Homeಮುಖಪುಟಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು

ಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು

- Advertisement -
- Advertisement -

ಬಿಜೆಪಿ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುನರ್ ಪರಿಷ್ಕರಣೆ ಸಮಿತಿ ಮಾಡಿರುವ ಬದಲಾವಣೆಗಳು ವಿವಾದದ ಬಿರುಗಾಳಿಯೆಬ್ಬಿಸಿವೆ. ಒಂದೇ ಜಾತಿಯ ಸದಸ್ಯರನ್ನೊಳಗೊಂಡ ಸಮಿತಿಯು ಅವರದೇ ಜಾತಿ ಲೇಖಕರ ಪಠ್ಯಗಳನ್ನು ತುಂಬಿದ್ದು, ದಲಿತ – ಶೂದ್ರ ಲೇಖಕರ ಪಠ್ಯಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಳು ವ್ಯಕ್ತವಾಗಿವೆ. ಭಗತ್ ಸಿಂಗ್ ಪಠ್ಯ ಕೈಬಿಟ್ಟು ಹೆಡಗೇವಾರ್ ಪಠ್ಯ ಸೇರಿಸಿದ್ದಕ್ಕೆ ತೀವ್ರ ವಿರೋಧ ಕೇಳಿಬಂದಿದೆ. ಈ ಪಠ್ಯ ಪುನರ್ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಹಳೆಯ ಪಠ್ಯಗಳನ್ನೆ ಮುಂದುವರೆಸಬೇಕೆಂದು ಟ್ವಿಟರ್ ಟ್ರೆಂಡ್ ಸಹ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೇ 23ರ ಸೋಮವಾರದಂದು ಸ್ಪಷ್ಟನೆ ನೀಡುವುದಕ್ಕಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ಪತ್ರಿಕಾಗೋಷ್ಟಿ ನಡೆಸಿದ್ದರು. ಆದರೆ ಅಲ್ಲಿ ಸ್ಪಷ್ಟನೆ ನೀಡುವುದಕ್ಕೆ ಬದಲು ಹಿಂದಿನ ಸಮಿತಿಯನ್ನು ದೂಷಿಸುವ, ಸುಳ್ಳು ಮತ್ತು ಅರ್ಧ ಸುಳ್ಳುಗಳನ್ನು ಹೇಳಿದ್ದಾರೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಸೇರಿದಂತೆ ಇತರರು ಆರೋಪಿಸಿದ್ದಾರೆ. ಶಿಕ್ಷಣ ಸಚಿವರು ಹೇಳಿದ ನಾಲ್ಕು ಸುಳ್ಳುಗಳು ಇಲ್ಲಿವೆ.

  1. ಕುವೆಂಪು ಪಠ್ಯ ಕೈಬಿಟ್ಟ ಬರಗೂರು ಸಮಿತಿ

ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು ಕುವೆಂಪು, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಮೈಸೂರು ಮಹಾರಾಜರು, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ ಮುಂತಾದ ಮಹನೀಯರ ಪಾಠಗಳನ್ನು ಕೈ ಬಿಟ್ಟಿತ್ತು ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಬರಗೂರು ರಾಮಚಂದ್ರಪ್ಪನವರು “ಶಿಕ್ಷಣ ಸಚಿವರು ಅಪ್ಪಟ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾವು ಅವರು ಉಲ್ಲೇಖಿಸಿರುವ ಯಾವ ಪಠ್ಯವನ್ನು ಕೈಬಿಟ್ಟಿಲ್ಲ. ಬದಲಿಗೆ ಮತ್ತಷ್ಟು ಸೇರಿಸಿ ಎಲ್ಲಾ ತರಗತಿ ಮಕ್ಕಳಿಗೂ ಪಾಠ ಇಟ್ಟಿದ್ದೇವೆ” ಎಂದಿದ್ದಾರೆ.

ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ. ಖಂಡಿತ ಕೈ ಬಿಟ್ಟಿಲ್ಲ. ಪ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ “ಭರತ ಭೂಮಿ ನಮ್ಮ ತಾಯಿ” ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಟಿಯಿಂದ 7ನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದೆವು ಅಷ್ಟೇ. ಇನ್ನು, 7ನೇ ತರಗತಿಯ 2ನೇ ಭಾಗ ಮತ್ತು 10ನೇ ತರಗತಿಯ 2ನೇ ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿ ಕುರಿತು ಸಾಕಷ್ಟು ವಿವರಗಳಿವೆ. ಸಮಾಜ ವಿಜ್ಞಾನದ 8ನೇ ತರಗತಿಯ ಭಾಗ-1 ಮತ್ತು 10ನೇ ತರಗತಿಯ ಭಾಗ-2ರಲ್ಲಿ ಡಾ.ಅಂಬೇಡ್ಕರ್‌ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ ‘ನಮ್ಮ ಸಂವಿಧಾನ’ ಎ೦ಬ ಪಾಠವಿದ್ದು ಅಲ್ಲಿಯೂ ಡಾ.ಅಂಬೇಡ್ಕರ್‌ ಅವರನ್ನು ಕುರಿತ ವಿವರಗಳಿವೆ ಎಂದು ಬರಗೂರು ಹೇಳಿದ್ದಾರೆ.

2. 1930 ರಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ

ಹೆಡಗೇವಾರ್‌ರವರನ್ನು ಪಠ್ಯದಲ್ಲಿ ಸೇರಿಸಿದ್ದೀರಿ. ಅವರು ಭಾರತದ ತ್ರಿವರ್ಣ ಧ್ವಜಕ್ಕೆ ಬದಲಾಗಿ ಭಗವಾಧ್ವಜ ಬೆಂಬಲಿಸಿದ್ದರು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಾಗೇಶ್‌ರವರು, ನಮಗೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ. ಅಲ್ಲಿಂದ ತ್ರಿವರ್ಣ ಧ್ವಜಕ್ಕೆ ಮಾನ್ಯತೆ ಇದೆ ಹೊರತು 1930ರಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ ಎಂದು ಹೆಡಗೇವಾರ್‌ರನ್ನು ಸಮರ್ಥಿಸಿಕೊಂಡರು.

ವಾಸ್ತವ ಏನೆಂದರೆ, ಸ್ವಾತಂತ್ರ್ಯ ಚಳವಳಿಯು 1930ರ ಜನವರಿ 26ರಂದು ದೇಶದ ಎಲ್ಲಾ ಕಡೆ ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಮಾಡಿ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದ್ದಾಗ ಹೆಡಗೇವಾರರು ಸಂಘದಲ್ಲಿ ಕೇವಲ ಭಗವಾ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಕರೆ ನೀಡುತ್ತಾರೆ. 1931ರಲ್ಲಿ ದಂಡಿ ಸತ್ಯಾಗ್ರಹದ ಕರೆ ಇಡೀ ದೇಶವನ್ನು ಆವರಿಸುತ್ತಿದ್ದಾಗ ಆರೆಸ್ಸೆಸ್ ಸಹ ಒಂದು ನಿಲುವು ತೆಗೆದುಕೊಳ್ಳಲೇಬೇಕಾದ ಸಂದರ್ಭ ಬಂದಾಗ ಆರೆಸ್ಸೆಸ್ಸಿನ ಕಾರ್ಯಕರ್ತರು ವೈಯಕ್ತಿಕ ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಬಹುದೇ ವಿನಾ ಆರೆಸ್ಸೆಸ್ ಒಂದು ಸಂಘವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವು ತೆಗೆದುಕೊಳ್ಳುತ್ತಾರೆ ಎಂದು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವ ಚಿಂತಕ ಶಿವಸುಂದರ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಾಗೇಶ್‌ರವರು ಹೆಡಗೇವಾರ್ ಸಮರ್ಥಿಸುವ ಬರದಲ್ಲಿ ಸುಳ್ಳಿಗೆ ಮೊರೆ ಹೋಗಿದ್ದಾರೆ.

3. ಸಾಹಿತಿಗಳ ಜಾತಿ ಹುಡಕಬಾರದು, ಕಂಟೆಂಟ್ ನೋಡಿ

ಯಾವ ಯಾವ ಸಾಹಿತಿಗಳ ಪಠ್ಯ ಸೇರ್ಪಡೆಯಾಗಿದೆಯೋ ಅವರ ಜಾತಿ ನೋಡಬಾರದು, ಬದಲಿಗೆ ಅವರ ಕಂಟಂಟ್ ನೋಡಿದರೆ ಒಳ್ಳೆಯದು ಕಾಣುತ್ತದೆ ಎಂದು ಸಚಿವ ನಾಗೇಶ್ ಹೇಳಿದರು.

