Homeಕರೋನಾ ತಲ್ಲಣಅತಿ ಕೆಟ್ಟ ಕೋವಿಡ್ ನಿರ್ವಹಣೆ: ಐದು ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿಗೆ ಮೊದಲ ಸ್ಥಾನ

ಅತಿ ಕೆಟ್ಟ ಕೋವಿಡ್ ನಿರ್ವಹಣೆ: ಐದು ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿಗೆ ಮೊದಲ ಸ್ಥಾನ

ಟ್ವಿಟರ್ ಪೋಲ್‌ನಲ್ಲಿ ಒಟ್ಟು 75,450 ಮತ ಚಲಾವಣೆಯಾಗಿದ್ದು, ಮೋದಿಯವರು ಶೇ.90 ರಷ್ಟು ಮತಗಳನ್ನು ಪಡೆದು ಕೆಟ್ಟ ಸಾಂಕ್ರಾಮಿಕ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

- Advertisement -
- Advertisement -

ಕೋವಿಡ್ ಸಾಂಕ್ರಾಮಿಕ ಇಡೀ ಜಗತ್ತನ್ನೆ ತಲ್ಲಣಗೊಳಿಸಿದೆ. ಕೋಟ್ಯಾಂತರ ಜನರಿಗೆ ಹರಡಿದ ಈ ಸೋಂಕು ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡಿದೆ. ಈ ಒಂದೂವರೆ ವರ್ಷದಲ್ಲಿ ಈ ಸಾಂಕ್ರಾಮಿಕ ಪಿಡುಗನ್ನು ನಿರ್ವಹಿಸಲು ಹಲವಾರು ನಾಯಕರು ಹೆಣಗಾಡಿದ್ದಾರೆ. ಕೋವಿಡ್‌ ಅನ್ನು ನಿಗ್ರಹಿಸುವುದು ಬಹು ಕಷ್ಟದ ಕೆಲಸ. ಆದರೂ ಕೆಲವು ನಾಯಕರು ರೋಗ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸಿದ್ದಾರೆ. ಅದೇ ವೇಳೆಯಲ್ಲಿ ಕೆಲವು ನಾಯಕರು ಅತ್ಯಂತ ಕಳಪೆ ನಿರ್ವಹಣೆಯಿಂದ ಕೋವಿಡ್ ಮತ್ತಷ್ಟು ಉಲ್ಬಣಿಸಲು, ಅಪಾರ ಸಾವು ನೋವುಗಳುಂಟಾಗಲು ಕಾರಣರಾಗಿದ್ದಾರೆ.

ವೈಜ್ಞಾನಿಕ ಮಾಹಿತಿಗಳನ್ನು, ತಜ್ಞರ ವರದಿಗಳನ್ನು ಕಡೆಗಣಿಸುವ ಮೂಲಕ, ಮೂಡನಂಬಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ, ಮಾಸ್ಕ್, ಸಾಮಾಜಿಕ ಅಂತರದ ನಿಯಮಗಳನ್ನು ಗಾಳಿಗೆ ತೂರುವ ಮೂಲಕ, ಸಮರ್ಪಕ ವೈದ್ಯಕೀಯ ವ್ಯವಸ್ಥೆ ಮಾಡದಿರುವುದರ ಮೂಲಕ ಅತಿ ಕೆಟ್ಟ ಕೋವಿಡ್‌ ನಿರ್ವಹಣೆಗೆ ಇವರು ಕಾರಣರಾಗಿದ್ದಾರೆ. ಅಮೆರಿಕ ಮೂಲಕ The Conversation ಎಂಬ ಎನ್‌ಜಿಓ ಒಂದು ‘ವಿಶ್ವದ ಕೆಟ್ಟ ಸಾಂಕ್ರಾಮಿಕ ನಾಯಕರು’ ಎಂದು ಐದು ದೇಶದ ಪ್ರಧಾನಿ/ಅಧ್ಯಕ್ಷರ ಪಟ್ಟಿ ಮಾಡಿದೆ. ಅವರಲ್ಲಿ ಅತಿ ಕೆಟ್ಟ ಕೋವಿಡ್ ನಿರ್ವಹಣೆ ಮಾಡಿದವರು ಯಾರು ಎಂಬ ಟ್ವಿಟರ್ ಪೋಲ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಶೇ.90 ರಷ್ಟು ಮತಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನ ಪಡೆದಿದ್ದಾರೆ.

