Homeಕರೋನಾ ತಲ್ಲಣಲಾಕ್‌ಡೌನ್‌ನಿಂದ ಆರ್ಥಿಕ ಸಮಸ್ಯೆ: ಹೈಕೋರ್ಟ್ ಮುಂದೆ ತರಕಾರಿ ಮಾರಿದ ವಕೀಲ!

ಲಾಕ್‌ಡೌನ್‌ನಿಂದ ಆರ್ಥಿಕ ಸಮಸ್ಯೆ: ಹೈಕೋರ್ಟ್ ಮುಂದೆ ತರಕಾರಿ ಮಾರಿದ ವಕೀಲ!

ನ್ಯಾಯಾಲಯಗಳು ಸ್ಥಗಿತಗೊಂಡಿದ್ದರಿಂದ, ತುರ್ತು ವಿಷಯಗಳಿಗೆ ಮಾತ್ರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನಗರದ ಹಲವು ವಕೀಲರಿಗೆ ಮೂರು ತಿಂಗಳಿನಿಂದ ಯಾವುದೇ ಕೆಲಸವಿಲ್ಲ.

- Advertisement -
- Advertisement -

ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಗತ್ಯವಿರುವ ವಕೀಲರಿಗೆ ಹಣಕಾಸಿನ ನೆರವು ನೀಡುವಲ್ಲಿ ರಾಜ್ಯ ಬಾರ್ ಕೌನ್ಸಿಲ್ ವಿಳಂಬ ಮಾಡಿರುವುದನ್ನು ವಿರೋಧಿಸಿ ಹಲವಾರು ವಕೀಲರು ಒರಿಸ್ಸಾ ಹೈಕೋರ್ಟ್‌ನ ಹೊರಗೆ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಕಾರಿಗಳನ್ನು ಮಾರಾಟ ಮಾಡಿದ ಸಪನ್ ಕುಮಾರ್ ಪಾಲ್, “ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳು ಸ್ಥಗಿತಗೊಂಡಿದ್ದರಿಂದ, ತುರ್ತು ವಿಷಯಗಳಿಗೆ ಮಾತ್ರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ನಗರದ ಹಲವು ವಕೀಲರಿಗೆ ಮೂರು ತಿಂಗಳಿನಿಂದ ಯಾವುದೇ ಕೆಲಸವಿಲ್ಲ. ಆದರೆ ಕೌನ್ಸಿಲ್ ಇನ್ನೂ ನಮಗೆ  ಹಣಕಾಸಿನ ನೆರವು ನೀಡಿಲ್ಲ. ಹಾಗಾಗಿ ಮುಂದೆ ನಾವು ಈಗ ತರಕಾರಿಗಳನ್ನು ಮಾರಾಟ ಮಾಡಬೇಕಾಗಬಹುದು ಎಂದು ತೋರುತ್ತಿದೆ” ಎಂದು ಹೇಳಿದ್ದಾರೆ.

ಏಪ್ರಿಲ್ 5 ರಂದು, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಒಡಿಶಾ, ಸ್ಟೇಟ್ ಬಾರ್ ಕೌನ್ಸಿಲ್ ತುರ್ತು ಹಣಕಾಸು ನೆರವು ನಿಯಮಗಳು-2020ನ್ನು ಅಂಗೀಕರಿಸಿತು. ಇದರ ಅಡಿಯಲ್ಲಿ, ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಹಣಕಾಸಿನ ನೆರವು ಅಗತ್ಯವಿರುವ ವಕೀಲರಿಗೆ ಕಾರ್ಯವಿಧಾನಕ್ಕೆ ಅನುಗುಣವಾಗಿ ರೂ.10,000 ನೀಡಲಾಗುತ್ತದೆ ಎಂದು ನಿಯಮಗಳಲ್ಲಿ ಸೂಚಿಸಲಾಗಿದೆ.

ಈ ಕುರಿತು ಕೌನ್ಸಿಲ್ ಮೇ 10 ರವರೆಗೆ ರಾಜ್ಯದಾದ್ಯಂತ ವಿವಿಧ ಬಾರ್ ಅಸೋಸಿಯೇಷನ್‌ಗಳ ವಕೀಲರಿಂದ ಸಹಾಯ ಬೇಕಿದ್ದವರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು.

ಇದುವರೆಗೆ 15,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆರ್ಥಿಕ ನೆರವು ಬಯಸುವ ಅರ್ಹ ವಕೀಲರ ಪಟ್ಟಿಯನ್ನು ಸಿದ್ಧಪಡಿಸುವ ಪರಿಶೀಲನೆ ನಡೆಯುತ್ತಿದೆ ಎಂದು ರಾಜ್ಯ ಬಾರ್ ಕೌನ್ಸಿಲ್ ಮೂಲಗಳು ತಿಳಿಸಿವೆ.

ಈ ಉದ್ದೇಶಕ್ಕಾಗಿ ಒಡಿಶಾ ರಾಜ್ಯ ಬಾರ್ ಕೌನ್ಸಿಲ್, ವಕೀಲರ ‘ವೆಲ್ಫೇರ್ ಕಾರ್ಪಸ್ ನಿಧಿ’ಯನ್ನು ರಚಿಸಲಾಗಿತ್ತು. ಕಳೆದ 15 ವರ್ಷಗಳಿಂದ ಇಲ್ಲಿಯವರೆಗೆ, ಹೆಚ್ಚು ಅನುಭವ ಹೊಂದಿರುವ ವಕೀಲರಿಗೆ ಈ ನಿಧಿಯಿಂದ 32 ಲಕ್ಷ ರೂ.ಗಳನ್ನು ನೀಡಲಾಗಿದೆ.


ಇದನ್ನೂ ಓದಿ: ವಿಕಾಸ್ ದುಬೆ ಸಹಚರರ ಹತ್ಯೆ: ಸಿಬಿಐ ತನಿಖೆಗೆ ಸುಪ್ರೀಂನಲ್ಲಿ ಪಿಐಎಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...