Homeನಿಜವೋ ಸುಳ್ಳೋFact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

Fact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

- Advertisement -
- Advertisement -

ಏಪ್ರಿಲ್ 14 ರಂದು, ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಭಾರಿ ಸಂಖ್ಯೆಯಲ್ಲಿ ವಲಸಿಗರು ಜಮಾಯಿಸಿದ್ದರು. ತಮ್ಮ ಊರಿಗೆ ತೆರಳಲು ಸೇರಿದ್ದ ಆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದ ಸುದ್ದಿ ಮಾಧ್ಯಮಗಳಲ್ಲಿ ದಿನವಿಡೀ ಪ್ರಸಾರವಾಯಿತು.

ಮುಂಬೈನ ಬಾಂದ್ರದಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಬಂದಾಗ ಪೊಲೀಸರು ಲಾಠ ಪ್ರಹಾರ ನಡೆಸಿದ್ದಾರೆ. ಮೂರು ವಾರ ಲಾಕ್ ಡೌನ್ ಸಹಿಸಿದ ಅವರು ಮತ್ತೆ 19 ದಿನ ಸಾಧ್ಯವಿಲ್ಲವೆಂದು ಊರಿಗೆ ತೆರಳಲು ಮುಂದಾಗಿದ್ದರು.

Posted by Naanu Gauri on Tuesday, April 14, 2020

ಈ ಕುರಿತು ವದಂತಿ ಹಬ್ಬಿಸಿ ಜನರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮರಾಠಿ ಸುದ್ದಿ ಚಾನೆಲ್ ಎಬಿಪಿ ಮಜಾ ವರದಿಗಾರ ರಾಹುಲ್ ಕುಲಕರ್ಣಿ ಸೇರಿದಂತೆ ಇತರ 11 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ವಲಸಿಗರನ್ನು ಮನೆಗೆ ಹಿಂದಿರುಗಿಸಲು ವಿಶೇಷ ರೈಲುಗಳು ಇದೆ ಎಂದು ಈ ವರದಿಗಾರರು ಸುದ್ದಿ ಪ್ರಸಾರ ಮಾಡಿದ್ದರು. ಆದರೆ ಎಬಿಪಿ ಚಾನೆಲ್ ತಮ್ಮ ವರದಿಗಾರನನ್ನು ಸಮರ್ಥಿಸಿಕೊಂಡಿದೆ. ಪತ್ರಕರ್ತನನ್ನು ಬಂಧಿಸುವ ಮೊದಲು ಸತ್ಯ ಮತ್ತು ಸನ್ನಿವೇಶಗಳ ಸರಿಯಾದ ಪರಿಶೀಲನೆ ಇರಬೇಕು ಎಂದು ಹೇಳಿಕೊಂಡಿದೆ. ನಂತರ ಮುಂಬೈನ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು.

ಎಬಿಪಿ ಗ್ರೂಪ್‌ನ ಹಿಂದಿ ಚಾನೆಲ್ ಆದ ಎಬಿಪಿ ನ್ಯೂಸ್ ಸಹ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಿಲ್ದಾಣದ ಹೊರಗೆ ಹೇಗೆ ಸೇರಿದರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಇದನ್ನ “ಪಿತೂರಿ” ಎಂದು ಕರೆದು ಘಟನೆಗೆ ಧಾರ್ಮಿಕ ಕಾರಣವಿದೆಯೆಂದು ಸೂಚಿಸಿತು.

