1962 ರಲ್ಲಿ ನಡೆದ ಚೀನಾ-ಭಾರತದ ಸಂಘರ್ಷದ ನಂತರ, ಲಡಾಖ್‌ನಲ್ಲಿನ ಪರಿಸ್ಥಿತಿ ಇಂದಿಗೂ ಅತ್ಯಂತ ಗಂಭೀರವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
“ಇದು ಖಂಡಿತವಾಗಿಯೂ 1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ. 45 ವರ್ಷಗಳ ನಂತರ, ಈಗ ಈ ಗಡಿಯಲ್ಲಿ ನಾವು ಸೈನಿಕರ ಸಾವುನೋವುಗಳನ್ನು ಅನುಭವಿಸಿದ್ದೇವೆ. ಪ್ರಸ್ತುತ LAC ನಲ್ಲಿ ಎರಡೂ ಕಡೆ ನಿಯೋಜಿಸಿರುವ ಪಡೆಗಳ ಪ್ರಮಾಣವೂ ದೊಡ್ಡದಾಗಿಯೇ ಇದೆ” ಎಂದು ಜೈಶಂಕರ್ ತಮ್ಮ ಪುಸ್ತಕ ಬಿಡುಗಡೆಗೂ ಮೊದಲಿನ ಸಂದರ್ಶನವೊಂದರಲ್ಲಿ ರೆಡಿಫ್.ಕಾಮ್‌ಗೆ ತಿಳಿಸಿದರು.
ಯಥಾಸ್ಥಿತಿಯನ್ನು ಬದಲಾಯಿಸಲು ಏಕಪಕ್ಷೀಯವಾಗಿ ಪ್ರಯತ್ನಿಸದೆ, ಎಲ್ಲಾ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಗೌರವಿಸುವ ಬಗ್ಗೆ ಚೀನಾದೊಂದಿಗಿನ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ವಿಷಯದ ಬಗ್ಗೆ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದೆ ಎಂದು ಸಚಿವರು ಹೇಳಿದ್ದಾರೆ.
“ಎಲ್ಲರಿಗೂ ತಿಳಿದಿರುವಂತೆ, ನಾವು ಚೀನಿಯರೊಂದಿಗೆ ಮಿಲಿಟರಿ ಚಾನೆಲ್‌ಗಳು ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ವ್ಯವಹರಿಸುತ್ತಿದ್ದೇವೆ. ವಾಸ್ತವವಾಗಿ, ಅವರು ಒಟ್ಟಾಗಿ ಕಾರ್ಯನಿರ್ವಹಿಸಲು ಬಯಸುತ್ತಾರೆ” ಎಂದು ಜೈಶಂಕರ್ ಹೇಳಿದರು.
ಇದನ್ನೂ ಓದಿ: ಚೀನಾ ಭಾರತದ ಭೂಪ್ರದೇಶ ಅತಿಕ್ರಮಿಸಿದೆಯೆಂದು ಒಪ್ಪಿಕೊಂಡ ರಕ್ಷಣಾ ಸಚಿವಾಲಯ: ದಾಖಲೆ ಡಿಲಿಟ್!


