ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಎನ್‌ಡಿಎ ಮೈತ್ರಿಕೂಟ ಪಕ್ಷವಾದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ(RLP)ದ ಸಂಸದ ಹನುಮಾನ್ ಬೆನಿವಾಲ್ ಬೆಂಬಲಿಸಿದ್ದಾರೆ.
ಟ್ವಿಟ್ಟರ್ ಮೂಲಕ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದರು. ಅಲ್ಲದೆ ಸುದ್ದಿ ಸಂಸ್ಥೆ ಎಎನ್‌ಐ ವರದಿಯಂತೆ, “ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಗೆ ನಾನು ಸಂದೇಶ ಕಳುಹಿಸಿದ್ದೇನೆ. ಆಂದೋಲನ ದೇಶದಾದ್ಯಂತ ಹರಡುತ್ತಿದೆ. ಅಗತ್ಯವಿದ್ದಲ್ಲಿ ರೈತರಿಗಾಗಿ ನಾನು ಎನ್‌ಡಿಎ ಮತ್ತು ಸಂಸದ ಸ್ಥಾನವನ್ನು ಕೂಡಾ ತೊರೆಯಲು ಸಿದ್ದನಿದ್ದೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
I had sent HM & PM a message on Twitter that they should listen to farmers. If agitation isn't looked into in time, it'll spread across the country. I'm ready to leave NDA & MP post, if needed, for the respect of farmers: Hanuman Beniwal, RLP leader & MP from Nagaur#Rajasthan pic.twitter.com/rEvqd8xVJC
— ANI (@ANI) December 11, 2020
ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವು, ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದು, ಜಾಥಾಕ್ಕೆ ಸ್ವತಃ ಹನುಮಾನ್ ಬೆನಿವಾಲ್ ನೇತೃತ್ವ ನೀಡಿದ್ದಾರೆ.
ಕಳೆದ 17 ದಿನಗಳಿಂದ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಆಂದೋಲನ ನಡೆಸುತ್ತಿರುವ ರೈತರು ಡಿಸೆಂಬರ್ 14 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಡಿಸೆಂಬರ್ 12 ರೊಳಗೆ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ಗಿಫ್ಟ್ ಬದಲು ಹೋರಾಟ ನಿರತ ರೈತರಿಗಾಗಿ ದೇಣಿಗೆ ಸಂಗ್ರಹಿಸಿದ ಕುಟುಂಬ!