ವಿಶ್ವದ ಕೆಟ್ಟ ಸಾಂಕ್ರಾಮಿಕ ನಾಯಕರು ಎಂದು ಬ್ರೆಜಿಲ್‌ನ ಜೈರ್ ಬೋಲ್ಸೊನಾರೊ, ಭಾರತದ ಪ್ರಧಾನ ನರೇಂದ್ರ ಮೋದಿ, ಮೆಕ್ಸಿಕೋದ ಆಮ್ಲೊ, ಅಮೆರಿಕದ ಡೋನಾಲ್ಡ್ ಟ್ರಂಪ್ ಮತ್ತು ಬೆಲಾರಸ್‌ನ ಲುಕಾಶೆಂಕೊರವರನ್ನು ಗುರುತಿಸಿದೆ. ಟ್ವಿಟರ್ ಪೋಲ್‌ನಲ್ಲಿ ಒಟ್ಟು 75,450 ಮತ ಚಲಾವಣೆಯಾಗಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೇ.90 ರಷ್ಟು ಮತಗಳನ್ನು ಪಡೆದು ಕೆಟ್ಟ ಸಾಂಕ್ರಾಮಿಕ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 5% ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, 3.7% ಮತಗಳೊಂದಿಗೆ ಬ್ರೆಜಿಲ್‌ನ ಜೈರ್ ಬೋಲ್ಸೊನಾರೊ ತೃತೀಯ ಸ್ಥಾನದಲ್ಲಿದ್ದಾರೆ. ಮೆಕ್ಸಿಕೋದ ಆಮ್ಲೊ 1.3% ಮತಗಳನ್ನು ಪಡೆದರು. ಟ್ವಿಟರ್ ಪೋಲ್‌ಗೆ ಕೇವಲ ನಾಲ್ಕು ಆಯ್ಕೆಗಳು ಇದ್ದ ಕಾರಣ ಬೆಲಾರಸ್‌ನ ಲುಕಾಶೆಂಕೊರವರಿಗೆ ಮತ ಹಾಕಬೇಕಾದರೆ ಕಮೆಂಟ್ ಮಾಡಲು ಸೂಚಿಸಲಾಗಿತ್ತು. ಆದರೆ ಕಮೆಂಟ್ ಸೆಕ್ಷನ್‌ನಲ್ಲಿ ನರೇಂದ್ರ ಮೋದಿ ಹೆಸರುಗಳೆ ತುಂಬಿಹೋಗಿವೆ.

ಭಾರತದ ಇಂದಿನ ದುರಂತಕ್ಕೆ ಅನೇಕ ಭಾರತೀಯರು ಒಬ್ಬ ವ್ಯಕ್ತಿಯನ್ನು ದೂಷಿಸಿದ್ದು ಅವರು, ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ.

ತಜ್ಞರು ಎರಡನೇ ಅಲೆಯ ಬಗ್ಗೆ ಸಾಕಷ್ಟು ಹೆಚ್ಚರಿಸಿದ್ದರೂ ಸಹ ನರೇಂದ್ರ ಮೋದಿಯವರು 2021ರ ಜನವರಿಯಲ್ಲಿ “ಕೊರೊನಾವನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಮಾನವೀಯತೆಯನ್ನು ಉಳಿಸಿದೆ, ವಿಶ್ವಕ್ಕೆ ಮಾದರಿಯಾಗಿದೆ” ಎಂದು ಜಾಗತಿಕ ವೇದಿಕೆಯಲ್ಲಿ ಘೋಷಿಸಿದರು. ಮಾರ್ಚ್ ನಲ್ಲಿ “ನಾವು ಕೋವಿಡ್‌ ಅಂತ್ಯಕಾಲದಲ್ಲಿದ್ದೇವೆ” ಎಂದು ಭಾರತದ ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸಿದರು. ಅಂದರೆ ಕೊರೊನಾ ಬಲಪಡೆಯುತ್ತಿರುವ ಸಮಯದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದ್ದ ಭಾರತ ತೀವ್ರ ನಿರ್ಲಕ್ಷ್ಯ ವಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ಏಪ್ರಿಲ್‌ನಲ್ಲಿ ದೊಡ್ಡ ದೊಡ್ಡ ಚುನಾವಣಾ ರ್ಯಾಲಿಗಳಲ್ಲಿ ಮೋದಿ ಮತ್ತು ಇತರ ರಾಜಕೀಯ ನಾಯಕರು ಪಾಲ್ಗೊಂಡರು. ಆರೋಗ್ಯ ತಜ್ಞರ ಎಚ್ಚರಿಕೆಯ ಹೊರತಾಗಿಯೂ ಲಕ್ಷಾಂತರ ಜನರು ಸೇರುವ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು. ಇದು ಕೋವಿಡ್ ಎರಡನೇ ಅಲೆಯ ತೀವ್ರವಾಗಿ ಹರಡಿ ಹಾನಿಮಾಡಲು ಕಾರಣವಾಯಿತು ಎಂದು ವರದಿ ತಿಳಿಸಿದೆ.

“ವೈದ್ಯಕೀಯ ಸಮೂಹವು ಜನರಿಗೆ ಕಡ್ಡಾಯವಾದ ಕೋವಿಡ್ ಮಾನದಂಡಗಳನ್ನು ಅರ್ಥ ಮಾಡಿಸಲು ಶ್ರಮಿಸುತ್ತಿದ್ದರೆ, ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಯಲ್ಲಿ ತೂರುವ ದೊಡ್ಡ ರಾಜಕೀಯ ರ‍್ಯಾಲಿಗಳನ್ನು ನಡೆಸಲು ಪ್ರಧಾನಿ ಮೋದಿ ಹಿಂಜರಿಯಲಿಲ್ಲ” ಎಂದು ಇದೇ ಸಮಯದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವಜೋತ್ ದಹಿಯಾ ಆರೋಪಿಸಿದ್ದರು.

ಲಸಿಕೆ ವಿಚಾರದಲ್ಲಿಯೂ ಮೋದಿ ಸಂಪೂರ್ಣವಾಗಿ ಎಡವಿದರು. ಭಾರತದಲ್ಲಿ ಲಸಿಕೆ ಕೊರತೆಯಿದ್ದರೂ ವಿದೇಶಗಳಿಗೆ ರಫ್ತು ಮಾಡಲಾಯಿತು. ಈಗ ಭಾರತದಲ್ಲಿ ಲಸಿಕೆಗೆ ಹಾಹಾಕಾರವೆದ್ದಿದೆ ಎಂದು ವರದಿ ಟೀಕಿಸಿದೆ.


ಇದನ್ನೂ ಓದಿ: ‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್, 2ನೆ ಅಲೆಗೆ ಅವರೇ ಕಾರಣ’: ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷರ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...