Homeಮುಖಪುಟಬಿಲ್ಕಿಸ್ ಬಾನುಗೆ ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರು

ಬಿಲ್ಕಿಸ್ ಬಾನುಗೆ ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರು

- Advertisement -
- Advertisement -

ಭಾರತದ 75ನೇ ಸ್ವಾತಂತ್ರ್ಯ ದಿನ ಕೆಂಪು ಕೋಟೆಯಿಂದ ಭಾಷಣ ಮಾಡಿದ ಮೋದಿ ಮಹಿಳಾ ಶಕ್ತಿ ಅಥವಾ ‘ನಾರಿ ಶಕ್ತಿ’ಯ ಬಲವರ್ಧನೆಗೆ ಕರೆ ನೀಡಿದ್ದರು ಮತ್ತು ಮಹಿಳೆಯರನ್ನು ಅವಮಾನಿಸುವ ಪ್ರತಿಯೊಂದು ನಡವಳಿಕೆ, ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಹೇಳಿದ್ದರು. ಆಗಸ್ಟ್ 15 ರಂದು ಪ್ರಧಾನ ಮಂತ್ರಿಗಳು ಕೆಂಪುಕೋಟೆಯಲ್ಲಿ ನಿಂತು ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರಿಗೆ ಗೌರವದ ಬಗ್ಗೆ ಮಾತನಾಡುತ್ತಿದ್ದಾಗ, ಗುಜರಾತ್ ಸರ್ಕಾರವು ಕ್ಷಮಾಧಾನ ನೀಡಿ 2002ರ ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಬಿಡುಗಡೆ ಮಾಡಿ ಆದೇಶಿಸಿತ್ತು.

ಬಿಲ್ಕಿಸ್ ‘ಇದು ನ್ಯಾಯದ ಅಂತ್ಯವೇ’ ಎಂಬ ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆ ನನ್ನನ್ನು ಮತ್ತು ನನ್ನಂತಹ ಅನೇಕರನ್ನು ಬೆಚ್ಚಿಬೀಳಿಸಿದೆ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ ಅವರು ಹೇಳಿದ್ದಾರೆ. ಸುಭಾಷಿಣಿ ಅಲಿ, ಮಾಜಿ ಪ್ರೊಫೆಸರ್ ರೂಪ್ ರೇಖಾ ವರ್ಮಾ ಮತ್ತು ಪತ್ರಕರ್ತೆ ರೇವತಿ ಲಾಲ್ ಅವರು ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಜಂಟಿಯಾಗಿ ಅರ್ಜಿ ಸಲ್ಲಿಸಿದ್ದರು. ತೀರ್ಪು ಬಂದಾಗ ನಾವು ಏನು ಮಾಡಬಹುದೆಂದು ಯೋಚಿಸುತ್ತಿದ್ದೆವು, ಸೂಕ್ತ ಸಮಯದಲ್ಲೇ  ಕಪಿಲ್ ಸಿಬಲ್ ಮತ್ತು ಅಪರ್ಣಾ ಭಟ್ ಮತ್ತು ಇತರ ವಕೀಲರು ಮುಂದೆ ಬಂದಿರುವುದು ತುಂಬಾ ಅದೃಷ್ಟವಾಗಿತ್ತು ಎಂದು ಅಲಿ ಹೇಳಿದರು.

ಜನವರಿ 8ರಂದು ಸುಪ್ರೀಂಕೋರ್ಟ್ ತನ್ನ ಅದೇಶದಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಗುಜರಾತ್‌ ಸರಕಾರದ ಆದೇಶವನ್ನು ರದ್ದುಗಳಿಸಿದೆ ಮತ್ತು ಎರಡು ವಾರಗಳಲ್ಲಿ ಜೈಲಿಗೆ ಮರಳಲು ಅಪರಾಧಿಗಳಿಗೆ ಸೂಚಿಸಲಾಗಿದೆ. ಗುಜರಾತ್ ಸರ್ಕಾರವು ಅಪರಾಧಿಗಳಿಗೆ ಸಹಕಾರ ನೀಡಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವುದ ತೀರ್ಪು ದೇಶದ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.

ಲಕ್ನೋ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ರೂಪ್ ರೇಖಾ ವರ್ಮಾ ಈ ಕುರಿತು ಪ್ರತಿಕ್ರಿಯಿಸಿದ್ದು, ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅಳಲು ತೋಡಿಕೊಳ್ಳುವ ಮೊದಲೇ ಪ್ರಧಾನಿಯವರು ಕ್ಷಮಾಧಾನಕ್ಕೆ ಅನುಮತಿ ನೀಡಿದ್ದರು. ಅದು ಕ್ರೂರ ಹಾಸ್ಯವಾಗಿತ್ತು. ನಂತರ ತನ್ನ ಕೆಲವು ಸ್ನೇಹಿತರು ಮತ್ತು ಸಹವರ್ತಿಗಳೊಂದಿಗೆ ಬೆಳವಣಿಗೆಗಳ ಬಗ್ಗೆ ಚರ್ಚಿಸಿದೆ ಆ ಸಮಯದಲ್ಲಿ ನ್ಯಾಯಾಲಯಗಳನ್ನು ಹೆಚ್ಚು ಭರವಸೆಯಿಂದ ನೋಡದಿರಲು ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿದ್ದರೂ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಹೊರತುಪಡಿಸಿ ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ.

