Homeಅಂತರಾಷ್ಟ್ರೀಯಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಕೈದಿಗಳು ಪೋಲಿಸ್ ಆತಿಥ್ಯದಲ್ಲಿ ತಾವು ಮಾಡದೇ ಇದ್ದ ತಪ್ಪನ್ನೂ ಸಹ ತಮ್ಮದೇ ಎಂದು ಕೆಲವೊಮ್ಮೆ ಒಪ್ಪಿಕೊಳ್ಳುವುದು ಏಕೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ಒಂದು ವೈಜ್ಞಾನಿಕ ಉತ್ತರ, ನಾನು ಹೇಳುತ್ತಿರುವುದು ಓರ್ವ ವಿಕಸಿತ ದೇಶದ ಪೋಲಿಸ್ ಕಾರ್ಯ ವೈಖರಿಯನ್ನು ಆಧರಿಸಿದ ವಿಚಾರವಾದ. (ಡಿಸ್ಕ್ಲೇಮರ್: ಇದು ನಮ್ಮ ದೇಶದ ಪೋಲಿಸ್ ಬಗ್ಗೆ ಅಲ್ಲ, ಏಕೆಂದರೆ ಅವರ ತನಿಖಾ/ವಿಚಾರಣಾ ವೈಖರಿಯ ಬಗ್ಗೆ ನನಗೆ ಯಾವ ವೈಯುಕ್ತಿಕ ಅನುಭವವೂ ಇಲ್ಲ). ಇದು ಒಂದು ಆಟದ ರೀತಿಯಲ್ಲಿರುವ ತತ್ವವಾದ. ಇದನ್ನು “ದಿ ಪ್ರಿಸನರ್ಸ್ ಡೈಲೆಮ್ಮಾ” (ಕೈದಿಗಳ ಉಭಯ ಸಂಕಟ) ಎನ್ನುತ್ತಾರೆ.

ಒಂದು ದಿನ, ಏಕ ಕಾಲಕ್ಕೆ, ನಗರದ ಪೋಲಿಸರು ಇಬ್ಬರು ಅಪರಾಧಿಗಳನ್ನು, ಒಂದೇ ರೀತಿಯ ಅಪರಾಧಕ್ಕೆ ಬಂಧಿಸಿ, ಒಂದೇ ಲಾಕಪ್ಪಿನ ಬೇರೆ ಬೇರೆ ಕೋಣೆಯಲ್ಲಿ ಹಾಕುತ್ತಾರೆ. ಒಬ್ಬನ ಹೆಸರು “ಎ”, ಇನ್ನೊಬ್ಬನ ಹೆಸರು “ಬಿ” ಎಂದು ಇಟ್ಟುಕೊಳ್ಳೋಣ. ಇಬ್ಬರಿಗೂ ಪರಸ್ಪರ ಯಾವ ರೀತಿಯ ಪರಿಚಯವೂ ಇಲ್ಲ, ಹೆಸರಾಗಲೀ ಗೊತ್ತಿಲ್ಲ, ಕೇಳಿಲ್ಲ, ಸಂಬಂಧವಾಗಲೀ, ಸಂಪರ್ಕವಾಗಲೀ, ಅನುಕಂಪವಾಗಲೀ ಇಲ್ಲ. ಇಬ್ಬರಿಗೂ ಅವರು ಮಾಡಿ ಸಿಕ್ಕಿಬಿದ್ದ ಅಪರಾಧಕ್ಕೆ ಸಿಗಬಹುದಾದ ಶಿಕ್ಷೆಯೂ ಒಂದೇ ಪ್ರಮಾಣದ್ದಾಗಿರುತ್ತದೆ. ವಿಚಾರಣಗೆ ಬಂದ ತನಿಖಾಧಿಕಾರಿ ಇಬ್ಬರ ದಾಖಲೆಯನ್ನು ನೋಡಿ ಇಬ್ಬರಿಗೂ ಒಂದು ವರ್ಷ ಕಾರಾಗೃಹವಾಸ ಖಚಿತ ಎಂದುಕೊಳ್ಳುತ್ತಾನೆ. ಆದರೆ ಏನೋ ಅನುಮಾನ ಬಂದು, ಇವರಿಬ್ಬರೂ ಸೇರಿ ಇನ್ಯಾವುದೋ ದೊಡ್ಡ ಅಪರಾಧ ಏಕೆ ಎಸಗಿರಬಾರದು ಎಂದು ಯೋಚಿಸುತ್ತಾನೆ.

