Homeಅಂಕಣಗಳುಟ್ರಂಪು-ಮೋದಿ ಜೋಡಿ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ!

ಟ್ರಂಪು-ಮೋದಿ ಜೋಡಿ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ!

- Advertisement -
- Advertisement -

ಭರತಮಾತೆಯ ಹೃದಯ ಭಾಗವಾದ ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್ ಕೆನೆದಿರುವುದರಿಂದ ಮೋದಿ ಮತ್ತು ಶಾ ಮುಖಗಳು ಇಂಗು ತಿಂದ ಮಂಗನ ಮುಖಗಳಾಗಿವೆಯಂತಲ್ಲಾ. ಕೇಜ್ರಿವಾಲ್ ಪಠಿಸಿದ್ದು ದೆಹಲಿ ಅಭಿವೃದ್ದಿ ಮಂತ್ರ ಮೋದಿ ಶಾ ಪಠಿಸಿದ್ದು ಮತಾಂಧಮಂತ್ರ. ಅನಾದಿಕಾಲದಿಂದಲೂ ಸುಲ್ತಾನರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ನರಳಿದ ದೆಹಲಿ ತುಂಬ ಬಸವಳಿದ ಪ್ರದೇಶ. ಇಂತಹ ಪ್ರದೇಶವನ್ನು ನೆಮ್ಮದಿಯಾಗಿಡುವ ಒಬ್ಬ ನಾಯಕ ಬೇಕಿತ್ತು. ಅವನನ್ನು ದೆಹಲಿ ಪಡೆದಿದೆ ಆದರೆ ಮೋದಿ ಶಾ ದಾಳಿಯಿಂದ ತತ್ತರಿಸಿರುವ ಭಾರತಕ್ಕೂ ಒಬ್ಬ ಕೇಜ್ರಿವಾಲ್ ಬೇಕಾಗಿದೆ. ಆದರೆ ಕೇಜ್ರಿವಾಲ್ ತರಹ ಇರುವ ವ್ಯಕ್ತಿ ಒಬ್ಬನೆ ಅದೇ ಕೇಜ್ರಿವಾಲ್! ಆತ ದೆಹಲಿಯಿಂದ ಹೊರನಡೆದು ನಾಯಕತ್ವ ವಹಿಸಿದ್ದಾದರೆ, ಮೋದಿ ಶಾ ಮುಲಾಜಿಲ್ಲದೆ ಗಟಾರ ಸೇರುವುದು ಗ್ಯಾರಂಟಿಯಂತಲ್ಲಾ ಥೂತ್ತೇರಿ….

ಭಾರತದಿಂದ ಪಾಲು ಪಡೆದ ಕ್ಷಣದಿಂದಲೂ ತಲೆ ಕೆಟ್ಟಂತೆ, ಮತಾಂಧರಾಗಿ ಗಡಿಭಾಗದ ತಂಟೆಕೋರರಾಗಿ, ಈ ಏಳುದಶಕಗಳೂ ಹುಚ್ಚಾಸ್ಪತ್ರೆ ಸೇರುವಂತಾಗಿರುವ ಪಾಕಿಸ್ತಾನ ಈಗ ಭಾರತದ ಪ್ರಜೆಗಳೂ ಜೈಲು ಸೇರುವಂತೆ ಮಾಡುತ್ತಿದೆಯಲ್ಲಾ. ವಿಷಯ ಇಷ್ಟೇ, ಇತ್ತೀಚೆಗೆ ಭಾರತದಲ್ಲಿ ಉದ್ಭವಿಸಿರುವ ದೇಶಭಕ್ತರಿಗೆ ಪಾಕಿಸ್ತಾನ ಎಂದಕೂಡಲೇ ಮೈಮೇಲೆ ಗಣಬಂದಂತಾಡುತ್ತವೆ. ಅಂತಹ ದೇಶಭಕ್ತಿ ಕೆರಳಿಸಲೆಂದೇ ಪಾಕೀಸ್ತಾನ್ ಜಿಂದಾಬಾದ್ ಎಂದು ಕೂಗಿದ ಹುಡುಗರು ಜೈಲು ಸೇರುತ್ತಿವೆ. ವಾಘಾ ಗಡಿಯಲ್ಲಿ ಈ ಕಡೆಯಿಂದ ಭಾರತಮಾತಾಕಿ ಜೈ ಎಂದರೆ, ಆ ಕಡೆಯಿಂದ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಮೊಳಗಿಸುತ್ತ ಸಂಜೆಯಾಗುತ್ತದೆ. ಅಂತಹ ದೇಶದ ಪರ ಘೋಷಣೆ ಕೂಗುವುದು ಅಪರಾಧವಾದರೆ ನಮ್ಮ ಜಡ್ಜ್‍ಗಳು ತಿಳುವಳಿಕೆ ಹೇಳಿ ಕಳುಹಿಸಬಹುದು. ಅದು ಬಿಟ್ಟು ಹೆಣ್ಣುಮಕ್ಕಳನ್ನ 14 ದಿನ ಜೈಲಿಗಾಕುವುದು ಎಷ್ಟು ಸರಿ ಎಂಬುದು ಸಾಮಾನ್ಯನ ಪ್ರಶ್ನೆಯಾಗಿದೆಯಲ್ಲಾ, ಥೂತ್ತೇರಿ…

