Homeಅಂತರಾಷ್ಟ್ರೀಯಬ್ರಿಟನ್‌ನ ಮೊದಲ ದಲಿತ ಮಹಿಳಾ ಮೇಯರ್ ಆಗಿ ಮೊಹಿಂದರ್ ಮಿಧಾ ಆಯ್ಕೆ

ಬ್ರಿಟನ್‌ನ ಮೊದಲ ದಲಿತ ಮಹಿಳಾ ಮೇಯರ್ ಆಗಿ ಮೊಹಿಂದರ್ ಮಿಧಾ ಆಯ್ಕೆ

ಭಾರತದಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಜನರು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ವಿದೇಶಗಳಲ್ಲಿ ತಮ್ಮ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.

- Advertisement -
- Advertisement -

ಬ್ರಿಟನ್‌ನ ಈಲಿಂಗ್ ನಗರದ ಮೇಯರ್ ಆಗಿ ಮೊಹಿಂದರ್ ಮಿಧಾರವರು ಆಯ್ಕೆ ಆಗುವುದರೊಂದಿಗೆ ಆ ಹುದ್ದೆಗೇರಿದ ಮೊದಲ ದಲಿತ ಮಹಿಳೆ ಎಂದು ಹಿರಿಮೆಗೆ ಪಾತ್ರರಾಗಿದ್ದಾರೆ.

ಪಶ್ಚಿಮ ಲಂಡನ್‌ನಲ್ಲಿರುವ ಸಿಟಿ ಆಫ್ ಈಲಿಂಗ್ ಮೊಹಿಂದರ್ ಕೌರ್ ಮಿಧಾ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿದೆ. ಮೊಹಿಂದರ್ ಕೌರ್ ಮಿಧಾ ಅವರು ಈಲಿಂಗ್ ಕೌನ್ಸಿಲ್ ಚುನಾವಣೆಯಲ್ಲಿ ಗರಿಷ್ಠ ಮತಗಳನ್ನು ಪಡೆದು 2022-23 ನೇ ಸಾಲಿನ ನಗರದ ಪ್ರಮುಖ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಮೊಹಿಂದರ್ ಕೌರ್ ಮಿಧಾ ಇಂಗ್ಲೆಂಡ್‌ನಲ್ಲಿ ಮೇಯರ್ ಕುರ್ಚಿಯ ಮೇಲೆ ಕುಳಿತ ಮೊದಲ ದಲಿತ ಮಹಿಳೆ. ಈ ಸುದ್ದಿಯು ಬ್ರಿಟನ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅಂಬೇಡ್ಕರ್‌ವಾದಿಗಳ ಮುಖದಲ್ಲಿ ಮಂದಹಾಸವನ್ನು ತಂದಿದೆ ಎಂದು ದಿ ಶೂದ್ರ ವರದಿ ಮಾಡಿದೆ.

ಮೊಹಿಂದರ್ ಮಿಧಾರವರು ಈ ಹುದ್ದೆಗೇರುತ್ತಲೇ ಹಲವು ಅಂಬೇಡ್ಕರ್‌ವಾದಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಲಂಡನ್ ನಗರದ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತೆ ಸಂತೋಷ್ ದಾಸ್ ಈ ಕುರಿತು ಟ್ವೀಟ್ ಮಾಡಿದ್ದು, “ಕಳೆದ 5 ನಿಮಿಷಗಳಲ್ಲಿ, ಶ್ರೀಮತಿ ಮೊಹಿಂದರ್ ಕೌರ್ ಮಿಧಾ ಈಲಿಂಗ್‌ನ ಮೇಯರ್ ಆಗಿ ಆಯ್ಕೆಯಾದರು. ಯುಕೆಯಲ್ಲಿ ಪ್ರಥಮ ಬಾರಿಗೆ ದಲಿತ ಮಹಿಳೆಯೊಬ್ಬರು ಮೇಯರ್ ಆಗಿದ್ದಾರೆ. ಇದು ನಮಗೆ ಹೆಮ್ಮೆಯ ಕ್ಷಣ’ ಎಂದಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ವಾಂಸ ಸೂರಜ್ ಯೆಂಗ್ಡೆ ಪ್ರತಿಕ್ರಿಯಿಸಿ ‘ಇದೊಂದು ಅಂತಾರಾಷ್ಟ್ರೀಯ ಸುದ್ದಿ. ಗೌರವಾನ್ವಿತ ಮೊಹಿಂದರ್ ಮಿಧಾರನ್ನು ಮೊದಲ ದಲಿತ ಮಹಿಳಾ ಮೇಯರ್ ಆಗಿ ಆಯ್ಕೆ ಮಾಡಿದ ಈಲಿಂಗ್ ಕೌನ್ಸಿಲ್‌ಗೆ ಅಭಿನಂದನೆಗಳು. ಜೈ ಭೀಮ್” ಎಂದಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶ: ಹೊಸ ಜಿಲ್ಲೆಗೆ ಅಂಬೇಡ್ಕರ್‌‌‌ ನಾಮಕರಣ ವಿರೋಧಿಸಿ ಸಚಿವನ ಮನೆಗೆ ಬೆಂಕಿ

ಭಾರತದಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಜನರು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ವಿದೇಶಗಳಲ್ಲಿ ತಮ್ಮ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಮೊಹಿಂದರ್ ಮಿಧಾ ಅವರಂತಹ ಮಹಿಳೆಯರು ನಮಗೆಲ್ಲ ಸ್ಪೂರ್ತಿಯಾಗಿದ್ದಾರೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ಅದೇ ಲಂಡನ್‌ನಲ್ಲಿ, ದಲಿತ ಮಹಿಳೆಯೊಬ್ಬರು ನಗರವನ್ನು ಮುನ್ನಡೆಸುತ್ತಾರೆ. ಇದು ನಮ್ಮ ಹೆಮ್ಮೆ ಎಂದು ದಿ ಶೂದ್ರ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಮೋದಿ ಅಥವಾ ಬಿ ಜೆ ಪಿ ಯನ್ನು ತೆಗಳಿದರೆ ಮಾತ್ರ ಕಾಮೆಂಟ್ ಹಾಕುತ್ತೀರಾ ಅಲ್ಲವೇ

  2. ತಪ್ಪೇನು ? ಈ media ಇರುವುದೇ ಮೋದಿ, ಬಿಜೆಪಿ, ಹಿಂದೂ, ಬ್ರಾಹ್ಮಣ್ಯ, ಭಾರತ ದೇಶದ ಮೇಲೆ ಗೂಬೆ ಕೂರಿಸಿ ತೆಗಳುವುದಕ್ಕೆ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...