Homeಮುಖಪುಟ‘ಒಂದು ವಾರ ಓಡಾಡದಿರಿ; ಓಡಾಡಿದರೆ ಮುಂದಾಗುವ ಅಪಾಯಕ್ಕೆ ಅವರೇ ಹೊಣೆ’: ಸಶಸ್ತ್ರ ಪಡೆಗಳಿಗೆ ‘ಕೊನ್ಯಾಕ್’ ಎಚ್ಚರಿಕೆ

‘ಒಂದು ವಾರ ಓಡಾಡದಿರಿ; ಓಡಾಡಿದರೆ ಮುಂದಾಗುವ ಅಪಾಯಕ್ಕೆ ಅವರೇ ಹೊಣೆ’: ಸಶಸ್ತ್ರ ಪಡೆಗಳಿಗೆ ‘ಕೊನ್ಯಾಕ್’ ಎಚ್ಚರಿಕೆ

ಕೊನ್ಯಾಕ್‌‌ ಯೂನಿಯನ್‌ ನಾಗಾಲ್ಯಾಂಡ್‌ ಸೇರಿದಂತೆ ಈಶಾನ್ಯ ಭಾರತದ ಪ್ರಭಾವಿ ಬುಡಕಟ್ಟು ಸಂಘಟನೆಯಾಗಿದೆ.

- Advertisement -
- Advertisement -

ನಾಗಾಲ್ಯಾಂಡ್‌ನಲ್ಲಿ ಭಾರತೀಯ ಸೇನೆ 14 ನಾಗರಿಕರನ್ನು ಹತ್ಯೆ ಮಾಡಿರುವ ಹಿನ್ನಲೆಯಲ್ಲಿ, ಕೊನ್ಯಾಕ್‌ ವಿದ್ಯಾರ್ಥಿ ಒಕ್ಕೂಟವು ರಾಜ್ಯದಾದ್ಯಂತ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಅವಧಿಯಲ್ಲಿ ಸಶಸ್ತ್ರ ಪಡೆಗಳು ಸೋಮ ಜಿಲ್ಲೆಯಲ್ಲಿ ಓಡಾಡದಂತೆ ವಿದ್ಯಾರ್ಥಿ ಒಕ್ಕೂಟ ‘ಎಚ್ಚರಿಕೆ’ ನೀಡಿದೆ. ಕೊನ್ಯಾಕ್‌‌ ಯೂನಿಯನ್‌ ಈಶಾನ್ಯ ಭಾರತದ ಪ್ರಭಾವಿ ಬುಡಕಟ್ಟು ಸಂಘಟನೆಯಾಗಿದೆ.

“ಯಾವುದೇ ಮಿಲಿಟರಿ ಸಿಬ್ಬಂದಿ ಈ ಆದೇಶವನ್ನು ಉಲ್ಲಂಘಿಸಿಕೊಂಡು ಓಡಾಡಿದರೆ, ನಡೆಯುವ ಅಪಾಯಕ್ಕೆ ಅವರೇ ಜವಾಬ್ದಾರಿ. ಇದು ನಮ್ಮ ಎಚ್ಚರಿಕೆಯಾಗಿದ್ದು, ನಾವು ಏಳು ದಿನಗಳವರೆಗೆ ಶೋಕಾಚರಣೆ ಮಾಡುತ್ತಿದ್ದೇವೆ. ನಮ್ಮ ಜನರ ಸುರಕ್ಷತೆಗಾಗಿ, ನಮ್ಮ ಗ್ರಾಮ ಮತ್ತು ನಮ್ಮ ಅಧಿಕಾರ ವ್ಯಾಪ್ತಿಯಿಂದ ಅಸ್ಸಾಂ ರೈಫಲ್ಸ್ ಅನ್ನು ತೆಗೆದುಹಾಕಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ” ಎಂದು ಕೊನ್ಯಾಕ್ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ನೋಕ್ಲೆಮ್ ಕೊನ್ಯಾಕ್ ಹೇಳಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪ್ರಭಾವಿ ವಿದ್ಯಾರ್ಥಿ ಒಕ್ಕೂಟವಾದ ಕೊನ್ಯಾಕ್ ಡಿಸೆಂಬರ್ 7 ರಿಂದ ಏಳು ದಿನಗಳ ಶೋಕಾಚರಣೆ ಅವಧಿಯನ್ನು ಘೋಷಿಸಿದೆ.