ಅದೇ ಲಹರಿಯಲ್ಲಿ ತನ್ನ ತನಿಖೆ ಮುಂದುವರೆಸುತ್ತಾ, ಮೊದಲು “ಎ” ಜೊತೆ ಮಾತನಾಡುತ್ತಾ “ನೋಡು, ಇಂದು ನೀನು ಸಿಕ್ಕಿಬಿದ್ದ ಅಪರಾಧಕ್ಕೆ ನಿನಗೆ ಒಂದು ವರ್ಷ ಜೈಲು ಶಿಕ್ಷೆ ಖಚಿತ ಆದರೆ ಹೋದ ವಾರ ನೀನು ಮತ್ತು ನಿನ್ನ ಸಂಗಡಿಗ ಮಾಡಿದ ಜಂಟಿ ಅಪರಾಧಕ್ಕೂ ಸೇರಿ, ಒಟ್ಟು ಮೂರು ವರ್ಷ ಜೈಲಾಗುತ್ತದೆ. ನಿನ್ನ ಸ್ನೇಹಿತನೂ ನಮ್ಮ ಕೈಗೆ ಸಿಕ್ಕಿದ್ದಾನೆ. ನೀವಿಬ್ಬರೂ ಅಪರಾಧ ಒಪ್ಪಿಕೊಂಡಲ್ಲಿ ಇಬ್ಬರಿಗೂ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗದಂತೆ ನಾನು ಭರವಸೆ ಕೊಡುತ್ತೇನೆ. ಒಂದು ಪಕ್ಷ ನೀವಿಬ್ಬರೂ ನಿರಾಕರಿಸಿದರೆ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಆಗುತ್ತದೆ, ಆದರೆ ನೀನು ನಮ್ಮೊಂದಿಗೆ ಸಹಕರಿಸಿ, ಅಪರಾಧ ಒಪ್ಪಿಕೊಂಡು, ನಿನ್ನ ಸಂಗಡಿಗ ಒಪ್ಪಿಕೊಳ್ಳದಿದ್ದರೆ ನಿನಗೆ ಕೇವಲ ಒಂದು ವರ್ಷ ಜೈಲು ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಆದರೆ ಅಂತಹ ಪರಿಸ್ಥಿತಿಯಲ್ಲಿ ನಿನ್ನ ಸಂಗಡಿಗನಿಗೆ ಹತ್ತು ವರ್ಷ ಜೈಲು ಗ್ಯಾರಂಟಿ. ಅದೇ ರೀತಿ ನಿನ್ನ ಸಂಗಡಿಗ ನಮ್ಮೊಂದಿಗೆ ಸಹಕರಿಸಿ, ತಪ್ಪೊಪ್ಪಿಕೊಂಡು, ನೀನು ನಿರಾಕರಿಸಿದಲ್ಲಿ, ನಿನಗೆ ಹತ್ತು ವರ್ಷ, ನಿನ್ನ ಸಂಗಡಿಗ ಒಂದು ವರ್ಷದಲ್ಲಿ ಜೈಲಿನಿಂದ ಹೊರಹೋಗುತ್ತಾನೆ, ಸರಿಯಾಗಿ ಯೋಚಿಸಿ ನೋಡು” ಎಂದು ಹೇಳಿ ಹೊರ ಹೋಗುತ್ತಾನೆ.

