Homeಮುಖಪುಟನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

- Advertisement -
- Advertisement -

ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ, ಶಿಕ್ಷಣ ಸಚಿವರು ಮಾತನಾಡುವ ಬರದಲ್ಲಿ ಹೇಳಿರಬಹುದು. ನಾನು ಐಐಟಿ ಮತ್ತು ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತಯಾರು ಮಾಡಿದ್ದೇನೆ. ನಾನು ಐಐಟಿ ಹಾಗೂ ಸಿಇಟಿ ಪ್ರೊಫೆಸರ್ ಎಂಬುದನ್ನು ನಿರಾಕರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿ ಟಿವಿ9 ಜೊತೆ ಮಾತನಾಡಿರುವ ಅವರು, “ನಾನು ಕೇವಲ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುತ್ತೇನೆ. ನಮ್ಮ ಕೈ ಕೆಳಗೆ ವಿಷಯ ತಜ್ಞರು ಇರುತ್ತಾರೆ. ಅವರು ನೀಡುವ ಶಿಫಾರಸ್ಸುಗಳನ್ನು ನಾನು ಪರಿಷ್ಕರಣೆ ಮಾಡಿದ್ದೇನೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಕೂಡ ಆಗಿರುವುದರಿಂದ ನನಗೆ ಆ ಅಧಿಕಾರವಿದೆ. ನಾನು ಐದು ವರ್ಷದದಲ್ಲಿ ನಿರಂತರವಾಗಿ ಪಠ್ಯಪುಸ್ತಕಗಳ ಬಗ್ಗೆ ಮಾತನಾಡುತ್ತೇನೆ. ಈ ಪ್ರಕ್ರಿಯೆ ನೋಡಿ ನನ್ನನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಮಾಡಿರಬಹುದು” ಎಂದಿದ್ದಾರೆ.

ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಲು ರೋಹಿತ್ ಚಕ್ರತೀರ್ಥರಿಗಿರುವ ಅರ್ಹತೆಯೇನು ಎಂಬ ಪ್ರಶ್ನೆಗೆ ಶಿಕ್ಷಣ ಸಚಿವ ನಾಗೇಶ್‌ರವರು “ಶಿಕ್ಷಣ ತಜ್ಞ ಎನ್ನುವುದಕ್ಕೆ ಎಲ್ಲಿಯಾದರೂ ಪ್ರಮಾಣ ಪತ್ರ ಇದೆಯಾ? ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆಯನ್ನು ಪ್ರಶ್ನೆ ಮಾಡುತ್ತಿರುವವರು ಅವರ ಹಿನ್ನೆಲೆ ಹೇಳಲಿ ನೋಡೋಣ. ಚಕ್ರತೀರ್ಥ ಈ ಹಿಂದೆ ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಎಂಬುದನ್ನು ಮರೆಯಬಾರದು” ಎಂದು ರೋಹಿತ್‌ ಚಕ್ರತೀರ್ಥ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ರೋಹಿತ್ ಚಕ್ರತೀರ್ಥರವರ ಅರ್ಹತೆ ಬಗ್ಗೆ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಅವರು ತಮ್ಮ ವಿದ್ಯಾರ್ಹತೆಯ ಕುರಿತು ಟಿಪ್ಪಣಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, “ಬೇಸ್, ಟೈಮ್ ಮೊದಲಾದ ಸಂಸ್ಥೆಗಳಲ್ಲಿ ಐಐಟಿ, ಜೆಇಇ, ಎನ್‌ಟಿಎಸ್‌ಸಿ, ಸಿಎಟಿ, ಸಿಇಟಿ ಮತ್ತು ಒಲಂಪಿಯಾಡ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದ್ದಾರೆ. ವಿದ್ಯವರ್ಧಕ ಕಾಲೇಜು, ಕೆಎಲ್‌ಇ ಮತ್ತು ಜೈನ್ ಕಾಲೇಜುಗಳಲ್ಲಿ ಗಣಿತ ಬೋಧಿಸಿದ್ದಾರೆ” ಎಂದು ಬರೆಯಲಾಗಿದೆ.

ಅದರ ಪೂರ್ಣ ಪಠ್ಯ ಇಲ್ಲಿದೆ.

ರಾಷ್ಟ್ರಗೀತೆ, ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ ಮಾಡಿಲ್ಲ

ರಾಷ್ಟ್ರಗೀತೆಗೆ ಅವಮಾನ ಆಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಅದು ಹಳೆಯ ವಿವಾದ ಮತ್ತು ಮುಗಿದ ವಿವಾದ. ಅದು ನನ್ನ ಬರಹವಲ್ಲ. ಯಾರೊ ಬರೆದಿದ್ದನ್ನು ಫೇಸ್‌ಬುಕ್‌ಗೆ ಹಾಕಿದ್ದೆ. ನಾನು ಮಾಡಿದ ತಪ್ಪಿಗೆ ಸಮರ್ಥನೆ ಮಾಡಿಕೊಂಡಿಲ್ಲ. ತಪ್ಪಾಗಿರಬಹುದು. ಕುವೆಂಪುರವರಿಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಯಾರೋ ಬರೆದಿದ್ದನ್ನು ಪೇಸ್ಬುಕ್ಕಿಗೆ ಹಾಕಿರುವುದಾಗಿ ತಿಳಿಸಿದ್ದಾರೆ. ಅವರು ಯಾರು ಎಂಬುದು ರೋಹಿತ್ ಚಕ್ರವರ‍್ತಿಗೆ ತಿಳಿದಿರುತ್ತದೆ. ಅದನ್ನು ಬಯಲುಮಾಡಲಿ.

  2. ಅಷ್ಟೊಂದು ಓದುಬರಹ ಬಲ್ಲವರು ಮೊತ್ತಬರು ಹಾಕಿದ ಪೋಸ್ಟ್ ನ್ನು ಓದದೇ ಹಾಕುತ್ತಾರಾ ಅಥವಾ ಅದು ಯಾರೂ ಹಾಕಿದ್ದು ಅಂತ ಗೊತ್ತಿರುತ್ತೆ ಅವರ ವಿವರ ನೀಡಲಿ ಬೇಡ ಅನ್ನುವರಾರು ಚಕ್ರವರ್ತಿಗಳೆ 🙏

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ‘ಎಕ್ಸ್‌’ ಬಳಕೆದಾರರು ತರಾಟೆ

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ, ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ ತುಷ್ಟೀಕರಣ ಮಾಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ...