Homeಮುಖಪುಟ‘ನನ್ನ ತಂದೆಯನ್ನು ಕೊಂದು, ನನ್ನನ್ನು ನೋಡಿ ನಗುತ್ತಿದ್ದರು’ - ಕಾಶ್ಮೀರಿ ಬಾಲಕಿ

‘ನನ್ನ ತಂದೆಯನ್ನು ಕೊಂದು, ನನ್ನನ್ನು ನೋಡಿ ನಗುತ್ತಿದ್ದರು’ – ಕಾಶ್ಮೀರಿ ಬಾಲಕಿ

- Advertisement -
- Advertisement -

13 ವರ್ಷದ ಕಾಶ್ಮೀರಿ ಬಾಲಕಿಯೊಬ್ಬರು ಜಮ್ಮು ಕಾಶ್ಮೀರದಲ್ಲಿ ಸೋಮವಾರ ನಡೆದ ಭದ್ರತಾ ಕಾರ್ಯಾಚರಣೆ ವೇಳೆ ಹತ್ಯೆಗೀಡಾದ ತನ್ನ ತಂದೆಯ ಬಗ್ಗೆ ಮಾತನಾಡುತ್ತಾ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. “ತಂದೆಯನ್ನು ಕೊಂದು ನನ್ನನ್ನು ನೋಡಿ ನಗುತ್ತಿದ್ದರು” ಎಂದು ಬಾಲಕಿ ವಿಡಿಯೊದಲ್ಲಿ ಬಿಕ್ಕಳಿಸುತ್ತಾ ಹೇಳಿದ್ದಾರೆ.

ಶ್ರೀನಗರದ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಮೃತಪಟ್ಟವರಲ್ಲಿ ಬಾಲಕಿಯ ತಂದೆ ಉದ್ಯಮಿ ಮೊಹಮ್ಮದ್ ಅಲ್ತಾಫ್ ಭಟ್ ಕೂಡಾ ಸೇರಿದ್ದಾರೆ. ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಮತ್ತು ಅವನ ಸಹಚರನನ್ನು ಪಡೆಗಳು ಕೊಂದಿದ್ದಾರೆ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ

ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಅಲ್ತಾಫ್ ಭಟ್ ಮತ್ತು ಮತ್ತೊಬ್ಬ ಉದ್ಯಮಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು ಎಂದು ಪೊಲೀಸರು ಮೊದಲು ಹೇಳಿದ್ದರು. ಆದರೆ ನಂತರ ಮಾತು ಬದಲಿಸಿದ ಪೊಲೀಸರು ಅವರಿಬ್ಬರು ಕ್ರಾಸ್ ಫೈರ್‌ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಅದರ ನಂತರ, ಕಾಂಪ್ಲೆಕ್ಸ್ ಮಾಲೀಕ ಅಲ್ತಾಫ್ ಭಟ್ ತನ್ನ ಬಾಡಿಗೆದಾರರ ಬಗ್ಗೆ ಅಧಿಕಾರಿಗಳಿಗೆ ತಿಳಿಸದ ಕಾರಣ ಅವರನ್ನು ‘ಭಯೋತ್ಪಾದಕರ ಸಹಚರರು’ ಎಂದು ಪರಿಗಣಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಅವರ ಕಾಂಪ್ಲೆಕ್ಸ್‌ನಲ್ಲಿದ್ದ ಬಾಡಿಗೆದಾರರಲ್ಲಿ ಒಬ್ಬ ಭಯೋತ್ಪಾದಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ.

ಇದೀಗ, ಅಲ್ತಾಫ್ ಭಟ್‌ ಅವರ 13 ವರ್ಷದ ಮಗಳು ನೀಡಿರುವ ಹೇಳಿಕೆಯ ವಿಡಿಯೊ ವ್ಯಾಪಕವಾಗಿ ವೈರಲ್‌ ಆಗಿದೆ. ಅದರಲ್ಲಿ ಬಾಲಕಿಯು ಕಣ್ಣೀರಿಡುತ್ತಾ ಅಂದಿನ ಘಟನೆಯನ್ನು ವಿವರಿಸಿದ್ದಾರೆ.

“ನನ್ನ ಚಿಕ್ಕಪ್ಪ 10 ಗಂಟೆಯ ಸುಮಾರಿಗೆ ಫೋನ್‌‌ ಮಾಡಿ, ಅಳಲು ಪ್ರಾರಂಭಿಸಿದರು…ಆಗ ನಾನು ಮನೆಯಲ್ಲಿದ್ದೆ…ಈ ವೇಳೆ ನಾನು ಕೂಗು ಮತ್ತು ಕಿರುಚಾಟದ ಶಬ್ದಗಳನ್ನು ಕೇಳಿದೆ…ನಾನು ಓಡಿಹೋದೆ. ನಾನು ಅಲ್ಲಾನನ್ನು ಪ್ರಾರ್ಥಿಸುತ್ತಿದ್ದೆ” ಎಂದು ಅವರು ಅಳುತ್ತಾ ಹೇಳುತ್ತಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಈ ಗೋಹತ್ಯೆಯನ್ನು ತಡೆಯುತ್ತಿರುವುದು ಶ್ರೀನಗರದ ಕಾಶ್ಮೀರಿ ಪಂಡಿತ್ ಅಲ್ಲ, ಮುಸ್ಲಿಂ ಯುವಕ!

“ನನ್ನ ತಂದೆಯನ್ನು ಮೂರು ಬಾರಿ ಕರೆದುಕೊಂಡು ಹೋಗಲಾಯಿತು ಎಂದು ನನ್ನ ನನ್ನ ಸೋದರಸಂಬಂಧಿ ನನಗೆ ಹೇಳಿದರು. ಎರಡು ಭಾರಿ ಅವರನ್ನು ಬಿಟ್ಟು, ಮೂರನೇ ಬಾರಿ ಅವರನ್ನು ಕೊಲ್ಲಲಾಯಿತು. ಇದರ ಅರ್ಥವೇನು? ಇತರನ್ನೂ ಕೂಡಾ ಕೊಲ್ಲಲಾಯಿತು, ಏನಿದೆಲ್ಲಾ?”

ಬಾಲಕಿಯು ಅಂದಿನ ನೆನಪುಗಳನ್ನು ಹೇಳುವಾಗ ಬಿಕ್ಕಳಿಸುತ್ತಾ ಹೆಚ್ಚು ಹೆಚ್ಚು ವಿಚಲಿತಳಾಗುತ್ತಾರೆ. “ನಾನು ಅವರ ಬಳಿ ಕೇಳುತ್ತೇನೆ, ಅಂಕಲ್ ಏನಿದು? ಏನು ಮಾಡಿದ್ರಿ ನೀವು? ಇವರು ನನ್ನ ತಂದೆ, ನಿಮಗೆ ಹೇಗೆ ಅನಿಸ್ತು ಇವರು ‘ಅವರು’ (ಭಯೋತ್ಪಾದಕ) ಎಂದು?… ಈ ಸಂದರ್ಭದಲ್ಲಿ ಅವರು ನನ್ನನ್ನು ನೋಡಿ ನಗುತ್ತಾರೆ. ನಾನು ಅವರಿಗೆ ಏನು ಪ್ರತಿಕ್ರಿಯೆ ನೀಡಬಹುದು? ಅವರು ನಗುತ್ತಿದ್ದರು…ನಾಚಿಕೆಯಿಲ್ಲದೆ ನಗುತ್ತಿದ್ದರು ನಾನು ಅವರಿಗೆ ಏನು ಹೇಳಲಿ?” ಎಂದು ಬಾಲಕಿ ದುಃಖತಪ್ತರಾಗಿ ಹೇಳುತ್ತಾರೆ.

