ತನ್ನ ಅತ್ಯಾಚಾರದ ಆರೋಪಿಗಳಿಂದಲೇ ಬೆಂಕಿಗೆ ಆಹುತಿಯಾಗಿ ಸಾವನಪ್ಪಿದ ಉನ್ನಾವೋ ಸಂತ್ರಸ್ತೆಯ ತಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ನನ್ನ ಮಗಳ ಸಾವಿಗೆ ಕಾರಣರಾದ ಐವರು ಆರೋಪಿಗಳಿಗೂ ಸಹ ಗುಂಡು ಹಾರಿಸಿ ಸಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಆರೋಪಿಗಳು: ಯುಪಿಯಲ್ಲಿ ಮತ್ತೊಂದು ಅಮಾನವೀಯ ಘಟನೆ
ತೆಲಂಗಾಣದ ಪಶು ವೈದ್ಯೆಯ ಅತ್ಯಾಚಾರದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಘಟನೆಯನ್ನು ಉಲ್ಲೇಖಿಸಿರುವ ಅವರು, ನನಗೆ ಬೇರೆ ಯಾವುದೇ ದುರಾಸೆಯಿಲ್ಲ. ನನಗೆ ಮನೆ ಇತ್ಯಾದಿ ಯಾವುದು ಬೇಡ. ನನ್ನ ಮಗಳನ್ನು ಅತ್ಯಾಚಾರ ಮಾಡಿದವರಿಗೂ ಅದೇ ಗತಿ ಕಾಣಿಸಬೇಕು ಎಂದು ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಕಿಗೆ ಆಹುತಿಯಾಗಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಾವು: ತ್ವರಿತ ವಿಚಾರಣೆಗೆ ಸಿಎಂ ಆದೇಶ
“ನನ್ನ ಸಹೋದರಿ, ‘ದಯವಿಟ್ಟು ನನ್ನನ್ನು ಉಳಿಸಿ, ಅವರು ಸಾಯುವುದನ್ನು ನಾನು ನೋಡಬೇಕೆಂದು ಬಯಸುತ್ತೇನೆ’ ಎಂದು ಹೇಳಿದ್ದಳು. ನಾವು ನಿಮ್ಮನ್ನು ಉಳಿಸುತ್ತೇವೆ ಎಂದು ನಾನು ಹೇಳಿದ್ದೆ. ಆದರೆ ಆಕೆಯನ್ನು ಉಳಿಸುವುದು ನಮಗೆ ಸಾಧ್ಯವಾಗಲಿಲ್ಲ. ನಾನು ಈ ಐದು ಜನರು ಬದುಕಬಾರದು ಎಂದು ಬಯಸುತ್ತೇನೆ” ಎಂದು ಸಂತ್ರಸ್ತೆಯ ಸಹೋದರ ತಿಳಿಸದ್ದಾರೆ.