ಫಲಭರಿತವಾಗಿ ಕಂಗೊಳಿಸಿದ್ದ ತೋಟ ಹಾಳಾಗುವ ಸಮಯಕ್ಕೆ ಮಂಗನ ಮುಸುಡಿ ಕಾಯಿ ಕಾಣಿಸಿಕೊಳ್ಳುತ್ತದಂತೆ. ಹಾಗೆಯೇ ಭಾರತದ ಉದ್ದಗಲಕ್ಕೆ ಕಾಣಿಸಿಕೊಳ್ಳುತ್ತಿರುವ ಈ ಅನಿಷ್ಟ ಕಾಯಿಗಳಾವುವೆಂದು ವಿವರಿಸಿ ಹೇಳಬೇಕಿಲ್ಲ. ಇಂತಹ ತೋಟಕ್ಕೆ ಇನ್ನೊಂದು ಮುಸುಡಿ ಲಗ್ಗೆ ಹಾಕಿ ಅಹಮದಾಬಾದಿನಲ್ಲಿ ಭಾಷಣ ಬಿಗಿಯುತ್ತಿರ ಬೇಕಾದರೆ, ಜನಗಳು ಲಾಠಿ ಚಾರ್ಜಿಗೆ ತುತ್ತಾದವರಂತೆ ಚದುರಿ ಹೋದರಂತಲ್ಲಾ. ನಿಜಕ್ಕೂ ಭೀಕರ ಭಾಷಣಕ್ಕೆ ಇದಕ್ಕಿಂತ ಪ್ರತಿಕ್ರಿಯೆ ಇನ್ನೊಂದಿರಲಾರದು. ಆದರೆ ಬಿ.ಜೆ.ಪಿ.ಗಳ ಪ್ರಕಾರ ಇದು ಕಾಂಗೈನ ಸಂಚು. ಸಭೆಯ ಮಧ್ಯದಲ್ಲೇ ಎದ್ದುಹೋಗಿ ಮೋದಿ ಟ್ರಂಪ್‍ಗೆ ಅವಮಾನ ಮಾಡಲೆಂದೇ ಕಾಂಗೈಗಳು ನುಸುಳಿಬಂದಿದ್ದವಂತೆ. ಸುದೈವಕ್ಕೆ ಇಂತಹ ಸಭಾಕಿಡಿಗೇಡಿಗಳು ಪಾಕೀಸ್ತಾನದಿಂದ ಬಂದಿದ್ದರು ಎಂದಿಲ್ಲವಲ್ಲಾ. ಥೂತ್ತೇರಿ…

