Homeಮುಖಪುಟಈ ರೈತ ಹೋರಾಟಕ್ಕೆ ಗೆಲುವು ನಿಶ್ಚಿತ: ಇದು ಇತರ ಹೋರಾಟಗಳಿಗೆ ನಾಂದಿಯಾಗಲಿ

ಈ ರೈತ ಹೋರಾಟಕ್ಕೆ ಗೆಲುವು ನಿಶ್ಚಿತ: ಇದು ಇತರ ಹೋರಾಟಗಳಿಗೆ ನಾಂದಿಯಾಗಲಿ

ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.

- Advertisement -
- Advertisement -

ಈ ರೈತ ಚಳವಳಿ ಮೂರು ಕೃಷಿ ಕಾಯಿದೆಗಳ ರದ್ಧತಿಗಷ್ಟೇ ಸೀಮಿತವಲ್ಲ. ಇದು ಸಂಸದೀಯ, ಪ್ರಜಾಸತ್ತಾತ್ಮಕ ಸಂವಾದವನ್ನು ಪುನರ್‌ ಸ್ಥಾಪಿಸುವ ಚಳವಳಿಯಾಗುತ್ತಿದೆ.

ಗಣ ರಾಜ್ಯ ಸ್ಥಾಪನೆಯಾದಾಗ ರಾಜಶಾಹಿ, ಪಾಳೆಗಾರಿ ಆಳುವಿಕೆಯಿಂದ ಮುಕ್ತವಾಗಿ ನಮ್ಮನ್ನು ಆಳುವವರನ್ನು ನಾವೇ ಆರಿಸುವ ಬಡವ- ಬಲ್ಲಿದ; ದಲಿತ, ಆದಿವಾಸಿ, ಮಹಿಳೆ; ಭೂಮಿ ಹೊಂದಿದವನು- ಭೂರಹಿತ ; ಹೀಗೆ ಎಲ್ಲರೂ ಈ ಆಯ್ಕೆಯ ಯಜ್ಞದಲ್ಲಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಲುದಾರರಾದರು. ಈ ರೋಮಾಂಚನವೇ ಭಾರತದ ಪ್ರಜಾಸತ್ತೆಯನ್ನು ಇಂದೂ ಉಳಿಸಿದೆ.

ಆದರೆ ಕಳೆದ 70 ವರ್ಷಗಳಲ್ಲಿ ಜನತೆಗೆ ಅನುಭವಕ್ಕೆ ಬಂದ ಸಂಗತಿ ಎಂದರೆ ಆಳುವವರನ್ನೇನೋ ಬದಲಾಯಿಸಬಹುದು. ಆದರೆ ಆಡಳಿತವನ್ನು ನಿರ್ದೇಶಿಸುವುದು ಹೇಗೆ? ಆಳುವವರನ್ನು ನಿಜಾರ್ಥದ ಜನಸೇವಕರನ್ನಾಗಿ ಮಾಡುವುದು ಹೇಗೆ?
ಆಡಳಿತದ ಪ್ರಕ್ರಿಯೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದು ಹೇಗೆ? ಸರಕಾರವೊಂದು ಜನರ ಸಾಂವಿಧಾನಿಕ ಹಕ್ಕೊತ್ತಾಯಗಳನ್ನು ಈಡೇರಿಸುವ ಯಂತ್ರವಾಗುವುದು ಹೇಗೆ?

ಈ ವೈಫಲ್ಯವೇ ತೀವ್ರ ಹತಾಶೆ ಮತ್ತು ಸಿನಿಕತನವನ್ನು ಹುಟ್ಟು ಹಾಕಿದೆ. “ಜಾತಿ, ಹಣ, ಹೆಂಡ, ಧರ್ಮ ರಾಜಕಾರಣದ ಪ್ರಭಾವಕ್ಕೆ ಒಳಗಾಗಿ ಮತ ಹಾಕುತ್ತಾರೆ. ಗೆದ್ದ ಮೇಲೆ ಈ ಜನ ಪ್ರತಿನಿಧಿಗಳನ್ನು ಹಿಡಿಯಲೂ ಸಾಧ್ಯವಾಗುವುದಿಲ್ಲ; ಕಡಿವಾಣ ಹಾಕಲೂ ಸಾಧ್ಯವಾಗುತ್ತಿಲ್ಲ. ಏನಿದ್ದರೂ ಮುಂದಿನ ಚುನಾವಣೆಗೆ ಕಾಯಬೇಕು. ಆಗಲೂ ಅಷ್ಟೇ. ಇವನ ಬದಲು ಇವನ ತದ್ರೂಪಿ ಅದೇ ಸ್ಥಾನವನ್ನು ಆಕ್ರಮಿಸುತ್ತಾನೆ.”
ಈ ಗೋಳು ತೀವ್ರವಾಗಿದೆ.

ಚುನಾವಣಾ ನಂತರದ ಆಡಳಿತ ಪ್ರಕ್ರಿಯೆಯಲ್ಲಿ – ಅಂದರೆ, ಸರಕಾರದ ಪ್ರತೀ ಹೆಜ್ಜೆ ಗತಿ, ನಿರ್ಧಾರಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿನಿಂದ ನಾವು ಪ್ರತಿಕ್ರಿಯಿಸುತ್ತಲೇ ಇಲ್ಲ.