ಇದೇ ವರಸೆಯನ್ನು ಆತ “ಬಿ” ಕೈದಿಗೂ ವಿವರಿಸುತ್ತಾನೆ. ಇಬ್ಬರೂ ಮಾಡಿರುವುದು ಕೇವಲ ಒಂದು ವರ್ಷ ಶಿಕ್ಷೆ ಆಗಬಹುದಾದ ಅಪರಾಧ. ಇಬ್ಬರೂ ಸೇರಿ ಯಾವ ಜಂಟೀ ಅಪರಾಧವನ್ನು ಮಾಡಿರುವುದಿಲ್ಲ. ಒಬ್ಬನಿಗೆ ಇನ್ನೋರ್ವ ಹೇಗೆ ಪ್ರತಿಕ್ರಿಯೆ ನೀಡುತ್ತಾನೆಂಬುದು ತಿಳಿದಿಲ್ಲ. ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಅವರ ತಪ್ಪಿಗೆ ಆಗಬೇಕಾದ ಶಿಕ್ಷೆ ಒಂದು ವರ್ಷ. ಈಗ ನೀವೇ ಹೇಳಿ ಅವರಿಗೆ ಅವರ ತಪ್ಪೊಪ್ಪಿಗೆ/ನಿರಾಕರಣೆಯ ಆಧಾರದ ಮೇಲೆ ಎಷ್ಟು ಶಿಕ್ಷೆ ಆಗುತ್ತದೆ? ಇಬ್ಬರೂ ಕೈದಿಗಳು ತಾವು ಮಾಡದೇ ಇದ್ದ ತಪ್ಪು ಒಪ್ಪಿಕೊಳ್ಳಬೇಕೋ ಬೇಡವೋ? ಇದೇ “ಪ್ರಿಸನರ್ಸ್ ಡೈಲೆಮ್ಮಾ” – ಕೈದಿಗಳ ಉಭಯ ಸಂಕಟ.

ಈ ಆಟವನ್ನು “ದಿ ಗೇಮ್ ಥಿಯರಿ” ಎಂದೂ ಕರೆಯುತ್ತಾರೆ. ಇದನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ಕಂಪನಿಯ ರಣನೀತಿ ತಂಡದವರು (Strategy Team) ನಿಯಮಿತವಾಗಿ ಉಪಯೋಗಿಸುತ್ತಾರೆ. ಇದು ಮನಶಾಸ್ತ್ರ, ಮಾನವ ನಡತೆ ಆಧರಿಸಿದ ಅರ್ಥಶಾಸ್ತ್ರ (ಬೆಹೇವಿಯರಲ್ ಎಕನಾಮಿಕ್ಸ್) ಮತ್ತು ಗಣಿತಶಾಸ್ತ್ರವನ್ನು ಆಧರಿಸಿರುತ್ತದೆ. ಇದನ್ನು 1950ರಲ್ಲಿ ಮೂಲರೂಪದಲ್ಲಿ ಸೃಷ್ಟಿಸಿದವರು ಅಮೇರಿಕದ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಸಂಸ್ಥೆಯ ಮೆರ್ರಿಲ್ ಫ್ಲಡ್ ಮತ್ತು ಮೆಲ್ವಿನ್ ಡ್ರೆಶರ್. ನಂತರ ಇದನ್ನು ಜೈಲು ಶಿಕ್ಷೆಯ ಆಟದ ಸ್ವರೂಪದಲ್ಲಿ ನಿರ್ಮಿಸಿದವರು ಆಲ್ಬರ್ಟ್ ಟಕರ್ ಎಂಬುವಾತ. ಇದರ ಉದ್ದೇಶ ಸಂಪೂರ್ಣ ಬುದ್ಧಿ ಸ್ಥಿಮಿತವುಳ್ಳ, ತಮ್ಮ ಸ್ವಹಿತವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ಇಬ್ಬರು ವ್ಯಕ್ತಿಗಳು ಏಕೆ ಸರಿಯಾದ ನಿರ್ಣಯಕ್ಕೆ ಬರಲಾಗುವುದಿಲ್ಲ ಎಂಬುದನ್ನು ಸಿದ್ಧಗೊಳಿಸುತ್ತದೆ.

ಎ ಮತ್ತು ಬಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿರುವ ಗಣಿತಶಾಸ್ತ್ರ ಆಧಾರದ ಲಾಭ-ನಷ್ಟದ ಕೋಷ್ಟಕ ನೋಡೋಣ. ಇದನ್ನು payoff matrix ಎಂದು ಕರೆಯುತ್ತಾರೆ.

