ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೀಡಿದ್ದ ಕರೆಗೆ ಇಂದೂ ಕೂಡಾ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.
“ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸದೆ ರಾಜ್ಯ ಸರ್ಕಾರ ನಿಧಾನ ವಿಷವುಣಿಸಿ ಕೊಲ್ಲುತ್ತಿದೆ. ನಾವು ಒಟ್ಟಾಗಿ ನಿಂತು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಿದೆ. ನಾಳೆ ಸಂಜೆ 5 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿರುವ ಟ್ವಿಟರ್ ಅಭಿಯಾನದಲ್ಲಿ ಈ ಕುರಿತು ಮಾತನಾಡೋಣ. ಸರ್ಕಾರವನ್ನು ಎಚ್ಚರಿಸೋಣ” ಎಂದು ಡಿಸೆಂಬರ್ 17 ರಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಟಿ.ಎ. ಟ್ವಿಟ್ಟರ್ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಈ ಅಭಿಯಾನ ಇಂದೂ ಕೂಡಾ ಮುಂದುವರೆದಿದೆ.
ಇದನ್ನೂ ಓದಿ: ಹಿಂದುತ್ವದ ಬೀಜಗಳನ್ನು ತೊರೆದು ಬಹುತ್ವದ ಕನ್ನಡ ರಾಷ್ಟ್ರೀಯತೆ ಕಟ್ಟುವ ಸವಾಲುಗಳು
ಅಭಿಯಾನಲ್ಲಿ ಭಾಗವಹಿಸಿದವರಿಗೆ ನಿನ್ನೆ ಕೃತಜ್ಞತೆಗಳನ್ನು ತಿಳಿಸಿರುವ ಕರವೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು,”ಕರವೇ ನಿಯೋಗದೊಂದಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇನೆ. ಸರ್ಕಾರ ಕನ್ನಡ ವಿವಿಗೆ ಅಗತ್ಯ ಅನುದಾನ ನೀಡದಿದ್ದರೆ ಬೀದಿಹೋರಾಟ ಅನಿವಾರ್ಯ” ಎಂದು ಹೇಳಿದ್ದರು.
#ಕನ್ನಡವಿವಿಉಳಿಸಿ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಕನ್ನಡದ ಮನಸುಗಳಿಗೆ ಕೃತಜ್ಞತೆಗಳು. ನಾಳೆ ಕರವೇ ನಿಯೋಗದೊಂದಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇನೆ. ಸರ್ಕಾರ ಕನ್ನಡ ವಿವಿಗೆ ಅಗತ್ಯ ಅನುದಾನ ನೀಡದಿದ್ದರೆ ಬೀದಿಹೋರಾಟ ಅನಿವಾರ್ಯ.
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) December 18, 2020
ಹಂಪಿ ವಿಶ್ವವಿದ್ಯಾಲಯದ ಪರವಾಗಿ ಧ್ವನಿ ಎತ್ತಿರುವ ಸಿದ್ದರಾಮಯ್ಯ, “ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಅನುದಾನ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗದ ಪರಿಸ್ಥಿತಿಗೆ ತಲುಪಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಅನುದಾನ ನೀಡಿ, ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಬೇಕು” ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಅನುದಾನ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗದ ಪರಿಸ್ಥಿತಿಗೆ ತಲುಪಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಅನುದಾನ ನೀಡಿ, ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಬೇಕು ಎಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/biP4TX3RbN
— Siddaramaiah (@siddaramaiah) December 19, 2020
ಇದನ್ನೂ ಓದಿ: ಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು
ಜಯನಗರ ಶಾಸಕಿ ಸೌಮ್ಯ ರೆಡ್ಡಿ ಕೂಡಾ ಟ್ವಿಟ್ಟರ್ ಅಭಿಯಾನಕ್ಕೆ ತಮ್ಮ ಬೆಂಬಲ ನೀಡಿದ್ದು, “ಹಂಪಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ವಿದ್ವತ್ ಲೋಕದ ಸಂಕೇತ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಚಂದ್ರಶೇಖರ್ ಕಂಬಾರ, ದಿವಂಗತ ಎಂ.ಎಂ ಕಲಬುರ್ಗಿ ಮುಂತಾದ ಹಿರಿಯ ವಿದ್ವಾಂಸರು ಕಟ್ಟಿದ ಹೆಮ್ಮೆಯ ವಿದ್ಯಾ ಕೇಂದ್ರವದು. ಕನ್ನಡ ನಾಡು-ನುಡಿ, ಜಾನಪದ ಸಂಸ್ಕೃತಿಗಳ ಕುರಿತು ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ತಾಯಿಯಾದ ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತ ಮಾಡಿರುವುದು ನಿಜಕ್ಕೂ ಖಂಡನೀಯ. ಈ ಕೂಡಲೇ ಸರ್ಕಾರ ವಿಶ್ವವಿದ್ಯಾಲಯಕ್ಕೆ ನೀಡಬೇಕಿರುವ ಅನುದಾನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಕನ್ನಡ ನಾಡು-ನುಡಿ, ಜಾನಪದ ಸಂಸ್ಕೃತಿಗಳ ಕುರಿತು ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ತಾಯಿಯಾದ ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತ ಮಾಡಿರುವುದು ನಿಜಕ್ಕೂ ಖಂಡನೀಯ.