ಪಠ್ಯ ಪುನರ್ ಪರಿಷ್ಕರಣಾ ಸಮಿತಿಯಲ್ಲಿ 7 ಜನ ಸದಸ್ಯರಿದ್ದು ಆ 7 ಜನರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಎಸ್. ಎಲ್.ಭೈರಪ್ಪ, ಕೆ.ಬಿ.ಹೆಡ್ಗೇವಾರ್, ಗಜಾನನ ಶರ್ಮಾ, ಎನ್.ರಂಗನಾಥ ಶರ್ಮಾ, ಸುಶ್ರುತ ದೊಡ್ಡೇರಿ, ಎಸ್.ವಿ.ಪರಮೇಶ್ವರ ಭಟ್, ಗಣೇಶ್ ಶತಾವಧಾನಿ, ಬನ್ನಂಜೆ ಗೋವಿಂದಾಚಾರ್ಯ, ಶಿವಾನಂದ ಕಳವೆ, ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ. ಇವರಲ್ಲಿ ಎಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದ್ದಾರೆ. ಇವರ ಕಂಟೆಂಟ್‌ಗಳು ಹೇಗಿವೆ ಎಂಬುದನ್ನು ನೋಡಿದರೆ ಅದರಲ್ಲಿ ಒಳ್ಳೆಯದು ಕಾಣುವುದಿಲ್ಲ.

“ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು”

ಇದು ಬನ್ನಂಜೆ ಗೋವಿಂದಚಾರ್ಯರ ಶುಕನಾಸನ ಉಪದೇಶ ಪಾಠ ಭಾಗ. ಮಹಿಳೆಯರನ್ನು ಇಷ್ಟು ಕೀಳು ಮಟ್ಟಕ್ಕೆ ಚಿತ್ರಿಸಿರುವ ಪಾಠವನ್ನು ಮಕ್ಕಳು ಓದಿದರೆ ಅವರಲ್ಲಿ ಯಾವ ಭಾವ ಬರಬಹುದು? ಇದನ್ನು ಒಳ್ಳೆಯ ಕಂಟೆಂಟ್‌ ಎನ್ನಲಾಗುತ್ತದೆಯೇ?

ಇನ್ನು ಭಾರತದ ರಸ್ತೆಗಳನ್ನು ಚಿನ್ನದಲ್ಲಿ ಮಾಡಬಹುದು, ಸೌದಿ ಪೆಟ್ರೋಲಿಯಂ ಸಚಿವನಿಗೆ ಮೋದಿ ಫೋನ್ ಮಾಡಿ ಪೆಟ್ರೋಲ್ ರೇಟ್ ಕಡಿಮೆ ಮಾಡುತ್ತಾರೆ. ಬೆಂಗಳೂರಿಂದ ಮಂಗಳೂರಿಗೆ ಬುಲೆಟ್ ಟ್ರೈನ್ ಬರುತ್ತೆ ಎಂದೆಲ್ಲ ಸುಳ್ಳು ಹೇಳಿಕೊಂಡು ತಿರುಗಿದ ಚಕ್ರವರ್ತಿ ಸೂಲಿಬೆಲೆಯವರ ಬಗ್ಗೆ ಮಕ್ಕಳು ಓದಬೇಕೆ? ಅವರು ಒಳ್ಳೆಯ ಕಂಟೆಂಟ್ ಬರೆಯುತ್ತಾರೆಯೇ?

