Homeಕರೋನಾ ತಲ್ಲಣಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?

ಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?

ಸಾಂಕ್ರಾಮಿಕ ರೋಗದ ದಾಳಿ ಇನ್ನೂ ಮುಗಿದಿಲ್ಲ. ಆದರೆ ಈ ವಿಶ್ವ ನಾಯಕರು ಈಗಾಗಲೇ ಮಾರಣಾಂತಿಕ ಕೊರೋನಾವನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾದ ಕಾರಣ ಇತಿಹಾಸದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

- Advertisement -
- Advertisement -

ಸಾಂಕ್ರಾಮಿಕ ನಿರ್ವಹಣೆಯಲ್ಲಿ ವಿಫಲರಾದ ಐವರು ವಿಶ್ವನಾಯಕರ ಆಡಳಿತ ಶೈಲಿ ಕುರಿತು ಇಲ್ಲಿ ವಿಶ್ಲೇಷಣೆಯಿದೆ. ಭಾರತೀಯರಾದ ಪ್ರೊ. ಸುಮಿತ್ ಗಂಗೂಲಿ ಸೇರಿದಂತೆ ಹಲವು ದೇಶಗಳ ತಜ್ಞರು, ಪ್ರೊಫೆಸ್‌ರ್‌ಗಳು ಮತ್ತು ವೈದ್ಯರ ನಡುವೆ ನಡೆದ ಚರ್ಚೆಯನ್ನು ‘ದಿ ವೈರ್’ ಸಂಗ್ರಹಿಸಿ ಕೊಟ್ಟಿದೆ.

‘ಕೆಲವು ಪ್ರಸ್ತುತ ಮತ್ತು ಮಾಜಿ ವಿಶ್ವ ನಾಯಕರು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅಲಕ್ಷ್ಯ ಮಾಡುವ ಮೂಲಕ, ವಿಜ್ಞಾನವನ್ನು ಕಡೆಗಣಿಸುವ ಮೂಲಕ, ಸಾಮಾಜಿಕ ದೂರ ಮತ್ತು ಮಾಸ್ಕ್‌ಗಳಂತಹ ಆರೋಗ್ಯದ ಮಧ್ಯಸ್ಥಿಕೆಗಳನ್ನು ನಿರ್ಲಕ್ಷಿಸುವ ಮೂಲಕ ತಮ್ಮ ದೇಶದಲ್ಲಿ ಕೊರೊನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಈ ಪಟ್ಟಿಯಲ್ಲಿರುವ ಐವರೂ ಪುರುಷ ಸಿಂಹಗಳೇ! ಭಾರತದ ನರೇಂದ್ರ ಮೋದಿ ಅದರಲ್ಲಿ ಒಬ್ಬರು ಎನ್ನುತ್ತಾರೆ’ ಇಂಡಿಯಾನಾ ವಿಶ್ವವಿದ್ಯಾಲಯದ ಪ್ರೊ. ಸುಮಿತ್ ಗಂಗೂಲಿ.

ಭಾರತವು ಜಾಗತಿಕ ಸಾಂಕ್ರಾಮಿಕದ ಹೊಸ ಕೇಂದ್ರಬಿಂದುವಾಗಿದ್ದು, ಮೇ 2021 ರ ಹೊತ್ತಿಗೆ ದಿನಕ್ಕೆ ಸುಮಾರು 4 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳು ಸಾಯುತ್ತಿದ್ದಾರೆ, ಏಕೆಂದರೆ ಆಮ್ಲಜನಕವಿಲ್ಲ ಮತ್ತು ಚಿಕಿತ್ಸೆಗೆ ಅಗತ್ಯವಾದ ಔಷಧಿಗಳಿಲ್ಲ ಮತ್ತು ವೆಂಟಿಲೇಟರ್‌ಗಳೂ ಇಲ್ಲ. ಜೊತೆಗೆ ಉಚಿತ ಹಾಸಿಗೆಗಳೇ ಲಭ್ಯವಿಲ್ಲ.

ದೇಶದ ದುರಂತಕ್ಕೆ ಅನೇಕ ಭಾರತೀಯರು ಒಬ್ಬ ವ್ಯಕ್ತಿಯನ್ನು ದೂಷಿಸುತ್ತಾರೆ: ಪ್ರಧಾನಿ ನರೇಂದ್ರ ಮೋದಿ!

