Homeಮುಖಪುಟವಿಕಾಸ್ ದುಬೆ ಹತ್ಯೆ: ಉತ್ತರ ಪ್ರದೇಶ ಪೊಲೀಸರ ತೀವ್ರ ವೈಫಲ್ಯಕ್ಕೆ ಸಾಕ್ಷಿ...

ವಿಕಾಸ್ ದುಬೆ ಹತ್ಯೆ: ಉತ್ತರ ಪ್ರದೇಶ ಪೊಲೀಸರ ತೀವ್ರ ವೈಫಲ್ಯಕ್ಕೆ ಸಾಕ್ಷಿ…

- Advertisement -
- Advertisement -

ಜುಲೈ 3 ರಂದು ಕಾನ್ಪುರದಲ್ಲಿ ದರೋಡೆಕೋರ ವಿಕಾಸ್ ದುಬೆಯನ್ನು ಬಂಧಿಸುವ ಪ್ರಯತ್ನದಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಕೊಲ್ಲಲ್ಪಟ್ಟ ನಂತರ ಅಪರಾಧಿಯನ್ನು ಜೀವಂತವಾಗಿ ಹಿಡಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಪೊಲೀಸರು ಕಾನೂನು ಪಾಲಿಸುತ್ತಾರೆ ಎಂಬುದರ ಬಗ್ಗೆ ಸ್ವಲ್ಪ ನಂಬಿಕೆಯಿತ್ತು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ದುಬೆಯನ್ನು ಗುರುವಾರ ಬಂಧಿಸಿದಾಗ ಅದು ಅಚ್ಚರಿಯ ಸಂಗತಿಯಾಗಿತ್ತು.

ರಾಜಕೀಯ ಸಂಪರ್ಕ ಹೊಂದಿದ ದುಬೆಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಗೆ ಒಪ್ಪಿಸಿದ ಕೂಡಲೇ ಆತನನ್ನು ಹತ್ಯೆಗೈಯ್ಯಲಾಗಿದೆ.

ಆತನನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ಯುವ ವಾಹನವೊಂದು ಅಪಘಾತ ಸಂಭವಿಸಿದಾಗ ಆತ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ. ಹಾಗಾಗಿ ಆತನನ್ನು”ಎನ್ಕೌಂಟರ್” ಮಾಡಲಾಯಿತು ಎಂಬ ಪೊಲೀಸರ ಹೇಳಿಕೆಯನ್ನು ಯಾರು ನಂಬಲಾರರು.

ಒಮ್ಮೆ ದುಬೆ ಪೊಲೀಸರ ವಶದಲ್ಲಿದ್ದಾಗ ಅವರ ಕೆಲಸವೆಂದರೆ, ಆತನ ವಿರುದ್ಧ ಪ್ರಕರಣ ದಾಖಲಾಗಿರುವ ಅಪರಾಧಗಳ ಸುದೀರ್ಘ ಪಟ್ಟಿಯಲ್ಲಿ ಸೂಕ್ತ ವಿಚಾರನೆ ನಡೆಸಿ ನ್ಯಾಯಾಲಯದಲ್ಲಿ ಅವನನ್ನು ಹೊಣೆಗಾರರನ್ನಾಗಿ ಮಾಡುವುದು. ಅವನೊಂದಿಗೆ ಸಂಬಂಧ ಹೊಂದಿದ ವ್ಯಕ್ತಿಗಳನ್ನು ಬಂಧಿಸುವುದು ಮತ್ತು ವಿಚಾರಣೆ ನಡೆಸುವುದು. ಎಲ್ಲರಿಗೂ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ಇಷ್ಟು ಮಾಡಿದರೆ ಯುಪಿ ಪೊಲೀಸರಿಗೆ ಗೌರವ ಸಲ್ಲುತ್ತಿತ್ತು.

ಬದಲಾಗಿ, ಅವನನ್ನು ಉಜ್ಜಯಿನಿಯಿಂದ ಕಾನ್ಪುರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸುವ ಸರಳ ಕೆಲಸವನ್ನು ನಿರ್ವಹಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಈ ಲೆಕ್ಕದಲ್ಲಿ ಉತ್ತರ ಪ್ರೆದೇಶ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ದುಬೆಯೊಂದಿಗೆ ಸಂಬಂಧ ಹೊಂದಿದ್ದ ರಾಜಕಾರಣಿಗಳು ಮತ್ತು ಪೊಲೀಸ್ ಪಡೆಗಳನ್ನು ಒಳಗೊಂಡ ವಿವಿಧ ದುಷ್ಟಗುಂಪುಗಳನ್ನು ಬಹಿರಂಗಪಡಿಸುವ ರೀತಿಯಲ್ಲಿ ದುಬೆಯನ್ನು ವಿಚಾರಣೆಗೆ ಒಳಪಡಿಸುವ ಅವಕಾಶವನ್ನು ಪೊಲೀಸರು ತನಿಖಾಧಿಕಾರಿಗಳಿಗೆ ಮತ್ತು ನ್ಯಾಯಾಲಯಗಳಿಗೆ ನೀಡಿಲ್ಲ. ಆ ಅವಕಾಶವನ್ನು ಕಿತ್ತುಕೊಳ್ಳುವ ಮೂಲಕ ಅಪರಾಧದಲ್ಲಿ ತಾವೂ ಭಾಗಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ದುಬೆಯನ್ನು ಕೊಂದರು. ಸಾಮಾನ್ಯ ಜನರು ಇದೇ ಸರಿಯಾದ ಮಾರ್ಗ ಎಂದೂ ಸಹ ಭಾವಿಸಬಹುದು. ಈ ರೀತಿಯ ನ್ಯಾಯಾಂಗಬಾಹಿರ ಹತ್ಯೆಗಳು ಭಾರತದಲ್ಲಿ ಹೊಸದೇನಲ್ಲ. ಇದನ್ನು ಅನೇಕ ಜನರು ಹುರಿದುಂಬಿಸುತ್ತಾರೆ ಮತ್ತು ಚಲನಚಿತ್ರಗಳಲ್ಲಿ ವೈಭವೀಕರಿಸುತ್ತಾರೆ. ಆದರೆ ಅಂತಹ ಕ್ರಮಗಳು ನಮ್ಮನ್ನು ಸುರಕ್ಷಿತವಾಗಿರಿಸುತ್ತವೆಯೇ? ನಮಗೆ ನಿಜವಾದ ನ್ಯಾಯವನ್ನು ನೀಡುತ್ತವೆಯೇ?