4. ರೋಹಿತ್ ಚಕ್ರತೀರ್ಥ ಐಐಟಿ-ಸಿಇಟಿ ಪ್ರೊಫೆಸರ್ ಆಗಿದ್ದರು

ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಲು ರೋಹಿತ್ ಚಕ್ರತೀರ್ಥರಿಗಿರುವ ಅರ್ಹತೆಯೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಶಿಕ್ಷಣ ತಜ್ಞ ಎನ್ನುವುದಕ್ಕೆ ಎಲ್ಲಿಯಾದರೂ ಪ್ರಮಾಣ ಪತ್ರ ಇದೆಯಾ? ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆಯನ್ನು ಪ್ರಶ್ನೆ ಮಾಡುತ್ತಿರುವವರು ಅವರ ಹಿನ್ನೆಲೆ ಹೇಳಲಿ ನೋಡೋಣ. ಚಕ್ರತೀರ್ಥ ಈ ಹಿಂದೆ ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಎಂಬುದನ್ನು ಮರೆಯಬಾರದು” ಎಂದು ರೋಹಿತ್‌ ಚಕ್ರತೀರ್ಥ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಈ ಕುರಿತು ಶೋಧನೆ ನಡೆಸಿದಾಗ ರೋಹಿತ್ ಚಕ್ರತೀರ್ಥರವರು ಯಾವುದೇ ಐಐಟಿಗೆ ಪ್ರೊಫೆಸರ್ ಆಗಿರುವುದು ಕಂಡುಬಂದಿಲ್ಲ. ಐಐಟಿ ಅಂದರೆ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ ಎಂಬುವುದು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ 23 ಐಐಟಿ ಸಂಸ್ಥೆಗಳಿವೆ. ಕರ್ನಾಟಕದ ಧಾರವಾಡದಲ್ಲೂ ಐಐಟಿ ಇದೆ. ಆದರೆ ಈ ಯಾವ ವಿವಿಗಳಲ್ಲಿಯೂ ಪ್ರಾಧ್ಯಾಪಕರಾಗಿ ಅವರು ಹೆಸರು ಇಲ್ಲ.

ಇನ್ನು ಸಿಇಟಿ ಎಂಬ ಯಾವ ವಿಶ್ವವಿದ್ಯಾಲಯವೂ ಇಲ್ಲ. ಅದು ಪಿಯುಸಿ ನಂತರ ನಡೆಯುವ ಪ್ರವೇಶ (CET-Common Entrance Test) ಪರೀಕ್ಷೆಯಾಗಿದೆ. ಅದೊಂದು ಸಂಸ್ಥೆಯಾಗಲಿ, ಹುದ್ದೆಯಾಗಲಿ ಅಲ್ಲ. ಈ ಪರೀಕ್ಷೆ ಬರೆಯಲು ಸಾಮಾನ್ಯವಾಗಿ ಟ್ಯೂಷನ್‌ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ಟ್ಯೂಷನ್‌ ಕೇಂದ್ರಗಳಿಗೆ ಮಾನ್ಯತೆಯೂ ಇರುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹುಡುಕಿದಾಗಲೂ ಅವರೊಬ್ಬ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ, ಬರಹಗಾರ ಮತ್ತು ವಿಜ್ಞಾನ ಸಂಬಂಧಿ ವಿಚಾರಗಳ ಲೇಖಕ ಎಂದಷ್ಟೇ ಮಾಹಿತಿ ಇದೆ. ಸ್ವತಃ ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ತಮ್ಮನ್ನು ಶಿಕ್ಷಕ ಎಂದಷ್ಟೇ ಪರಿಚಯಿಸಿಕೊಂಡಿದ್ದಾರೆ.

ಅವರ ಬಗ್ಗೆ ತಿಳಿದಿದ್ದ ಕೆಲವರ ಬಳಿ ವಿಚಾರಿಸಲಾಗಿ, ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ರೋಹಿತ್ ಚಕ್ರತೀರ್ಥ ಗಣಿತ ಪಾಠ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ‘ಟೆಸ್ಲಾ ಎಜುಕೇಷನ್’ ಎಂಬ‌ ಆನ್‌ಲೈನ್‌ ಪಾಠ ಮಾಡುವ ಶಿಕ್ಷಣ ಸಂಸ್ಥೆ ಹೊಂದಿರುವ ರೋಹಿತ್ ಚಕ್ರತೀರ್ಥ ಯೂಟ್ಯೂಬ್‌ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣಿತ ಮಾಡುವ ವಿಡಿಯೋ ಸಹ ಲಭ್ಯವಾಗಿದೆ.