ಪತ್ರಕರ್ತೆ ರೇವತಿ ಲಾಲ್ ಅವರು ಈ ವಿಚಾರದಲ್ಲಿ ಅರ್ಜಿದಾರರಾಗಿದ್ದಾರೆ. ಅವರು ಮೂರನೇ ಮಹಿಳಾ ಅರ್ಜಿದಾರರನ್ನು ಹುಡುಕುತ್ತಿದ್ದರು. ಅದಕ್ಕೆ ನಾನು ಸಮ್ಮತಿಸಿದೆ. ಬಳಿಕ ವಕೀಲರಾದ ಇಂದಿರಾ ಜೈಸಿಂಗ್ ಮೂಲಕ ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟಿತರಾಗಿರುವ ಲೋಕಸಭಾ ಸಂಸದ ಮಹುವಾ ಮೊಯಿತ್ರಾ ಅವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.  ಸೆಪ್ಟೆಂಬರ್ 2022ರಲ್ಲಿ ಮಾಜಿ IPS ಅಧಿಕಾರಿ ಮೀರನ್ ಚಡಾ ಬೋರ್ವಾಂಕರ್ ಅವರು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. ಅವರ ತಂಡದಲ್ಲಿ ಜಗದೀಪ್ ಚೋಖರ್ ಮತ್ತು ಮಧು ಭಂಡಾರಿ ಕೂಡ ಇದ್ದರು. ನಾನು ಪ್ರಕರಣವನ್ನು ನಿಕಟವಾಗಿ ಗಮನಿಸುತ್ತಿದ್ದೆ ಮತ್ತು ಬಿಲ್ಕಿಸ್ ಬಾನು ಅವರು ಮೊದಲು ಸರಕಾರದ ಆದೇಶವನ್ನು ಪ್ರಶ್ನಿಸಲು ಮುಂದೆ ಬಂದಿಲ್ಲ ಎಂದು ಅರಿತುಕೊಂಡ ಬಳಿಕ ನಾನು ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ. ಆದರೆ ತಡವಾಗಿ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರೊಫೆಸರ್ ರೂಪ್ ರೇಖಾ ವರ್ಮಾ ಹೇಳಿದ್ದಾರೆ.

11 ಅಪರಾಧಿಗಳನ್ನು ಈಗ ಜೈಲಿಗೆ ಮರಳುವಂತೆ ನ್ಯಾಯಾಲಯವು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ, ಮೊಯಿತ್ರಾ ಅವರನ್ನು ಪ್ರತಿನಿಧಿಸಿರುವ ಜೈಸಿಂಗ್ ಅವರು ತೀರ್ಪು ಅಸಾಮಾನ್ಯವಾದುದು ಎಂದು ಹೇಳಿದರು ಏಕೆಂದರೆ ಸುಪ್ರೀಂ ಕೋರ್ಟ್ ಅತ್ಯಂತ ಅಪರೂಪವಾಗಿ ತನ್ನದೇ ಆದ ತೀರ್ಪನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸುತ್ತದೆ. ಇದು ನಿಮಗೆ ನ್ಯಾಯದ ಮಾರ್ಗಸೂಚಿಯನ್ನು ಸಹ ನೀಡುತ್ತದೆ. ಅವರು ಮಹಾರಾಷ್ಟ್ರ ಕೋರ್ಟ್‌ಗೆ ಹೋಗುತ್ತಾರೆ ಎಂದು ನನಗೆ ತಿಳಿದಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಆದರೆ ತೀರ್ಪು ನ್ಯಾಯದ ಹಾದಿಯಲ್ಲಿ ಒಂದು ಮೈಲಿಗಲ್ಲು ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ನಂಬಿಕೆ ಕಡಿಮೆಯಾದ ಸಮಯದಲ್ಲಿ ಈ ತೀರ್ಪು ಬಂದಿದೆ. ಈ ತೀರ್ಪು ನನಗೆ ಅನೇಕ ವಿಧಗಳಲ್ಲಿ ಅಮೂಲ್ಯವಾಗಿದೆ. ಸುಪ್ರೀಂಕೋರ್ಟ್ ಮತ್ತು ಇತರ ನ್ಯಾಯಾಲಯಗಳ ಮೇಲಿನ ನಮ್ಮ ನಂಬಿಕೆಯು ಆ ಸಮಯದಲ್ಲಿ ಕುಸಿಯುತ್ತಿರುವಾಗ ಅಂತಹ ತೀರ್ಪು ನ್ಯಾಯಾಲಯಗಳ ಮೇಲಿನ ನಮ್ಮ ನಂಬಿಕೆಯನ್ನು ಸ್ವಲ್ಪವಾದರೂ ಹೆಚ್ಚಿಸುತ್ತದೆ. ಇದು ನನಗೆ ವೈಯಕ್ತಿಕವಾಗಿ ಮಾತ್ರವಲ್ಲದೆ ದೇಶಕ್ಕೂ ಅರ್ಥವಾಗಿದೆ ಎಂದು ವರ್ಮಾ ಹೇಳಿದ್ದಾರೆ.

