Homeಮುಖಪುಟ60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ 'ಬರ್ಖಾ ದತ್'

60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’

ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪಡೆದಿರುವ ಪತ್ರಕರ್ತೆ 'ಬರ್ಖಾ ದತ್' ಲಾಕ್ ಡೌನ್ ಆದ ನಂತರ ನಿರಂತರವಾಗಿ 60 ದಿನಗಳಿಗಿಂತಲೂ ಹೆಚ್ಚು ಕಾಲ ರಸ್ತೆಯಲ್ಲಿದ್ದೇ ವಲಸೆ ಕಾರ್ಮಿಕರ ಕತೆಯನ್ನು ದೇಶದ ಮುಂದಿಡುತ್ತಿದ್ದಾರೆ.

- Advertisement -
- Advertisement -

ಕೊರೊನಾ ಭಯಕ್ಕೆ ಲಾಕ್ ಡೌನ್ ಆಗಿ ದೇಶದ ಭಾಗಶಃ ಜನರು ಮನೆಯೊಳಗೆ ಕುಳಿತಿರುವಾಗ ಇವರೊಬ್ಬರು ಮಾತ್ರ “ಹೆದ್ದಾರಿಗಳಲ್ಲಿ ಪಾದಗಳಲ್ಲಿ ರಕ್ತ ಸುರಿಸುತ್ತಾ ಹತಾಶರಾಗಿ ನಡೆಯುತ್ತಿರುವ ಕಾರ್ಮಿಕರ ಕಡೆಗೆ ತಮ್ಮ ಕ್ಯಾಮರಾ ಕಣ್ಣನ್ನು ತಿರುಗಿಸಿ, ವಲಸೆ ಕಾರ್ಮಿಕರ ದಾರುಣ ಕತೆಯನ್ನು ದೇಶದ ಎದುರಿಗೆ ಬಿಚ್ಚಿಡುತ್ತಿದ್ದಾರೆ. ಲಾಕ್ ಡೌನ್ ಆಗಿದಂದಿನಿಂದ 60 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲೇ ಇದ್ದು ಪತ್ರಕರ್ತರಾಗಿ ತಮ್ಮ ಬದ್ದತೆಯನ್ನು ಎತ್ತಿ ಹಿಡಿದಿದ್ದಾರೆ. ಅವರೇ ಪ್ರಸಿದ್ದ ಪತ್ರಕರ್ತೆ “ಬರ್ಖಾ ದತ್.”

18 ಡಿಸೆಂಬರ್ 1971 ರಂದು ಜನಿಸಿದ ಬರ್ಖಾ ದತ್, ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜನವರಿ 2017 ರವರೆಗೂ ಅವರು 21 ವರ್ಷಗಳ ಕಾಲ ಎನ್ಡಿಟಿವಿ ಯಲ್ಲಿ ಕಾರ್ಯ ನಿರ್ವಹಿಸಿದ್ದರು. 1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ದದ ವರದಿಯನ್ನು ಯುದ್ದ ಭೂಮಿಯಲ್ಲಿದ್ದೇ ವರದಿ ಮಾಡಿದ ನಂತರ ಬರ್ಖಾ ದತ್ ಹೆಚ್ಚು ಪ್ರಸಿದ್ದಿ ಗಳಿಸಿದರು. ಇವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಸೇರಿದಂತೆ, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸದ್ಯ ಬರ್ಖಾ ದತ್ ಅವರು ಮೋಜೊ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಾಕ್ ಡೌನ್‌ ಪ್ರಾರಂಭದಿಂದಲೂ ವಲಸೆ ಕಾರ್ಮಿಕರೊಂದಿಗೆ ಪ್ರಯಾಣಿಸಿ ಅವರ ಬಗೆಗಿನ ವರದಿಗಳನ್ನು ದೇಶದ ಮುಂದೆ ಇಡುತ್ತಿದ್ದಾರೆ.