ಜನವರಿ 2021ರಲ್ಲಿ, ಮೋದಿ ಜಾಗತಿಕ ವೇದಿಕೆಯಲ್ಲಿ ಭಾರತವು “ಕೊರೊನಾವನ್ನು ಪರಿಣಾಮಕಾರಿಯಾಗಿ ಎದುರಿಸಿ ಗೆದ್ದಿದೆ” ಎಂದು ಘೋಷಿಸಿದರು. ಮಾರ್ಚ್‌ನಲ್ಲಿ ಅವರ ಆರೋಗ್ಯ ಸಚಿವರು ಸಾಂಕ್ರಾಮಿಕ ರೋಗವು “ಎಂಡ್ ಗೇಮ್” ತಲುಪುತ್ತಿದೆ ಎಂದು ಘೋಷಿಸಿದರು. ವಾಸ್ತವವಾಗಿ ಭಾರತದಲ್ಲಿ ಮತ್ತು ವಿಶ್ವಾದ್ಯಂತ ಕೊರೊನಾ ಶಕ್ತಿಯನ್ನು ಪಡೆಯುತ್ತಿತ್ತು. ಆದರೆ ಮೋದಿ ಸರ್ಕಾರವು ಸಂಭವನೀಯ ಆಕಸ್ಮಿಕಗಳಿಗೆ ಯಾವುದೇ ಸಿದ್ಧತೆಗಳನ್ನು ಮಾಡಲಿಲ್ಲ.

ದೇಶದಲ್ಲಿ ಕೋವಿಡ್ ಎರಡನೆ ಅಲೆ ತೀವ್ರವಾಗುವ ಸಂದರ್ಭದಲ್ಲಿ ಮೋದಿ ಮತ್ತು ಅವರ ಪಕ್ಷದ ಇತರ ಸದಸ್ಯರು ಏಪ್ರಿಲ್ ಚುನಾವಣೆಗೆ ಮುಂಚಿತವಾಗಿ ಹೊರಾಂಗಣ ಪ್ರಚಾರ ರ‍್ಯಾಲಿಗಳನ್ನು ನಡೆಸಿದರು. ಆ ರ‍್ಯಾಲಿಗಳಲ್ಲಿ ಮಾಸ್ಕ್ ಇರಲಿಲ್ಲ, ದೈಹಿಕ ಅಂತರ ಇರಲು ಸಾಧ್ಯವೇ? ಜನವರಿಯಿಂದ ಮಾರ್ಚ್‌ವರೆಗೆ ಲಕ್ಷಾಂತರ ಜನರನ್ನು ಸೆಳೆಯುವ ಕುಂಭಮೇಳ ಉತ್ಸವಕ್ಕೂ ಮೋದಿ ಅವಕಾಶ ನೀಡಿದರು. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ತಜ್ಞರು ಈಗ ಉತ್ಸವವು ಒಂದು ಸೂಪರ್-ಸ್ಪ್ರೆ ಡರ್ ಆಗಿದೆ ಎನ್ನುತ್ತಿದ್ದಾರೆ.

ಕಳೆದ ವರ್ಷ ಮೋದಿಯವರು ತಮ್ಮ ಯಶಸ್ಸನ್ನು ತಿಳಿಸಿದಂತೆ, ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಭಾರತವು 10 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ಪ್ರಮಾಣವನ್ನು ನೆರೆಯ ದೇಶಗಳಿಗೆ ಕಳುಹಿಸಿತು. ಭಾರತದ 139 ಕೋಟಿ ಜನರಲ್ಲಿ ಕೇವಲ 1.9% ರಷ್ಟು ಜನರು ಮೇ ಆರಂಭದಲ್ಲಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.

ಬ್ರೆಜಿಲ್‌ನ ಜೈರ್ ಬೋಲ್ಸನಾರೊ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಕೋವಿಡ್ ಬಗ್ಗೆ ತೀವ್ರ ನಿರ್ಲಕ್ಷ್ಯ ಮಾಡಿದರು. ಕೊರೊನಾ ‘ಬರೀ ಜ್ವರ ಬಿಡಿ’ ಎಂದು ಪರಿಸ್ಥಿತಿಯನ್ನ ಹದಗೆಡಿಸಿದರು.