ಕೆಳಗಿನ ವೀಡಿಯೊದಲ್ಲಿ, ನಿರೂಪಕಿ ಶೋಭನಾ ಯಾದವ್, “ಎಬಿಪಿ ನ್ಯೂಸ್ ಇದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ? ಎಂಬುವುದು ದೊಡ್ಡ ಪ್ರಶ್ನೆ. ಮುಸ್ಲಿಂ ನಾಯಕರು ಭಾಷಣ ಮಾಡುವ ಮೂಲಕ ಜನರನ್ನು ಕೆರಳಿಸಿ ಜನಸಮೂಹವನ್ನು ಒಟ್ಟುಗೂಡಿಸಿದ್ದಾರೆಯೇ? ಈ ಜನಸಮೂಹ ನೆರೆಯಲು ಜಮಾ ಮಸೀದಿ ಕಾರಣವೇ? ಮಸೀದಿಯಿಂದ ಸಾವಿರಾರು ಜನರನ್ನು ಒಟ್ಟುಗೂಡಿಸಲಾಗಿದೆ. ಈ ಜನಸಮೂಹವನ್ನು ವಾಟ್ಸಾಪ್ ಸಂದೇಶ ಅಥವಾ ಫೋನ್ ಕರೆಯೊಂದಿಗೆ ಒಟ್ಟುಗೂಡಿಸಲಾಗಿದೆಯೇ? ಮುಂಬೈ ಪೊಲೀಸರು ಏಕೆ ನಿದ್ದೆ ಮಾಡುತ್ತಿದ್ದರು? ಅವರ ಬುದ್ಧಿಮತ್ತೆ ಏನು ಮಾಡಿದೆ? ” ಎಂದು ಹೇಳುತ್ತಿದ್ದಾರೆ.

ಎಬಿಪಿ ನ್ಯೂಸ್ ಎತ್ತಿದ ಐದು ಪ್ರಶ್ನೆಗಳು ಹೀಗಿವೆ:

ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ?
ಮುಸ್ಲಿಂ ನಾಯಕರು ನೀಡಿದ ಭಾಷಣವು ಜನರನ್ನು ಒಟ್ಟುಗೂಡಿಸಲು ಪ್ರೇರೇಪಿಸಿತೆ?
ಈ ಜನಸಮೂಹಕ್ಕೆ ಜಮಾ ಮಸೀದಿ ಕಾರಣವೇ?
ಈ ಗುಂಪನ್ನು ವಾಟ್ಸಾಪ್ ಅಥವಾ ಫೋನ್ ಕರೆಗಳ ಮೂಲಕ ಕಳುಹಿಸಿದ ಸಂದೇಶಗಳೊಂದಿಗೆ ಒಟ್ಟುಗೂಡಿಸಲಾಗಿದೆಯೇ?
ಮುಂಬೈ ಪೊಲೀಸರು ಮಲಗಿದ್ದಾರೆಯೇ?
ಪ್ರಸಾರದ ಸಮಯದಲ್ಲಿ ಪರದೆಯಲ್ಲಿ ಮುಖ್ಯವಾಗಿ “ಜನ ಗುಂಪುಗೂಡಲು ಜಮಾ ಮಸೀದಿ ಜವಾಬ್ದಾರಿ?” ಎಂದು ಓಡುತ್ತಿತ್ತು.

ಶೋಭನಾ ಯಾದವ್ ವಿಡಿಯೋದಲ್ಲಿ ಮುಂದುವರೆದು ಚಾನೆಲ್ ವರದಿಗಾರರಾದ ಅಜಯ್ ದುಬೆಗೆ , “ಅಜಯ್ ದುಬೆ, ಎಬಿಪಿ ನ್ಯೂಸ್ ದೊಡ್ಡ ಪ್ರಶ್ನೆಗಳನ್ನು ಎತ್ತುತ್ತಿದೆ. ನಿಮ್ಮ ಮಾಹಿತಿ ಏನು ಹೇಳುತ್ತಿದೆ, ಮಸೀದಿಯ ಜನರು ಇಲ್ಲಿಗೆ ಸೇರಲು ಅವರನ್ನು ಪ್ರಚೋದಿಸಿದ್ದಾರೆಯೇ? ” ಎಂದು ಕೇಳಿದ್ದಾರೆ.