ಸಚಿವ ನಾಗೇಶ್‌ ಅವರು ಹೇಳಿದಂತೆ ಯಾರಾದರೂ ಪ್ರೊಫೆಸರ್ ಸ್ಥಾನಕ್ಕೆ ಏರುವ ಪ್ರಕ್ರಿಯೆಯೂ ಅಷ್ಟು ಸುಲಭದ್ದಲ್ಲ. ಮೊದಲು ಅವರು ಶಿಕ್ಷಣ ಸಂಸ್ಥೆಯೊಂದರಲ್ಲಿ ಸಹಾಯಕ ಪ್ರಾಧ್ಯಾಪಕ (Assistant Professor) ಆಗಿ ಕೆಲಸಕ್ಕೆ ನಿಯುಕ್ತಿಯಾಗಬೇಕು. ನಂತರ ಅವರ ಅನುಭವದ ಆಧಾರದ ಮೇಲೆ ಸಹ ಪ್ರಾಧ್ಯಾಪಕ (Associate Professor ) ಆಗಿ ಬಡ್ತಿ ನೀಡಲಾಗುತ್ತದೆ. ಆನಂತರ, ಅವರ ಸೇವಾನುಭವ ಮತ್ತು ಪ್ರಕಟಿತ ಸಂಶೋಧನಾ ಬರಹಗಳ ಆಧಾರದಲ್ಲಿ ಪ್ರೊಫೆಸರ್ ಎಂಬ ಗೌರವವನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ರೋಹಿತ್ ಚಕ್ರತೀರ್ಥ ಪ್ರೊಫೆಸರ್ ಅಲ್ಲ ಎಂಬುದು ಮೇಲಿನ ವಿಷಯಗಳಿಂದ ಖಚಿತವಾಗುತ್ತದೆ.

ಇದನ್ನೂ ಓದಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ನಮ್ಮದನ್ನು ನಾವು ಕಲಿಯುವುದು ಬೇಡ,ಪರಕೀಯರ ಬಗ್ಗೆನೇ ಕಲಿಯಿರಿ ಎನ್ನುವುದು ನಿಮ್ಮ ವಾದ ವಲ್ಲವೇ?ನೆಹರು ಗಾಂಧಿ ಜಿನ್ನಾ ಮೋಗಳತಬ್ಬಗ್ಗೆ ಮಾತ್ರ ಒದಬೇಕಲ್ಲವೆ,ಅಬ್ಬಾ ಭಾರತೀಯತೆಯನ್ನು ಹತ್ತಿಕ್ಕಲು ಏಷ್ಟು ಹುನ್ನಾರ, ಪದೆ ಪದೇ ಹೇಳಿದ್ದನ್ನೇ ಪ್ರತಿಯೊಬ್ಬ ಪ್ರಗತಿ ಪರರು ಎಲ್ಲಾ ರೀತಿಯ ಮಾಧ್ಯಮಗಳನ್ನು ಬಳಸಿಕೊಂಡು ಎಲ್ಲಾ ಕೆಲ್ಸ ಬಿಟ್ಟು ಸಾರುತ್ತಿದ್ದಾರೆ ಮೆಚ್ಚಲೇ ಬೇಕು ಇವರ ದೇಶಿಯತೆಯನ್ನು,

  2. ನಮ್ಮದನ್ನು ನಾವು ಕಲಿಯುವುದು ಬೇಡ,ಪರಕೀಯರ ಬಗ್ಗೆನೇ ಕಲಿಯಿರಿ ಎನ್ನುವುದು ನಿಮ್ಮ ವಾದ ವಲ್ಲವೇ?ನೆಹರು ಗಾಂಧಿ ಜಿನ್ನಾ ಮೋಘಲರ ಬಗ್ಗೆಮಾತ್ರ ಒದಬೇಕಲ್ಲವೆ,ಅಬ್ಬಾ ಭಾರತೀಯತೆಯನ್ನು ಹತ್ತಿಕ್ಕಲು ಏಷ್ಟು ಹುನ್ನಾರ, ಪದೆ ಪದೇ ಹೇಳಿದ್ದನ್ನೇ ಪ್ರತಿಯೊಬ್ಬ ಪ್ರಗತಿ ಪರರು ಎಲ್ಲಾ ರೀತಿಯ ಮಾಧ್ಯಮಗಳನ್ನು ಬಳಸಿಕೊಂಡು ಎಲ್ಲಾ ಕೆಲ್ಸ ಬಿಟ್ಟು ಸಾರುತ್ತಿದ್ದಾರೆ ಮೆಚ್ಚಲೇ ಬೇಕು ಇವರ ದೇಶಿಯತೆಯನ್ನು,

  3. ಸ್ವಾತಂತ್ರ್ಯ ಸಿಕ್ಕು 75 ವರ್ಷ ಆದರು ಮತ್ತೆ ಗುಲಾಮರು ತರ ಬದುಕ ಬೇಕು ಅನ್ನುವ ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು……ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಚ್ಚಾ .

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...