Homeಕರ್ನಾಟಕರಾಯಚೂರಿನಲ್ಲಿ ಅನಾವರಣಗೊಂಡ ಅಲೆಮಾರಿಗಳ ಸಾಂಸ್ಕೃತಿಕ ಕಲೆ

ರಾಯಚೂರಿನಲ್ಲಿ ಅನಾವರಣಗೊಂಡ ಅಲೆಮಾರಿಗಳ ಸಾಂಸ್ಕೃತಿಕ ಕಲೆ

- Advertisement -
- Advertisement -

ಅವರು ಅಲೆಮಾರಿಗಳು, ಒಂದು ಕಡೆ ನಿಂತವರಲ್ಲ, ನಿಲ್ಲುವವರೂ ಅಲ್ಲ, ನೆಲೆ ನಿಂತರೂ ಒಂದು ಹಗಲು ಒಂದು ರಾತ್ರಿ ಮಾತ್ರ. ಮತ್ತೆ ಮನಸ್ಸು ಹರಿದತ್ತ ಹೆಜ್ಜೆ ಹಾಕುತ್ತಲೇ ಬದುಕು ಕಟ್ಟಿಕೊಂಡವರು. ಆಧುನಿಕತೆ ವ್ಯಾಪಿಸಿದಂತೆ ಈ ಅಲೆಮಾರಿ ಕುಟುಂಬಗಳು ನೆಲೆ ಕಂಡುಕೊಂಡು ಅವರ ಮಕ್ಕಳು ಶಾಲೆಯ ಮುಖವನ್ನು ಕಾಣುವಂತೆ ಆಗಿದೆ. ಇಂತಹ ಅಲೆಮಾರಿ ಸಮುದಾಯ ತಮ್ಮ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಡುವ, ಸಾಂಸ್ಕೃತಿಕ ಕಲೆಗಳನ್ನು ನಗರೀಕರಣದ ಮುಂದೆ ಅನಾವರಣಗೊಳಿಸುವ ಕೆಲಸ ರಾಯಚೂರಿನಲ್ಲಿ ನಡೆಯಿತು. ನೆಲಮೂಲ ಸಂಸ್ಕೃತಿಯ ಒಂದೊಂದು ಕಲೆಯೂ ನಗರೀಕರಣಕ್ಕೆ ಸವಾಲೊಡ್ಡುವ ರೀತಿಯಲ್ಲಿ ವ್ಯಕ್ತವಾಯಿತು.

ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವ ಬಗೆಬಗೆಯ ಬುಡಕಟ್ಟುಗಳು ಮತ್ತು ಅಲೆಮಾರಿ ಸಮುದಾಯ ತಮ್ಮಲ್ಲಿನ ಸಾಂಸ್ಕೃತಿಕ ಸಂಪತ್ತನ್ನು ಪ್ರದರ್ಶನಗೊಳಿಸುವುದಕ್ಕೆ ವೇದಿಕೆ ಒದಗಿಸಲಾಗಿತ್ತು. ಸ್ಲಂ ಜನಾಂದೋಲನ – ಕರ್ನಾಟಕ ನೇತೃತ್ವದಲ್ಲಿ ನಮ್ ಹಾಡು, ನಮ್ ಕುಣಿತ, ನಮ್ ಖುಷಿ ಶೀರ್ಷಿಕೆಯಡಿ ಸಾಂಸ್ಕೃತಿಕ ಕಲೆಗಳ ಸ್ಲಂಹಬ್ಬ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಅಳಿವಿನಂಚಿನಲ್ಲಿರುವ ಹಕ್ಕಿಪಿಕ್ಕಿಯವರ ಕಾಡಿನ ಹಾಡುಗಳು, ಪೋತರಾಜರ ನೃತ್ಯ, ಅಸ್ಪೃಶ್ಯಯ ಸಮುದಾಯಕ್ಕೆ ಸೇರಿದ ದರವೇಸಿಗಳ ಜನಸಮೂಹದ ಕಷ್ಟಕೋಟಲೆಗಳನ್ನು ಒಳಗೊಂಡ ಕವಾಲಿಗಳು, ಸುಡುಗಾಡು ಸಿದ್ದರ ಮಾಯಾಜಾಲ ಅಥವಾ ಕಣ್ಕಟ್ಟು, ಶಿಳ್ಳೇಕ್ಯಾತರ ಆಟಗಳು, ದುರ್ಗಿಮುರ್ಗಿಯ ಕುಣಿತ, ಲಂಬಾಣಿ ಜನರ ಕೋಲಾಟ, ಮಂಗಳಮುಖಿಯರ ಕಲೆಗಳು ವೇದಿಕೆಯಲ್ಲಿ ಅನಾವರಣಗೊಂಡು ಪ್ರೇಕ್ಷಕರ ಗಮನ ಸೆಳೆದವು.

