ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಕೂರರ 120 ವರ್ಷಗಳಷ್ಟು ಹಳೆಯ ಕವನವೊಂದು ವೈರಲ್ ಆಗಿದೆ.
ರವೀಂದ್ರನಾಥ ಟ್ಯಾಗೋರ್‌ರ ‘ದೀನೋ ದಾನ್’ (ನಿರ್ಗತಿಕರಿಗೆ ದಾನ ಮಾಡುವುದು) ಶಿರ್ಷಿಕೆಯಿರುವ “ದೇಗುಲದಲ್ಲಿ ದೇವರಿಲ್ಲ” ಎಂಬ ಕವಿತೆಯು ಆಗಸ್ಟ್ 5 ರಿಂದ ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿದೆ. ಹಲವಾರು ಜನರು ಇದನ್ನು ತಮ್ಮ ಜಾಲತಾಣದ ಖಾತೆಗಳಲ್ಲಿ ಹಂಚುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಈ ಸಮಾರಂಭದ ಮಧ್ಯೆ ಭಾರತದಲ್ಲಿ ಕೊರೊನಾದಿಂದಾದ ಸಾವುಗಳು 40,000 ಗಡಿ ದಾಟಿದ್ದವು. ಬುಧವಾರ ಒಂದೇ ದಿನ 918 ಜನರು ಸಾವಿಗೀಡಾಗುವುದರೊಂದಿಗೆ ದೇಶವು ತನ್ನ ಅತಿದೊಡ್ಡ ಏಕದಿನ ಸಾವಿನ ಪ್ರಮಾಣವನ್ನು ದಾಖಲಿಸಿತು.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಠಾಗೋರ್ ಕವಿತೆ ಮತ್ತು ರಾಮ ಮಂದಿರ ಸಮಾರಂಭದ ನಡುವೆ ಸಾಮ್ಯತೆಯನ್ನು ಕಂಡುಕೊಂಡಿದ್ದಾರೆ.
ಕನ್ನಡದ ಪ್ರಸಿದ್ದ ವಿಜ್ಞಾನ ಲೇಖಕ ಡಾ. ನಾಗೇಶ ಹೆಗ್ಡೆ ಈ ಕವಿತೆಯ ಕನ್ನಡ ಅನುವಾದವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.
ಈ ದೇಗುಲದಲ್ಲಿ ದೇವರಿಲ್ಲ …. [ನಿನ್ನೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲಿ ಕವಿ ರವೀಂದ್ರನಾಥ ಠಾಕೂರರ ಕವನವೊಂದು…
Posted by Nagesh Hegde on Thursday, August 6, 2020
ನಾಗೆಶ್ ಹಗ್ಡೆ ಅವರ ಫೇಸ್‌ಬುಕ್ ವಾಲಲ್ಲಿ ಇರುವ ಕವನದವ ಪೂರ್ಣ ಪಠ್ಯ ಕೆಳಗಿನಂತಿದೆ:
“ಈ ದೇಗುಲದಲ್ಲಿ ದೇವರಿಲ್ಲʼʼ ಎಂದುಸುರಿದ ಆ ಸಂತ
ರಾಜನಿಗೆ ಕೋಪ ಉಕ್ಕಿ ಬಂತು
“ಏನೆಂದೆ ದೇವನಿಲ್ಲವೆ? ನೀನೇನು ಸಂತನೋ ನಾಸ್ತಿಕನೊ?
ಕಾಣುವುದಿಲ್ಲವೆ ನಿನಗೆ ವಜ್ರಖಚಿತ ಪೀಠ
ದೇವಮೂರ್ತಿಯ ಮಿನುಗುವ ಮುಕುಟ?”
“ಕಾಣುತ್ತಿವೆ ನನಗೆ. ರಾಜನ ಡೌಲತ್ತಿನ ಚಿಹ್ನೆಗಳಷ್ಟೇ ಕಾಣುತ್ತಿವೆ.
ಹೇ ರಾಜಾ, ನೀನು ನಿನ್ನ ಪ್ರತಿಷ್ಠೆಯನ್ನೇ ಅಲ್ಲಿ ಪ್ರತಿಷ್ಠಾಪಿಸಿಕೊಂಡಿರುವೆ,
ದೇವರನ್ನಲ್ಲ” ಸಂತ ಉಸುರಿದ
ಕೆಂಗಣ್ಣು ಬೀರಿ ರಾಜ ಗುಡುಗಿದ: ಗಗನಚುಂಬಿ ಈ
ದೇಗುಲದ ಮೇಲೆ ಇಪ್ಪತ್ತು ಲಕ್ಷ
ಚಿನ್ನದ ವರಹಗಳನ್ನು ಸುರಿದಿದ್ದೇನೆ, ಶಾಸ್ತ್ರೋಕ್ತ
ಪೂಜೆ ಮಾಡಿದ್ದೇನೆ, ದೇವರಿಲ್ಲವೆನ್ನಲು ನಿನಗೆಷ್ಟು ಧೈರ್ಯ?
ಸಂತ ಶಾಂತವಾಣಿಯಲ್ಲಿ ಹೇಳಿದ: ಇದೇ ವರ್ಷ ನಿನ್ನ ಇಪ್ಪತ್ತು ಲಕ್ಷ
ಪ್ರಜೆಗಳು ಬರಗಾಲಕ್ಕೆ ತುತ್ತಾಗಿದ್ದಾರೆ
ಕೂಳಿಲ್ಲದೆ, ನೀರಿಲ್ಲದೆ ಕಂಗಾಲಾಗಿದ್ದಾರೆ
ನಿನ್ನ ಬಾಗಿಲಿಗೆ ಬಂದು ಅಂಗಲಾಚಿದ್ದಾರೆ
ನಿನ್ನರಮನೆಯಿಂದ ನೂಕಿಸಿಕೊಂಡಿದ್ದಾರೆ.