ನಮ್ಮ ಅರ್ಜಿಗಳನ್ನು ಪ್ರಶ್ನಿಸಿ ಅಪರಾಧಿಯೋರ್ವ ಸಲ್ಲಿಸಿದ ಅರ್ಜಿಯ ಬಳಿಕ ಬಿಲ್ಕಿಸ್‌ ಬಾನು ಅವರು ನವೆಂಬರ್ 2022ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಿಗೆ ಯಾವುದೇ ಸ್ಥಾನವಿಲ್ಲ ಮತ್ತು ಈ ವಿಷಯದಲ್ಲಿ ಸಂಪೂರ್ಣ ಅಪರಿಚಿತರು ಎಂದು ಅಪರಾಧಿ ಬಿಡುಗಡೆ ಪ್ರಶ್ನಿಸಿದ್ದ ನಮ್ಮ ಅರ್ಜಿ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.  ಈ ಅರ್ಜಿಗಳ ನಿರ್ವಹಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಬಾನು ಅರ್ಜಿದಾರರಾಗಬೇಕಾಯಿತು ಎಂದು ಬಿಲ್ಕಿಸ್‌ ಬಾನು ಪರ ವಕೀಲೆ ಶೋಭಾ ಗುಪ್ತಾ ಹೇಳಿದ್ದಾರೆ.

ಈ ಬಗ್ಗೆ ವಕೀಲೆ ಶೋಭಾ ಗುಪ್ತಾ ಮತನಾಡುತ್ತಾ, ಅವಳು ಮಾತ್ರ ಏಕೆ ಮುಂದೆ ಬರಬೇಕು? ಇದು ವೈಯಕ್ತಿಕ ಅಪರಾಧವಲ್ಲ. ಇದು ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ಅಪರಾಧದ ಅನಾಗರಿಕ ಸ್ವರೂಪದ್ದಾಗಿತ್ತು. ಅದನ್ನು ಸಮಾಜವೇ ನಿರ್ಧರಿಸಬೇಕು. ಅದಕ್ಕಾಗಿಯೇ ಅವಳು ಮೊದಲು ಅರ್ಜಿ ಸಲ್ಲಿಸಬೇಕೆಂದು ನಾನು ಭಾವಿಸುವುದಿಲ್ಲ ಅವಳು ತನ್ನ ಸಮಯವನ್ನು ತೆಗೆದುಕೊಂಡಿದ್ದಕ್ಕೆ ನನಗೆ ಖುಷಿಯಾಗಿದೆ. ಈ ಮಧ್ಯೆ ಸರಿಯಾದ ಸಮಯದಲ್ಲಿ ಇತರರು ಕೋರ್ಟ್‌ ಮೊರೆ ಹೋಗಿದ್ದಾರೆ ಎಂದು  ಹೇಳಿದ್ದಾರೆ.

2002ರಲ್ಲಿ ನಡೆದ ಗಲಭೆಯ ನಂತರದ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ವಕೀಲರಾಗಿ ನನ್ನನ್ನು ನೇಮಿಸಿದ ಬಳಿಕ ತಾನು ಈ ವಿಷಯದಲ್ಲಿ ಒಂದು ಪೈಸೆಯನ್ನೂ ವಿಧಿಸಿಲ್ಲ. ನಾನು ವೃತ್ತಿಗೆ ಬಂದು ಕೇವಲ ಐದು ವರ್ಷವಾಗಿತ್ತು. ವಕೀಲರಿಗೆ ಪಾವತಿಸಲು ನಮ್ಮ ಬಳಿ ಸಾಕಷ್ಟು ಹಣವಿದೆ ಎಂದು ಎನ್‌ಎಚ್‌ಆರ್‌ಸಿ ನನಗೆ ಹೇಳಿತ್ತು. ಆದರೆ ನಾನು ಈ ವಿಷಯದಲ್ಲಿ ಕಾಗದದ ಕೆಲಸಕ್ಕೂ  ಒಂದು ರೂ. ಕೂಡ ಬೇಡ ಎಂದು ಹೇಳಿದೆ ಎಂದು ಶೋಭಾ ಗುಪ್ತಾ ಹೇಳಿದ್ದಾರೆ.

ಇದನ್ನು ಓದಿ: ನರೇಂದ್ರ ದಾಭೋಲ್ಕರ್ ಹತ್ಯೆ: ತನಿಖೆಯ ಮೇಲ್ವಿಚಾರಣೆ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕಾರ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...