ಕಳೆದ ಶನಿವಾರ, ಲಕ್ನೋದಿಂದ 200 ಕಿಲೋಮೀಟರ್ ದೂರದಲ್ಲಿರುವ ಔರಿಯಾದಲ್ಲಿ 26 ವಲಸೆ ಕಾರ್ಮಿಕರು ಮುಂಜಾನೆ 3.30 ರ ಸುಮಾರಿಗೆ ಅಫಘಾತವಾಗಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಉತ್ತರ ಪ್ರದೇಶ ಸರ್ಕಾರ ಈ ವಲಸೆ ಕಾರ್ಮಿಕರ ಶವಗಳನ್ನು ತೆರೆದ ಟ್ರಕ್‌ನಲ್ಲಿ ಐಸ್ ಚಪ್ಪಡಿಗಳ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ವಾರಸುದಾರರ ಮನೆಗೆ ಸಾಗಹಾಕಲು ನೋಡಿತು.

ಈ ವಿಷಯದ ಬಗ್ಗೆ ಬರ್ಖಾ ಅವರ ವರದಿಯ ನಂತರವೇ, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಪ್ರಮುಖ ಸುದ್ದಿ ತಾಣಗಳು ಅದನ್ನು ವರದಿ ಮಾಡಿದವು. ಘಟನೆಯನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕಟುವಾಗಿ ಟೀಕಿಸಿದ್ದರು. ಇವರ ವರದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಂತರ ಎಚ್ಚತ್ತ ಆಡಳಿತವನ್ನು ಶವವನ್ನು ಆಂಬುಲೆನ್ಸ್‌ಗಳಿಗೆ ಸ್ಥಳಾಂತರಿಸಿ ಕೊಂಡೊಯ್ಯಿತು.

ಟ್ರಕ್‌ನ ಹಿಂಭಾಗದಲ್ಲಿ ಆಸನಕ್ಕಾಗಿ ಒಬ್ಬ ಪ್ರಯಾಣಿಕರಿಗೆ 3,000 ರೂಪಾಯಿಗಳನ್ನು ವಿಧಿಸುವ ಕಥೆಯೊಂದಿಗೆ ವಲಸೆ ಕಾರ್ಮಿಕರು ಕತೆಯನ್ನು ಅವರು ದೇಶದ ಮುಂದೆ ಅವರು ತೆರೆದಿಟ್ಟಿದ್ದರು.

ಏಷ್ಯಾದಲ್ಲೇ ಅತ್ಯಂತ ದೊಡ್ಡ ಸ್ಲಂ ಆದ ಧಾರವಿಯಲ್ಲಿ, ಎರಡು ಬಾರಿ ಕೊರೊನಾ ನೆಗೆಟಿವ್ ಪರೀಕ್ಷೆಗೆ ಒಳಪಟ್ಟಿದ್ದರೂ ಬಿಎಂಸಿ ನೌಕರನೊಬ್ಬ ಸಾವನ್ನಪ್ಪಿದ್ದರು. ಅವರ ಮರಣದ 3 ದಿನಗಳ ನಂತರ, ಅವರು ಕೊರೊನಾ ಸೋಂಕಿತ ಎಂದು ಕಂಡುಬಂದಿತ್ತು. ಆ ಸಮಯದಲ್ಲಿ ಅವರ ಕುಟುಂಬದ ಇತರ ಇಬ್ಬರಿಗೂ ಸಹ ಕೊರೊನಾ ಸೋಂಕು ಇರುವುದು ದೃಡಪಟ್ಟಿತ್ತು. ಇದರ ಬಗ್ಗೆ ಬರ್ಖಾ ದತ್ ವಿಶೇಷ ತನಿಖಾ ವರದಿಯನ್ನು ಮಾಡಿದ್ದರು.