ಈ ಜಡತ್ವವೇ ಸರಕಾರಗಳು ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಕಾರಣವಾಗಿದೆ. ಬಹುತೇಕ ಎಲ್ಲಾ ಪಕ್ಷಗಳೂ ಒಂದೇ ಮೂಸೆಯಲ್ಲಿ ತಯಾರಾದ ವಿವಿಧ ಬಣ್ಣಗಳ ರಾಕ್ಷಸ ಗೊಂಬೆಗಳಂತಿವೆ.

ಭಾಜಪ ಕಾರ್ಪೋರೇಟ್‌ ಮತ್ತು ಕೋಮು ರಾಜಕಾರಣದ ಪ್ರಳಯಾಂತಕ ಮಿಶ್ರಣದ ಮೂಲಕ ಸಂವಿಧಾನ ಮತ್ತು ಅದರ ಆಶಯಗಳನ್ನು ನಿರ್ಲಜ್ಜ, ನಿರ್ಲಕ್ಷ್ಯದ ಮೂಲಕ ಹೊಸಕಿ ಹಾಕುತ್ತಿದ್ದರೆ, ಪ್ರಾದೇಶಿಕ ಪಕ್ಷಗಳು ಪಾಳೇಗಾರಿಕೆ ಗುಣ ಮತ್ತು ಜಾಗತೀಕರಣದ ಆರ್ಥಿಕತೆಯ ದಳ್ಳಾಳಿ ವರ್ತನೆಯನ್ನು ಕಣಕಣದಲ್ಲಿ ತುಂಬಿಕೊಂಡಿವೆ.

ಇಂಥಾ ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.

ಟ್ರಾಕ್ಟರ್‌ ದೊಡ್ಡ ರೈತರ ಸಂಕೇತವಾಗಿತ್ತು; ನಿಜ. ಆದರೆ ಇಂದು ಅದು ಹೋರಾಟದ ಮುಂಚೂಣಿಯಲ್ಲಿರುವ ರೈತರ ಸಂಕೇತವಾಗಿದೆ.

ಈ ಹಿಂದೆ ಕೋಟೆಯ ದಿಡ್ಡಿ ಬಾಗಿಲು ಮುರಿಯಲು ಆನೆಗಳನ್ನು ಬಳಸುವುದಿತ್ತು. ಆದಾದ ಮೇಲೆ ಕಾಲಾಳುಗಳು ಯುದ್ಧ ಮಾಡುತ್ತಿದ್ದರು.

ಈ ಬಗ್ಗೆ ಬರುವ ಟೀಕೆ , ಗಾಸಿಪ್ಪುಗಳು ಆಳುವವರು ಎದೆಗುಂದಿರುವುದರ ಸಂಕೇತ. ಈ ಹೋರಾಟದಲ್ಲಿ ಗೆಲುವು ನಿಶ್ಚಿತ. ಯಾಕೆಂದರೆ ಮೂಲತಃ ಸರಕಾರ ಆಳದಲ್ಲಿ ಜನಸಾಮಾನ್ಯರ, ರೈತರ ಬಾಳುವೆಯನ್ನು ಛಿದ್ರಗೊಳಿಸಿ ತನ್ನ ಕಾರ್ಪೋರೇಟ್‌ ಗೆಣೆಕಾರರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿರುವುದು ಪ್ರತೀ ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಾಣುತ್ತಿದೆ.

ಈ ಹೋರಾಟದ ಗೆಲುವು ಇಷ್ಟು ಬಲವಿಲ್ಲದ ಸಮುದಾಯಗಳ ಹೋರಾಟಗಳಿಗೆ ನಾಂದಿಯಾಗಲಿ
ಸಂವಿಧಾನದ ಪೀಠಿಕೆಯನ್ನು ಮತ್ತು ನಿರ್ದೇಶಕ ತತ್ವಗಳನ್ನು ಮೋದಿ ಸರಕಾರದ ಎದುರು ಇಟ್ಟರೆ ಒಂದೊಂದು ಹೆಜ್ಜೆಯಲ್ಲೂ ಈ ಸರಕಾರದ ಸಂವಿಧಾನ ವಿರೋಧಿ ನಡೆ ನಿಚ್ಚಳವಾಗಿ ತೋರುತ್ತದೆ. ಸಂವಿಧಾನ ವಿರೋಧೀ ಆಂದರೆ ಜನರ ಆಶೋತ್ತರಗಳ ವಿರೋಧಿ. ಅಂದರೆ ಜನ ವಿರೋಧಿ.

ಆದ್ದರಿಂದಲೇ ಈ ರೈತ ಹೋರಾಟ ನಮ್ಮ ನೆಲಮೂಲದ ಎಲ್ಲರ ಆಶೋತ್ತರಗಳ ಪ್ರತಿರೋಧದ ಪ್ರತಿರೂಪ. ಸಂವಿಧಾನವೇ ಇಲ್ಲಿ ಜಂಗಮ ರೂಪ ತಾಳಿದೆ.

  • ಕೆ.ಪಿ ಸುರೇಶ್, ಚಿಂತಕರು, ಬರಹಗಾರರು.

ಇದನ್ನೂ ಓದಿ: ಬಜೆಟ್ ದಿನ ರೈತರಿಂದ ಪಾರ್ಲಿಮೆಂಟ್ ಚಲೋ : ಸಂಸತ್ತಿಗೆ ಪಾದಯಾತ್ರೆ ನಡೆಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...