ಭಾರತಕ್ಕೆ ಬಂದ ಟ್ರಂಪ್ ಸಾಬರಮತಿ ಆಶ್ರಮಕ್ಕೂ ಭೇಟಿ ನೀಡಿದರು. ಗಾಂಧಿ ಕೊಂದವರ ಪಾರ್ಟಿಯ ಪ್ರಧಾನಿಯಾದ ಮೋದಿ ಮಹಾತ್ಮರು ಟ್ರಂಪ್‍ಗೆ ಗಾಂಧಿ ಪರಿಚಯ ಮಾಡಿಕೊಡುವ ಜವಾಬ್ದಾರಿ ಬಂದಾಗ, “ನೋಡಿ ಟ್ರಂಪ್ ಇದು ಗಾಂಧಿ ಕಟ್ಟಿದ ಆಶ್ರಮ. ಅವರ ಬಗ್ಗೆ ನಿಮ್ಮ ಮಾರ್ಟಿನ್ ಲೂಥರ್ ಕಿಂಗ್ ಏನೇಳಿದಾರೆ ಅಂದ್ರೆ, `ಗಾಂಧಿ ಈ ಜಗತ್ತಿನ ಜೀವಸತ್ವ ಅವರಿಲ್ಲದೆ ಜಗತ್ತು ಉಳಿಯದು’ ಎಂದಿದ್ದಾರೆ. ಆದರೆ ನಮ್ಮ ಬಿ.ಜೆ.ಪಿ ಜನ ಅದು ಹೇಗೆ ಉಳಿಯಲ್ಲವೋ ನೋಡೋಣ ಎಂದು ಈಗಾಗಲೇ ಗಾಂಧಿ ಕೊಂದವನಿಗೆ ಗುಡಿ ಕಟ್ಟಿದ್ದಾರೆ. ಹಲವು ಜಾಗದಲ್ಲಿದ್ದ ಗಾಂಧಿ ಪ್ರತಿಮೆ ದ್ವಂಸ ಮಾಡಿದ್ದಾರೆ. ನಾನೇ ಉದ್ಘಾಟಿಸಿದ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದಾರೆ. ಏನು ಮಾಡಿದರೂ ಈ ಗಾಂಧಿ ಹೆಸರನ್ನ ಅಳಿಸಿ, ಅಲ್ಲಿಗೆ ನಮ್ಮ ವೀರಸಾರ್ಕರ್‍ನನ್ನ ಸ್ಥಾಪಿಸಲಾಗುತ್ತಿಲ್ಲ” ಎನ್ನಲಾಗದೆ ಪರಿತಪಿಸಿದರಂತಲ್ಲಾ, ಥೂತ್ತೇರಿ…

ಟ್ರಂಪು ಮತ್ತು ಮೋದಿ ಸೇರಿಕೊಂಡು ಪ್ರಪಂಚದಲ್ಲೇ ಬಲಿಷ್ಟ ರಾಷ್ಟ್ರಗಳನ್ನು ನಿರ್ಮಾಣ ಮಾಡಿಕೊಂಡು, ಸುಂದರವಾಗಿ ಬದುಕುವ ಸುಳ್ಳುಗಳನ್ನು ಹೇಳುತ್ತಿರುವ ಸಮಯಕ್ಕೆ ಸರಿಯಾಗಿ, ಮಲೆನಾಡಿನ ಕಡೆಯಿಂದ ಬಂದ ಸುದ್ದಿಯೊಂದು ಅಘಾತ ನೀಡಿದೆಯಲ್ಲಾ. ಏನೆಂದರೆ ನಮ್ಮ ಜನ ದಿನನಿತ್ಯವು ಸೇವಿಸುವ ಅನ್ನದಂತಹ ಆಹಾರವಾದ ಅಡಿಕೆ ಬೆಳೆಯನ್ನ ಕಾಪಾಡಲು ಹೊಡೆದ ವಿಷಯುಕ್ತ ಔಷಧಿಯ ಪರಿಣಾಮವಾಗಿ ಜೇನುಹುಳು ಸತ್ತು ಉದುರುತ್ತಿವೆ. ಈ ಜಗತ್ತು ಹೃದಯ ವಿದ್ರಾವಕವಾಗಿ ನಿರ್ಗಮಿಸುವುದು ಜೇನುಹುಳದ ನಿರ್ಗಮನದ ನಂತರ. ಅಂದರೆ ಈಗಾಗಲೇ ಜೇನಿನ ನಿರ್ಗಮನ ಆರಂಭವಾಗಿದೆ. ಇದೇ ಔಷಧಿ ದೆಸೆಯಿಂದ ಚಿಟ್ಟೆಗಳ ವಂಶ ನಿರ್ವಂಶವಾಗುವತ್ತ ಸಾಗುತ್ತಿದೆ. ಟ್ರಂಪು ಮತ್ತು ಮೋದಿ ಜೋಡಿ ನೋಡಿದರೆ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ, ಥೂತ್ತೇರಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...