ಪಠ್ಯ ಪುಸ್ತಕಗಳ ಮರು-ಪರಿಸ್ಕರಣೆಯ ಹೆಸರಲ್ಲಿ ನಡೆದ ಕೇಸರೀಕರಣದ ವಿರುದ್ಧದ ಪ್ರತಿಭಟನೆಯಾಗಿ, ನಾಡಿನ ಖ್ಯಾತ ಸಾಹಿತಿಗಳು ಪಠ್ಯದಲ್ಲಿ ಸೇರಿಸಲಾಗಿದ್ದ ತಮ್ಮ ಸಾಹಿತ್ಯಕ್ಕೆ ಅನುಮತಿ ನಿರಾಕರಿಸಿದ್ದರು. ಶುಕ್ರವಾರ ರಾಜ್ಯ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿ ಅವುಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಾಲೆಗಳಿಗೆ ಸೂಚಿಸಲು ಹೇಳಿದೆ.
ಬಿಜೆಪಿ ಪರ ಟ್ರೋಲರ್ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಮರು-ಪರಿಷ್ಕರಣೆಯ ನಂತರ, ಕೇಸರೀಕರಣದ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಭಾರಿ ಪ್ರತಿಭಟನೆ ಕೂಡಾ ದಾಖಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದೇ ಸಮಯದಲ್ಲಿ ನಾಡಿನ ಹಲವಾರು ಪ್ರಸಿದ್ಧ ಸಾಹಿತಿಗಳು ಪಠ್ಯ ಪುಸ್ತಕಗಳಲ್ಲಿ ತಮ್ಮ ಬರಹಗಳನ್ನು ಅಳವಡಿಸಲು ನೀಡಿದ್ದ ಅನುಮತಿಯನ್ನು ನಿರಾಕರಿಸಿದ್ದರು. ಕೇಂದ್ರ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ದೇವನೂರು ಮಹಾದೇವ, ಡಾ.ಜಿ. ರಾಮಕೃಷ್ಣ, ರೂಪಾ ಹಾಸನ, ಈರಪ್ಪ ಎಂ. ಕಂಬಳಿ, ಸತೀಶ್ ಕುಲಕರ್ಣಿ, ಸುಕನ್ಯೆ ಮಾರುತಿ, ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಅವರು ತಮ್ಮ ಸಾಹಿತ್ಯಗಳನ್ನು ಸೇರಿಸದಂತೆ ಸರ್ಕಾರಕ್ಕೆ ಪತ್ರ ಬರೆದು ಕೇಳಿಕೊಂಡಿದ್ದರು.
ಇದರ ನಂತರ ರಾಜ್ಯ ಸರ್ಕಾರವು ಸಾಹಿತಿಗಳಿಗೆ ಪತ್ರ ಬರೆದು ತಮ್ಮ ನಿರ್ಧಾವನ್ನು ಬದಲಿಸುವಂತೆ ಮತ್ತು ಅವರ ಸಾಹಿತ್ಯಗಳನ್ನು ಶಾಲಾ ಪಠ್ಯಗಳಲ್ಲಿ ಬಳಸಲು ಅನುಮತಿ ನೀಡುವಂತೆ ಕೇಳಿಕೊಂಡಿತ್ತು. ಆದರೆ ಸಾಹಿತಿಗಳು ಕೇಸರಿಕರಣದ ವಿರುದ್ಧ ತಮ್ಮ ನಿಲುವುಗಳಿಗೆ ಬದ್ಧರಾಗಿದ್ದು, ಅನುಮತಿ ನೀಡುವುದಿಲ್ಲ ಎಂದು ಮರುಪತ್ರ ಬರೆದಿದ್ದರು.
ಇದನ್ನೂ ಓದಿ: ವಕ್ರಬುದ್ಧಿಯ ಚಕ್ರತೀರ್ಥ ಪರಿಷ್ಕರಿಸಿರುವ ಪಠ್ಯವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ: ಹೊಳಲಕೆರೆ ತಿಪ್ಪೆರುದ್ರ ಸ್ವಾಮಿಜಿ
ಇದರ ನಂತರ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’, ಡಾ.ಜಿ. ರಾಮಕೃಷ್ಣ ಅವರ ‘ಭಗತ್ ಸಿಂಗ್’, ರೂಪ ಹಾಸನ ಅವರ ‘ಅಮ್ಮನಾಗುವುದೆಂದರೆ’, ಈರಪ್ಪ ಎಂ. ಕಂಬಳಿ ಅವರ ‘ಹೀಗೊಂದು ಟಾಪ್ ಪ್ರಯಾಣ’, ಸತೀಶ್ ಕುಲಕರ್ಣಿ ಅವರ ‘ಕಟ್ಟತೇವ ನಾವು’, ಸುಕನ್ಯ ಮಾರುತಿ ಅವರ ‘ಏಣಿ’ ಹಾಗೂ ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಅವರು ಬರೆದಿರುವ ‘ಡಾ. ರಾಜ್‌ಕುಮಾರ್’ ಅವರು ಪಠ್ಯಗಳನ್ನು ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಾಲೆಗಳಿಗೆ ಸೂಚಿಸುವಂತೆ ಹೇಳಿದೆ.




ಚಡ್ಡಿ ಗಳಿಗೆ ಅದೇ ಬೇಕಾಗಿರೋದು
ಮುಂದಿನ ತಲೆಾರುಗಳನ್ನು ದೇವರೇ ಕಾಪಾಡಬೇಕು