ಆದರೆ ವರದಿಗಾರ ಪ್ರಶ್ನೆಯನ್ನು ತಪ್ಪಿಸಿ, “ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಾರೆ. ಮುಖ್ಯವಾಗಿ ಈಗಾಗಲೇ ಪೊಲೀಸರು ಜನಸಮೂಹವನ್ನು ಚದುರಿಸಿದ್ದಾರೆ. ಆದಾಗ್ಯೂ, ಯಾವುದೇ ಯೋಜನೆ ಇಲ್ಲದೆ ಜನಸಮೂಹವು ಸ್ಥಳದಲ್ಲಿ ನೆರೆದಿದೆ ಎಂದು ನಂಬುವುದು ಕಷ್ಟ” ಎಂದು ದುಬೆ ಹೇಳಿದರು. ಪ್ರಸಾರದ ಈ ಸಮಯದಲ್ಲೂ, ಮಸೀದಿಯ ಬಳಿ ಜನಸಮೂಹ ಜಮಾಯಿಸಿದ್ದ ‘ಪಾಯಿಂಟ್’ ಅನ್ನು ಚಾನೆಲ್ ಎತ್ತಿ ತೋರಿಸುತ್ತಲೇ ಇತ್ತು.

ಎಬಿಪಿ ನ್ಯೂಸ್ v/s ಎಬಿಪಿ ನಿರೂಪಕಿ ರುಬಿಕಾ ಲಿಯಾಕತ್

ನಂತರದ ದಿನಗಳಲ್ಲಿ, ಎಬಿಪಿ ನ್ಯೂಸ್ ಪತ್ರಕರ್ತೆ ರುಬಿಕಾ ಲಿಯಾಕತ್ ಎಬಿಪಿ ನ್ಯೂಸ್‌ನ ಅಧಿಕೃತ ಫೇಸ್‌ಬುಕ್ ಪುಟದಿಂದ ಫೇಸ್‌ಬುಕ್ ಲೈವ್ ಮಾಡಿ, ಮುಸ್ಲಿಂ ಸಮುದಾಯದ ಜನರು ನಿಲ್ದಾಣದಲ್ಲಿ ಜಮಾಯಿಸಿದ್ದಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ ಪ್ರಕಾರ, “ಮುಸ್ಲಿಂ ಜನರು ಅಲ್ಲಿ ಒಟ್ಟುಗೂಡಿದ್ದರು ಎಂದು ಹೇಳುತ್ತಿರುವ ಜನರು ಸುಳ್ಳುಗಾರರು ಎಂಬುದನ್ನು ನಾನು ಅದನ್ನು ನಿಮಗೆ ಸ್ಪಷ್ಟಪಡಿಸುತ್ತೇನೆ. ಇದು ಮಸೀದಿಯವರು ಸೇರಿಸಿದ ಜನರ ಗುಂಪು ಅಲ್ಲ ಎಂದು ಸ್ಪಷ್ಟ ಪಡಿಸುತ್ತೇನೆ. ಇದು ನಿಜವಾಗಿಯು ಮುಂದೆ ಏನು ಮಾಡಬೇಕೆಂದು ತಿಳಿಯದೆ ತೊಂದರೆಗೀಡಾದ ವಲಸಿಗರ ಸಮಸ್ಯೆಯಾಗಿದೆ. ” ಎಂದು ಹೇಳಿದ್ದಾರೆ.

