ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೆ ಕೇರಳದಲ್ಲಿ ಒಬ್ಬರೇ ಒಬ್ಬ ಶಾಸಕರಿದ್ದಾರೆ. ರಾಜ್ಯದಲ್ಲಿ ಪಕ್ಷವು ವೇಗವಾಗಿ ಬೆಳೆಯದೆ ಇರಲು ಕಾರಣವನ್ನು ಕೇರಳ ಬಿಜೆಪಿಯ ಮುಖಂಡ ಹಾಗೂ ಪಕ್ಷದ ಒಂಟಿ ಶಾಸಕ ಒ. ರಾಜಗೋಪಾಲ್ ಬಹಿರಂಗ ಪಡಿಸಿದ್ದಾರೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣ 90% ಆಗಿದ್ದು, ಈ ಸಾಕ್ಷರತೆಯಿಂದಾಗಿ ಕೇರಳದಲ್ಲಿ ಬಿಜೆಪಿ ಬೆಳೆಯುತ್ತಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಕೇರಳ: ಮೊದಲ ಬಾರಿ ಚುನಾವಣಾ ಕಣದಲ್ಲಿ ತೃತೀಯಲಿಂಗಿ ಅಭ್ಯರ್ಥಿ ಅನನ್ಯಾ
“ಕೇರಳವು ಬೇರೆಯೆ ರೀತಿಯ ರಾಜ್ಯವಾಗಿದೆ. ಇಲ್ಲಿ ಎರಡು-ಮೂರು ವಿಭಿನ್ನ ಅಂಶಗಳಿವೆ. ಕೇರಳದ ಸಾಕ್ಷರತೆಯ ಪ್ರಮಾಣ 90% ಆಗಿದ್ದು, ಅವರು ಯೋಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ಇವು ವಿದ್ಯಾವಂತರ ಅಭ್ಯಾಸಗಳಾಗಿದ್ದು, ಅದೂ ಒಂದು ಸಮಸ್ಯೆಯಾಗಿದೆ’’ ಎಂದು ಅವರು ಹೇಳಿದ್ದಾರೆ.
“ಎರಡನೇ ವಿಷಯವೆಂದರೆ ರಾಜ್ಯದಲ್ಲಿ 55% ಹಿಂದೂಗಳು ಮತ್ತು 45% ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಅದಕ್ಕಾಗಿಯೇ ಕೇರಳವನ್ನು ಬೇರೆ ಯಾವುದೇ ರಾಜ್ಯದೊಂದಿಗೆ ಹೋಲಿಸಲಾಗುವುದಿಲ್ಲ. ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ ಆದರೆ ನಾವು ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿದ್ದೇವೆ” ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ, ಮೂವರು ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ


