COVID-19 ಪರೀಕ್ಷಿಸಲು ನಿರಾಕರಿಸಿದ ವೈದ್ಯೆಗೆ ಸ್ಥಳೀಯ ಮುಸ್ಲಿಮರು ಕಲ್ಲು ತೂರಿದ್ದರಿಂದ ಉತ್ತರ ಪ್ರದೇಶದ ಮಹಿಳಾ ವೈದ್ಯೆಯೊಬ್ಬಳು ಸಾವನ್ನಪ್ಪಿದ್ದಾರೆ ಎಂದು ಹೇಳುವ ಹಲವಾರು ಫೇಸ್‌ಬುಕ್ ಪೋಸ್ಟ್‌ಗಳು ವೈರಲ್ ಆಗಿವೆ. ಆದರೆ ಆ ಸುದ್ದಿ ಸುಳ್ಳಾಗಿದ್ದು ವೈರಲ್ ಫೋಟೊದಲ್ಲಿರುವ ಮಹಿಳೆಯರು ಮಧ್ಯಪ್ರದೇಶ ಫಾರ್ಮಾಸಿಸ್ಟ್ ಆಗಿದ್ದು ಅವರು ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಹಾಸಿಗೆಯಲ್ಲಿ ಮಹಿಳೆಯೊಬ್ಬಳು ಬಾಯಿಯಲ್ಲಿ ಇಂಟ್ಯೂಬೇಶನ್ ಟ್ಯೂಬ್ ಇಟ್ಟುಕೊಂಡಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಘಟನೆಗೆ ಕೋಮು ಬಣ್ಣವನ್ನು ನೀಡಲಾಗುತ್ತಿದೆ.
ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಮುಸ್ಲಿಮರು ಕಲ್ಲು ತೂರಾಟದಿಂದ ಗಾಯಗೊಂಡ ವೈದ್ಯ ಮಹಿಳೆ ಈಗ ಮೃತಪಟ್ಟಿದ್ದಾಳೆ. ಅಲ್ಲಿ ಅವರು ಶಂಕಿತ COVID-19 ರೋಗಿಗಳನ್ನು ಪರೀಕ್ಷಿಸಲು ಹೋಗಿದ್ದರು ಎಂದು ಒಂದು ಪೋಸ್ಟ್‌ನಲ್ಲಿ ಬರೆದಿದ್ದರೆ ಮತ್ತೊಂದು ಪೋಸ್ಟ್ ಈ ಕೆಳಗಿನಂತಿದೆ.
‘ಸ್ನೇಹಿತರೇ, ದುಃಖದ ಸುದ್ದಿ ಇದೆ. ಡಾಕ್ಟರ್ ವಂದನಾ ತಿವಾರಿ ಇನ್ನಿಲ್ಲ. ಕೊರೊನಾವೈರಸ್ ರೋಗಿಗಳನ್ನು ಪರೀಕ್ಷಿಸಲು ಅವರು ಕಳೆದ ವಾರ ಉತ್ತರ ಪ್ರದೇಶಕ್ಕೆ ಹೋಗಿದ್ದರು ಆದರೆ ಜಿಹಾದಿಗಳು ಅವಳ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಂಡರು. ಇತರರ ಪ್ರಾಣ ಉಳಿಸಲು ಹೋರಾಡುತ್ತಿದ್ದ ಆ ಯೋಧೆ ಏಳು ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಇಲ್ಲವಾಗಿದ್ದಾರೆ. ಸಂತಾಪಗಳು’.

ಮಧ್ಯಪ್ರದೇಶದ ಇಂದೋರ್‌ನಲ್ಲಿ 2020ರ ಏಪ್ರಿಲ್ 2 ರಂದು ಆರೋಗ್ಯ ಅಧಿಕಾರಿಗಳ ಐದು ಸದಸ್ಯರ ತಂಡವು ಕೊರೊನಾ ಪರೀಕ್ಷೆಗಾಗಿ ಭೇಟಿ ನೀಡಿತ್ತು. ಇಂದೋರ್‌ನ ಟಾಟ್ ಪ್ಯಾಟಿ ಬಖಾಲ್ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರ ಮೇಲೆ ಹಲ್ಲೆಯಾಗಿತ್ತು. ಆ ಸುದ್ದಿಗೂ ಈ ಸುದ್ದಿಗೂ ಗೊಂದಲ ಉಂಟು ಮಾಡಿರುವುದರಿಂದ ಬಹಳಷ್ಟು ಜನ ಈ ಸುದ್ದಿಯನ್ನು ನಿಜವೆಂದು ನಂಬಿಬಿಟ್ಟಿದ್ದಾರೆ. ಹಾಗಾಗಿಯೇ ಈ ಪೋಸ್ಟ್‌ಗಳನ್ನು ಸಹ ಸಾವಿರಾರು ಜನ ಲೈಕ್ ಮತ್ತು ಷೇರ್ ಮಾಡಿದ್ದಾರೆ.
मित्रों दुखद खबर डॉक्टर वंदना तिवारी जी की मृत्यु हो
वह पिछले हफ्ते ही यूपी के एक गाँव में कोरोना टेस्ट के लिए गई थी?
लेकिन उन पर #हमला करके गंभीर रूप से घायल कर दिया गया था!
लोगों के जीवन बचाने में जुटी एक #योद्धा पिछले सात दिन से अपना जीवन बचाने के लिए मौत से लड़ रही थीं? pic.twitter.com/T3VwHb6btX— Pramod Singh (@pksingh4981) April 9, 2020
ಸತ್ಯವೇನು?
