬಂತಂತಲ್ವಾ