“ನನ್ನ ತಮ್ಮ ಎರಡನೆ ಕ್ಲಾಸ್‌ನಲ್ಲಿದ್ದಾನೆ. ಅವನು ತುಂಬಾ ಚಿಕ್ಕವನು. ಅವನಿಗೆ ನಾವು ಏನು ಹೇಳಬೇಕು? ಅವನಿಗೆ ಏನೂ ಗೊತ್ತಿಲ್ಲ. ಅವನು ತಂದೆಯನ್ನು ತುಂಬಾ ಹಚ್ಚಿಕೊಂಡಿದ್ದ. ನಾನು ಕೂಡಾ ತಂದೆಯನ್ನು ತುಂಬಾ ಹಚ್ಚಿಕೊಂಡಿದ್ದೆ. ಈಗ ನಾನು ಏನು ಮಾಡಲಿ? ನನ್ನ ತಾಯಿಯನ್ನು ಹೇಗೆ ಸಮಾಧಾನ ಪಡಿಸಲಿ? ಅವಳು ಈಗ ಏನನ್ನೂ ತಿನ್ನುತ್ತಿಲ್ಲ, ಒಂದೇ ಸಮನೆ ಅಳುತ್ತಿದ್ದಾರೆ, ನಾನು ಏನು ಮಾಡಲಿ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರ: ಸಿಆರ್‌ಪಿಎಫ್‌ ಯೋಧರಿಂದ ಕಾರ್ಮಿಕನ ಹತ್ಯೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ರಾಜಕೀಯ ನಾಯಕರು ಶ್ರೀನಗರದ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಅಂದು ಇಬ್ಬರೂ ಉದ್ಯಮಿಗಳನ್ನು ಭದ್ರತಾ ಪಡೆಗಳೆ ಕೊಂದಿವೆ ಎಂದು ಕುಟುಂಬಗಳು ಆರೋಪಿಸಿವೆ. ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಕಾರಣಕ್ಕಾಗಿ ಪೊಲೀಸರು ಮೃತದೇಹಗಳನ್ನು ಹಸ್ತಾಂತರಿಸಲು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.

ಅಂದು ಕೊಲ್ಲಲ್ಪಟ್ಟವರಲ್ಲಿ ತನ್ನ ಮಗನೂ ಇದ್ದು, ಅವನನ್ನು ಭಯೋತ್ಪಾದಕ ಎಂದು ಹೆಸರಿಸಲಾಗಿದೆ ಎಂದು ಭಯೋತ್ಪಾದನಾ ವಿರೋಧಿ ಹೋರಾಟಗಾರ ಅಬ್ದುಲ್ ಲತೀಫ್ ಮಗ್ರೆ ಹೇಳಿದ್ದಾರೆ. ಅವರು 2005 ರಲ್ಲಿ ರಾಂಬನ್‌ನಲ್ಲಿ ಭಯೋತ್ಪಾದಕನನ್ನು ಕಲ್ಲಿನಿಂದ ಕೊಂದಿದ್ದರು. ಲತೀಫ್‌ ಹೇಳುವಂತೆ ಅವರ ಮಗ ಅಮೀರ್ ಮುಗ್ಧನಾಗಿದ್ದು, ಕಾರ್ಮಿಕನಾಗಿದ್ದನು. ಆದರೆ, ಪೊಲೀಸರು ಅಮೀರ್ ಅವರನ್ನು ‘ಹೈಬ್ರಿಡ್’ ಭಯೋತ್ಪಾದಕ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಾಕ್ ಗೆಲುವಿಗೆ ಸಂಭ್ರಮ ಆರೋಪ: ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಮೇಲೆ UAPA ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಭಯೋತ್ಪಾದನೆಯ ಹೆಸರಿನಲ್ಲಿ ನಮ್ಮದೇ ದೇಶದ ಪ್ರಜೆಗಳನ್ನು ಕೊಲ್ಲುವುದರಿಂದ ಭಯೋತ್ಪಾದನೆ ಕಡಿಮೆ ಆಗುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...