Homeಮುಖಪುಟಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಭಾರತೀಯನಾಗಿ ಹುಟ್ಟಿ NRC ಕಾರಣದಿಂದ‍ ವಿದೇಶಿಯನಾಗಿ ಸತ್ತ ನರೇಶ್: ಇನ್ನು 19 ಲಕ್ಷ ಜನರ ಪಾಡೇನು?

ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ!

- Advertisement -
- Advertisement -

ಗಣರಾಜ್ಯ ಭಾರತ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಕಾಯ್ದೆ, ಕಾನೂನುಗಳನ್ನು ಕಂಡಿದೆ. ದೇಶವನ್ನು ಆಳಿದ ಹಲವಾರು ಸರ್ಕಾರಗಳು ಆಡಳಿತವನ್ನು ಸುಗಮಗೊಳಿಸುವ ಹಾಗೂ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹತ್ತಾರು ನೂತನ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಹಳೆಯ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನೂ ತರಲಾಗಿದೆ. ಆದರೆ, ಈವರೆಗೆ ಕೇಂದ್ರ ಸರ್ಕಾರದ ಕಾನೂನೊಂದಕ್ಕೆ ಈ ಪರಿ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿರುವುದು ಬಹುತೇಕ ಇದೇ ಮೊದಲು.

ಅವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪೌರತ್ವ ನೋಂದಣಿ ಕಾಯ್ದೆಗಳ(ಎನ್ಆರ್‌ಸಿ) ಯಾಗಿದ್ದು ಇವುಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಚಳುವಳಿ, ಹೋರಾಟ ಹಾಗೂ ಮುಷ್ಕರಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಆದರೆ, ಈ ಎರಡನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಇದು ದೇಶದ ನಾಗರೀಕರ ಪೌರತ್ವವನ್ನು ಧೃಡಪಡಿಸುವ ಕಾಯ್ದೆಯೇ ಹೊರತು ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆ ಅಲ್ಲ ಎಂದು ಬೊಬ್ಬೆ ಹೊಡೆಯುತ್ತಲೇ ಇವೆ.

ಈ ನಡುವೆ ಬೆಂಗಳೂರಿನಂತಹ ನಗರದಲ್ಲೇ ಪೌರತ್ವದ ಕುರಿತ ಸೂಕ್ತ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಬಾಂಗ್ಲಾ ನುಸುಳುಕೋರರು ಎಂಬ ಗುಮಾನಿಯಿಂದ ಉತ್ತರ ಕರ್ನಾಟಕದ ನೂರಾರು ಬಡ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ಕಿತ್ತು ಹಾಕಲಾಗಿದೆ. ಈಗಾಗಲೇ ಸರಿಯಾದ ಮಳೆ-ಬೆಳೆ ಇಲ್ಲದೆ ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬಂದು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿರುವ ರೈತರ ಬದುಕನ್ನೂ ಈ ಸರ್ಕಾರ ಕೇವಲ ಒಂದೇ ಕಾಯ್ದೆಯ ಮೂಲಕ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ.

