Homeಕರ್ನಾಟಕಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

ಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

- Advertisement -
- Advertisement -

ಪಠ್ಯ ಪರಿಶೀಲನಾ ಸಮಿತಿ ಮಾಡಿರುವ ಕೇಸರೀಕರಣ ಹಾಗೂ ಹಲವು ಎಡವಟ್ಟುಗಳ ಕುರಿತು ಭಾರೀ ಆಕ್ರೋಶ ಭುಗಿಲೆದ್ದ ಬಳಿಕ ಸರ್ಕಾರ ಸಮರ್ಥನೆಗಿಳಿದಿದ್ದು ತಿಳಿದೇ ಇದೆ. ಜನರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದಿದ್ದರೂ ತಾನು ಮಾಡಿರುವ ತಪ್ಪುಗಳನ್ನು ಪರಾಮರ್ಶಿಸಿಕೊಂಡಿರುವುದು ಮೇಲುನೋಟಕ್ಕೆ ಕಾಣುತ್ತಿದೆ.

10ನೇ ತರಗತಿಯ ಕನ್ನಡ (ಪ್ರಥಮ) ಭಾಷಾ ಪಠ್ಯದಲ್ಲಿ ಅಳವಡಿಸಲಾಗಿರುವ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’ದ ಪಾಠದಲ್ಲಿ ಕೆಲವು ಬದಲಾವಣೆಗಳನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ತಂದಿದೆ. ಪರಿಷ್ಕೃತ ಪಠ್ಯದ ಪಿಡಿಎಫ್ ಸೋರಿಕೆಯಾದಾಗ ಆ ಪಾಠದಲ್ಲಿನ ಹಲವು ತಪ್ಪುಗಳನ್ನು ಜನರು ಗುರುತಿಸಿದ್ದರು. ಬನ್ನಂಜೆಯವರ ಪಾಠದ ಕುರಿತು ‘ನಾನುಗೌರಿ.ಕಾಂ’ನಲ್ಲಿ ವಿಸ್ತೃತವಾಗಿ ವರದಿಯಾಗಿತ್ತು. ಹಣವನ್ನು ಹೆಣ್ಣಿಗೆ ಹೋಲಿಸಿ ಅತ್ಯಂತ ಕೀಳು ಅಭಿರುಚಿ ಬರುವಂತೆ ಪಾಠವನ್ನು ರೂಪಿಸಲಾಗಿತ್ತು. “ಬನ್ನಂಜೆಯ ಪಾಠದಲ್ಲಿ ಹೆಣ್ಣಿನ ಅಪಮೌಲ್ಯೀಕರಣ” ಮಾಡಲಾಗಿದೆ ಎಂಬುದು ಅರಿವಾದ ಬಳಿಕ ಮರು ರೂಪಿಸಲಾದ ಪಠ್ಯದಲ್ಲಿ ತಿದ್ದುಪಡಿ ತರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಮೊದಲೇನಿತ್ತು?

“ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು.”

ಮುಂದುವರಿದು, “ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕಥೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ..”

ಸೋರಿಕೆಯಾದ ಪಿಡಿಎಫ್‌ ಪ್ರತಿಯಲ್ಲಿದ್ದ ಸಾಲುಗಳು

ಈ  ಮೇಲಿನ ಸಾಲುಗಳಿಗೆ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿರಿ: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಜನರು ಎತ್ತಿದ ಆಕ್ಷೇಪಗಳೇನು?