1947 ರಲ್ಲಿ ವಿಭಜನೆಯಾದ ನಂತರ ಭಾರತ ಕಂಡ ಅತಿದೊಡ್ಡ ಸಾಮೂಹಿಕ ವಲಸೆಯ ಹೃದಯ ಕಲಕುವ ಕಥೆಗಳನ್ನು ಮಾತ್ರ ಇವರು ನೀಡುತ್ತಿಲ್ಲ. ಕೊರೊನಾದಂತಹ ಬಿಕ್ಕಟ್ಟಿನಲ್ಲಿಯೂ ಕೆಲವು ಕೋಮುವಾದ ಹರಡುವ ನಿರೂಪಕರಿಗೆ ವಿರುದ್ದವಾಗಿ ಭರವಸೆ ತುಂಬುವ ಹಾಗೂ ಸೌಹಾರ್ಧದ ಹೃದಯಂಗಮ ಕಥೆಗಳನ್ನು ಸಹ ದೇಶದ ಮುಂದೆ ಇಡುತ್ತಿದ್ದಾರೆ.

ಲಾಕ್ ಡೌನ್ ನಿಂದ ಉಂಟಾದ ಯುದ್ಧದಂತಹ ಪರಿಸ್ಥಿತಿಯಲ್ಲಿ, ಹಸಿವೆಂದರೆ ಏನೆಂದು ಕಂಡ 12 ವರ್ಷದ ಬಾಲಕಿಯ, “ತಾನು ದೊಡ್ಡವಳಾದರೆ ಹಸಿವು ತಣಿಸುತ್ತೇನೆ” ಎನ್ನುವ ಕನಸುಗಳ ಕತೆಯನ್ನು ಬರ್ಖಾ ದೇಶಕ್ಕೆ ಹೇಳುತ್ತಾರೆ.

ತಮ್ಮ 63 ದಿನಗಳ ಪ್ರಯಾಣದುದ್ದಕ್ಕೂ ಭರವಸೆ, ಹತಾಶೆ, ದುಃಖ, ಸಾವು ನೋವಿನ ಈ ರೀತಿಯ ನೂರಾರು ಕಥೆಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದಾಸೀನತೆಯನ್ನು ದೇಶದ ಮುಂದೆ ತೋರಿಸುತ್ತಾರೆ.

ಕೊರೊನಾದಂತಹ ಸಾಂಕ್ರಮಿಕ ರೋಗದ ಸಮಯದಲ್ಲಿ 60 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲಿ ಇದ್ದು ವರದಿ ಮಾಡುವುದೆಂದರೆ ಅದು ಮನೆಯಲ್ಲಿದ್ದು ಓದಿದಂತೆ, ಕೇಳಿದಂತೆ ಸುಲಭ ಮಾತೇನಲ್ಲ ಎಂದು ಬಹಳಷ್ಟು ಜನರು ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾಗರಿಕ ರಾಷ್ಟ್ರದ ಮುಖವಾಗಿದ್ದ ಬರ್ಖಾ ದತ್, ಕೊರೊನಾ ಕಾಲದ ಯುದ್ಧದಲ್ಲಿ ನಾಗರಿಕರ ಧ್ವನಿಯಾಗಿ ಮತ್ತೊಮ್ಮೆ ನಮ್ಮೆದುರಿಗೆ ನಿಂತದ್ದಾರೆ. ಆದರೆ ಕಿವುಡರಲ್ಲದ ಆದರೆ ಕಿವುಡರಂತೆ ನಟಿಸುತ್ತಿರುವ ಆಡಳಿತಗಾರರು ಇನ್ನೂ ಹಾಗೆಯೆ ಇದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕೃಪೆ:ಸ್ಕೂಪ್ ವೂಪ್


ಓದಿ:  ಕೊರೊನಾ ಬಿಕ್ಕಟ್ಟು: ವಿರೋಧ ಪಕ್ಷವೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿತು?


ಓದಿ: ತಾನು ಮಾಡುವ ಮಹಾನ್‌ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...