ಮೊದಲೇ ತಿಳಿಸಿದಂತೆ ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಕೈದಿಗಳ ತಪ್ಪಿಗೆ ಆಗಬೇಕಾಗಿರುವ ಶಿಕ್ಷೆ ಕೇವಲ ಒಂದು ವರ್ಷ (ಆಯ್ಕೆ-4). ಕೈದಿಗಳು ಪರಸ್ಪರ ಮಾತನಾಡಿಕೊಳ್ಳಲು ಸಾಧ್ಯವಾಗಿದ್ದಲ್ಲಿ ಇಬ್ಬರೂ ತಾವು ಇನ್ಯಾವ ಅಪರಾಧವನ್ನೂ ಮಾಡಿಲ್ಲ ಎಂದು ಆಪಾದನೆಯನ್ನು ನಿರಾಕರಿಸಿ ತಮ್ಮ ಆಯ್ಕೆ-4 ಎನ್ನುತ್ತಿದ್ದರು. ಆದರೆ ಪರಸ್ಪರ ಸಂಪರ್ಕವಿಲ್ಲದೆ ಇರುವುದರಿಂದ, ಇನ್ನೊಬ್ಬ ಯಾವ ರೀತಿ ಹೇಳಿಕೆ ನೀಡುತ್ತಾನೆಂದು ತಿಳಿಯದೆ, ಕೇವಲ ತನ್ನ ಹಿತ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಬ್ಬರೂ ಸಹಕರಿಸುತ್ತಾರೆ (ಆಯ್ಕೆ-1) ಅಂದರೆ ಇಬ್ಬರಿಗೂ 3 ವರ್ಷ ಶಿಕ್ಷೆಯಾಗುತ್ತದೆ, ಆಶ್ಚರ್ಯವಲ್ಲವೇ?

ಹೇಗೆಂದು ನೋಡೋಣ: ಇಬ್ಬರಿಗೂ ಇರುವ ಆಯ್ಕೆಗಳು ಎರಡು – ಸಹಕರಿಸುವುದು ಅಥವಾ ನಿರಾಕರಿಸುವುದು. ಎ ವತಿಯಿಂದ ಯೋಚಿಸುವುದಾದರೆ – ಆತ ಸಹಕರಿಸಲು ನಿರ್ಧರಿಸಿದಲ್ಲಿ ಬಿ ಸಹಕರಿಸಬಹುದು ಅಥವಾ ನಿರಾಕರಿಸಬಹುದು. ಅಕಸ್ಮಾತ್ ಬಿ ಸಹಕರಿಸಿದ್ದೇ ಆದಲ್ಲಿ ಇಬ್ಬರ ಆಯ್ಕೆಯೂ 1 ಆಗುತ್ತದೆ. ಬಿ ನಿರಾಕರಿಸಿದಲ್ಲಿ ಎ ಆಯ್ಕೆ-2 ಆಗುತ್ತದೆ ಮತ್ತು ಇದರಿಂದ ಎ ಗೆ ಹೆಚ್ಚಿನ ಲಾಭ,ಕೇವಲ 1 ವರ್ಷ ಶಿಕ್ಷೆ ಇದ್ದು, ಬಿ ಗೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಎ ನಿರಾಕರಿಸಲು ನಿರ್ಧರಿಸಿದಲ್ಲಿ, ಬಿ ಏನಾದರೂ ಸಹಕರಿಸಲು ಮುಂದಾದರೆ ಎ ಗೆ ಹೆಚ್ಚಿನ ನಷ್ಟ (10 ವರ್ಷ) ಮತ್ತು ಬಿ ಒಂದು ವರ್ಷದಲ್ಲಿ ಮುಕ್ತನಾಗುವ ಸಾಧ್ಯತೆ ಇದೆ (ಆಯ್ಕೆ 3). ಬಿ ಕೂಡ ನಿರಾಕರಿಸಬಹುದು, ಆಗ ಇಬ್ಬರಿಗೂ (ಆಯ್ಕೆ 4) ಒಂದು ವರ್ಷದ ಶಿಕ್ಷೆಯೇನೋ ಸಿಗುತ್ತದೆ ಆದರೆ ಬಿ ಖಂಡಿತ ಹಾಗೆಯೇ ಮಾಡುತ್ತಾನೆಂಬ ಖಾತ್ರಿ ಇಲ್ಲವಾಗಿ, ಎಲ್ಲಿ ಆಯ್ಕೆ-2ರಿಂದ ಆಯ್ಕೆ-3ಕ್ಕೆ ತಿರುಗಬಹುದೋ ಎಂಬ ಆತಂಕದಿಂದ ಆತ ಆಯ್ಕೆ-1ಕ್ಕೆ ಮನಸ್ಸು ಮಾಡುತ್ತಾನೆ. ಅದೇ ರೀತಿ ಬಿ ವತಿಯಿಂದ ಯೋಚಿಸಿದಾಗಲೂ ತಾನು ನಿರಾಕರಿಸುವುದರಿಂದ ಎಲ್ಲಿ ಆಯ್ಕೆ-4 ರ ಬದಲಾಗಿ ತನ್ನ ಆಯ್ಕೆ-2ಕ್ಕೆ ತಿರುಗುತ್ತದೋ ಎಂಬ ಹೆದರಿಕೆಯಿಂದ  ಆತನೂ ಆಯ್ಕೆ-1ಕ್ಕೆ ಮುಂದಾಗುತ್ತಾನೆ.

