ಭೂಮಿಗಾಗಿ ಮಾಡುವ ಹೋರಾಟ ಮೂಲಭೂತ ಹೋರಾಟವಾಗಿದ್ದು, ಹೋರಾಟವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಹಲವು ದಶಕಗಳ ಹೋರಾಟದ ಕಾರಣಕ್ಕೆ ಅಲ್ಪ ಸ್ವಲ್ಪ ಭೂಮಿ ಗೇಣಿದಾರರಿಗೆ ಭೂಮಿ ದಕ್ಕಿತು. ಆದರೆ ಕೃಷಿ ಕೂಲಿಕಾರರಿಗೆ ಭೂಮಿ ಇನ್ನೂ ದಕ್ಕಿಲ್ಲ ಎಂದು ಹೋರಾಟಗಾರ ಸಿರಿಮನೆ ನಾಗರಾಜ್ ಅವರು ಹೇಳಿದರು. ನಿವೇಶನಕ್ಕೂ ಭೂಮಿಯಿಲ್ಲ
ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ-ಕರ್ನಾಟಕ’ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಬಗರ್‌ಹುಕುಂ ಸಾಗುವಳಿ ಹಾಗೂ ರೈತರ ಭೂಮಿ ಹಕ್ಕು’ ಎಂಬ ವಿಚಾರದಲ್ಲಿ ಮಾತನಾಡಿದ ಅವರು, ದಲಿತರು, ಕೃಷಿ ಕೂಲಿ ಕಾರ್ಮಿಕರು ಭೂಮಿ ಕೇಳಿದರೆ ಸಾಗುವಳಿಗೆ ಮಾತ್ರವಲ್ಲ, ನಿವೇಶನಕ್ಕೂ ಭೂಮಿಯಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಾವು ಹತ್ತು ಲಕ್ಷ ಎಕರೆ ಭೂಮಿಯನ್ನು ನಾವು ತೋರಿಸುತ್ತೇವೆ ಎಂದು ಹೇಳಿದರು. ನಿವೇಶನಕ್ಕೂ ಭೂಮಿಯಿಲ್ಲ
ಸಾಗುವಳಿ ಮತ್ತು ಮನೆ ನಿವೇಶನಕ್ಕೂ ಭೂಮಿ ಕೇಳುವುದನ್ನು ಜನರು ಮರೆತಿದ್ದರು. ಆದರೆ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಅವರು ಜನರನ್ನು ಒಗ್ಗೂಡಿಸಿ ಹೋರಾಟವನ್ನು ಕೈಗೆತ್ತಿಕೊಂಡರು. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಈಗ ರಾಜ್ಯದಾದ್ಯಂತ 169 ಭೂ ಮಂಜೂರಾತಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಬಗರ್.ಹುಕುಂ ಸಾಗುವಳಿಯ ಸುಮಾರು 3 ಲಕ್ಷ ಭೂಮಿ ಮಂಜೂರು ಆಗುವ ಸಾಧ್ಯತೆ ಇದೆ. ಆದರೆ ಕಾರ್ಪೊರೇಟ್‌ಗಳು ಈ ಭೂಮಿಗೂ ಬಾಯಿ ತೆರೆದು ಕೂತಿದೆ. ಎಲ್ಲಾ ರೈತರಿಗೂ ಸರ್ಕಾರ ಭೂಮಿ ಮಂಜೂರು ಮಾಡಬೇಕು. ಯಾರನ್ನು ಭೂ ರಹಿತರನ್ನಾಗಿ ಮಾಡಬಾರದು. ಯಾವುದೇ ಭೂಮಿಯಿದ್ದರೂ ಅದನ್ನು ಮಂಜುರಾತಿ ಮಾಡಬೇಕು ಎಂದು ಅವರು ಆಗ್ರಹಿದರು.
ದಲಿತರು ಮತ್ತು ಕೃಷಿ ಕೂಲಿ ಕಾರ್ಮಿಕರು ಭೂಮಿಯನ್ನು ಕಾರ್ಪೋರೇಟ್ ಶಾರ್ಕ್‌ಗಳ ಬಾಯಿಗೆ ಸಿಗದಂತೆ ಈ ಡಿಸೆಂಬರ್ ಒಳಗೆ ಎಲ್ಲರಿಗೂ ಭೂಮಿ ಸಿಗುವಂತೆ ಮಾಡಬೇಕು. ಇಲ್ಲವೆಂದರೆ ನಮ್ಮ ಮೇಲೆ ಚಪ್ಪಡಿ ಕಲ್ಲು ಎಳೆದುಬಿಡುತ್ತಾರೆ. ಎಲ್ಲಾ ಸಂಘಟನೆಗಳು ಸೇರಿ ಜನರನ್ನು ಸಂಘಟಿಸಿ ಹೋರಾಟ ಮಾಡಬೇಕಿದೆ. ಇದು ಸಾಧ್ಯವಾದರೆ ನಮ್ಮ ಹೋರಾಟಕ್ಕೆ ಬಲ ಬರಲಿದೆ ಎಂದು ಅವರು ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್
ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್