2007 ರಿಂದ ಆರಂಭವಾಗಿರುವ ಸ್ಲಂಹಬ್ಬ ಇದುವರೆಗೆ ಮೂರು ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಸ್ಲಂಹಬ್ಬ ಗಳನ್ನು ಆಯೋಜಿಸಿ ರಾಜ್ಯದ ಗಮನ ಸೆಳೆಯಲಾಗಿದೆ. ಈ ಮೂಲಕ ಅಲೆಮಾರಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ನಗರದ ಜಂಝಡದ ಗದ್ದಲದ ನಡುವೆ ಶ್ರಮದಾನದಿಂದಲೇ ನಲುಗಿ ಹೋಗುತ್ತಿರುವ ಈ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಮುಖ್ಯವಾಹಿನಿಗೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ಸ್ಲಂಹಬ್ಬಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಡೊಮಿನಿಕ್, “ಅಸ್ಪೃಶ್ಯರು ಮತ್ತು ಅಲೆಮಾರಿ ಸಮುದಾಯಗಳ ಕಲಾ ಪ್ರಕಾರಗಳು ಸ್ಥಾಪಿತ ಪರಂಪರೆ, ಅಮಾನವೀಯ ಸಾಂಸ್ಕೃತಿಕ ಪರಿಸರವನ್ನು ಬದಿಗೆ ಸರಿಸಿ, ಕೇವಲ ಮನೋರಂಜನೆಗಾಗಿ ಪ್ರದರ್ಶನಗೊಳ್ಳುವ ಕಲೆಗಳೆಂದು ಭಾವಿಸಲಾಗಿದ್ದ ಆಚರಣೆಗಳನ್ನು ಇಂದು ಸ್ಲಂ-ನಿವಾಸಿಗಳು ತಮ್ಮ ದುಡಿಮೆ ಸಾಂಸ್ಕೃತಿಕ ಗುರುತುಗಳನ್ನಾಗಿ ನೆಲೆಗೊಳಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ, ಆ ಕಲೆಗಳ ಹಿಂದಿರುವ ಶ್ರೀಮಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಮತ್ತೆ ಹೊಸ ಸಮಾಜ ನಿರ್ಮಾಣಕ್ಕೆ ಕೊಳಗೇರಿ ಸಮುದಾಯಗಳು ತೊಡಗಿರುವುದನ್ನು ನಾವು ನೋಡಬಹುದು” ಎಂದು ಹೇಳಿದ್ದಾರೆ.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ನಾನುಗೌರಿ.ಕಾಂ ಜೊತೆ ಮಾತನಾಡಿ ನಗರದಲ್ಲಿ ಅಲೆಮಾರಿ ಸಂಸ್ಕೃತಿಗಳ ಮೇಲೆ ದಾಳಿ, ದೌರ್ಜನ್ಯ ದಬ್ಬಾಳಿಕೆ ನಡೆದರೂ ಅದರ ವಿರುದ್ಧವೇ ತಿರುಗಿಬಿದ್ದಿರುವ ನೆಲಮೂಲ ಸಂಸ್ಕೃತಿಯ ಕಲೆಯ ಅನಾವರಣದ ಮೂಲಕ ಈ ಸಮುದಾಯದ ಜನರಿಗೆ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಆಧುನಿಕತೆಯ ಪರಿಣಾಮ ಅಲೆಮಾರಿಗಳು ಇಂದು ನೆಲೆ ನಿಲ್ಲುವಂತಹ ಸ್ಥಿಗೆ ಬರುವಂತೆ ಆಗಿದೆ. ಇದರಿಂದ ಆಧಾರ್, ರೇಷನ್ ಕಾರ್ಡುಗಳು ದೊರೆತಿವೆ. ಕೆಲ ಸಮುದಾಯಗಳಿಗೆ ಈ ಸೌಲಭ್ಯಗಳು ದೊರೆತಿಲ್ಲ. ಅಲೆಮಾರಿ ಕುಟುಂಬಗಳ ಮಕ್ಕಳು ಶಾಲೆಯ ಮುಖ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಪ್ರತಿವರ್ಷ ಸರ್ಕಾರಗಳು ಕೊಳೆಗೇರಿಗಳಲ್ಲಿ ವಾಸಿಸುವ ಅಲೆಮಾರಿಗಳ ಶೈಕ್ಷಣಿಕ ಮೊದಲಾದ ಅಭಿವೃದ್ಧಿ ಕೆಲಸಗಳಿಗೆ 50-70 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಈ ಹಣದಲ್ಲಿ ಕೇವಲ ಪ್ರತಿಶತ 20ರಷ್ಟು ಹಣ ಮಾತ್ರ ವೆಚ್ಚವಾಗುತ್ತಿದೆ. ಉಳಿದ ಹಣ ಸರ್ಕಾರಕ್ಕೆ ವಾಪಸ್ಸಾಗುತ್ತಿದೆ. ಕಾರಣ ಅಲೆಮಾರಿ ಸಮುದಾಯ ಶಿಕ್ಷಣ ಪಡೆದಿಲ್ಲ. ಹಾಗಾಗಿ ಸರ್ಕಾರ ಕೇಳುವ ದಾಖಲೆಗಳು ಅವರ ಬಳಿ ಸಿಗುತ್ತಿಲ್ಲ. ಇದು ಕೂಡ ಅಲೆಮಾರಿ ಗಳಿಗೆ ಮೀಸಲಿಟ್ಟ ಹಣ ಹಾಗೇ ಉಳಿಯಲು ಕಾರಣ’ ಎಂದು ತಿಳಿಸಿದರು.