ನ್ಯಾಯಾಂಗದ ಮೇಲಿನ ನಂಬಿಕೆಯಿಲ್ಲದ್ದರಿಂದ ಜನರು ಈ ಫೇಕ್ ಎನ್‌ಕೌಂಟರ್‌ಗಳನ್ನು ಬೆಂಬಲಿಸುತ್ತೇವೆ. ಏಕೆಂದರೆ ನ್ಯಾಯಾಲಯಗಳು ಸಮಯೋಚಿತ ನ್ಯಾಯವನ್ನು ನೀಡುವುದಿಲ್ಲ ಎಂದು ಹಲವರು ನಂಬುತ್ತಾರೆ. ಅಲ್ಲದೆ ಪೊಲೀಸರಿಗೆ ಅನಿಯಂತ್ರಿತ ಅಧಿಕಾರ ನೀಡುವುದನ್ನು ಪ್ರೋತ್ಸಾಹಿಸುತ್ತಾರೆ. ಪೊಲೀಸ್ ಸಿಬ್ಬಂದಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಕಳೆದ ಹದಿನೈದು ದಿನಗಳಲ್ಲಿ ನಡೆದ ತಮಿಳುನಾಡಿ ಲಾಕಪ್ ಡೆತ್ ಮತ್ತು ಉತ್ತರಪ್ರದೇಶದ ಈ ಘಟನೆಗಳೆ ಸಾಕ್ಷಿ.

ಮಾಜಿ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಎನ್‌.ಸಿ.ಅಸ್ತಾನಾ ಅವರು “ಉತ್ತರ ಪ್ರದೇಶ ಪೊಲೀಸರು ನ್ಯಾಯಾಂಗದ ಹೊರತಾದ ಹತ್ಯೆಗಳಿಗೆ ಹೆಚ್ಚು ಪ್ರಯತ್ನಿಸುತ್ತಾರೆ. ಇದರಿಂದ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಅವರದು. ಆದರೆ ವಾಸ್ತವದಲ್ಲಿ ಅದು ಹೆಚ್ಚು ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ದುಬೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದಿದ್ದೆ ಕಣ್ಣೆದುರಿಗಿನ ಸಾಕ್ಷಿ’ ಎಂದು ವಿವರಿಸುತ್ತಾರೆ.

“ದುಬೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಕೊಲ್ಲಲು ಕಾರಣವೇನೆಂದರೆ ಅವರು ತನ್ನನು ಬಂಧಿಸುತ್ತಾರೆ ಎಂಬುದಲ್ಲ. ಬದಲಿಗೆ ಎನ್‌ಕೌಂಟರ್ ಹೆಸರಿನಲ್ಲಿ ನನ್ನನ್ನು ಕೊಲ್ಲುತ್ತಾರೆ ಎಂದು ಆತ ಪ್ರಾಮಾಣಿಕವಾಗಿ ನಂಬಿದ್ದ. ಯುಪಿಯಲ್ಲಿ ನಡೆದ ಹಲವು ಎನ್‌ಕೌಂಟರ್‌ಗಳು ಅವನಿಗೆ ಆ ನಂಬಿಕೆ ಬರುವಂತೆ ಮಾಡಿದ್ದವು. ಹಾಗಾಗಿಯೇ ಆತ ಜುಲೈ 3 ರಂದು ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ್ದ. ಪೊಲೀಸರು ಹೇಗೆ ಎನ್‌ಕೌಂಟರ್ ಮಾಡುತ್ತಾರೆ ಅದಕ್ಕೆ ಆತನ ಕೌಂಟರ್ ಮಾಡಿದ್ದ”.

ಒಟ್ಟಿನಲ್ಲಿ ಈ ಪ್ರಕರಣ ಶಾಂತಿ ಸುವ್ಯವಸ್ಥೇ ಕಾಯ್ದುಕೊಳ್ಳಲು ಉತ್ತರ ಪ್ರದೇಶ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ಅದಕ್ಕೆ ರಾಜಕೀಯ ಪಕ್ಷಗಳ, ಆಳುವವರ ಹಸ್ತಕ್ಷೇಪವೂ ಕಾರಣ ಎಂಬುದನ್ನು ಸಾರಿ ಹೇಳುತ್ತದೆ. ಜನರು ಎಲ್ಲಿಯವರೆಗೆ ಈ ಅನೈತಿಕ ರಾಜಕಾರಣವನ್ನು ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗು ಈ ರೀತಿಯ ಪ್ರಕರಣಗಳು ಸಹ ನಿಲ್ಲುವುದಿಲ್ಲ.


ಇದನ್ನೂ ಓದಿ; ಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...