ಚಿತ್ರದಲ್ಲಿರುವ ಮಹಿಳೆ ವಂದನಾ ತಿವಾರಿ ಮಧ್ಯಪ್ರದೇಶದ ಶಿವಪುರಿಯ ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಔಷಧಿ ಅಧಿಕಾರಿಯಾಗಿದ್ದರು (pharmacist) ಎಂದು ಸ್ಥಳೀಯ ಪತ್ರಿಕೆ ಭೋಪಾಲ್ ಸಮಾಚಾರ್‌ನಲ್ಲಿನ ಲೇಖನವೊಂದು ವರದಿ ಮಾಡಿದೆ. ತಿವಾರಿ ಅವರನ್ನು ಏಪ್ರಿಲ್ 1, 2020 ರಂದು ಗ್ವಾಲಿಯರ್‌ನ ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಏಪ್ರಿಲ್ 7 ರಂದು ನಿಧನರಾದರು ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಮಿದುಳಿನ ರಕ್ತಸ್ರಾವವು ಅವಳ ಸಾವಿಗೆ ಕಾರಣವೆಂದು ಹೇಳಲಾಗಿದೆ.
ತಿವಾರಿ ವೈದ್ಯಕೀಯ ಕಾಲೇಜಿನಲ್ಲಿ ಮಾರ್ಚ್ 31 ರವರೆಗೆ ಕರ್ತವ್ಯದಲ್ಲಿದ್ದಾರೆ ಎಂದು ಆಸ್ಪತ್ರೆಯ ಡೀನ್ ಇಲಾ ಗುಜರಿಯಾ ತಿಳಿಸಿದ್ದಾರೆ. “ಗ್ವಾಲಿಯರ್ನಲ್ಲಿ ಪ್ರವೇಶ ಪಡೆದಿದ್ದರಿಂದ ಆಕೆಯ ಚಿಕಿತ್ಸೆಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಏಪ್ರಿಲ್ 1 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಹಾಗಾಗಿ ವಂದನಾ ತಿವಾರಿಗೆ ಯುಪಿ ಗ್ರಾಮವೊಂದರಲ್ಲಿ ಮುಸ್ಲಿಮರಿಂದ ಹಲ್ಲೆ ನಡೆಸಲಾಗಿದೆ ಎಂಬ ಹೇಳಿಕೆ ಸುಳ್ಳು ಎಂದು ಘಟನೆಗಳ ಟೈಮ್‌ಲೈನ್ ತೋರಿಸುತ್ತದೆ.
ಪೊಲೀಸ್ ವರಿಷ್ಠಾಧಿಕಾರಿ ಶಿವಪುರಿ ರಾಜೇಶ್ ಚಂದೇಲ್ “ಆಕೆಯನ್ನು ಶಿವಪುರಿ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಗೆ ಗ್ವಾಲಿಯರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸಹ ನಡೆಸಲಾಯಿತು. ಆದರೂ ಬದುಕುಳಿಯಲಿಲ್ಲ. ಇನ್ನು ಆಕೆ ಉತ್ತರ ಪ್ರದೇಶದಲ್ಲಿ ಹಲ್ಲೆಗೊಳಗಾಗಿರುವುದು ಸಂಪೂರ್ಣ ಸುಳ್ಳು ಸುದ್ದಿ ಎಂದಿದ್ದಾರೆ.
भ्रामक सूचना न फैलाएं !
समाचार स्रोतों (https://t.co/9eq33NpFyK …) से विदित है कि वंदना तिवारी जी की घटना का सम्बन्ध मध्य प्रदेश से है , उत्तर प्रदेश में इनसे जुडी ऐसी कोई घटना नहीं हुई है|@agrapolice : सूचनार्थ एवं आवश्यक कार्यवाही हेतु|#UPPAgainstFakeNews https://t.co/Z5C6jum6bs— UPPOLICE FACT CHECK (@UPPViralCheck) April 9, 2020
ಯುಪಿ ಪೊಲೀಸರ ಅಧಿಕೃತ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಸಹ ಟ್ವೀಟ್ ಮಾಡಿ, ವಂದನಾ ತಿವಾರಿ ಅವರ ಸಾವಿಗೆ ಉತ್ತರ ಪ್ರದೇಶದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಧ್ಯಪ್ರದೇಶ ಸರ್ಕಾರದ ಪಿಆರ್ ಇಲಾಖೆಯು ವಂದನಾ ತಿವಾರಿ ಸಾವಿನ ಬಗ್ಗೆ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಕಚೇರಿ ಶಿವಪುರಿ ನೀಡಿದ ಹೇಳಿಕೆಯನ್ನು ಟ್ವೀಟ್ ಮಾಡಿದೆ. ವೈರಲ್ ಪೋಸ್ಟ್‌ಗಳಲ್ಲಿ ಹೇಳಿರುವಂತೆ ಕಲ್ಲು ತೂರಾಟದ ಘಟನೆಯ ಬಗ್ಗೆ ಹೇಳಿಕೆಯಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ.
ಇದು ಭಾರತೀಯ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಪ್ಪು ಮಾಹಿತಿ ಹರಡುತ್ತಿರುವ ಇತ್ತೀಚಿನ ಉದಾಹರಣೆಯಾಗಿದೆ.