ಇದನ್ನೂ ಓದಿ:ಮುಗ್ಧ ನಾಗರಿಕರ ಮೇಲೆ ಯೋಜಿತ ದಾಳಿ ಮಾಡಲಾಗಿದೆ: ಈಶಾನ್ಯ ಭಾರತದ ಪ್ರಭಾವಿ ಬುಡಕಟ್ಟು ಒಕ್ಕೂಟ ಆರೋಪ

“ಕೊನ್ಯಾಕ್ ವಿದ್ಯಾರ್ಥಿ ಒಕ್ಕೂಟವು, ತೀವ್ರ ಶೋಕಾಚರಣೆಯ ವಾರದ ಸಮಯದಲ್ಲಿ ಸೋಮ ಜಿಲ್ಲೆಯೊಳಗೆ ಮಿಲಿಟರಿ ಸಿಬ್ಬಂದಿಯ ಓಡಾಟವನ್ನು ನಿಷೇಧಿಸುವ ಆದೇಶ ನೀಡಿದೆ” ಎಂದು ನೋಕ್ಲೆಮ್ ಹೇಳಿದ್ದಾರೆ.

“AFSPA(ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಯ ಲಾಭವನ್ನು ಪಡೆದುಕೊಂಡು, ಭದ್ರತಾ ಪಡೆಗಳು ಇತರ ನ್ಯಾಯವ್ಯಾಪ್ತಿಗಳಿಂದ ನಮ್ಮ ಅಧಿಕಾರ ವ್ಯಾಪ್ತಿಗೆ ಬರುತ್ತಿವೆ. ಅವರಿಗೆ ಅದರ ಬಗ್ಗೆ ತಿಳಿದಿಲ್ಲ. ಯಾವುದರ ಅರಿವೂ ಇಲ್ಲದೇ ಕಾರ್ಯಾಚರಣೆ ನಡೆಸಿ ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದಾರೆ, ಇದನ್ನು ಸಹಿಸಲಾಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

“ಶೋಕದ ಅವಧಿಯಲ್ಲಿ, ಸಶಸ್ತ್ರ ಪಡೆಗಳು ನಮ್ಮ ಪ್ರದೇಶದಲ್ಲಿ, ಇಡೀ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಬಾರದು, ತಿರುಗಾಡಬಾರದು” ಎಂದು ಅವರು ಹೇಳಿದ್ದಾರೆ.

ಹತ್ಯೆಯ ಬಗ್ಗೆ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ‘ಸುಳ್ಳು’ ಹೇಳಿಕೆ ನೀಡಿದ್ದಾರೆ ಎಂದು ಕೋನ್ಯಾಕ್ ವಿದ್ಯಾರ್ಥಿ ಸಂಘ ಆಪಾದಿಸಿದ್ದು, ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

“ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಸಚಿವರು ತಮ್ಮ ಮಾತು ಮತ್ತು ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ನಾವು ಮುಂದೆ ಹೋಗುತ್ತೇವೆ. ನಮ್ಮ ಆಳವಾದ ಶೋಕಾಚರಣೆಯ ವಾರ ನಿನ್ನೆ ಪ್ರಾರಂಭವಾಯಿತು ಮತ್ತು ಮುಂದಿನ ಆರು ದಿನಗಳವರೆಗೆ ನಾವು ಶೋಕಿಸುತ್ತೇವೆ” ಎಂದು ನೋಕ್ಲೆಮ್ ಕೊನ್ಯಾಕ್ ಹೇಳಿದ್ದಾರೆ.

ನಾಗಾಲ್ಯಾಂಡ್‌ನಿಂದ AFSPA ಹಿಂಪಡೆಯಬೇಕು ಮತ್ತು ಕಾನೂನನ್ನು ರದ್ದುಪಡಿಸುವವರೆಗೆ ಕೊನ್ಯಾಕ್ ವಿದ್ಯಾರ್ಥಿ ಸಂಘವು ಹೋರಾಟ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ನಾಗಾಲ್ಯಾಂಡ್ ಹತ್ಯಾಕಾಂಡ: AFSPA ರದ್ದತಿಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ಸಿಎಂಗಳ ಒತ್ತಾಯ

“AFSPA ರದ್ದುಪಡಿಸುವವರೆಗೆ ನಾವು ಹೋರಾಡುತ್ತೇವೆ. ನೀವು ಹಣದಿಂದ ವ್ಯಕ್ತಿಯ ಜೀವನವನ್ನು ಖರೀದಿಸಬಹುದೇ? ನಾವು ಯಾವುದೇ ವಿಷಾದಕ್ಕಾಗಿ ವಿನಂತಿಸುತ್ತಿಲ್ಲ. ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಏನೇ ಹೇಳಿದರೂ ನಾವು ವಿಷಾದಕ್ಕೆ ಬಗ್ಗುವುದಿಲ್ಲ” ಎಂದು ನೋಕ್ಲೆಮ್ ಕೊನ್ಯಾಕ್ ಹೇಳಿದ್ದಾರೆ.