ಸರ್ಕಾರ ಭೂ ಮಂಜೂರಾತಿ ಕೊಡುತ್ತಿದೆ. ಅಲೆಮಾರಿ ಸಮುದಾಯಗಳಿಗೂ ಭೂಮಿ ಕೊಡಬೇಕು. ಘನತೆ ಗೌರವದಿಂದ ಬದುಕಲು ವಸತಿ ವ್ಯವಸ್ಥೆ ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಿದರೆ ಈ ಸಮುದಾಯಗಳ ಅಭಿವೃದ್ಧಿ ಸಾಧ್ಯ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಅಲೆಮಾರಿಗಳಲ್ಲಿ ಕೆಲ ಸಮುದಾಯಗಳು ಹಿಂದುಳಿದ ವರ್ಗಕ್ಕೆ ಬರುತ್ತವೆಯೇ? ಪರಿಶಿಷ್ಟ ಸಮುದಾಯಕ್ಕೆ ಸೇರುತ್ತವೆಯೇ ಎಂಬುದೇ ಗೊತ್ತಿಲ್ಲ. ಇದು ಕೂಡ ಈ ಅಲೆಮಾರಿಗಳು ಹಿಂದುಳಿಯಲು ಕಾರಣವಾಗಿದೆ. ಸರ್ಕಾರ ಈಗಲಾದರೂ ಅಲೆಮಾರಿಗಳ ಜನಗಣತಿ ಮಾಡಿ ಅವರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕಾಗಿದೆ.


ಇದನ್ನೂ ಓದಿ; ತುಮಕೂರಿನಲ್ಲಿ ‘ಕೆ.ಬಿ. ಕಾವ್ಯ: ಕಣ್ಣು ಧರಿಸಿ ಕಾಣಿರೋ’ ಕೃತಿ ಬಿಡುಗಡೆಗೊಳಿಸಿದ ನಟರಾಜ್ ಬೂದಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...