2019ರ ಡಿಸೆಂಬರ್ 16 ರಂದು ಜಾಮಿಯಾ ಮಿಲಿಯಾದಲ್ಲಿ ಮಾಡಿದ ಭಾಷಣವು ಸುಪ್ರೀಂ ಕೋರ್ಟ್ ಅನ್ನು ಅವಹೇಳನ ಮಾಡಿಲ್ಲ. ನ್ಯಾಯಾಂಗ ನಿಂದನೆ ಅಥವಾ ಆಕ್ಷೇಪಾರ್ಹವಾಗಿಲ್ಲೆ ಎಂದು ಸಾಮಾಜಿಕ ಕಾರ್ಯಕರ್ತ ಹರ್ಷಮಂದರ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಹರ್ಷಮಂದರ್ ಪರ ಹಾಜರಾದ ಹಿರಿಯ ವಕೀಲ ದುಶ್ಯಂತ್ ಡೇವ್ ಅವರು “ದೆಹಲಿ ಪೊಲೀಸರು ಎಡಿಟ್ ಮಾಡಿದ ಭಾಷಣದ ಆವೃತ್ತಿಯನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಭಾಷಣದ ಯಾವ ಭಾಗವು ಆಕ್ಷೇಪಾರ್ಹ ಎಂದು ಸ್ಪಷ್ಟವಾಗಿ ವಿವರಿಸುವಂತೆ ದೆಹಲಿ ಪೊಲೀಸರಿಗೆ ಒತ್ತಾಯಿಸಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಹರ್ಷಮಂದರ್ ಮಾಡಿದ ಭಾಷಣ ನ್ಯಾಯಾಂಗನಿಂದನೆಯಲ್ಲ. ನಾನು ಸಂಪೂರ್ಣ ಭಾಷಣವನ್ನು ನೋಡಿದ್ದೇನೆ. ಭಾಷಣದ ಯಾವ ಭಾಗವು ಆಕ್ಷೇಪಾರ್ಹವಾಗಿದೆ” ಎಂದು ಡೇವ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮಾತನ್ನು ಈಗ ಕೇಳುವುದಿಲ್ಲ: ಹರ್ಷಮಂದರ್ PIL ತಿರಸ್ಕರಿಸಿದ ಸುಪ್ರೀಂ
ದೆಹಲಿ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹರ್ಷಮಂದರ್ ಅವರ ಇನ್ನೊಂದು ಭಾಷಣದ ಪ್ರತಿ ತಮ್ಮ ಬಳಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
“ಅದೇ ವ್ಯಕ್ತಿಯಿಂದ ತಿರಸ್ಕಾರದಿಂದ ಕೂಡಿದ ಇನ್ನೊಂದು ಭಾಷಣವನ್ನು ನಾವು ಕಂಡುಕೊಂಡಿದ್ದೇವೆ” ಎಂದು ಅವರು ಹೇಳಿದರು.
ಈ ಆರೋಪಗಳ ಮೂಲಕ ಸರ್ಕಾರವು ಮಾಹಿತಿದಾರನ್ನನ್ನು ಶೂಟ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಡೇವ್ ಆರೋಪಿಸಿದ್ದಾರೆ. ನ್ಯಾಯ ಕೇಳುವ ಹರ್ಷಮಂದರ್‌ರವರ ಹಕ್ಕನ್ನು ದಮನಿಸಲಾಗುತ್ತಿದೆ ಎಂದು ದೂರಿದ್ದಾರೆ.
“ಇದು ಗಂಭೀರ ವಿಷಯ. ನ್ಯಾಯಾಲಯ ಪ್ರವೇಶಿಸುವ ನನ್ನ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಮೆಸೆಂಜರ್ ಅನ್ನು ಶೂಟ್ ಮಾಡಲು ಸರ್ಕಾರ ಬಯಸಿದೆ “ಎಂದು ಹರ್ಷಮಂದರ್ ಹೇಳಿದ್ದಾರೆ.
ನ್ಯಾಯಾಲಯವು ಆರೋಪಗಳಿಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಹರ್ಷಮಂದರ್‌ಗೆ ಸೂಚಿಸಿತು ಮತ್ತು ಪ್ರಕರಣವನ್ನು ಏಪ್ರಿಲ್ 15 ರಂದು ವಿಚಾರಣೆಗೆ ಮುಂದೂಡಿತು.
ಶಾನ್ಯ ದೆಹಲಿಯಲ್ಲಿ ಗಲಭೆ ಮತ್ತು ಹಿಂಸಾಚಾರವನ್ನು ಪ್ರಚೋದಿಸಿದ್ದಾಕ್ಕಿ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ದ್ವೇಷ ಭಾಷಣದ ಮೇಲೆ ಎಫ್ಐಆರ್ ನೋಂದಾಯಿಸುವಂತೆ ಕೋರಿ ಹರ್ಷಮಂದರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಮಾರ್ಚ್ 4 ರಂದು ಈ ವಿಷಯವು ಉನ್ನತ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸಿ ಹರ್ಷಮಂದರ್ ಮಾಡಿದ ಭಾಷಣದಲ್ಲಿ ತಾನು ಸುಪ್ರೀಂ ಕೋರ್ಟ್‌ಅನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.


