Homeಮುಖಪುಟಸುಪ್ರೀಂಕೋರ್ಟ್‌ನಲ್ಲಿ ತನ್ನ ಹಿರಿಯ ವಕೀಲರಾಗಿ ಸಿಜೆಐ ಮಗನ ನೇಮಕಾತಿ ಮುಂದೂಡಿದ ಯುಪಿ ಸರ್ಕಾರ

ಸುಪ್ರೀಂಕೋರ್ಟ್‌ನಲ್ಲಿ ತನ್ನ ಹಿರಿಯ ವಕೀಲರಾಗಿ ಸಿಜೆಐ ಮಗನ ನೇಮಕಾತಿ ಮುಂದೂಡಿದ ಯುಪಿ ಸರ್ಕಾರ

ಸುಪ್ರೀಂಕೋರ್ಟ್‌ನಲ್ಲಿ EWS ವಿಚಾರಣೆ ನಡೆಯುತ್ತಿರುವ ಮಧ್ಯೆ ಸಿಜೆಐ ಮಗನನ್ನು ಸರ್ಕಾರಿ ವಕೀಲರನ್ನಾಗಿ ನೇಮಿಸಿರುವುದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಲಾಗಿತ್ತು

- Advertisement -
- Advertisement -

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು.ಯು.ಲಲಿತ್ ಅವರ ಮಗ ಶ್ರೀಯಶ್ ಲಲಿತ್‌ ಅವರನ್ನು ಉತ್ತರ ಪ್ರದೇಶ ಸರ್ಕಾರವು ರಾಜ್ಯ ಸರ್ಕಾರದ ಹಿರಿಯ ವಕೀಲರಾಗಿ ಸುಪ್ರೀಂಕೋರ್ಟ್‌ನಲ್ಲಿ ನೇಮಕ ಮಾಡಿತ್ತು. ನೇಮಕ ಮಾಡಿ ಕೆಲವೇ ದಿನಗಳ ನಂತರ ಸರ್ಕಾರವು ನೇಮಕವನ್ನು ಸೋಮವಾದ ಮುಂದೂಡಿದೆ.

ಮುಂದಿನ ಆದೇಶದವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಹಿರಿಯ ವಕೀಲರಾಗಿ ಶ್ರೀಯಶ್ ಲಲಿತ್ ಅವರ ನೇಮಕವನ್ನು ಮುಂದೂಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಸೆಪ್ಟೆಂಬರ್ 21 ರಂದು ಶ್ರೀಯಶ್ ಲಲಿತ್ ಅವರನ್ನು ಹುದ್ದೆಗೆ ನೇಮಕ ಮಾಡಲಾಗಿತ್ತು. ಅದಾಗಿ ಐದು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶ್ರೀಯಶ್ ಲಲಿತ್ ಅವರಲ್ಲದೆ ಇತರ ಮೂವರು ವಕೀಲರಾದ ಪ್ರೀತಿ ಗೋಯಲ್, ನಮಿತ್ ಸಕ್ಸೇನಾ ಮತ್ತು ಯಶಾರ್ಥ್ ಕಾಂತ್ ಅವರ ನೇಮಕಾತಿಯನ್ನೂ ರಾಜ್ಯ ಸರ್ಕಾರವು ಮುಂದೂಡಿದೆ.

ಇದನ್ನೂ ಓದಿ: ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಮಗನನ್ನು ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರನ್ನಾಗಿ ನೇಮಿಸಿದ ಯುಪಿ ಸರ್ಕಾರ