ಇದರಲ್ಲಿ ಆಯ್ಕೆ-4 ಎಲ್ಲರ ಹಿತದೃಷ್ಟಿಯಿಂದಲೂ ಸಮಂಜಸವಾಗಿದ್ದರೂ ಸಹ ಅದು ಕ್ಷಣಿಕ ಮತ್ತು ಅಸ್ಥಾಯಿ, ಏಕೆಂದರೆ ಇನ್ನೊಬ್ಬ ತನ್ನ ನಿರ್ಧಾರ ಬದಲಾಯಿಸಿದಲ್ಲಿ ಮೊದಲನೆಯವನಿಗೆ ಆಗಬಹುದಾದ ಲಾಭಕ್ಕಿಂತ ಹೆಚ್ಚು ನಷ್ಟವಾಗುವ ಸಾಧ್ಯತೆಯೇ ಇದೆ. ಆದ್ದರಿಂದ ಆಯ್ಕೆ-1 ಮಾತ್ರ ಸ್ಥಾಯೀ ಆಗುತ್ತದೆ. ಈ ಆಯ್ಕೆಯನ್ನು “ನ್ಯಾಷ್ ಇಕ್ವಿಲಿಬ್ರಿಯಂ” ಎನ್ನುತ್ತಾರೆ. ಇದನ್ನು ಗಣಿತಶಾಸ್ತ್ರದಂತೆ ಸಿದ್ಧಪಡಿಸಿದ ಖ್ಯಾತಿ ನೋಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಷ್ ಅವರಿಗೆ ಸಲ್ಲುತ್ತದೆ. ಇವರ ತರ್ಕದ ಪ್ರಕಾರ ಇಬ್ಬರು ಅಥವಾ ಹೆಚ್ಚಿನ ಆಟಗಾರರಿರುವಂತಹ ಆಟದಲ್ಲಿ, ಮಿಕ್ಕವರು ತಮ್ಮ ಆಯ್ಕೆ ಬದಲಾಯಿಸದೇ ಇದ್ದಲ್ಲಿ, ಯಾವ ಆಟಗಾರನೂ ತನ್ನ ಸ್ವಂತ ಆಯ್ಕೆಯ ಬದಲಾವಣೆಯಿಂದ ಲಾಭ ಪಡೆದುಕೊಳ್ಳಲಾಗದು. ಈ ತರ್ಕ ಕೇವಲ ಕ್ರೀಡಾ ಜಗತ್ತಿನಲ್ಲಷ್ಟೇ ಅಲ್ಲ, ವ್ಯಾಪಾರ-ವಾಣಿಜ್ಯ-ಯುದ್ಧ ಕ್ಷೇತ್ರದಲ್ಲೂ ರಣನೀತಿಯಾಗಿ (ಸ್ಟ್ರ್ಯಾಟೆಜಿ) ಬಳಕೆಯಾಗುವುದನ್ನು ಕಾಣಬಹುದು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...