Homeಕರೋನಾ ತಲ್ಲಣಅನ್‌ಲಾಕ್‌-4 ರಲ್ಲಿ ಕೇಂದ್ರದಿಂದ ಮೆಟ್ರೋ ಸೇವೆಗೆ ಅನುಮತಿ ಸಾಧ್ಯತೆ; ಅಂತಿಮ ನಿರ್ಧಾರ ರಾಜ್ಯ ಸರ್ಕಾರಗಳದ್ದು

ಅನ್‌ಲಾಕ್‌-4 ರಲ್ಲಿ ಕೇಂದ್ರದಿಂದ ಮೆಟ್ರೋ ಸೇವೆಗೆ ಅನುಮತಿ ಸಾಧ್ಯತೆ; ಅಂತಿಮ ನಿರ್ಧಾರ ರಾಜ್ಯ ಸರ್ಕಾರಗಳದ್ದು

ಶಾಲಾ ಕಾಲೇಜುಗಳು ಮತ್ತು ಸಿನೆಮಾ ಹಾಲ್‌ಗಳಂತಹ ಜನದಟ್ಟಣೆಯ ಸ್ಥಳಗಳಲ್ಲಿ ನಿರ್ಬಂಧಗಳು ಇನ್ನೂ ಉಳಿಯಲಿದೆ.

- Advertisement -
- Advertisement -

ಕೊರೊನಾ ವೈರಸ್ ಸಂಬಂಧಿತ ನಿರ್ಬಂಧಗಳಿಂದ ದೇಶವನ್ನು ಅನ್ಲಾಕ್ ಮಾಡುವ ನಾಲ್ಕನೇ ಹಂತ (ಅನ್‌ಲಾಕ್‌-4) ದಲ್ಲಿ ಮೆಟ್ರೊ ರೈಲು ಸೇವೆಗಳನ್ನು ಮುಂದಿನ ತಿಂಗಳು ಜಾರಿಗೆ ತರಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ ಇದರ ಅಂತಿಮ ನಿರ್ಧಾರ ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಮೂಲಗಳು ತಿಳಿಸಿದೆ.

ಆದರೆ ಶಾಲಾ ಕಾಲೇಜುಗಳು ಇನ್ನೂ ಮುಚ್ಚಿರುತ್ತದೆ ಮತ್ತು ಸಿನೆಮಾ ಹಾಲ್‌ಗಳಂತಹ ಜನದಟ್ಟಣೆಯ ಸ್ಥಳಗಳಲ್ಲಿ ನಿರ್ಬಂಧಗಳು ಇನ್ನೂ ಉಳಿಯಲಿದೆ. ವ್ಯಾಪಕವಾದ ನಿರ್ಬಂಧಗಳೊಂದಿಗೆ ದೆಹಲಿ ಮೆಟ್ರೋ ಸೆಪ್ಟೆಂಬರ್ 1 ರಿಂದ ತನ್ನ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ದೆಹಲಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸಿದೆ ಎಂದು ಪ್ರತಿಪಾದಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯ ನಂತರ ದೆಹಲಿ ಮೆಟ್ರೋ ಸೇವೆಯನ್ನು ಒದಗಿಸುವ ಬಗೆಗಿನ ತೀರ್ಮಾನಕ್ಕೆ ವೇಗ ಬಂದಿದೆ ಎನ್ನಲಾಗಿದೆ.

“ದೆಹಲಿಯನ್ನು ವಿಭಿನ್ನವಾಗಿ ಪರಿಗಣಿಸಬೇಕು ಎಂದು ನಾನು ಕೇಂದ್ರವನ್ನು ವಿನಂತಿಸಿದ್ದೇನೆ” ಎಂದು ಕೇಜ್ರಿವಾಲ್ ಅವರು ನಿನ್ನೆ ವ್ಯಾಪಾರಿಗಳು ಮತ್ತು ಉದ್ಯಮಿಗಳೊಂದಿಗೆ ನಡೆಸಿದ ಆನ್‌ಲೈನ್ ಸಭೆಯಲ್ಲಿ ಹೇಳಿದರು.

“ದೆಹಲಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸುತ್ತಿದೆ. ಅವರು ಇತರ ನಗರಗಳಲ್ಲಿ ಮೆಟ್ರೋ ರೈಲುಗಳನ್ನು ಓಡಿಸಲು ಬಯಸದಿದ್ದರೆ, ಅದು ಹಾಗೇ ಇರಲಿ. ಆದರೆ, ದೆಹಲಿಯಲ್ಲಿ, ಮೆಟ್ರೊ ರೈಲು ಸೇವೆಗಳನ್ನು ಹಂತಹಂತವಾಗಿ, ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಬೇಕು” ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ನಿಂದ ಆರ್ಥಿಕ ಸಮಸ್ಯೆ: ಹೈಕೋರ್ಟ್ ಮುಂದೆ ತರಕಾರಿ ಮಾರಿದ ವಕೀಲ!

ಜುಲೈ 30 ರಂದು ಬಂದ ಅನ್ಲಾಕ್ 3 ಮಾರ್ಗಸೂಚಿಗಳು ರಾತ್ರಿ ಕರ್ಫ್ಯೂ ಕೊನೆಗೊಳಿಸಿ, ಕೊರೊನಾ ಕಂಟೈನ್‌ಮೆಂಟ್ ವಲಯಗಳಲ್ಲಿಲ್ಲದ ಯೋಗ ಮತ್ತು ಜಿಮ್ ಸಂಸ್ಥೆಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟವು. ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಉದ್ಯಾನವನಗಳು ಅಥವಾ ಸಿನೆಮಾ ಸಭಾಂಗಣಗಳು ಸೇರಿದಂತೆ ಎಲ್ಲಾ ರೀತಿಯ ದೊಡ್ಡ ಕೂಟಗಳ ಮೇಲೆ ಇನ್ನೂ ನಿರ್ಬಂಧಗಳು ಜಾರಿಯಲ್ಲಿವೆ.

ಆಗಸ್ಟ್ 8 ರಿಂದ ಭಾರತವು ಕೊರೊನಾ ವೈರಸ್ ಅಂಕಿಅಂಶಗಳಲ್ಲಿ ವಿಶ್ವದ ಅತಿ ಹೆಚ್ಚು ದೈನಂದಿನ ಏರಿಕೆಯನ್ನು ದಾಖಲಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಸತತವಾಗಿ ಈ ಸಂಖ್ಯೆ 70,000 ಕ್ಕೆ ಹತ್ತಿರದಲ್ಲಿದೆ.

ಇಂದು ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯಂತೆ 61,408 ಪ್ರಕರಣಗಳು ವರದಿಯಾಗಿರುವುದರಿಂದ ಇಂದು ಪ್ರಕರಣವು ತುಸು ಇಳಿಮುಕವಾಗಿದೆ. ದೇಶವು ಈಗಾಗಲೇ 31 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಸಾವಿನ ಸಂಖ್ಯೆ 57,542 ಕ್ಕೆ ಏರಿದೆ.


ಓದಿ: ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...