Homeಮುಖಪುಟನರೇಂದ್ರ ದಾಭೋಲ್ಕರ್ ಹತ್ಯೆ: ತನಿಖೆಯ ಮೇಲ್ವಿಚಾರಣೆ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕಾರ

ನರೇಂದ್ರ ದಾಭೋಲ್ಕರ್ ಹತ್ಯೆ: ತನಿಖೆಯ ಮೇಲ್ವಿಚಾರಣೆ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕಾರ

- Advertisement -
- Advertisement -

ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿ ತನಿಖೆಯ ಮೇಲ್ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದ್ದು, ಬಾಂಬೆ ಹೈಕೋರ್ಟ್‌ ತನಿಖೆಯ ಮೇಲ್ವಿಚಾರಣೆಯನ್ನು  ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ದಾಭೋಲ್ಕರ್ ಅವರ ಹತ್ಯೆಯ ತನಿಖೆಯ ಮೇಲೆ ಹೆಚ್ಚಿನ ನಿಗಾ ವಹಿಸಲು ನಿರಾಕರಿಸಿ ಬಾಂಬೆ ಹೈಕೋರ್ಟ್ ಏಪ್ರಿಲ್ 18ರಂದು ಆದೇಶವನ್ನು ನೀಡಿತ್ತು. ದಾಭೋಲ್ಕರ್ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಸೇರಿ ಇತರರು ತಮ್ಮ ತಂದೆಯ ಹತ್ಯೆಯ ತನಿಖೆಯ ಮೇಲ್ವಿಚಾರಣೆಯನ್ನು ನಿಲ್ಲಿಸಲು ನಿರ್ಧರಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ತಳ್ಳಿಹಾಕುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ಹೈಕೋರ್ಟ್‌ ತನಿಖೆಯ ಮೇಲೆ ನಿಗಾ ಇಡಲು ಉದ್ದೇಶಿಸಿಲ್ಲ. ಬಾಂಬೆ ಹೈಕೋರ್ಟ್ ಸಾಕಷ್ಟು ನಿಗಾ ವಹಿಸಿದೆ.  ಹೆಚ್ಚಿನ ಮೇಲ್ವಿಚಾರಣೆಯನ್ನು ನಿರಾಕರಿಸಿರುವುದು ನ್ಯಾಯೋಚಿತ ಆದೇಶವಾಗಿದೆ. ಈ ವಿಷಯದಲ್ಲಿ ಕಕ್ಷಿದಾರರು ಬಯಸಿದಂತೆ ಮೇಲ್ವಿಚಾರಣೆಯನ್ನು ಹೊಂದಲು ಸಾಧ್ಯವಿಲ್ಲ. ನಾವು ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಒಲವು ತೋರುವುದಿಲ್ಲ ಎಂದು ಹೇಳಿದೆ.

ದಾಭೋಲ್ಕರ್, ಗೋವಿಂದ್ ಪನ್ಸಾರೆ, ಎಂಎಂ ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಸಾಮ್ಯತೆಯ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಆನಂದ್ ಗ್ರೋವರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ದೊಡ್ಡ ಪಿತೂರಿತ ಆಯಾಮವನ್ನು ಗಮನಿಸಿ ಸಿಬಿಐ ಸರಿಯಾಗಿ ತನಿಖೆ ಮಾಡದಿದ್ದರೆ, ಕೃತ್ಯದ ಹಿಂದಿರುವವರು ಶಿಕ್ಷಯಿಂದ ಪಾರಾಗುವ ಸಾಧ್ಯತೆ ಇದೆ ಎಂದು ಕೋರ್ಟ್‌ನಲ್ಲಿ ಹೇಳಿದ್ದಾರೆ.

ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ, ವಿಚಾರಣೆ ಈಗಾಗಲೇ ಮುಂದುವರಿದ ಹಂತದಲ್ಲಿದೆ ಮತ್ತು ಪ್ರಕರಣದ ಸಾಕ್ಷಿಗಳನ್ನು ವಿಚಾರಣಾ ನ್ಯಾಯಾಲಯವು ಪರಿಶೀಲಿಸಿದೆ ಎಂದು ಕೋರ್ಟ್‌ಗೆ ಹೇಳಿದ್ದಾರೆ.

