ಗಾಜಿಪುರದಲ್ಲಿರುವ ಭದ್ರತಾ ವ್ಯವಸ್ಥೆ ಪಾಕಿಸ್ತಾನ ಗಡಿಯಲ್ಲಿಯೂ ಇಲ್ಲ: ಗುಲಾಮ್ ನಬೀ ವ್ಯಂಗ್ಯ
Photo Courtesy: NDTV

ಚುನಾವಣೆಯಲ್ಲಿ ಆಯ್ಕೆಯಾಗದೇ, ನೇರವಾಗಿ ನೇಮಕಗೊಳ್ಳುವ ಕಾಂಗ್ರೆಸ್ ಅಧ್ಯಕ್ಷರಿಗೆ ಪಕ್ಷದಲ್ಲಿ ಶೇ 1 ರಷ್ಟೂ ಬೆಂಬಲವೂ ಇಲ್ಲದಿರಬಹುದು ಎಂದು ಪಕ್ಷದ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಸೋನಿಯಾ ಗಾಂಧಿಗೆ ಬರೆಯಲಾಗಿದ್ದ, ಭಿನ್ನಮತೀಯ ಪತ್ರಕ್ಕೆ ಸಹಿ ಹಾಕಿದವರಲ್ಲಿ ಪ್ರಮುಖರಾದ ಆಜಾದ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಉನ್ನತ ಸಭೆ ನಡೆದ ನಾಲ್ಕು ದಿನಗಳ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.

“ನಾವು ನೀಡಿದ ಹೇಳಿಕೆ ಅಥವಾ ನಮ್ಮ ಅಭಿಪ್ರಾಯದ ಮೇಲೆ ದಾಳಿ ನಡೆಸುತ್ತಿರುವ ಪದಾಧಿಕಾರಿಗಳು, ರಾಜ್ಯ ಘಟಕದ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಮುಂತಾದವರು ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ” ಎಂದು 71 ವರ್ಷದ ಗುಲಾಮ್ ನಬಿ ಆಜಾದ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆಂದು ಎನ್ ಡಿ ಟಿ ವಿ ವರದಿ ಮಾಡಿದೆ.

ಕಾಂಗ್ರೆಸ್ ನಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರು ನಮ್ಮ ಪತ್ರವನ್ನು ಖಂಡಿತಾ ಸ್ವಾಗತಿಸುತ್ತಾರೆ ಎಂದು ರಾಜ್ಯಸಭಾ ಸದಸ್ಯರಾಗಿರುವ ಆಜಾದ್ ಹೇಳಿದರು.

ಇದನ್ನೂ ಓದಿ: ಬೀದಿಯಲ್ಲಿ ಮಲಗಿದ್ದ ಬಾಲಕನ ಮೇಲೆ ಪೇದೆಯಿಂದ ಅಮಾನವೀಯ ಹಲ್ಲೆ: ಪೇದೆ ಅಮಾನತು

‘ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವಾಗ, ಚುನಾವಣೆಗೆ ನಿಲ್ಲುವವರ ಪರವಾದ ಮತಗಳು ಶೇಕಡಾ 51 ರಷ್ಟು ಇರಬೇಕಾಗುತ್ತದೆ. ಆದರೆ ಇದೀಗ, ನೇರ ನೇಮಕಾತಿಯ ಮೂಲಕ ಪಕ್ಷದ ಅಧ್ಯಕ್ಷರಾಗುವ ವ್ಯಕ್ತಿಗೆ ಶೇಕಡಾ 1 ರಷ್ಟೂ ಬೆಂಬಲವೂ ಇಲ್ಲದೇ ಹೋಗಬಹುದು! ಸಿಡಬ್ಲ್ಯೂಸಿ ಸದಸ್ಯರು ಒಮ್ಮೆ ಚುನಾಯಿತರಾದರೆ ಅವರನ್ನು ತೆಗೆದುಹಾಕಲಾಗುವುದಿಲ್ಲ. ಹಾಗಾಗಿ ನಿಮಗೇನು ಸಮಸ್ಯೆ?” ಎಂದು ಆಜಾದ್ ವ್ಯಂಗ್ಯವಾಡಿದರು.

ಸಂಸದರು ಮತ್ತು ಮಾಜಿ ಮಂತ್ರಿಗಳು ಸೇರಿದಂತೆ 23 ಕಾಂಗ್ರೆಸ್ ಮುಖಂಡರು ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ‘ವ್ಯಾಪಕ ಸುಧಾರಣೆ, ನ್ಯಾಯಯುತ ಆಂತರಿಕ ಚುನಾವಣೆ, ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪೂರ್ಣಕಾಲಿಕ ನಾಯಕತ್ವ’ದ ಬಗ್ಗೆ ಬೇಡಿಕೆ ಇಡಲಾಗಿತ್ತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಪತ್ರ ಬರೆದಿರುವವರ ಮೇಲೆ ವಾಗ್ದಾಳಿ ಮಾಡಲಾಯಿತು. ಈ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಹಾಜರಿದ್ದರು. ಪತ್ರ ಬರೆದಿರುವವರನ್ನು ಖಂಡಿಸಿದ್ದನ್ನು ಬಿಟ್ಟರೆ, ಪತ್ರದಲ್ಲಿನ ವಿಷಯಗಳ ಚರ್ಚೆ ಮುನ್ನೆಲೆಗೆ ಬರಲೇ ಇಲ್ಲ. ಭಿನ್ನಮತೀಯ ಪತ್ರಕ್ಕೆ ದೇಶದಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನ ನಡೆಯುವವರೆಗೂ ಸೋನಿಯಾ ಗಾಂಧಿ ಮಧ್ಯಂತರ ಮುಖ್ಯಸ್ಥರಾಗಿ ಉಳಿಯುತ್ತಾರೆ ಎಂದು ಘೋಷಿಸುವುದರೊಂದಿಗೆ ಅಂದಿನ ಸಭೆ ಕೊನೆಗೊಂಡಿತ್ತು.


ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಪಿಪಿಇ ಜೊತೆಗೆ ಸ್ಯಾನಿಟರಿ ಪ್ಯಾಡ್ ಹಾಗೂ ಡೈಪರ್‌ ಕೂಡಾ ಧರಿಸಬೇಕು: ಮಹಿಳಾ ವೈದ್ಯೆಯರ ಸಂಕಷ್ಟ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here