  • “ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಕಾಣ- ಗುಹೇಶ್ವರ” ಎಂಬ ವಚನ ಪರಂಪರೆಯ ಈ ನಾಡಿನಲ್ಲಿ ಹೆಣ್ಣಿನ ಕುರಿತು ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲಾಗುತ್ತಿದೆಯೇ?
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿವರ್ತನೆಯ ಕಡೆಗೆ ಹೋಗುತ್ತಿರುವಾಗ ಹೆಣ್ಣಿನ ಕುರಿತ ಈ ಸಂಚುಚಿತ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವುದು ಅಪಾಯಕಾರಿ. ಹೆಣ್ಣು ಮಕ್ಕಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದಾರೆ. ಸಂಪತ್ತಿನೊಂದಿಗೆ ಹೆಣ್ಣನ್ನು ಹೋಲಿಸಿ, ಆಕೆ ಚಂಚಲೆ ಎಂದು ಬಿಂಬಿಸುವುದು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ.
  • ಹೆಣ್ಣು ಕೇವಲವಷ್ಟೇ ಎಂಬ ಭಾವನೆ ಈ ರೀತಿಯ ಸಾಲುಗಳಿಂದ ಎಳೆಯ ಮನಸ್ಸುಗಳಲ್ಲಿ ಹುಟ್ಟುತ್ತದೆ. ಎಸ್‌ಎಸ್‌ಎಲ್‌ಸಿ ಮಕ್ಕಳ ವಯಸ್ಸನ್ನು ಗಮನಿಸಬೇಕು. ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವ ವಯಸ್ಸದು. ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಹೆಣ್ಣು ಒಬ್ಬರ ಹತ್ತಿರ ಶಾಶ್ವತವಾಗಿ ನಿಲ್ಲುವುದಿಲ್ಲ, ಆಕೆ ಚಂಚಲೆ ಎಂದು ಈ ವಯಸ್ಸಿನ ಮಕ್ಕಳ ಮುಂದೆ ಬೋಧಿಸಿದರೆ ತನ್ನ ಸಹಪಾಠಿಯನ್ನು ಒಬ್ಬ ಹುಡುಗ ಹೇಗೆ ನೋಡಬಹುದು? ಹಸಿ ಮಣ್ಣಿನಂತಹ ಅವರ ಮನಸ್ಸಿನಲ್ಲಿ ಯಾವ ವಿಗ್ರಹ ರೂಪ ತಾಳಬಹುದು?
  • ಈ ಪಠ್ಯದಲ್ಲಿ ಯಾವ ಸಂದೇಶ ಇದೆ? ಹಣ ಒಂದು ಸಾಧನವಷ್ಟೇ. ಅದು ಗಂಡಿಗೂ ಬೇಕು, ಹೆಣ್ಣಿಗೂ ಬೇಕು. ಹೀಗಿರುವಾಗ ಪುರುಷಪ್ರಧಾನ ವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಹಣವನ್ನು ವಿಶ್ಲೇಷಿಸಿರುವುದೇ ತಪ್ಪು. ಇಂತಹ ಪಾಠಗಳನ್ನು ಶಿಕ್ಷಕಿಯರು ತಮ್ಮ ಮಕ್ಕಳಿಗೆ ಬೋಧಿಸುವುದಾದರೂ ಹೇಗೆ?

ಈಗ ಆಗಿರುವ ಬದಲಾವಣೆ ಏನು?

“ಈ ಸಿರಿಯನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಸಿರಿಗೆ ಆಕರ್ಷಿತರಾದವರೆ. ಎಲ್ಲರೂ ಸಿರಿಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಸಿರಿಯ ಜಾಯಮಾನಕ್ಕೆ ಸಲ್ಲದು.”

ಕೆಟ್ಟ ನಡತೆಯ ಇಂಥ ಸಿರಿಯು ಹೇಗೋ ದೇವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತದೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ.

– ಹೀಗೆ ಪಠ್ಯವನ್ನು ತಿದ್ದಲಾಗಿದೆ. ಬನ್ನಂಜೆಯವರ ಲಿಂಗಾಧಾರಿತ ದೃಷ್ಟಿಕೋನವನ್ನು ಪಠ್ಯ ಪರಿಶೀಲನಾ ಸಮಿತಿ ಮಾರ್ಪಾಡು ಮಾಡಿರುವುದು ಸ್ಪಷ್ಟವಾಗುತ್ತದೆ.

ಪರಿಷ್ಕೃತ ಪಠ್ಯದಲ್ಲಿ ಬದಲಾದ ಸಾಲುಗಳು

ಇದನ್ನೂ ಓದಿರಿ: ರೋಹಿತ್‌ ಚಕ್ರತೀರ್ಥ ಆಯ್ಕೆಯ ಮಾನದಂಡಗಳೇನು?: ಬಹಿರಂಗ ಪತ್ರ ಬರೆದ ಶಿಕ್ಷಣ ತಜ್ಞರು

ಲೇಖಕರ ಮೂಲ ಪಠ್ಯ ಬದಲಿಸಬಹುದೇ?

“ಇದು ಎಲ್ಲದಕ್ಕಿಂತ ಅನಾಹುತಕಾರಿ ಹೆಜ್ಜೆ. ಲೇಖಕರು ಇರುವಾಗಲಾದರೂ ಅಡ್ಡಿ ಇಲ್ಲ ಎನ್ನಬಹುದೇನೋ? ಆದರೆ ಲೇಖಕರು ಗತಿಸಿದ ನಂತರ ಅವರು ಬರೆದ ಅವರು ಬರೆದ ಒಂದಕ್ಷರವನ್ನು ತಿದ್ದಬಾರದು. ಇಂದು ಗೋವಿಂದಾಚಾರ್ಯರನ್ನು ತಿದ್ದಲು ಹೊರಟ ಮಂದಿಯೇ ತಮಗೆ ಬೇಕಾದ ಹಾಗೆ ನಾಳೆ ಅಂಬೇಡ್ಕರ್, ಕುವೆಂಪು, ಲಂಕೇಶ್, ತಿರುಮಲಾಂಬ ಎಲ್ಲರನ್ನು ತಿದ್ದಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ.