ಅಸಲಿಗೆ ಬುಡಕಟ್ಟು ಸಮಾಜ ಭಾರತದ ಮೂಲ ನಿವಾಸಿಗಳು. ಅಸ್ಸಾಂನಿಂದ ಮೇಘಾಲಯ, ಜಾರ್ಖಂಡ್‌ವರೆಗೆ ಲಡಾಖ್‌ ಕಣಿವೆಗಳಿಂದ ದಕ್ಷಿಣ ಭಾರತದ ನೀಲಗಿರಿ ಬೆಟ್ಟದ ಸಾಲಿನವರೆಗೆ ಭಾರತದಲ್ಲಿ ಸರಿಸುಮಾರು ನೂರಾರು ಬುಡಕಟ್ಟು ಪಂಗಡಗಳಿವೆ. ಇವರು ಶತಮಾನಗಳಿಂದ ಇಲ್ಲೇ ಹುಟ್ಟಿ ಬೆಳೆದವರು.  ಆದರೆ, ಮೂಲತಃ ಅವಿದ್ಯಾವಂತರಾಗಿರುವ ಇವರ ಬಳಿ ಪೌರತ್ವದ ಕುರಿತ ಯಾವುದೇ ದಾಖಲೆಗಳಿಲ್ಲ. ಇರಲು ಸಾಧ್ಯವೂ ಇಲ್ಲ. ಹಾಗಾದರೆ ದಾಖಲೆಗಳಿಲ್ಲದ ಇವರ ಪಾಡೇನು? ಎಂಬ ಕುರಿತೂ ಸಹ ಸರ್ಕಾರ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬುಡಕಟ್ಟು ಸಮಾಜದ ಪಾಲಿಗೆ ಮರಣಶಾಸನವೇ ಆಗಿರುವ ಎನ್ಆರ್‌ಸಿ ಎರಡು ವರ್ಷಗಳ ಹಿಂದೆಯೇ ಅಸ್ಸಾಂನಲ್ಲಿ ಚಾಲ್ತಿಯಲ್ಲಿದೆ. ಈ ಕಾಯ್ದೆಯಿಂದ ಹಲವು ಬುಡಕಟ್ಟು ಜನ ಪೌರತ್ವ ಕಳೆದುಕೊಂಡು ಪಶುಗಳಂತೆ ಡಿಟೆನ್ಷನ್ ಸೆಂಟರ್‌ಗಳಲ್ಲಿ ಪ್ರಾಣ ಬಿಟ್ಟಿದ್ದಾರೆ/ ಬಿಡುತ್ತಿದ್ದಾರೆ. ಅಂತ ಒಂದು ಬುಡಕಟ್ಟು ಮಹಿಳೆಯ ಕಥೆ ಇಲ್ಲಿದೆ.

ಮೇಘಾಲಯದ ಗಾರೋ ಬುಡಕಟ್ಟಿನ ಹೆಣ್ಣು ಮಗಳ ಕತೆ

ಈಕೆಯ ಹೆಸರು ಜಿನು. ಮೇಘಾಲಯದ ಗಾರೋ ಎಂಬ ಬುಡಕಟ್ಟು ಹೆಣ್ಣುಮಗಳು. ಜನವರಿ 5ರಂದು ಗೋಲ್ ಪಾರ ಡಿಟೆನ್ಷನ್ ಕೇಂದ್ರದಲ್ಲಿ ಬಂಧಿಯಾಗಿ ಮೃತಪಟ್ಟ ನರೇಶ್ ಕೋಚ್ ಎಂಬಾತನ ಪತ್ನಿ.
ಮೃತ ನರೇಶ್ ನನ್ನು NRC ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಡಿಟೆನ್ಷನ್ ಸೆಂಟರ್‌ನಲ್ಲಿ ಕೂಡಿಹಾಕಲಾಗಿತ್ತು. ನರೇಶ್ ಬಂಗಾಲಿಯಲ್ಲ, ಮುಸ್ಲಿಮನೂ ಅಲ್ಲ, ಮುಸ್ಲಿಂ ಬಂಗಾಲಿಯೂ ಅಲ್ಲ. ಅಥವಾ ಬಾಂಗ್ಲಾದೇಶದಿಂದ ಬಂದಿರಬಹುದಾದ ಯಾವುದೇ ಬುಡಕಟ್ಟು ಸಮುದಾಯಕ್ಕೂ ಸೇರಿದವನಲ್ಲ. ಬದಲಾಗಿ ಅಸ್ಸಾಂನ ಮೂಲನಿವಾಸಿ ಕೋಚ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು.

ಕಳೆದ ವರ್ಷ ಬಿಡುಗಡೆಯಾದ NRC ಪಟ್ಟಿಯಲ್ಲಿ ಈತನ ಪುತ್ರ ಮತ್ತು ಸಹೋದರ ಸೇರಿದ್ದರು. ಆದರೆ ನರೇಶ್ ಹೊರಗೆ ಉಳಿದುಕೊಂಡುಬಿಟ್ಟ!. ಕೇಂದ್ರದ ಕಾನೂನನ್ನು ಕಾಪಾಡಲೇಬೇಕು ಎಂಬ ಉದ್ದೇಶದಿಂದ ಭಾರತದ ಬುಡಕಟ್ಟು ಸಮಾಜದವನೇ ಆದರೂ ಕೂಡ ಆತನನ್ನು ಒತ್ತಾಯಪೂರ್ವಕವಾಗಿ ಡಿಟೆನ್ಷನ್ ಸೆಂಟರ್‌ಗೆ ತಳಲ್ಪಟ್ಟಿದ್ದ.

