ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ಅವರನ್ನು ಒಕ್ಕೂಟ ಸರ್ಕಾರ ಕೇಳಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ. ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸುವ ಕಾರ್ಯವಿಧಾನದ ಭಾಗವಾಗಿ, ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸಲು ಕಾನೂನು ಸಚಿವರು ಸಿಜೆಐಗೆ ಪತ್ರ ಬರೆಯುವುದು ಸಂಪ್ರದಾಯವಾಗಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರಸ್ತುತ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಈ ವರೆಗಿನ ಸಂಪ್ರದಾಯದಂತೆ ಸಿಜೆಐ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತನ್ನ ಉತ್ತರಾಧಿಕಾರಿ ಎಂದು ಹೆಸರಿಸುತ್ತಾರೆ. ಹೀಗಾಗಿ ನ್ಯಾಯಮೂರ್ತಿ ಚಂದ್ರಚೂಡ್ ಅವರು 50 ನೇ ಸಿಜೆಐ ಆಗಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಗಸ್ಟ್ 27 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಸುಮಾರು 74 ದಿನಗಳ ನಂತರ ನವೆಂಬರ್ 8 ರಂದು ಆಗಿ ನಿವೃತ್ತರಾಗಲಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ತನ್ನ ಹಿರಿಯ ವಕೀಲರಾಗಿ ಸಿಜೆಐ ಮಗನ ನೇಮಕಾತಿ ಮುಂದೂಡಿದ ಯುಪಿ ಸರ್ಕಾರ
ಮುಖ್ಯ ನ್ಯಾಯಮೂರ್ತಿ ತನ್ನ ಉತ್ತರಾಧಿಕಾರಿಯನ್ನು ಹೆಸರಿಸಿದ ನಂತರ, ನ್ಯಾಯಮೂರ್ತಿಗಳ ನೇಮಕಾತಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ಉನ್ನತ ಸಂಸ್ಥೆಯಾದ ಕೊಲಿಜಿಯಂನ ಯಾವುದೇ ಸಭೆಯನ್ನು ಕರೆಯುವಂತಿಲ್ಲ. ಹೀಗಾಗಿ ನ್ಯಾಯಮೂರ್ತಿ ಲಲಿತ್ ನೇತೃತ್ವದ ಕೊಲಿಜಿಯಂ ಸುಪ್ರೀಂಕೋರ್ಟ್‌ನಲ್ಲಿ ಖಾಲಿ ಇರುವ ನಾಲ್ಕು ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಯಾರನ್ನೂ ಶಿಫಾರಸು ಮಾಡುವಂತಿಲ್ಲ.
ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಒಕ್ಕೂಟ ಸರ್ಕಾರದ ಕಾನೂನು ಸಚಿವಾಲಯವು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಅಪರೂಪವೆಂಂತೆ ಟ್ವೀಟ್ ಕೂಡ ಮಾಡಿದೆ.
As per the MoP on appointment of Chief Justice of India and Supreme Court Judges, today the Hon’ble Minister of Law and Justice sent a letter to the Hon’ble Chief Justice of India for sending his recommendations for appointment of his successor.
— Ministry of Law and Justice (@MLJ_GoI) October 7, 2022
ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ‘ದೇಶದ್ರೋಹ’ ಕಾನೂನನ್ನು ಸಮರ್ಥಿಸಿಕೊಂಡ ಮೋದಿ ನೇತೃತ್ವದ ಬಿಜೆಪಿ ಸರ್ಕಾರ
ಈ ನಡುವೆ ಸುಪ್ರೀಂಕೋರ್ಟ್‌ನ ನಾಲ್ಕು ನೇಮಕಾತಿಗಾಗಿ ಲಿಖಿತ ಪ್ರಸ್ತಾವನೆಯನ್ನು ಪ್ರಸಾರ ಮಾಡಿದ್ದರ ಬಗ್ಗೆ ಐವರು ಹಿರಿಯ ನ್ಯಾಯಾಧೀಶರಿರುವ ಕೊಲೀಜಿಯಂನಲ್ಲಿ ಭಿನ್ನಾಭಿಪ್ರಾಯವಿದೆ. ನ್ಯಾಯಮೂರ್ತಿಗಳಾದ ಚಂದ್ರಚೂಡ್, ಸಂಜಯ್ ಕಿಶನ್ ಕೌಲ್, ಕೆಎಂ ಜೋಸೆಖ್ ಮತ್ತು ಅಬ್ದುಲ್ ನಜೀರ್ ಅವರಿಗೆ ಪ್ರಸ್ತಾವನೆ ಪ್ರಸಾರ ಮಾಡಲಾಗಿತ್ತು.
ತಮ್ಮ ಲಿಖಿತ ಅಭಿಪ್ರಾಯಗಳನ್ನು ಕೇಳಿರುವ ಮುಖ್ಯ ನ್ಯಾಯಮೂರ್ತಿಯನ್ನು ಕೊಲಿಜಿಯಂನ ಇಬ್ಬರು ಸದಸ್ಯರು ಆಕ್ಷೇಪಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮ ಅಭಿಪ್ರಾಯಗಳನ್ನು ಬರವಣಿಗೆಯಲ್ಲಿ ನೀಡಲು ಸಾಧ್ಯವಿಲ್ಲ ಮತ್ತು ಒಮ್ಮತವನ್ನು ರೂಪಿಸಲು ಚರ್ಚೆಗಳು ನಡೆಯಬೇಕು ಎಂದು ಅವರು ಹೇಳಿದ್ದಾರೆ.
ಮೂವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್ ಹಿರಿಯ ವಕೀಲರನ್ನು ಸೆಪ್ಟೆಂಬರ್ 30 ರಂದು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲು ಕೊಲಿಜಿಯಂ ಪರಿಗಣಿಸಬೇಕಿತ್ತು.
ಇದನ್ನೂ ಓದಿ: ದ್ವೇಷ ಭಾಷಣ: ಹಿಮಾಚಲ ಸರ್ಕಾರಕ್ಕೆ ತರಾಟೆ, ಉತ್ತರಾಖಂಡ್‌ಗೆ ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್
ಅದಾಗ್ಯೂ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಂಜೆಯವರೆಗೂ ನ್ಯಾಯಾಲಯದಲ್ಲಿದ್ದ ಕಾರಣ ಕೊಲೀಜಿಯಂ ಸಭೆ ಸೇರಲು ಸಾಧ್ಯವಾಗಿರಲಿಲ್ಲ. ಮರುದಿನ ಅಕ್ಟೋಬರ್ 1 ರಂದು ದಸರಾ ರಜೆಗಾಗಿ ನ್ಯಾಯಾಲಯಕ್ಕೆ ಬಿಡುವು ನೀಡಲಾಗಿತ್ತು. ಅಕ್ಟೋಬರ್ 10 ರಂದು ಸುಪ್ರೀಂ ಕೋರ್ಟ್ ಪುನರಾರಂಭಗೊಳ್ಳಲಿದೆ.