“ಈಗಾಗಲೇ ಕುವೆಂಪು ವಿಷಯದಲ್ಲಿ ಅವರು ಏನು ಪ್ರತಿಪಾದಿಸಿದ್ದರೋ ಅದಕ್ಕೆ ವಿರುದ್ದವಾಗಿ ಹಲವು ಅಪದ್ದಗಳನ್ನು ಸೃಷ್ಟಿಸುವ ಪ್ರಯತ್ನಗಳು ಸದಾ ಇಲ್ಲಿ ಚಾಲ್ತಿಯಲ್ಲಿವೆ. ಆದರೆ ಅದಕ್ಕೆ ಅವಕಾಶವೇ ನೀಡದಂತೆ ಅವರ ಬರಹಗಳ ಒಂದೊಂದು ವಾಕ್ಯವು ಇಲ್ಲಿಯ ಜಾತೀಯತೆ, ವರ್ಗ ಸಂಘರ್ಷ, ಮೇಲ್ಜಾತಿಯವರ ಮೇಲರಿಮೆ, ತಳ ಸಮುದಾಯದ ಮೇಲೆ ನಡೆಯುವ ಹಲ್ಲೆ, ಶೋಷಣೆ ,ಎಲ್ಲವನ್ನು ತೆರೆದಿಡುತ್ತವೆ. ನಿಧಾನಕ್ಕೆ ಅದನ್ನೇ ಬದಲಾಯಿಸಿಬಿಟ್ಟರೆ, ಇಲ್ಲಿ ಎಲ್ಲವೂ ಚೆನ್ನಾಗಿತ್ತು, ಚೆನ್ನಾಗಿದೆ ಎಂಬುದನ್ನು ಸಾಬೀತು ಮಾಡಿದಂತಾಗಿಬಿಡುತ್ತದೆ. ಇದಕ್ಕೆ ಅವಕಾಶ ಕೊಡಬಾರದು” ಎಂದು ತಿಳಿಸಿದ್ದಾರೆ.

“ಹೆಡಗೇವಾರ್‌ ಭಗವಾಧ್ವಜ ಎಂದು ಬರೆದಿದ್ದರೆ ಅದನ್ನು ರಾಷ್ಟ್ರಧ್ವಜ ಎಂದು ತಿದ್ದಿ ನಮ್ಮ ಮಕ್ಕಳಿಗೆ ಪಠ್ಯವಾಗಿಸಬೇಕಾಗಿಲ್ಲ. ಬನ್ನಂಜೆಯವರ ಪಠ್ಯದಲ್ಲೂ ಮಹಿಳೆಯರ ಬಗೆಗೆ ಇರುವ ಆಕ್ಷೇಪಾರ್ಯ ವಾಕ್ಯಗಳಿದ್ದರೆ ಅದನ್ನು ತಿದ್ದಿ ಅವರೇ ನಿಜವಾದ ಸ್ತ್ರೀ ಉದ್ದಾರಕರು ಎಂಬಂತೆ ಬಿಂಬಿಸಬೇಕಿಲ್ಲ. ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ, ನಮ್ಮ ರಾಷ್ಟ್ರಕ್ಕಾಗಿ ಅಲ್ಲಿನ ಜನರ ಏಳಿಗೆಗಾಗಿ ಜೀವವನ್ನೇ ತೇಯ್ದ ಸಾವಿರಾರು ಜನರ ಚರಿತ್ರೆ ದಾಖಲಾಗಿದೆ. ಅದನ್ನು ಮಕ್ಕಳು ಓದುವಂತಾಗಲಿ. ತಿದ್ದಲ್ಪಟ್ಟ ಬರೆಹಗಳನ್ನು ಪಠ್ಯವಾಗಿಸಿ ಓದಿಸಬೇಕಿಲ್ಲ. ಸಮೃದ್ದವಾದ ನಿಜ ಕಾಳಜಿಯ ಬರೆಹಗಳು, ಬರೆಹಗಾರರು, ವ್ಯಕ್ತಿತ್ವಗಳು ಆಗಿಹೋಗಿರುವ/ಇರುವ ನಾಡಿನಲ್ಲಿ ಸಾವಿರಾರು ಪಠ್ಯಗಳನ್ನು ಮಾಡಬಹುದು. ಅದಕ್ಕಾಗಿ ಸೂಕ್ತವಾದ ಶಿಕ್ಷಣ ತಜ್ಞರಿಗೂ ಇಲ್ಲಿ ಖಂಡಿತಾ ಕೊರತೆಯಿಲ್ಲ” ಎಂದು ಹೇಳಿದ್ದಾರೆ.