ಕೊನೆಯ ಶೋಕಾಚರಣೆಯ ದಿನದವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು, ಎಲ್ಲಾ ಅಧೀನ ಅಧಿಕಾರಿಗಳ ಕಚೇರಿಗಳು ಮತ್ತು ಫೆಡರೇಶನ್ ಘಟಕಗಳು ಮತ್ತು ಎಲ್ಲಾ ವ್ಯಾಪಾರ ಸಂಸ್ಥೆಗಳು ತಮ್ಮ ಕಟ್ಟಡಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸುವಂತೆ ಕೊನ್ಯಾಕ್ ವಿದ್ಯಾರ್ಥಿಗಳ ಒಕ್ಕೂಟವು ಕೇಳಿಕೊಂಡಿದೆ.

7 ದಿನಗಳ ಶೋಕಾಚರಣೆಯ ಅವಧಿಯಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸುವಂತೆ ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ತೋಳುಗಳಿಗೆ ಕಪ್ಪು ಬ್ಯಾಡ್ಜ್ ಅಥವಾ ಕಪ್ಪು ರಿಬ್ಬನ್‌ಗಳನ್ನು ಧರಿಸಲು ವಿದ್ಯಾರ್ಥಿ ಒಕ್ಕೂಟ ಕೇಳಿಕೊಂಡಿದೆ.

ಮಂಗಳವಾರ, ನಾಗಾಲ್ಯಾಂಡ್ ಸಚಿವ ಸಂಪುಟವು ರಾಜ್ಯದಲ್ಲಿ ತಕ್ಷಣವೇ AFSPA-1958 ಕಾಯ್ದೆಯನ್ನು ರದ್ದುಗೊಳಿಸುವಂತೆ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ.

ಈಶಾನ್ಯ ಭಾರತದಲ್ಲಿ ಹಲವಾರು ಸಂಘಟನೆಗಳು, ಬುಡಕಟ್ಟು ಸಂಸ್ಥೆಗಳು, ವಿದ್ಯಾರ್ಥಿಗಳ ಸಂಘಟನೆಗಳು, ನಾಗರಿಕ ಹಕ್ಕುಗಳ ಗುಂಪುಗಳು ಮತ್ತು ರಾಜಕೀಯ ಪಕ್ಷಗಳು AFSPA ಅನ್ನು ತೆಗೆದುಹಾಕಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿವೆ.

AFSPA ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಕಾನೂನು ಉಲ್ಲಂಘನೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಯ ವಿರುದ್ಧ ಗುಂಡು ಹಾರಿಸಲು, ಬಲವನ್ನು ಬಳಸಲು ಅಧಿಕಾರವನ್ನು, ಯಾವುದೇ ವ್ಯಕ್ತಿ ಅಪರಾಧ ಎಸಗಿರುವ ಶಂಕೆಯಿದ್ದಲ್ಲಿ ವಾರಂಟ್ ಇಲ್ಲದೆ ಬಂಧಿಸುವ ಅಧಿಕಾರ, ವಾರಂಟ್ ಇಲ್ಲದೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಇಟ್ಟುಕೊಂಡಿದ್ದಾರೆ ಎಂದು ಯಾವುದೆ ಶಂಕಿತ ವಕ್ತಿಯ ಮನೆ ಪ್ರವೇಶಿಸಿ ಹುಡುಕಬಹುದಾದ ಅಧಿಕಾರವನ್ನು ಸೈನ್ಯಕ್ಕೆ ಈ ಕಾನೂನು ನೀಡಿದೆ.

ಇದನ್ನೂ ಓದಿ: ನಾಗಾಲ್ಯಾಂಡ್: ದಂಗೆಕೋರರ ವಿರುದ್ಧದ ಕಾರ್ಯಚರಣೆಯಲ್ಲಿ 13 ಮಂದಿ ಗ್ರಾಮಸ್ಥರನ್ನು ಹತ್ಯೆಗೈದ ಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...