ಅರ್ಜಿದಾರರ ಕಡೆಗೆ ತಿರುಗಿದ ನ್ಯಾಯಮೂರ್ತಿಗಳು, ಸಿಬಿಐ ದೇಶದಲ್ಲಿ ನಮ್ಮಲ್ಲಿರುವ ಅತ್ಯುತ್ತಮ ತನಿಖಾ ಸಂಸ್ಥೆಯಾಗಿದೆ.  ವಿಚಾರಣೆ ಆರಂಭವಾಗಿದ್ದು, 23 ಸಾಕ್ಷಿಗಳಲ್ಲಿ 18 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಅರ್ಜಿದಾರರು ಸಿಬಿಐಗೆ ನೀಡಬಹುದು ಎಂದು ಕೋರ್ಟ್‌ ಹೇಳಿದ್ದು, ತನಿಖೆಯ ಕುರಿತು ಯಾವುದೇ ಹೆಚ್ಚಿನ ಆದೇಶಗಳನ್ನು ನೀಡಲು ನಿರಾಕರಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ನಾಲ್ಕು ಕೊಲೆಗಳ ಹಿಂದೆ ದೊಡ್ಡ ಪಿತೂರಿ ಇದೆ ಎಂಬ ಬಗ್ಗೆ ದಾಭೋಲ್ಕರ್ ಅವರ ಮಕ್ಕಳ ಮನವಿಯ ನಂತರ ಈ ಕುರಿತು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಹೇಳಿತ್ತು.

2013ರಲ್ಲಿ ಪುಣೆಯಲ್ಲಿ ಮೂಢನಂಬಿಕೆ ವಿರೋಧಿ ಹೋರಾಟಗಾರ, ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದಾದ ಎರಡು ವರ್ಷಗಳಲ್ಲಿ ಹೋರಾಟಗಾರ ಗೋವಿಂದ ಪನ್ಸಾರೆ ಅವರನ್ನು 2015ರಲ್ಲಿ ಹತ್ಯೆ ಮಾಡಲಾಗಿದೆ. ಅದೇ ವರ್ಷ ಕರ್ನಾಟಕದಲ್ಲಿ ಸಾಹಿತಿ ಎಂಎಂ ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಯಿತು. 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ತಮ್ಮ ಮನೆಯ ಹೊರಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಎಸ್‌ಐಟಿ ನಡೆಸಿದ ತನಿಖೆಯಲ್ಲಿ ಒಬ್ಬ ಆರೋಪಿ ಅಮೋಲ್ ಕಾಳೆಯಿಂದ ಡೈರಿಯನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಹಿಟ್‌ ಲಿಸ್ಟ್‌ನಲ್ಲಿ 34 ಮಂದಿ ಇದ್ದರು ಎನ್ನುವುದು ತಿಳಿದು ಬಂದಿತ್ತು. ನಾಲ್ಕು ಕೊಲೆ ನಡೆಸಿರುವ ಆರೋಪಿಗಳು ಸನಾತನ ಸಂಸ್ಥೆ ಜೊತೆ ನಂಟಿರುವುದು ತನಿಖೆಯ ವೇಳೆ ಬಯಲಾಗಿತ್ತು.

ಇದನ್ನು ಓದಿ: ರೇಪಿಸ್ಟ್‌ಗಳಿಗೆ ಮತ್ತೆ ಜೈಲು: ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಬಿಲ್ಕಿಸ್‌ ಬಾನು ಪ್ರತಿಕ್ರಿಯೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ‘ಎಕ್ಸ್‌’ ಬಳಕೆದಾರರು ತರಾಟೆ

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ, ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ ತುಷ್ಟೀಕರಣ ಮಾಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ...