Homeಮುಖಪುಟವಿಕಾಸ್ ದುಬೆ ಸಹಚರರ ಹತ್ಯೆ: ಸಿಬಿಐ ತನಿಖೆಗೆ ಸುಪ್ರೀಂನಲ್ಲಿ ಪಿಐಎಲ್

ವಿಕಾಸ್ ದುಬೆ ಸಹಚರರ ಹತ್ಯೆ: ಸಿಬಿಐ ತನಿಖೆಗೆ ಸುಪ್ರೀಂನಲ್ಲಿ ಪಿಐಎಲ್

- Advertisement -
- Advertisement -

ಉತ್ತರ ಪ್ರದೇಶ ಪೊಲೀಸರು ವಿಕಾಸ್ ದುಬೆಯ ಐವರು ಸಹಚರರನ್ನು ಹತ್ಯೆಗೈದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಎಲ್ಲಾ ಐದು ಜನರನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ವಿಕಾಸ್ ದುಬೆಯನ್ನು ಸಹ ಎನ್‌ಕೌಂಟರ್‌ ಹೆಸರಿನಲ್ಲಿ ಕೊಲ್ಲಬಹುದು ಎಂದು ಅರ್ಜಿ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ ದುಬೆಗೆ ಕಾನೂನಿನ ಪ್ರಕಾರ ವ್ಯವಹರಿಸುವಂತೆ ಸಾಕಷ್ಟು ಭದ್ರತೆ ನೀಡಬೇಕು ಎಂದು ಅರ್ಜಿದಾರ ಘೈನ್ಶ್ಯಾಮ್ ಉಪಾಧ್ಯಾಯ ಪ್ರಾರ್ಥಿಸಿದರು. ಆದರೆ ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಯುಪಿ ಪೊಲೀಸರು ಕಾನ್ಪುರದ ಬಳಿಯಲ್ಲಿ ವಿಕಾಸ್‌ ದುಬೆಯನ್ನು ಎನ್‌ಕೌಂಟರ್‌ ಹೆಸರಿನಲ್ಲಿ ಹೈತ್ಯೆಗೈದಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್ ವಿಕಾಸ್ ದುಬೆಯನ್ನು ಹತ್ಯೆಗೈದ ಯುಪಿ ಪೊಲೀಸ್!

“ಎನ್ಕೌಂಟರ್ ಹೆಸರಿನಲ್ಲಿ ಪೊಲೀಸರು ಆರೋಪಿಯನ್ನು ಕೊಲ್ಲುವುದು ಕಾನೂನಿನ ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ. ಇದು ದೇಶದ ತಾಲೀಬಾನೀಕರಣಕ್ಕಿಂತ ಕಡಿಮೆಯಿಲ್ಲ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಜುಲೈ 3 ರಂದು ದುಬೆ ಮತ್ತವನ ಸಹಚರರು ಕಾನ್ಪುರ ಬಳಿಯ ಬಿಕ್ರು ಗ್ರಾಮದಲ್ಲಿ ಎಂಟು ಮಂದಿ ಪೊಲೀಸರನ್ನು ಅಮಾನವೀಯವಾಗಿ ಹತ್ಯೆಗೈದಿದ್ದರು. ಆನಂತರ ಅವರ ಹುಡುಕಾಟ ಆರಂಭವಾಯಿತು. ಅದೇ ದಿನ ದುಬೆಯ ಇಬ್ಬರು ಸಹಚರರಾದ ಪ್ರೇಮ್ ಪ್ರಕಾಶ್ ಪಾಂಡೆ ಮತ್ತು ಅತುಲ್ ದುಬೆಯನ್ನು ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ. ಜುಲೈ 8 ರಂದು ಪೊಲೀಸರು ಇನ್ನೊಬ್ಬ ಸಹಚರ ಅಮರ್ ದುಬೆಯನ್ನು ಹಮೀರ್ಪುರ್ ಜಿಲ್ಲೆಯ ಮೌಡಾ ಗ್ರಾಮದಲ್ಲಿ ಕೊಂದರು.

ಜುಲೈ 9 ರಂದು, ಕಾನ್ಪುರ್ ಹೊಂಚುದಾಳಿಗೆ ಸಂಬಂಧಿಸಿದಂತೆ ದರೋಡೆಕೋರ ವಿಕಾಸ್ ದುಬೆಯ ಇಬ್ಬರು ಸಹಚರರಾದ ಪ್ರಭಾತ್ ಮಿಶ್ರಾ ಮತ್ತು ಪ್ರವೀಣ್ ಅಲಿಯಾಸ್ ಬೌವಾ ದುಬೆಯನ್ನು ಕಾನ್ಪುರ್ ಮತ್ತು ಎಟಾವಾ ಜಿಲ್ಲೆಗಳಲ್ಲಿ ಪ್ರತ್ಯೇಕ ಎನ್ಕೌಂಟರ್‌ಗಳಲ್ಲಿ ಕೊಲ್ಲಲಾಯಿತು.


ಇದನ್ನೂ ಓದಿ: ಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...