ನರೇಶ್‌ ಕೋಚ್

ಕಳೆದ ಎರಡು ವರ್ಷದಿಂದ ನರೇಶ್‌ಗೆ ಬಿಪಿ ಇತ್ತು. ಕೊನೆಗೆ ಈತ ಡಿಟೆನ್ಷನ್ ಸೆಂಟರ್ನಲ್ಲಿ ಸ್ಟ್ರೋಕ್ ಆಗಿ ಸತ್ತೇ ಹೋದ. ಆ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟ 29ನೇ ವ್ಯಕ್ತಿ ಈತನಾಗಿದ್ದು, ಈತನ ಪತ್ನಿ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಗಂಡನ ಅಗಲಿಕೆಯಿಂದ ಅಳಲೂ ಅವಳ ಬಳಿ ಪುರುಸೊತ್ತಿಲ್ಲ. ಯಾಕೆಂದರೆ ನರೇಶನ ಮೃತದೇಹವನ್ನು ಸುಡಲು ಬಳಸಿದ ಕಟ್ಟಿಗೆಗೆ ಮಾಡಿದ ಏಳುನೂರು ರುಪಾಯಿ ಸಾಲವನ್ನು ಈಕೆ ತೀರಿಸಬೇಕಿದೆ! ಮೀನು ಸಾಕಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಿನುಗೆ ಏಳು ನೂರು ರುಪಾಯಿ ಹಣವನ್ನು ಹೊಂದಿಸುವುದು ದೊಡ್ಡ ಹೊರೆ.

ಎಂಥಾ ವಿಪರ್ಯಾಸ ನೋಡಿ ಕೇಂದ್ರದ ನೂತನ ಕಾನೂನಿನಿಂದ ಇವಳ ಗಂಡ ಭಾರತೀಯನಾಗಿ ಹುಟ್ಟಿದ ಆದರೆ, ದಾಖಲೆಯಿಲ್ಲದ ಕಾರಣಕ್ಕಾಗಿ ವಿದೇಶೀಯನಾಗಿ ಸತ್ತ. (ಸತ್ತ ಎನ್ನುವುದಕ್ಕಿಂತ ಕೊಲ್ಲಲ್ಪಟ್ಟ ಎಂಬುದು ಸೂಕ್ತ) ನರೇಶ್ ಸತ್ತಾಗ ಅವನದು ಯಾವ ದೇಶ? ಯಾರು ಉತ್ತರ ಕೊಡುತ್ತಾರೆ? ಇನ್ನೂ ಹೆಣ ಸುಟ್ಟ ಬಾಬ್ತು ಏಳು ನೂರು ರುಪಾಯಿ ತಾನೇ ಎನ್ನಬೇಡಿ, ಅಸ್ಸಾಮಿನಲ್ಲಿ ಸುಡಲು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಇನ್ನೂ ಹತ್ತೊಂಭತ್ತು ಲಕ್ಷ ಚಿಲ್ಲರೆ ಬುಡಕಟ್ಟು ಜನರ ಹೆಣಗಳು ಸರದಿಯಲ್ಲಿ ನಿಲ್ಲಲಿವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರಿಗೂ ಸಹ ನರೇಶ್ ಕೋಚನ ಪರಿಸ್ಥಿತಿ ಬರುವುದು ಬೇಡ. ಅದಕ್ಕಾಗಿ ನಾವೆಲ್ಲರೂ ಸಿಎಎ, ಎನ್. ಆರ್.ಸಿ. ಮತ್ತು ಎನ್.ಪಿ.ಅರ್.ಗಳನ್ನು ವಿರೋಧಿಸೋಣ.

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...