ಅವರೆಲ್ಲ ಗುಡ್ಡಬೆಟ್ಟಗಳಲ್ಲಿ, ರಸ್ತೆಬದಿಗಳಲ್ಲಿ,
ಪಾಳುಗುಡಿಗಳಲ್ಲಿ ಆಸರೆ ಪಡೆದು ಒರಗಿದ್ದಾರೆ
ಇದೇ ವರ್ಷ ನೀನು ಇಪ್ಪತ್ತು ಲಕ್ಷ ಚಿನ್ನದ ವರಹಗಳನ್ನು
ಸುರಿದು ದೇಗುಲ ಕಟ್ಟಿದ್ದೀಯೆ. ಅದನ್ನು ನೋಡಿ
ದೇವರು ಹೇಳಿದ್ದೇನು ಗೊತ್ತೆ?
ʼʼನೀಲಾಕಾಶದ ಮಿನುಗುವ ತಾರೆಗಳಲ್ಲಿ ನಾನಿದ್ದೇನೆ
ಸತ್ಯ, ಶಾಂತಿ, ದಯೆ ಮತ್ತು ಪ್ರೀತಿಯೇ
ನನ್ನ ಮನೆಯ ಅಡಿಪಾಯಗಳಾಗಿವೆ
ತನ್ನದೇ ಪ್ರಜೆಗಳಿಗೆ ಆಸರೆ ಕೊಡಲಾಗದ ಈ ಜಿಪುಣ ರಾಜ
ನನಗೇನು ದೇಗುಲ ಕಟ್ಟಿಸಿಯಾನು” ಎನ್ನುತ್ತ ದೇವರು ನಿನ್ನ ಆ
ದೇಗುಲವನ್ನು ಬಿಟ್ಟು ದೂರ ನಡೆದಿದ್ದಾನೆ ರಾಜನ್
ಸಾಲುಮರಗಳ ನೆರಳಿನಲ್ಲಿ ಬಿದ್ದಿರುವ ಆ ಗರೀಬರ
ಮನದಲ್ಲಿ ನೆಲೆಸಿದ್ದಾನೆ ಅವನೀಗ
ವಿಶಾಲ ಸಾಗರದ ಮೇಲಿನ ನೀರ್ಗುಳ್ಳೆಗಳಂತೆ
ಈ ನಿನ್ನ ದೇಗುಲ ಟೊಳ್ಳುಪೊಳ್ಳಾಗಿ ಮಿನುಗುತ್ತಿದೆ
ನಿನ್ನ ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿ ….
ಇಷ್ಟೇ ಅಲ್ಲದೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮತ್ತು ಜೆಎನ್‌ಯುನ ಹಳೆಯ ವಿದ್ಯಾರ್ಥಿ ಬನೋಜ್ಯೋತ್ಸ್‌ನಾ ಲಾಹಿರಿ ಅವರು ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಮೊದಲು ಪೋಸ್ಟ್ ಮಾಡಿದ್ದಾರೆ. ಬಂಗಾಳಿ ಕ್ಯಾಲೆಂಡರ್ ಪ್ರಕಾರ ನಿಖರವಾಗಿ 120 ವರ್ಷಗಳ ಹಿಂದೆ ಈ ಕವಿತೆಯನ್ನು ಬರೆಯಲಾಗಿದೆ ಎಂದು ಅವರು ಪೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ.
Is this a coincidence that exactly 120 years ago, on this very day, Rabindranath Tagore wrote a poem "Deeno Daan". It…
Posted by Banojyotsna Lahiri on Wednesday, August 5, 2020
ಇವರನ್ನು ಅನುಸರಿಸಿ, ಈ ಕವಿತೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊರೊಣಾ ವೈರಸ್ ಕಾಲದ ನಡುವೆ ಕವಿತೆಯು ಅನೇಕ ಸಾಮ್ಯತೆಗಳನ್ನು ಕಂಡುಕೊಂಡಿದೆ. ಅನೇಕರು ಟ್ಯಾಗೋರ್‌ರನ್ನು ಶ್ಲಾಘಿಸಿದ್ದಾರೆ.
"There is no God in that temple."
Deeno Daan by Rabindranath Tagore pic.twitter.com/snrYjbd6lq
— Shivam (@imrozed) August 6, 2020
120 years ago, on this very day Rabindranath Tagore wrote a poem, titled "Deeno Daan".
It was about a temple.
Read the loose translation of its excerpts.
It will send a shiver down your spine.#RamMandirAyodhya pic.twitter.com/Ip0VwqrX1b— banojyotsna (@banojyotsna) August 5, 2020
Is this a coincidence that exactly 120 years ago, on this very day, Rabindranath Tagore wrote a poem "Deeno Daan". It was about a temple.
———————————————-
“There is no god in that temple”, said the Saint.
— Bindu (@soulonatraipse) August 5, 2020
1900 ರಲ್ಲಿ (ಬಂಗಾಳಿ ವರ್ಷ 1307) ಬರೆದ ಟ್ಯಾಗೋರ್ ಅವರ ಕವನ ಸಂಕಲನವಾದ ಕಹಿನಿಯ ಭಾಗವೇ ‘ಡೀನೋ ಡಾನ್’. ಶತಮಾನದ ನಂತರ ವೈರಲ್ ಆದ ಕವನ ನಮ್ಮನ್ನು ಎಚ್ಚರಿಸುವುದೇನೆಂದರೆ ”ಠಾಗೋರ್‌ಗೆ ಎಂದಿಗೂ ವಯಸ್ಸಾಗುವುದಿಲ್ಲ” ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್