“ಲೇಖಕರ ಮೂಲ ಬರಹಕ್ಕೆ ಧಕ್ಕೆಯಾಗದಂತೆ ಸಂಕ್ಷಿಪ್ತಗೊಳಿಸಿ, ಪಠ್ಯವಾಗಿ ರೂಪಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಆದರೆ, ಇಲ್ಲಿ ಮೂಲ ಲೇಖಕರ ವಿಚಾರಗಳನ್ನೇ ಬದಲಿಸಲು ಹೊರಟಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬನ್ನಂಜೆ ಪಾಠದ ಸಾರಾಂಶ ಪ್ರಸ್ತುತವೇ?

ಬನ್ನಂಜೆಯವರ ಪಾಠದಲ್ಲಿನ ಲಿಂಗಾಧಾರಿತ ದೃಷ್ಟಿಕೋನವನ್ನು ತಿದ್ದಿದ್ದರೂ ‘ಶುಕನಾಸನ ಉಪದೇಶ’ ಪಾಠದ ಪ್ರಸ್ತುತತೆಯ ಪ್ರಶ್ನೆ ಬದಿಗೆ ಸರಿಯುವುದಿಲ್ಲ. ಹಣದ ಕುರಿತು ನಕಾರಾತ್ಮಕವಾಗಿ ಮಾತನಾಡುವ ಈ ಪಾಠವು ಮಕ್ಕಳಿಗೆ ಕಲಿಸುವುದೇನು ಎಂಬುದೂ ಚರ್ಚೆಯಾಗಬೇಕಿದೆ.

ವಿವಾದ ಉಂಟಾದ ಸಂದರ್ಭದಲ್ಲಿ ಆಧ್ಮಾತ್ಮಿಕ ವಿಚಾರಗಳ ಬರಹಗಾರರು ಹಾಗೂ ಪ್ರಾಧ್ಯಾಪಕರೂ ಆದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಣದ ಕುರಿತ ಬನ್ನಂಜೆಯವರ ಬೋಧಪ್ರದ (didactic) ಲೇಖನ ಹೊಸದಾಗಿ ಸೇರ್ಪಡೆಯಾಗಿದೆ. ಆ ಲೇಖನದಲ್ಲಿ ಬನ್ನಂಜೆಯವರು ಹಣ ಕೆಟ್ಟದ್ದು, ವರ್ಜ್ಯ ಎಂದು ಉಪದೇಶಿಸುತ್ತಾರೆ. ತನ್ನ ತಾಯಿ-ತಂದೆಯರನ್ನು ಒಳಗೊಂಡಂತೆ ಲೋಕದಲ್ಲಿ ಪ್ರತಿಯೊಬ್ಬರು ಹಣ ಸಂಪಾದನೆಗಾಗಿ ಶ್ರಮಿಸುತ್ತಿರುವ ವಾಸ್ತವದ ಮಧ್ಯೆ ಬದುಕುತ್ತಿರುವ ಮಗುವನ್ನು ಇಂತಹ ವಾಸ್ತವ ದೂರವಾದ ಲೇಖನಗಳು ಸಂಶಯಾತ್ಮನನ್ನಾಗಿಸುತ್ತವೆ, ಗೊಂದಲಕ್ಕೀಡು ಮಾಡುತ್ತವೆ. ಪಠ್ಯವೆನಿಸಿಕೊಳ್ಳುವ ಒಂದು ‘ಪಠ್ಯ’ವು ವಿದ್ಯಾರ್ಥಿಗೆ ಒಂದು ವಸ್ತು ವಿಷಯವನ್ನು ಅದರ ಸಮಗ್ರ ಸ್ವರೂಪದಲ್ಲಿ ಪರಿಚಯಿಸಿಕೊಡಬೇಕಲ್ಲದೆ ಅದು ಏಕಮುಖಿಯಾದ, ಉಪದೇಶಾತ್ಮಕವಾದ ಪಠ್ಯ ಆಗಬಾರದು. ಬನ್ನಂಜೆ ಉಪದೇಶದಂತೆ ಹಣ ನಿಜಕ್ಕೂ ಕೇಡಿನ ಮೂಲವೇ ಆಗಿದ್ದಲ್ಲಿ ಪುರಂದರದಾಸರು ಲಕ್ಷ್ಮಿಯನ್ನು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂದು ಕರೆಯುತ್ತಿರಲಿಲ್ಲ” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲಜ್ಜೆಗೆಟ್ಟ ಸರ್ಕಾರ, ಪರಿಷ್ಕರಣೆಕಗೊಂಡ ಪುಸ್ತಕವನ್ನೇ ಮುದ್ರಿಸಿ ವಿತರಿಸಲು ಮೇ 27 ರಂದು ಸುತ್ತೋಲೆ ಗಳಿಸಿದೆ!

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...