ಆರೋಗ್ಯ ಸಚಿವಾಲಯದ ಆಡಳಿತಾತ್ಮಕ ವಿಷಯಗಳಾದ ಕ್ಲಿನಿಕಲ್ ಪ್ರೋಟೋಕಾಲ್‌ಗಳು, ಡೇಟಾ ಬಹಿರಂಗಪಡಿಸುವಿಕೆ ಮತ್ತು ಲಸಿಕೆ ಸಂಗ್ರಹಣೆಗಳಲ್ಲಿ ಬೋಲ್ಸೊನಾರೊ ಹಸ್ತಕ್ಷೇಪ ಮಾಡಿ, ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಂಡರು. ಧಾರ್ಮಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸುವ ಮತ್ತು ಸಾಂಕ್ರಾಮಿಕ ರೋಗದಿಂದ ಶಾಶ್ವತವಾಗಿ ಹಾನಿಗೊಳಗಾದ ಆರೋಗ್ಯ ವೃತ್ತಿಪರರಿಗೆ ಪರಿಹಾರ ನೀಡುವ ಶಾಸನವನ್ನು ಅವರು ರದ್ದು ಮಾಡಿದರು. ಸಾಮಾಜಿಕ ದೂರವನ್ನು ಉತ್ತೇಜಿಸುವ ಆಡಳಿತದ ಪ್ರಯತ್ನಗಳಿಗೆ ಅವರು ಅಡ್ಡಿಯುಂಟು ಮಾಡಿದರು. ಸ್ಪಾಗಳು ಮತ್ತು ಜಿಮ್‌ಗಳು ಸೇರಿದಂತೆ ಅನೇಕ ವ್ಯವಹಾರಗಳನ್ನು “ಅಗತ್ಯ” ಎಂದು ತೆರೆಯಲು ಅನುಮತಿ ನೀಡಿದರು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬೋಲ್ಸೊನಾರೊ ಸಾಬೀತಾಗದ ಔಷಧಿಗಳನ್ನು, ಮುಖ್ಯವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಆಕ್ರಮಣಕಾರಿಯಾಗಿ ಉತ್ತೇಜಿಸಿದರು.

ಬೆಲಾರಸ್‌ನ ಅಲೆಕ್ಸಾಂಡರ್ ಲುಕಾಶೆಂಕೊ

ಬೆಲಾರಸ್‌ನ ದೀರ್ಘಕಾಲದ ಸರ್ವಾಧಿಕಾರಿ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಕೋವಿಡ್ ದುರಂತದ ಬೆದರಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಇತರ ದೇಶಗಳು ಲಾಕ್‌ಡೌನ್‌ಗಳನ್ನು ಜಾರಿಗೊಳಿಸುತ್ತಿದ್ದಂತೆ, ಲುಕಾಶೆಂಕೊ ಕೋವಿಡ್ ಹರಡುವುದನ್ನು ತಡೆಯಲು ಯಾವುದೇ ನಿರ್ಬಂಧಿತ ಕ್ರಮಗಳನ್ನು ಜಾರಿಗೊಳಿಸದಿರಲು ನಿರ್ಧರಿಸಿದರು. ಬದಲಾಗಿ, ವೋಡ್ಕಾ ಕುಡಿಯುವುದರಿಂದ, ಸೌನಾಕ್ಕೆ ಭೇಟಿ ನೀಡುವುದರಿಂದ ಮತ್ತು ಹೊಲಗಳಲ್ಲಿ ಕೆಲಸ ಮಾಡುವುದರಿಂದ ವೈರಸ್ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

ಅಮೆರಿಕದ ಡೊನಾಲ್ಡ್ ಟ್ರಂಪ್

ಟ್ರಂಪ್ ಅಧಿಕಾರದಿಂದ ಹೊರಗುಳಿದಿದ್ದಾರೆ. ಆದರೆ ಸಾಂಕ್ರಾಮಿಕ ರೋಗವನ್ನು ಅವರು ತಪ್ಪಾಗಿ ನಿರ್ವಹಿಸಿದ್ದು ಅಮೆರಿಕಾದ ಮೇಲೆ- ವಿಶೇಷವಾಗಿ ಕಪ್ಪು ವರ್ಣದ ಸಮುದಾಯಗಳ ಮೇಲೆ- ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತಿದೆ.

ಸಾಂಕ್ರಾಮಿಕ ರೋಗದ ಆರಂಭಿಕ ನಿರಾಕರಣೆ, ಮಾಸ್ಕ್ ಮತ್ತು ಚಿಕಿತ್ಸೆಗಳ ಬಗ್ಗೆ ತಪ್ಪು ಸಂದೇಶಗಳನ್ನು ಅವರು ನೀಡುತ್ತ ಬಂದರು. ಮೋದಿಯವರಂತೆ ಅವರಿಗೂ ಚುನಾವಣೆ ಗೆಲ್ಲುವುದಷ್ಟೇ ಮುಖ್ಯವಾಗಿತ್ತು.

ಆಫ್ರಿಕನ್ ಅಮೆರಿಕನ್ನರು ಮತ್ತು ಲ್ಯಾಟಿನೋಗಳು ಯುಎಸ್ ಜನಸಂಖ್ಯೆಯ ಕೇವಲ 31%ರಷ್ಟಿದ್ದಾರೆ. ಅವರು ಕೋವಿಡ್ ಪ್ರಕರಣಗಳಲ್ಲಿ 55% ಕ್ಕಿಂತ ಹೆಚ್ಚು ಇದ್ದಾರೆ. ಬಿಳಿಯರ ಮರಣ ಪ್ರಮಾಣಕ್ಕಿಂತ ಕಪ್ಪು ವರ್ಣದವರ ಮರಣ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಿತ್ತು.
ನಿರುದ್ಯೋಗ ಏರಿಕೆಯಲ್ಲೂ ಟ್ರಂಪ್ ಕಾರಣವಾದರು. ಇದು ಹೆಚ್ಚಾಗಿ ತಟ್ಟಿದ್ದು ಬಿಳಿಯರಲ್ಲದ ಅಮೆರಿಕನ್ ಪ್ರಜೆಗಳಿಗೆ.

ಮೆಕ್ಸಿಕೊದ ಆಂಡ್ರೆಸ್

ಮೆಕ್ಸಿಕೊವು ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಸಾವಿನ ಪ್ರಮಾಣವನ್ನು ಹೊಂದಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಇದು 6,17,000 ಸಾವುಗಳನ್ನು ಅನುಭವಿಸಿದೆ. ಭಾರತ ಮತ್ತು ಅಮೆರಿಕ ಕೂಡ ಸಾವಿನ ಸಂಖ್ಯೆಯಲ್ಲಿ ಮುಂದಿವೆ.

ಮೆಕ್ಸಿಕೊದ ದೀರ್ಘಕಾಲದ, ವಿಪರೀತ ಕೋವಿಡ್ ಏಕಾಏಕಿಗಳಿಗೆ ಅಸಮರ್ಪಕ ರಾಷ್ಟ್ರೀಯ ನಾಯಕತ್ವ ಕಾರಣವಾಗಿದೆ.

ಸಾಂಕ್ರಾಮಿಕ ರೋಗದುದ್ದಕ್ಕೂ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಮೆಕ್ಸಿಕೊದ ಪರಿಸ್ಥಿತಿಯ ಸಂಕಷ್ಟವನ್ನು ಮುಚ್ಚಿ ಇಡಲು ನೋಡಿದರು. ಆರಂಭದಲ್ಲಿ, ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ವಿರೋಧಿಸಿದರು ಮತ್ತು ಅಂತಿಮವಾಗಿ ಮಾರ್ಚ್ 23, 2020 ರಂದು ಮೆಕ್ಸಿಕೊ ಎರಡು ತಿಂಗಳ ಕಾಲ ಸ್ಥಗಿತಗೊಳ್ಳುವಂತೆ ಮಾಡಿದರು. ಅವರು ಆಗಾಗ್ಗೆ ಮಾಸ್ಕ್ ಧರಿಸಲು ನಿರಾಕರಿಸಿದರು.

ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಮೊದಲೇ, ಲೋಪೆಜ್ ಒಬ್ರಡಾರ್ ಜಾರಿಗೆ ತಂದ ಹಣಕಾಸು ನೀತಿ ಆರೋಗ್ಯ ಬಿಕ್ಕಟ್ಟನ್ನು ಇನ್ನಷ್ಟು ದುಸ್ತರವಾಗಿಸಿದೆ. ನಮ್ಮಲ್ಲಿ ಮೋದಿಯವರ ನೋಟ್‌ಬ್ಯಾನ್, ಅವೈಜ್ಞಾನಿಕ ಜಿಎಸ್‌ಟಿ ನೀತಿಗಳು ಕೂಡ ಭಾರತಕ್ಕೆ ಈಗ ಕಾಡುತ್ತಿವೆ.

(ಕೃಪೆ: ದಿ ವೈರ್)


ಇದನ್ನೂ ಓದಿ: ಅತಿ ಕೆಟ್ಟ ಕೋವಿಡ್ ನಿರ್ವಹಣೆ: ಐದು ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿಗೆ ಮೊದಲ ಸ್ಥಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...