Bandra की भीड़ किसने जुटायी? साज़िश या लापरवाही? Live session with Rubika

Posted by ABP News on Tuesday, April 14, 2020

ಫ್ಯಾಕ್ಟ್-ಚೆಕ್‌

ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ “ಭೂಮ್ ಲೈವ್” ಪೊಲೀಸರನ್ನು ಸಂಪರ್ಕಿಸಿದೆ. ವಲಸಿಗ ಕಾರ್ಮಿಕರು ಈ ರೀತಿಯಾಗಿ ಸೇರಿರುವುದಕ್ಕೆ ಯಾವುದೇ ಕೋಮು ದೃಷ್ಟಿಕೋನ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಅಲ್ಲಿಗೆ ವಲಸೆ ಕಾರ್ಮಿಕರು ಬಾಂದ್ರಾ ನಿಲ್ದಾಣದಲ್ಲಿ ಸೇರುವುದಕ್ಕೆ ಯಾವುದೇ ಮುಸ್ಲಿಮರು ಅಥವಾ ಮಸೀದಿ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ ಎಬಿಪಿ ನ್ಯೂಸ್‌ ಸೇರಿದಂತೆ ಹಲವು ಟಿವಿ ಚಾನೆಲ್‌ಗಳು ವಲಸೆ ಕಾರ್ಮಿಕರಿಗೆ ವಿಶೇಷ ರೈಲುವ್ಯವಸ್ಥೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರಿಂದ ಜನರು ಒಟ್ಟುಗೂಡಿದ್ದಾರೆ ಎಂಬು ತಿಳಿದುಬಂದಿದೆ.

ಇಡೀ ಘಟನೆಯ ಬಗ್ಗೆ ಎಬಿಪಿ ನ್ಯೂಸ್‌ನ ಎರಡು ವೀಡಿಯೊಗಳೆ ಚಾನೆಲ್‌ನಲ್ಲಿ ಇರುವ ದ್ವಂದ್ವವನ್ನು ತೋರಿಸುತ್ತದೆ. ಘಟನೆಯನ್ನು ಕೋಮು ದೃಷ್ಟಿಕೋನ ನೀಡುವುದರೊಂದಿಗೆ, ಮಸೀದಿಯ ವಿರುದ್ಧ “ದೊಡ್ಡ ಪ್ರಶ್ನೆಗಳನ್ನು” ಹುಟ್ಟುಹಾಕಿ ಕಡೆಗೆ ಅದನ್ನು ವದಂತಿಗಳೆಂದು ಸಂಪೂರ್ಣವಾಗಿ ತಳ್ಳಿಹಾಕುವವರೆಗೆ ಎಲ್ಲಾ ಪಾತ್ರವನ್ನು ತಾನೇ ನಿರ್ವಹಿಸುತ್ತದೆ. ಎಬಿಪಿ ಮಜಾ ವಿರುದ್ಧ ವದಂತಿಗಳ ಆರೋಪಗಳು ತನಿಖೆಯ ವಿಷಯವಾಗಿದ್ದರೂ, ಎಬಿಪಿ ಗ್ರೂಪ್‌ನ ಹಿಂದಿ ಚಾನೆಲ್ ಎಬಿಪಿ ನ್ಯೂಸ್ ಕೋಮು ಆಧಾರಿತ ನಿರೂಪಣೆಯನ್ನು ನೀಡಿದ್ದಕ್ಕಾಗಿ ಹಾಗೂ ಘಟನೆಗೆ ಅಲ್ಪಸಂಖ್ಯಾತ ಸಮುದಾಯ ಕಾರಣವೆಂದು ದೂಷಿಸಿದ್ದಕ್ಕಾಗಿ ಖಂಡಿತವಾಗಿಯೂ ಶಿಕ್ಷಿಸಬೇಕಾಗಿದೆ.

ಮಾರ್ಚ್ ನಲ್ಲಿ ದೆಹಲಿಯ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರಿಗೆ COVID-19 ಇರುವುದು ಪತ್ತೆಯಾದ ನಂತರ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು, ಕೊರೊನಾ ವೈರಸ್ ಹರಡುವಿಕೆಯನ್ನು ಕೋಮುವಾದೀಕರಣಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಸಭೆಯನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವುದರಿಂದ, ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕಾಗಿ ಚಾನೆಲ್‌ಗಳು ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಗುರಿಯಾಗಿರಿಸಿಕೊಂಡಿರುವುದು ಮಾತ್ರವಲ್ಲದೆ ಹಲವಾರು ಸುಳ್ಳು ಸುದ್ದಿಯನ್ನು ಹರಡಿದೆ.


ಇದನ್ನೂ ಓದಿ: ಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದು ನಿಜವೇ? ಈ ನಕ್ಷೆ ಯಾವಾಗಿನದು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...