ಶ್ರೀಯಶ್ ಲಲಿತ್ 2017 ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಫ್ಯಾಕಲ್ಟಿಯಿಂದ ಪದವಿ ಪಡೆದ್ದರು. ನಂತರ ಅವರು 2018 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ಶ್ರೀಯಶ್‌ ತಂದೆ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಆಗಸ್ಟ್ 27 ರಂದು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರು ಆಗಸ್ಟ್ 26 ರಂದು ನಿವೃತ್ತರಾದ ನ್ಯಾಯಮೂರ್ತಿ ಎನ್‌‌.ವಿ. ರಮಣ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್‌ ಅವರ ಅವಧಿ ಕಡಿಮೆಯಾಗಿದ್ದು, ಅವರು ನವೆಂಬರ್ 8 ರಂದು ನಿವೃತ್ತರಾಗಲಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದಲ್ಲಿ 400 ಕ್ಕೂ ಹೆಚ್ಚು ಎಂಪನೆಲ್ ವಕೀಲರು ಇದ್ದಾರೆ ಎಂದು ಮೇ ತಿಂಗಳಲ್ಲಿ ಹೇಳಿತ್ತು.

ಇದನ್ನೂ ಓದಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಯು.ಯು. ಲಲಿತ್ ನೇಮಕ

ಮೇಲ್ಜಾತಿಗಳಿಗೆ 10% ಮೀಸಲಾತಿ (EWS) ನೀಡಿರುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆ, ಆದಿತ್ಯನಾಥ್‌‌ ಸರ್ಕಾರವು ಯು.ಯು. ಲಲಿತ್ ಅವರ ಮಗನನ್ನು ಸುಪ್ರೀಂಕೋರ್ಟ್‌ನಲ್ಲಿ ಯುಪಿ ಸರ್ಕಾರದ ಹಿರಿಯ ವಕೀಲರ ಸಮಿತಿಗೆ ವಕೀಲರನ್ನಾಗಿ ನೇಮಿಸಿದ್ದು ವಿವಾದ ಉಂಟಾಗಿತ್ತು.

ಬಿಜೆಪಿ ಸರ್ಕಾರದ ಈ ನಡೆಯನ್ನು ಹಲವರು ಪ್ರಶ್ನಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಕೂಡಾ ವ್ಯಕ್ತವಾಗಿದ್ದು, ‘ಜಾತಿಯತೆಯ ಕೊಲೀಜಿಯಂ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪತ್ರಕರ್ತ ಹಂಸರಾಜ್ ಮೀನಾ ಅವರು #casteist_collegium (ಜಾತಿಯತೆಯ ಕೊಲೀಜಿಯಂ) ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ, “ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ EWS ವಿಚಾರಣೆಯ ಮಧ್ಯೆ, ಯುಪಿ ಸರ್ಕಾರವು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ ಮಗನನ್ನು ಯುಪಿ ಸರ್ಕಾರದ ವಕೀಲರನ್ನಾಗಿ ನೇಮಿಸುವ ಮೂಲಕ ಏನನ್ನು ಸೂಚಿಸುತ್ತದೆ?” ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಹೇಗೆ ನೇಮಕ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

ಪ್ರೋಫೆಸರ್‌ ದಿಲೀಪ್ ಮೊಂಡಲ್ ಅವರು,“ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಇಡಬ್ಲ್ಯೂಎಸ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಯುಪಿ ಸರ್ಕಾರವು ಲಲಿತ್ ಅವರ ಮಗನನ್ನು ಹಿರಿಯ ಸರ್ಕಾರಿ ವಕೀಲರನ್ನಾಗಿ ಮಾಡಿದೆ. ಇದು ಲಂಚ ಮತ್ತು ಹಿತಾಸಕ್ತಿ ಸಂಘರ್ಷದ ಲಜ್ಜೆಗೆಟ್ಟ ವಿಷಯವಾಗಿದೆ. ಲಲಿತ್ ಇಡಬ್ಲ್ಯೂಎಸ್ ಪ್ರಕರಣದಿಂದ ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದ್ದರು.

ಇನ್ನು ಕೆಲವರು ಇದು ಪರೋಕ್ಷ ಮೀಸಲಾತಿ ಎಂದು ಅಭಿಪ್ರಾಯಪಟ್ಟಿದ್ದು, ಅದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...