ಈ ಕೂಡಲೇ ಸರ್ಕಾರ ವಿಶ್ವವಿದ್ಯಾಲಯಕ್ಕೆ ನೀಡಬೇಕಿರುವ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇನೆ.#ಕನ್ನಡವಿವಿಉಳಿಸಿ 1/2 pic.twitter.com/N1pyUImsPw
— Sowmya Reddy | ಸೌಮ್ಯ ರೆಡ್ಡಿ (@Sowmyareddyr) December 18, 2020
ಇಂದು ಕರ್ನಾಟಕ ರಕ್ಷಣಾ ವೇದಿಕೆ ನಿಯೋಗವು ರಾಜ್ಯಾಧ್ಯಕ್ಷರಾದ ನಾರಾಯಣಗೌಡ್ರು ಟಿ.ಎ. ಅವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ಭೇಟಿ ಮಾಡಿ ಅಭಿಯಾನದ ಹಕ್ಕೊತ್ತಾಯವನ್ನು ಸಲ್ಲಿಸಿತು.
ಇದನ್ನೂ ಓದಿ: ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಬೆಂಬಲಿಸಿ #ಕನ್ನಡವಿವಿಉಳಿಸಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್
ರಾಜಕಾರಣಿಗಳು ಸ್ಥಾನಕ್ಕಾಗಿ ವಿಧಾನಸಭೆಯಲ್ಲಿ ಹೋರಾಡಲು ಸಿದ್ಧ, ಆದರೆ ಅವರು ನಮ್ಮ ಸಮಸ್ಯೆಗಳ ಬಗ್ಗೆ ಕನಿಷ್ಠ ಕಾಳಜಿ ವಹಿಸಲು ಅಸಿದ್ಧ. ಈ ಅಸೆಂಬ್ಲಿ ಹೋರಾಟವನ್ನು ನೋಡಿದರೆ ನನ್ನ ಶಾಲಾ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾವು ಮಾನ್ಯ ಕಾರಣಕ್ಕಾಗಿ ಜಗಳವಾಡುತಿದ್ದೆವು ಎಂದು ನಾನು ಭಾವಿಸುತ್ತೇನೆ. #ಕನ್ನಡವಿವಿಉಳಿಸಿ #ಕನ್ನಡ_ಕಾಯಕ
— ಕನ್ನಡ ಕುವರ (@kannada1957) December 19, 2020
ಇವತ್ತು ಕನ್ನಡ ವಿವಿ ಮುಚ್ತಾರೆ
ನಾಳೆ ಕನ್ನಡ ಶಾಲೆ ಮುಚ್ತಾರೆ…
ನಾಳಿದ್ದು ಕನ್ನಡ ಭಾಷೆಯನ್ನೆ ಮುಚ್ತಾರೆ…#ಕನ್ನಡವಿವಿಉಳಿಸಿ— ನಿರುಪದ್ರವಿ (@nerupadravi) December 19, 2020
ಸಂಸ್ಕತ ವಿಶ್ವವಿದ್ಯಾಲಯಕ್ಕೆ ನೂರಾರು ಕೋಟಿ ನೀಡುವ ಕಾರಣಕ್ಕೇನಾದರೂ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತ ಮಾಡಲಾಗಿದೆಯೇ? ಬಿಜೆಪಿ ಸರಕಾರವೇ ಉತ್ತರಿಸಬೇಕಿದೆ.#ಕನ್ನಡವಿವಿಉಳಿಸಿ
— Yogananda M (@Yoganan40197997) December 19, 2020
ಇದನ್ನೂ ಓದಿ:ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ


